ಕೋಲಾರ: ಇಷ್ಟು ದಿನಗಳ ಕಾಲ ನೀರಿಲ್ಲದೆ ಬರಡಾಗಿದ್ದ ಭೂಮಿಯಲ್ಲಿ ಬೆಳೆ ಬೆಳೆದು ಕಂಗಾಲಾಗುತ್ತಿದ್ದ ರೈತರು, ಈಗ ಒಂದಷ್ಟು ಒಳ್ಳೆಯ ಮಳೆಯಾಗಿ ಇನ್ನಾದರು ಬದಕು ಹಸನಾಗುತ್ತದೆ ಎಂದುಕೊಂಡಿದ್ದರು. ಆದರೆ ಬೆಂಬಡದೆ ಸುರಿದ ಜಡಿ ಮಳೆಯಿಂದ ಅನಾವೃಷ್ಟಿಯಾಗಿ ಹೂವು ಬೆಳೆದಿದ್ದ ರೈತರ ಬದುಕು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದಂತಾಗಿದೆ. ಹೊಲದಲ್ಲೇ ಹೂವಿನ ದಳಗಳು ಉದುರಿ ಕೊಳೆಯುತ್ತಿದ್ದು, ಹೂವು (Flower) ಬೆಳೆಯಿಂದ ನಷ್ಟ ಅನುಭವಿಸಿ ರೈತರು (Farmers) ಕಣ್ಣೀರು ಹಾಕುವಂತಾಗಿದೆ. ಕಳೆದೊಂದು ತಿಂಗಳಿಂದ ಕೋಲಾರ ಜಿಲ್ಲೆಯಾದ್ಯಂತ ಸುರಿದ ಜಡಿಮಳೆಯ ಪರಿಣಾಮ ಕೋಲಾರದಲ್ಲಿ ಹೂವು ಬೆಳೆಗಾರರು ಕಂಗಾಲಾಗುವ ಪರಿಸ್ಥಿತಿ ನಿರ್ಮಾಣವಾಗಿದೆ.
ದೀಪಾವಳಿಯ ನಂತರ ಹಬ್ಬಗಳ ಸಾಲು ಮುಗಿದಿತ್ತು. ಆದರೆ ನಂತರದಲ್ಲಿ ಹೂವು ಬೆಳೆ ಇಳಿಕೆಯಾಗಿತ್ತು. ಆದರೆ ಮದುವೆ ಮುಂಜಿ ಸೇರಿದಂತೆ ಶುಭ ಸಮಾರಂಭಗಳಿಂದಾಗಿ ಜನರು ಮಳೆಯ ನಡುವೆಯೂ ಹೂವು ಖರೀದಿ ಮಾಡುತ್ತಿದ್ದರು. ಯಾವಾಗ ಜಡಿ ಮಳೆಯ ಪರಿಣಾಮ ಹೂವು ಹೊಲಗಳಲ್ಲೇ ಕೊಳೆಯಲು ಆರಂಭವಾಯಿತೋ ಹೂವು ಬೆಲೆಗೆ ಮಾರಕಟ್ಟೆಯಲ್ಲಿ ಬೆಲೆ ಏರಿಕೆ ಕಂಡರೂ ಮಾರುಕಟ್ಟೆಗೆ ಮಾತ್ರ ಗುಣಮಟ್ಟದ ಹೂವು ಬರುತ್ತಿಲ್ಲ ಎಂದು ಹೂವು ಬೆಳೆಗಾರರಾದ ಅಶೋಕ್ ಕುಮಾರ್ ತಿಳಿಸಿದ್ದಾರೆ.
ಕೋಲಾರ ಜಿಲ್ಲೆಯಲ್ಲಿ ತರಕಾರಿ ಜೊತೆಗೆ ಹೂವು ಬೆಳೆಯನ್ನು ಹೆಚ್ಚಾಗಿ ರೈತರು ಬೆಳೆಯುತ್ತಾರೆ. ಜಿಲ್ಲೆಯಲ್ಲಿ ಚೆಂಡು ಹೂವು, ಸೇವಂತಿ, ಗುಲಾಬಿ, ಬಟನ್ ಗುಲಾಬಿ ಸೇರಿದಂತೆ ಹಲವು ಹೂವುಗಳನ್ನು ಬೆಳೆಯುತ್ತಾರೆ. ಆದರೆ ಇತ್ತೀಚೆಗೆ ಸುರಿಯುತ್ತಿರುವ ನಿರಂತರ ಮಳೆಯಿಂದ ಹೂವು ಬೆಳೆ ಸಂಪೂರ್ಣವಾಗಿ ಹಾಳಾಗಿದೆ. ಅತಿಷೃಷ್ಟಿಯಿಂದಾಗಿ ಹೂವು ಹೊಲಗಳಲ್ಲೇ ಕೊಳೆಯುವ ಸ್ಥಿತಿ ನಿರ್ಮಾಣವಾಗಿದೆ. ಇಷ್ಟು ದಿನ ನೀರಿಲ್ಲದೆ ಜನರು ಸಂಕಷ್ಟದಲ್ಲಿ ಹೂವು ಬೆಳೆಯುತ್ತಿದ್ದರು. ಆದರೆ ಈಗ ಉತ್ತಮ ಮಳೆಯಾಗಿದೆ ಆದರೂ ಬೆಳೆದ ಬೆಳೆಯನ್ನು ಮಾರುಕಟ್ಟೆಗೆ ಹಾಕಲಾಗದೆ.
ಹೂವನ್ನು ಹೊಲಗಳಿಂದ ಕೀಳಲಾಗದೆ ಸಂಕಷ್ಟದ ಸ್ಥಿತಿ ನಿರ್ಮಾಣವಾಗಿದೆ. ಹಾಗಾಗಿಯೇ ಹೂವು ಬೆಳೆಗಾರರು ಅಕಾಲಿಕ ಹಾಗೂ ಜಡಿ ಮಳೆಯಿಂದ ನಷ್ಟ ಅನುಭವಿಸಿದ್ದಾರೆ. ಹಾಗಾಗಿ ಸರ್ಕಾರ ಈ ಕೂಡಲೇ ಹೂವು ಬೆಳೆಯ ನಷ್ಟದ ಲೆಕ್ಕಾಚಾರ ಹಾಕಿ ಹೂವು ಬೆಳೆಗಾರರಿಗೆ ಕನಿಷ್ಟ ಪರಿಹಾರ ಕೊಡಬೇಕು ಎಂದು ಹೂವು ಬೆಳೆಗಾರರು ಬೆಡಿಕೆ ಇಟ್ಟಿದ್ದಾರೆ.
ಒಟ್ಟಾರೆ ಬರದ ನಾಡಿನಲ್ಲಿ ಹೂವು ಬೆಳೆದ ರೈತರ ಬದುಕು ಹೂವಾಗುತ್ತದೆ ಎಂದು ಹತ್ತಾರು ಕನಸುಗಳನ್ನು ಕಟ್ಟಿಕೊಂಡು ಹೂ ಬೆಳೆದ ರೈತರ ಪರಿಸ್ಥಿತಿ ಸಂಕಷ್ಟಕ್ಕೆ ಬಿದ್ದಿದೆ. ನೀರಿಲ್ಲ ಎಂದುಕೊಂಡಿದ್ದ ನಾಡಲ್ಲಿ ಉತ್ತಮ ಮಳೆಯಿಂದ ರೈತರ ಮುಖದಲ್ಲಿ ಸಂತಸ ಮೂಡಿದೆ. ಆದರೂ ಮಳೆಯಿಂದ ಹೂವು ಹೊಲದಲ್ಲೇ ಕೊಳೆತು ಹೂವು ಬೆಳೆಗಾರರನ್ನು ಸಂಕಷ್ಟಕ್ಕೆ ದೂಡಿದ್ದು ಮಾತ್ರ ವಿಪರ್ಯಾಸ.
ವರದಿ: ರಾಜೇಂದ್ರಸಿಂಹ
ಇದನ್ನೂ ಓದಿ:
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಮೋಡ ಕವಿದ ವಾತಾವರಣದಿಂದ ವಿಜಯಪುರದ ದ್ರಾಕ್ಷಿ ಬೆಳೆಗಾರರಲ್ಲಿ ಆತಂಕ
ಉಡುಪಿ: ಅಕಾಲಿಕ ಮಳೆಗೆ ಕಂಗಾಲಾದ ಭತ್ತ ಬೆಳೆಗಾರರು; ಹೆಚ್ಚುವರಿ ಕೃಷಿಗೆ ಹಾನಿ