ಶಿಕ್ಷಕ ವೃತ್ತಿ ಬಿಟ್ಟು ಜಾನಪದ ಸಂಗೀತ ಉಸಿರಾಗಿಸಿಕೊಂಡ ಕೋಲಾರದ ಗೋ.ನಾ. ಸ್ವಾಮಿಗೆ ಕಾಸರಗೋಡಿನ ಗಡಿನಾಡು ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ

ಶಿಕ್ಷಕ ವೃತ್ತಿಯನ್ನು ಬಿಟ್ಟು ಜಾನಪದ ಸಂಗೀತವೇ ನನ್ನುಸಿರು ಎಂದು ಜಾನಪದ ಹಾಡುಗಾರಿಕೆಯ ಹಿಂದೆ ಹೋದ ಗೋ.ನಾ.ಸ್ವಾಮಿ ಅವರು ಮತ್ತೆ ಹಿಂದೆ ತಿರುಗಿ ನೋಡೇ ಇಲ್ಲಾ ಈವರೆಗೆ 62 ದೇಶಗಳಲ್ಲಿ ಸಂಗೀತ ಕಾರ್ಯಕ್ರಮಗಳನ್ನು ಕೊಟ್ಟಿರುವ ಅದರಲ್ಲೂ ಜಾನಪದ ಸಂಗೀತ ಕಾರ್ಯಕ್ರಮಗಳನ್ನು ಕೊಟ್ಟಿರುವ ಹಿರಿಮೆ ಗೋ.ನಾ.ಸ್ವಾಮಿ ಅವರದ್ದು.

ಶಿಕ್ಷಕ ವೃತ್ತಿ ಬಿಟ್ಟು ಜಾನಪದ ಸಂಗೀತ ಉಸಿರಾಗಿಸಿಕೊಂಡ ಕೋಲಾರದ ಗೋ.ನಾ. ಸ್ವಾಮಿಗೆ ಕಾಸರಗೋಡಿನ ಗಡಿನಾಡು ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ
ಶಿಕ್ಷಕ ವೃತ್ತಿ ಬಿಟ್ಟು ಜಾನಪದ ಸಂಗೀತ ಉಸಿರಾಗಿಸಿಕೊಂಡ ಗೋ.ನಾ. ಸ್ವಾಮಿಗೆ ಕಾಸರಗೋಡಿನ ಗಡಿನಾಡು ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ
Follow us
| Edited By: ಸಾಧು ಶ್ರೀನಾಥ್​

Updated on:Nov 20, 2023 | 5:34 PM

ಕೋಲಾರ ಮೂಲದ ಅಂತರರಾಷ್ಟ್ರೀಯ ಜಾನಪದ ಕಲಾವಿದನಿಗೆ ಕೇರಳದ ಕಾಸಗೋಡಿನಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಗಿದೆ, ಕೋಲಾರ ಮೂಲದ ಜಾನಪದ ಕಲಾವಿದ ಗೋ.ನಾ. ಸ್ವಾಮಿ (Go Na Swamy) ಅವರಿಗೆ ಕೇರಳದ ಕಾಸರಗೋಡಿನ ಗಡಿನಾಡು ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ (Kasaragod Literature academy) ಕನ್ನಡ ರಾಜ್ಯೋತ್ಸವ ಪ್ರಶಸ್ತಿ (Kannada rajyotsava award) ನೀಡಿ ಗೌರವಿಸಿದೆ. ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಯಲುವಗುಳಿ ಗ್ರಾಮದಲ್ಲಿ ಹುಟ್ಟಿದ ಇವರು ಕೋಲಾರ ತಾಲ್ಲೂಕಿನ ಸುಗಟೂರು (Sugatur, Kolar) ಗ್ರಾಮದಲ್ಲಿ ಬೆಳೆದು ರಾಜ್ಯದಾದ್ಯಂತ ಸೇರಿದಂತೆ ಅಂತರಾಷ್ಟ್ರೀಯ ಮಟ್ಟದಲ್ಲಿ ಹಳ್ಳಿಗಾಡಿನ ಜಾನಪದ ಹಾಡುಗಾರಿಕೆಯ ಮೂಲಕ ಹೆಸರುವಾಸಿಯಾಗಿದ್ದಾರೆ.

ಇವರು ಇಂಗ್ಲೆಂಡ್, ಜಪಾನ್, ಆಸ್ಟ್ರೇಲಿಯಾ, ದುಬೈ, ಸೇರಿದಂತೆ ಸುಮಾರು 62 ದೇಶಗಳಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ ಮುಂದಿನ ತಿಂಗಳು ಅಮೇರಿಕಾದಲ್ಲಿ ನಡೆಯುವ ಕಾರ್ಯಕ್ರಮಕ್ಕೂ ಕೂಡ ತೆರಳಲಿದ್ದಾರೆ. ಇವರ ಪ್ರತಿಭೆಯನ್ನು ಗುರುತಿಸಿ ಬೆಂಗಳೂರು ನಾಡಪ್ರಭು ಕೆಂಪೇಗೌಡ, ಕೋಲಾರ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಪರಿಸರ ಇಲಾಖೆಯ ವನಮಿತ್ರ, ಸೇರಿದಂತೆ ವಿವಿಧ ಸಂಘ ಸಂಸ್ಥೆಗಳು ಹತ್ತಾರು ಪ್ರಶಸ್ತಿಗಳನ್ನು ನೀಡಿ ಗೌರವಿಸಿವೆ.

ಮೂಲತ: ಸರ್ಕಾರಿ ಶಿಕ್ಷಕರಾಗಿದ್ದ ಗೋ.ನಾ.ಸ್ವಾಮಿ ಅವರು ಕೆಲವು ವರ್ಷಗಳ ಕಾಲ ಶಿಕ್ಷಕ ವೃತ್ತಿಯನ್ನು ಮಾಡಿ ನಂತರ ಜಾನಪದ ಕ್ಷೇತ್ರದ ಮೇಲೆ ತಮಗಿದ್ದ ಅಪಾರ ಆಸಕ್ತಿಯಿಂದಾಗಿ ಸಾಂಸ್ಕೃತಿಕವಾಗಿ ಕನ್ನಡದ ಮೇಲಿನ ಅಭಿಮಾನದಿಂದ ತಮ್ಮ ಶಿಕ್ಷಕ ವೃತ್ತಿಯನ್ನ ಬಿಟ್ಟು ಬಂದರು. ನಂತರ ಜಾನಪದ ಹಾಡು ಗಳನ್ನು ಹಾಡುತ್ತಾ, ತಾವೇ ಕೆಲವು ಜಾನಪದ ಹಾಗೂ ಹಳ್ಳಿಯ ಶೈಲಿಯ ಹಾಡುಗಳನ್ನು ಬರೆದು, ಸಂಗೀತ ಸಂಯೋಜನೆ ಮಾಡಿ ಹಾಡಿದ್ದಾರೆ.

ಗಾನ ಗಂಧರ್ವ ಎಸ್​.ಪಿ.ಬಾಲಸುಬ್ರಮಣ್ಯಂ ಅವರೊಂದಿಗೆ ಆಪ್ತ ಒಡನಾಟ ಹೊಂದಿದ್ದ ಗೋ.ನಾ.ಸ್ವಾಮಿ ಅವರು ಎಸ್​.ಪಿ. ಬಾಲಸುಬ್ರಮಣ್ಯಂ ಅವರ ಜೊತೆಗೆ ಹಲವು ಸಂಗೀತ ಕಾರ್ಯಕ್ರಮಗಳಲ್ಲಿ ಹಾಡಿದ್ದಾರೆ. ಇನ್ನು ಜಾನಪದ ಶೈಲಿಯ ಹಾಡುಗಳಿಗೆ ಆಧುನಿಕತೆಯ ರಾಕ್​ ಸ್ಟಾರ್​ ಟಚ್​ ಕೊಟ್ಟು ಜಾನಪದ ಹಾಡುಗಳನ್ನು ಈಗಿನ ಯುವ ಜನತೆಯೂ ಕೇಳುವಂತೆ ಮಾಡಿದ ಗೋ.ನಾ.ಸ್ವಾಮಿ ಯವರ ಹಾಡುಗಾರಿಕೆ ಕೇವಲ ನಮ್ಮ ಕರ್ನಾಟಕದಷ್ಟೇ ಅಲ್ಲ ವಿದೇಶಗಳಲ್ಲೂ ಅತಿ ಪ್ರಸಿದ್ದಿ ಪಡೆದಿದೆ.

ಹೀಗೆ ಶಿಕ್ಷಕ ವೃತ್ತಿಯನ್ನು ಬಿಟ್ಟು ಜಾನಪದ ಸಂಗೀತವೇ ನನ್ನುಸಿರು ಎಂದು ಜಾನಪದ ಹಾಡುಗಾರಿಕೆಯ ಹಿಂದೆ ಹೋದ ಗೋ.ನಾ.ಸ್ವಾಮಿ ಅವರು ಮತ್ತೆ ಹಿಂದೆ ತಿರುಗಿ ನೋಡೇ ಇಲ್ಲಾ ಈವರೆಗೆ 62 ದೇಶಗಳಲ್ಲಿ ಸಂಗೀತ ಕಾರ್ಯಕ್ರಮಗಳನ್ನು ಕೊಟ್ಟಿರುವ ಅದರಲ್ಲೂ ಜಾನಪದ ಸಂಗೀತ ಕಾರ್ಯಕ್ರಮಗಳನ್ನು ಕೊಟ್ಟಿರುವ ಹಿರಿಮೆ ಗೋ.ನಾ.ಸ್ವಾಮಿ ಅವರದ್ದು.

ತನ್ನ ಹುಟ್ಟೂರಿನಿಂದ ದೇಶ ವಿದೇಶಗಳಲ್ಲೂ ಹೆಸರು ಮಾಡಿರುವ ಗೋ.ನಾ.ಸ್ವಾಮಿ ಅವರು ಎಷ್ಟು ಎತ್ತರಕ್ಕೆ ಬೆಳೆದರೂ ತಮ್ಮ ಹುಟ್ಟೂರನ್ನು ಮರೆತಿಲ್ಲ, ತಾನು ಬೆಳೆದ ಊರನ್ನು ಮರೆತಿಲ್ಲ, ಅದಕ್ಕಾಗಿಯೇ ಗೋ.ನಾ.ಸ್ವಾಮಿಯವರು ತಾನು ಹುಟ್ಟಿ ಬೆಳೆದ ಕೋಲಾರ ತಾಲ್ಲೂಕು ಸುಗಟೂರು ಗ್ರಾಮದಲ್ಲಿ ಪ್ರತಿವರ್ಷ ನಡೆಯುವ ರಾವಣೋತ್ಸವ ಕಾರ್ಯಕ್ರಮದಲ್ಲಿ ಕಳೆದ 18 ವರ್ಷಗಳಿಂದ ಸಂಗೀತ ಕಾರ್ಯಕ್ರಮವನ್ನು ನಡೆಸಿಕೊಂಡು ಬಂದಿದ್ದಾರೆ. ಅಷ್ಟೇ ಅಲ್ಲದ ಗ್ರಾಮದಲ್ಲಿ ಶಾಲೆ ಅಭಿವೃದ್ದಿಗೆ, ಗ್ರಾಮದ ದೇವಾಲಯಗಳ ಅಭಿವೃದ್ದಿ ಮಾಡುವಲ್ಲಿ ಗೋ.ನಾ.ಸ್ವಾಮಿ ತನ್ನದೇ ಆದ ಕೊಡುಗೆ ನೀಡಿದ್ದಾರೆ.

ಹೀಗೆ ತನ್ನ ಜಾನಪದ ಹಾಡುಗಳ ಮೂಲಕ ಹೆಸರು ಮಾಡಿರುವ ಗೋ.ನಾ.ಸ್ವಾಮಿ ಅವರ ಕನ್ನಡ ಸೇವೆಯನ್ನು ಗುರುತಿಸಿ ಕೇರಳ ರಾಜ್ಯದ ಕಾಸರಗೋಡಿನಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಗಡಿನಾಡ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ಲೋಕಸಭಾ ಸದಸ್ಯ ರಮೇಶ್​ ಜಿಗಜಿಣಗಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ರಿಕಾ ಹಾಗೂ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್, ಹಾಗೂ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಖಜಾಂಚಿ ವಾಸುದೇವ ಹೊಳ್ಳ ಉಪಸ್ಥಿತರಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:29 pm, Mon, 20 November 23

ತಾಜಾ ಸುದ್ದಿ
1 ಆಧಾರ್​ ಕಾರ್ಡ್​ನ 2 ಪ್ರತಿ ತೋರಿಸಿ KSRTCಯಲ್ಲಿ ಇಬ್ಬರು ಮಹಿಳೆಯರ ಪ್ರಯಾಣ
1 ಆಧಾರ್​ ಕಾರ್ಡ್​ನ 2 ಪ್ರತಿ ತೋರಿಸಿ KSRTCಯಲ್ಲಿ ಇಬ್ಬರು ಮಹಿಳೆಯರ ಪ್ರಯಾಣ
ಭಾರತ-ಆಫ್ರಿಕಾ ಟಿ20 ಟ್ರೋಫಿ ಫೋಟೋ ಶೂಟ್​ನಲ್ಲಿ ಮಿಂಚಿದ ಸೂರ್ಯ: ವಿಡಿಯೋ
ಭಾರತ-ಆಫ್ರಿಕಾ ಟಿ20 ಟ್ರೋಫಿ ಫೋಟೋ ಶೂಟ್​ನಲ್ಲಿ ಮಿಂಚಿದ ಸೂರ್ಯ: ವಿಡಿಯೋ
‘ನನಗೆ ಯುವರಾಜ್​ ಅಂತ ಅವರೇ ಹೆಸರು ಇಟ್ಟಿದ್ದು’: ಲೀಲಾವತಿ ಮೊಮ್ಮಗನ ಮಾತು
‘ನನಗೆ ಯುವರಾಜ್​ ಅಂತ ಅವರೇ ಹೆಸರು ಇಟ್ಟಿದ್ದು’: ಲೀಲಾವತಿ ಮೊಮ್ಮಗನ ಮಾತು
ಆನೆ ಭೀಮ ಮತ್ತೆ ಗ್ರಾಮಕ್ಕೆ ಎಂಟ್ರಿ, ಗಾಂಭೀರ್ಯ ನಡಿಗೆ ನೋಡಿ
ಆನೆ ಭೀಮ ಮತ್ತೆ ಗ್ರಾಮಕ್ಕೆ ಎಂಟ್ರಿ, ಗಾಂಭೀರ್ಯ ನಡಿಗೆ ನೋಡಿ
ರಿಂಕು ಸಿಂಗ್ ಬಗ್ಗೆ ದ್ರಾವಿಡ್ ಏನೆಲ್ಲ ಹೇಳಿದ್ದಾರೆ ಗೊತ್ತೇ?: ವಿಡಿಯೋ ನೋಡಿ
ರಿಂಕು ಸಿಂಗ್ ಬಗ್ಗೆ ದ್ರಾವಿಡ್ ಏನೆಲ್ಲ ಹೇಳಿದ್ದಾರೆ ಗೊತ್ತೇ?: ವಿಡಿಯೋ ನೋಡಿ
‘ಅವರು ಗಲೀಜಿನಲ್ಲಿ ಇದ್ದಾರೆ’: ಯಾವ ಮುಲಾಜು ಇಲ್ಲದೇ ನೇರವಾಗಿ ಹೇಳಿದ ಸಂಗೀತಾ
‘ಅವರು ಗಲೀಜಿನಲ್ಲಿ ಇದ್ದಾರೆ’: ಯಾವ ಮುಲಾಜು ಇಲ್ಲದೇ ನೇರವಾಗಿ ಹೇಳಿದ ಸಂಗೀತಾ
‘ನಾನು ವಿಸ್ಮಯ ನೋಡಿದೆ’: ಅಮ್ಮನಿಗೆ ಅಂತಿಮ ವಿದಾಯ ಹೇಳಿದ ವಿನೋದ್ ಭಾವುಕ
‘ನಾನು ವಿಸ್ಮಯ ನೋಡಿದೆ’: ಅಮ್ಮನಿಗೆ ಅಂತಿಮ ವಿದಾಯ ಹೇಳಿದ ವಿನೋದ್ ಭಾವುಕ
ಜನತಾ ದಳದಲ್ಲಿದ್ದಾಗ ಯತ್ನಾಳ್ ಮುಸಲ್ಮಾನರನ್ನು ಓಲೈಸುತ್ತಿದ್ದರು: ಪಾಟೀಲ್
ಜನತಾ ದಳದಲ್ಲಿದ್ದಾಗ ಯತ್ನಾಳ್ ಮುಸಲ್ಮಾನರನ್ನು ಓಲೈಸುತ್ತಿದ್ದರು: ಪಾಟೀಲ್
ಗರುಡ ಮಾಲ್​ನಲ್ಲಿ ಮದ್ಯದ ನಶೆಯಲ್ಲಿ ಮಹಿಳೆ ರಾದ್ಧಾಂತ, ಸಿಬ್ಬಂದಿಗೆ ಥಳಿತ
ಗರುಡ ಮಾಲ್​ನಲ್ಲಿ ಮದ್ಯದ ನಶೆಯಲ್ಲಿ ಮಹಿಳೆ ರಾದ್ಧಾಂತ, ಸಿಬ್ಬಂದಿಗೆ ಥಳಿತ
ಸಕಲ ಸರ್ಕಾರೀ ಗೌರವದೊಂದಿಗೆ ನೆರವೇರಿದ ಲೀಲಾವತಿ ‘ಅಮ್ಮ’ನ ಅಂತಿಮ ಸಂಸ್ಕಾರ
ಸಕಲ ಸರ್ಕಾರೀ ಗೌರವದೊಂದಿಗೆ ನೆರವೇರಿದ ಲೀಲಾವತಿ ‘ಅಮ್ಮ’ನ ಅಂತಿಮ ಸಂಸ್ಕಾರ