ರೈತ ದಿನದಂದು ಅನ್ನದಾತನಿಗೊಂದು ಸಲಾಂ; ಕೋಲಾರದಲ್ಲಿ ಹಬ್ಬದ ವಾತಾವರಣ, ನೇಗಿಲ ಯೋಗಿಯ ಪರಿಶ್ರಮ ಕೊಂಡಾಡಿದ ಜನ

| Updated By: ಆಯೇಷಾ ಬಾನು

Updated on: Dec 24, 2021 | 9:01 AM

ಡಿಸೆಂಬರ್-23 ರಂದು ರೈತ ದಿನವನ್ನು ಆಚರಿಸಲಾಗುತ್ತದೆ ಅದರಂತೆ ಕೋಲಾರ ತಾಲೂಕಿನ ಮಂಗಸಂದ್ರ ಗ್ರಾಮದ ಬಳಿ ವಿಶ್ವ ರೈತ ದಿನಾಚರಣೆಯ ಅಂಗವಾಗಿ ಹಬ್ಬದಂತೆ ಆಚರಣೆ ಮಾಡಲಾಯಿತು. ರಾಜ್ಯ ಸಂಘ ಹಾಗೂ ಹಸಿರಸೇನೆ ಕಾರ್ಯಕರ್ತರು ವಿಶ್ವ ರೈತ ದಿನಾಚರಣೆಯನ್ನ ಅರ್ಥಪೂರ್ಣವಾಗಿ ಆಚರಣೆ ಮಾಡಲಾಯಿತು.

ರೈತ ದಿನದಂದು ಅನ್ನದಾತನಿಗೊಂದು ಸಲಾಂ; ಕೋಲಾರದಲ್ಲಿ ಹಬ್ಬದ ವಾತಾವರಣ, ನೇಗಿಲ ಯೋಗಿಯ ಪರಿಶ್ರಮ ಕೊಂಡಾಡಿದ ಜನ
ರೈತ ದಿನದಂದು ಅನ್ನದಾತನಿಗೊಂದು ಸಲಾಂ; ಕೋಲಾರದಲ್ಲಿ ಹಬ್ಬದ ವಾತಾವರಣ, ನೇಗಿಲ ಯೋಗಿಯ ಪರಿಶ್ರಮ ಕೊಂಡಾಡಿದ ಜನ
Follow us on

ಕೋಲಾರ: ಆತ ಇಡೀ ಮನುಕುಲದ ಅನ್ನದಾತ, ಮಳೆ ಇರಲಿ, ಬಿಸಿಲಿರಲಿ, ಆತ ತನ್ನ ಕೆಲಸವನ್ನು ಮಾತ್ರ ನಿಲ್ಲಿಸೋದಿಲ್ಲ ಅವನೊಬ್ಬ ಕೈಕಟ್ಟಿ ಕೂತರೇ ಇಡೀ ಪ್ರಪಂಚವೇ ಹಸಿವಿನಿಂದ ಬಳಲಬೇಕಾಗುತ್ತದೆ ಎಂಬ ಅರಿವು ಆತನಿಗೆ, ಅನ್ನ ಬೆಳೆದ ರೈತನಿಗೆ ಲಾಭವೋ ನಷ್ಟವೋ ಅದು ಬೇರೆ ವಿಷಯ ಆದರೆ ಆತನ ಸ್ವಾಭಿಮಾನಕ್ಕೆ ಮಾತ್ರ ಎಂದು ದಕ್ಕೆ ಬರೋದಿಲ್ಲ ಆತ ಯಾರ ಮುಂದೆಯೂ ಕೈಚಾಚಿ ನಿಲ್ಲೋದಿಲ್ಲ ಅಂತ ಸ್ವಾಭಿಮಾನಿ ರೈತ ದಿನಾಚರಣೆಯನ್ನು ಕೋಲಾರದಲ್ಲಿ ಹಬ್ಬದಂತೆ ಆಚರಣೆ ಮಾಡಲಾಗಿದೆ.

ರೈತ ದಿನವನ್ನು ಹಬ್ಬದಂತೆ ಆಚರಣೆ ಮಾಡಿ ರೈತನಿಗೊಂದು ಸಲಾಂ
ಡಿಸೆಂಬರ್-23 ರಂದು ರೈತ ದಿನವನ್ನು ಆಚರಿಸಲಾಗುತ್ತದೆ ಅದರಂತೆ ಕೋಲಾರ ತಾಲೂಕಿನ ಮಂಗಸಂದ್ರ ಗ್ರಾಮದ ಬಳಿ ವಿಶ್ವ ರೈತ ದಿನಾಚರಣೆಯ ಅಂಗವಾಗಿ ಹಬ್ಬದಂತೆ ಆಚರಣೆ ಮಾಡಲಾಯಿತು. ರಾಜ್ಯ ಸಂಘ ಹಾಗೂ ಹಸಿರಸೇನೆ ಕಾರ್ಯಕರ್ತರು ವಿಶ್ವ ರೈತ ದಿನಾಚರಣೆಯನ್ನ ಅರ್ಥಪೂರ್ಣವಾಗಿ ಆಚರಣೆ ಮಾಡಲಾಯಿತು. ವಿಶೇಷವಾಗಿ ನೇತ್ರದಾನ ಹಾಗೂ ಗ್ರಾಮೀಣ ಪ್ರದೇಶದ ಶೈಲಿಯಲ್ಲಿ ರಾಗಿ ಒಕ್ಕಣೆ ಮಾಡಿ ಹಳ್ಳಿಗಳ ಸಂಪ್ರದಾಯದಂತೆ ಭತ್ತ, ರಾಗಿ, ಹಣ್ಣು-ತರಕಾರಿಗಳನ್ನು ಬಡವರಿಗೆ ಹಂಚುವ ಮೂಲಕ ರೈತ ಸಂಘದಿಂದ ರೈತ ದಿನಾಚರಣೆಯನ್ನು ವಿಶಿಷ್ಟವಾಗಿ ಆಚರಣೆ ಮಾಡಲಾಯಿತು.

ಹಸಿವಿನಿಂದ ಸಾಯುವವರ ಸಂಖ್ಯೆ ಕಡಿಮೆಯಾಗಿದ್ದೇ ರೈತರಿಂದ
ರೈತ ಸಂಘದಿಂದ ಆಯೋಜನೆ ಮಾಡಿದ್ದ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದ ಕೋಲಾರ ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ನಾಲ್ಕೈದು ಶತಮಾನಗಳ ಹಿಂದೆ ಊಟಕ್ಕೆ, ತಿನ್ನುವ ಅನ್ನಕ್ಕೆ ಬರ ಇತ್ತು, ಆದರೆ ಇಂದು ಸಮಾಜದಲ್ಲಿ ಅಂತಹ ವಾತಾವರಣ ಇಲ್ಲ, ಯಾರೂ ಸಹ ಹಸಿವಿನಿಂದ ಸಾಯುತ್ತಿರುವ, ಸತ್ತ ನಿದರ್ಶನಗಳಿಲ್ಲ ಇದಕ್ಕೆಲ್ಲಾ ಕಾರಣ ರೈತ ಹಾಗೂ ರೈತನ ಪರಿಶ್ರಮ ಎಂದರು. ಇಂದು ಪ್ರಪಂಚದಲ್ಲಿ ಜನರು ಮೂರು ಹೊತ್ತು ಊಟ ಮಾಡುವಾಗಲೂ ನಾವು ರೈತರನ್ನು ಸ್ಮರಿಸಿಕೊಂಡು ಊಟ ಮಾಡಬೇಕು ಅಷ್ಟು ಋಣ ನಮ್ಮ ಮೇಲಿದೆ ಎಂದರು.

ರೈತ ದಿನ ಆಚರಣೆ

ಯಾವುದೇ ಸರ್ಕಾರ ಬಂದರೂ ಸಂಕಷ್ಟಗಳಿಂದ ಹೊರ ಬರಲೇ ಇಲ್ಲಾ ರೈತರು
ಸ್ವಾತಂತ್ರ್ಯ ಬಂದು 7 ದಶಕಗಳು ಕಳೆದರೂ ಅನ್ನ ಹಾಕುವ ಅನ್ನದಾತನ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಪಲವಾಗಿವೆ. ನಕಲಿ ಬಿತ್ತನೆ ಬೀಜ, ನಕಲಿ ಔಷಧಿ, ಮಾರುಕಟ್ಟೆಗಳ ಅವ್ಯವಸ್ಥೆ, ಬೆಳೆದ ಬೆಳೆಗಳಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಇದ್ದರೂ ಅತಿವೃಷ್ಠಿ ಇಲ್ಲಾ ಅನಾವೃಷ್ಟಿಗೆ ಸಿಲುಕಿ ರೈತರು ಪ್ರತಿವರ್ಷ ಸಂಕಷ್ಟಕ್ಕೆ ಸಿಲುಕಿ ನರಳಿ ಕಣ್ಣೀರಾಕುವ ಸ್ಥಿತಿ ಇದೆ. ರೈತರ ಸಮಸ್ಯೆಗೆ ಶಾಶ್ವತವಾದ ಪರಿಹಾರ ನೀಡುವಲ್ಲಿ ಎಲ್ಲಾ ಸರ್ಕಾರಗಳು ವಿಫಲವಾಗಿವೆ,ರೈತ ವಿರೋಧಿ ಕಾಯ್ದೆಗಳನ್ನು ಜಾರಿ ಮಾಡಿ ಕೃಷಿಯಿಂದ ರೈತರನ್ನು ವಿಮುಕ್ತಿ ಮಾಡಿ ಆಹಾರ ಭದ್ರತೆಗೆ ಹೊರ ದೇಶದ ಬಳಿ ಕೈಚಾಚಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇಂಥ ಪರಿಸ್ಥಿತಿಯಿಂದ ನಮ್ಮ ರೈತರನ್ನು ಪಾರುಮಾಡಬೇಕು ಎಂದು ರೈತರ ವೇದಿಕೆಯಲ್ಲಿ ರೈತ ಮುಖಂಡರು ಅಭಿಪ್ರಾಯ ಪಟ್ಟರು.

ಒಟ್ಟಾರೆ ದೇಶದ ಬೆನ್ನೆಲುಬಾಗಿರುವ ಅನ್ನದಾತನನ್ನು ಪೂಜಿಸುವ ರೈತ ದಿನಾಚರಣೆಯು ಕೋಲಾರದಲ್ಲಿ ಹಬ್ಬದಂತೆ ಆಚರಣೆ ಮಾಡುವ ಮೂಲಕ ಹಸಿವು ನೀಗಿಸುವ ಅನ್ನದಾತನಿಗೆ ಪೂಜೆ ಸಲ್ಲಿಸಲಾಯಿತು, ಈ ಮೂಲಕ ಅನ್ನದಾತನ ಗುಣಗಾನ ಮಾಡುವ ಜೊತೆಗೆ ರೈತನಿಗೆ ಸಂಕಷ್ಟಗಳು ಬಾರದಂತೆ ರೈತರನ್ನು ಸರ್ಕಾರಗಳು ನಡೆಸಿಕೊಳ್ಳಬೇಕೆಂದು ಎಲ್ಲರೂ ಅಭಿಪ್ರಾಯಪಟ್ಟರು.

ವರದಿ: ರಾಜೇಂದ್ರಸಿಂಹ, ಟಿವಿ9 ಕೋಲಾರ

ಇದನ್ನೂ ಓದಿ: ಫುಡ್ ಡೆಲಿವರಿ ಬಾಯ್ ಮೇಲೆ ರೆಸ್ಟೋರೆಂಟ್ ಮಹಿಳಾ ಸಿಬ್ಬಂದಿ ದರ್ಪ; ಸಿಬ್ಬಂದಿಯನ್ನು ಕೆಲಸದಿಂದ ತೆಗೆದುಹಾಕಿದ ಮ್ಯಾನೇಜರ್