ದರ್ಪ ತೋರಿದ ಮಹಿಳಾ ಸಿಬ್ಬಂದಿಯ ವಿರುದ್ಧ ಕ್ರಮ
ಕನ್ನಡಪರ ಸಂಘಟನೆಗಳು ಈ ವಿಷಯ ತಿಳಿಯುತ್ತಿದ್ದಂತೆ ರೆಸ್ಟೋರೆಂಟ್ ಮಾಲೀಕರನ್ನು ಸಂಪರ್ಕಿಸಿದ್ದು, ನಂತರ ಮ್ಯಾನೇಜರ್ ಪ್ರಶಾಂತ್ ಅವರನ್ನು ಭೇಟಿಯಾಗಿ ಮಹಿಳೆಯನ್ನು ವಜಾಗೊಳಿಸುವಂತೆ ಆಗ್ರಹಿಸಿದ್ದಾರೆ. ಮಹಿಳೆಯ ಕೃತ್ಯ ಗಮನಿಸಿದ ಮ್ಯಾನೇಜರ್, ಮಹಿಳೆಯನ್ನು ಕೆಲಸದಿಂದ ತೆಗೆದು ಹಾಕಿದ್ದಾರೆ. ನಂತರ ಮಹಿಳೆಯಿಂದ ಕನ್ನಡಪರ ಸಂಘಟನೆ ಕ್ಷಮಾಪಣೆ ಕೇಳಿಸಿದೆ. ಜತೆಗೆ ಡೆಲಿವರಿ ಬಾಯ್ಗೆ ಒಂದು ದಿನದ ಸಂಬಳವನ್ನು ಕನ್ನಡಪರ ಸಂಘಟನೆಗಳು ಕೊಡಿಸಿವೆ. ವೈಟ್ ಫೀಲ್ಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದ ನಾಲ್ಕು ದಿನದ ಹಿಂದೆ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಬಳ್ಳಾರಿ: ತಾಯಿ-ಮಗಳ ಕೈ ಚಳಕ ಸಿಸಿ ಟಿವಿಯಲ್ಲಿ ಸೆರೆ
ಸೂಪರ್ ಮಾರ್ಕೆಟ್ನಲ್ಲಿ ವಸ್ತುಗಳ ಖರೀದಿ ನೆಪದಲ್ಲಿ ತಾಯಿ-ಮಗಳು ತಮ್ಮ ಕೈ ಚಳಕ ತೋರಿಸಿದ್ದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬಳ್ಳಾರಿ ಸೂಪರ್ ಮಾರ್ಕೆಟ್ ನಲ್ಲಿ ಗ್ರಾಹಕರ ಸೋಗಿನಲ್ಲಿ ಬಂದ ತಾಯಿ ಮಗಳು ಕಳ್ಳತನ ಮಾಡಿದ್ದಾರೆ. ಕಳೆದ ಮೂರು ದಿನಗಳ ಹಿಂದೆ ನಡೆದಿರುವ ಘಟನೆ ಈಗ ಬೆಳಕಿಗೆ ಬಂದಿದೆ. ತಾಯಿ-ಮಗಳು ಅಂಗಡಿ ತುಂಬೆಲ್ಲಾ ಸುತ್ತಾಡಿ ವಸ್ತುಗಳ ಕಳ್ಳತನ ಮಾಡಿ ಬಟ್ಟೆಯೊಳಗೆ ಇಟ್ಟುಕೊಂಡು ಪರಾರಿಯಾಗಿರುವುದು ಸಿಸಿ ಟಿವಿಯಲ್ಲಿ ಸೆರೆಯಾಗಿದೆ.
ತುಮಕೂರು: ಗ್ರಾ.ಪಂ. ಸದಸ್ಯೆ, ಆಕೆಯ ಪತಿ ಮೇಲೆ ಹಲ್ಲೆ ಆರೋಪ
ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಬೆಡತ್ತೂರು ಗ್ರಾ.ಪಂ.ನ ಮಾಳಗೊಂಡನಹಳ್ಳಿಯಲ್ಲಿ ಹಲ್ಲೆ ನಡೆದಿದೆ. ಗ್ರಾ.ಪಂ. ಸದಸ್ಯೆ, ಆಕೆಯ ಪತಿ ಮೇಲೆ ಹಲ್ಲೆ ನಡೆದಿರುವ ಆರೋಪ ಕೇಳಿ ಬಂದಿದೆ. ಭೂಮಿಕಾ, ರಮೇಶ್‌ಗೆ ಮಧುಗಿರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಗ್ರಾಮದಲ್ಲಿ ವಾರ್ಡ್ ಸಭೆ ನಡೆಯುವ ಸಂದರ್ಭದಲ್ಲಿ ಗ್ರಾ.ಪಂ. ಸದಸ್ಯೆ ಭೂಮಿಕಾ ಮತ್ತು ಆಕೆಯ ಪತಿ ರಮೇಶ್ ಮೇಲೆ ಹಲ್ಲೆ ನಡೆದಿದೆ ಎನ್ನಲಾಗಿದೆ. ಗ್ರಾಮದ ವೆಂಕಟೇಶಪ್ಪ, ರಾಮಚಂದ್ರಪ್ಪ, ವೆಂಕಟರವಣಪ್ಪ, ಇಂದ್ರಕುಮಾರ್, ದುರ್ಗಪ್ಪ ಹಲ್ಲೆ ಮಾಡಿರುವುದಾಗಿ ಆರೋಪ ಮಾಡಲಾಗಿದೆ. ಅಲ್ಲದೆ ಠಾಣೆಗೆ ದೂರು ನೀಡಿದ್ರೂ ಕ್ರಮಕೈಗೊಳ್ಳುತ್ತಿಲ್ಲವೆಂದು ಮಿಡಿಗೇಶಿ ಠಾಣೆಯ ಪೊಲೀಸರ ವಿರುದ್ಧ ಭೂಮಿಕಾ ಆರೋಪ ಮಾಡಿದ್ದಾರೆ.
ಇದನ್ನೂ ಓದಿ: