ಕೋಲಾರ: ಕುಖ್ಯಾತ ಅಂತರ್ರಾಜ್ಯ ಇರಾನಿ ಗ್ಯಾಂಗ್ ಸದಸ್ಯರುಗಳನ್ನ ಕೋಲಾರದ ಪೊಲೀಸರು ಬಂಧಿಸಿದ್ದಾರೆ. ಅಬ್ಬಾಸ್, ರಫೀಕ್, ಅಬ್ಬಾಸ್ ಆಲಿ, ಮೊಹಮದ್ ಆಲಿ, ಖೈಬರ್ ಸಾಧೀಕ್ ಜಾಫರ್, ಆಲಿ ಹೈದರ್, ಬಂಧಿತ ಆರೋಪಿಗಳು. ಬಂಧಿತರಿಂದ ಸುಮಾರು13.25 ಲಕ್ಷ ಮೌಲ್ಯದ ಚಿನ್ನಾಭರಣಗಳು ಹಾಗೂ ಒಂದು ಬೈಕ್ನ್ನ ವಶಕ್ಕೆ ಪಡೆದಿದ್ದಾರೆ. ಇನ್ನು ಈ ಆರೋಪಿಗಳ ಮೇಲೆ ವಿವಿಧ ರಾಜ್ಯಗಳಲ್ಲಿ ಒಟ್ಟು 97 ಪ್ರಕರಣಗಳಿವೆ. ಜನರ ಗಮನವನ್ನ ಬೇರೆಡೆ ಸೆಳೆದು ಮಹಿಳೆಯರಿಂದ ಒಡವೆ ಕಳ್ಳತನ ಮಾಡುತ್ತಿದ್ದರು.
ದಾಖಲೆ ಇಲ್ಲದೇ ಹಣ ಸಾಗಾಟ; ರಾತ್ರೋರಾತ್ರಿ ಲಕ್ಷ ಲಕ್ಷ ಹಣ ಸೀಜ್
ಗದಗ: ಚುನಾವಣೆ (Karnataka Assembly Election 2023) ಹತ್ತಿರ ಬರುತ್ತಿದ್ದಂತೆ ಕುರುಡು ಕಾಂಚಾಣ ಜೊತೆ ಚಿನ್ನವೂ ಕುಣಿದಾಡಲು ಆರಂಭವಾಗಿದೆ. ಚುನಾವಣೆ ಘೋಷಣೆಗೂ ಮುನ್ನ ಗದಗ ಪೊಲೀಸರು ಲಕ್ಷ ಲಕ್ಷ ಗರಿ ಗರಿ ನೋಟುಗಳನ್ನು ಬೇಟೆಯಾಡಿದ್ದಾರೆ. ದಾಖಲೆ ಇಲ್ಲದ 4.43 ಲಕ್ಷ ಹಣ ಮತ್ತು 750ML ನ 25 ಬಾಟಲ್ ಮದ್ಯವನ್ನ ಕಾರ್ನಲ್ಲಿ ಸಾಗಿಸುವ ವೇಳೆ ನಗರದ ಹೊರವಲಯದ ದಂಡಿನ್ ದುರ್ಗಮ್ಮ ದೇವಸ್ಥಾನ ಬಳಿಯ ಚೆಕ್ ಪೋಸ್ಟ್ ನಲ್ಲಿ ಸೀಜ್ ಮಾಡಲಾಗಿದೆ. ಇನ್ನು ಈ ಕಾರ್ ಗಜೇಂದ್ರಗಡ ಪಟ್ಟಣದಿಂದ ಹುಬ್ಬಳ್ಳಿಗೆ ಹೋಗುತ್ತಿತ್ತು. ಚೆಕ್ ಪೋಸ್ಟ್ ನಲ್ಲಿ ತಪಾಸಣೆ ವೇಳೆ ಕಂತೆ ಕಂತೆ ಹಣ ಪತ್ತೆಯಾಗಿದೆ. ಬೆಟಗೇರಿ ಹಾಗೂ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಈ ಕುರಿತು ಟಿವಿ9 ಗೆ ಗದಗ ಎಸ್ಪಿ ಬಿ ಎಸ್ ನೇಮಗೌಡ ಮಾಹಿತಿ ನೀಡಿದ್ದಾರೆ.
ಚುನಾವಣೆ ಹೊಸ್ತಿಲಲ್ಲಿ ಚಿನ್ನ ಹಾಗೂ ಲಕ್ಷಾಂತರ ರೂಪಾಯಿ ಜಪ್ತಿ ಮಾಡಿದ ಗದಗ ಜಿಲ್ಲಾಡಳಿತ
ಗದಗ: ಚುನಾವಣೆಗೆ ಇನ್ನು ಕೆಲವೇ ದಿನಗಳು ಇದ್ದು, ಈಗಾಗಲೇ ಚುನಾವಣೆಗೆ ಭರ್ಜರಿ ತಯಾರಿ ಮಾಡಿಕೊಂಡ ಜಿಲ್ಲಾಡಳಿತ ಜಿಲ್ಲೆಯಾದ್ಯಂತ ಚೆಕ್ ಪೋಸ್ಟ್ಗಳನ್ನು ಸ್ಥಾಪನೆ ಮಾಡಿದ್ದು, ಇಲ್ಲಿ ಸಿಸಿ ಟಿವಿ ಕ್ಯಾಮರಾಗಳ ಮೂಲಕ ಹದ್ದಿನ ಕಣ್ಣಿರಿಸಲಾಗಿದೆ. ಅದರಂತೆ ಕೋಟ್ಯಾಂತರ ಮೌಲ್ಯದ ಚಿನ್ನಾಭರಣ ಹಾಗೂ ನಗದು ಜಪ್ತಿ ಮಾಡಿದೆ. ಅಂದ ಚೆಂದದ ಚಿನ್ನಾಭರಣಗಳ ರಾಶಿ, ನೋಟುಗಳ ಕಂತೆಗಳನ್ನು ಕಂಡು ಪೊಲೀಸರೇ ದಂಗಾಗಿದ್ದಾರೆ. 500 ಮುಖ ಬೆಲೆಯ ಕಂತೆ ಕಂತೆ ಗರಿ ಗರಿ ನೋಟುಗಳು, ಚಿನ್ನಾಭರಣ ನೋಡಿ ಜಿಲ್ಲೆಯ ಜನರೂ ಮೂಗಿನ ಮೇಲೆ ಬೆರಳಿಡುವಂತೆ ಮಾಡಿದೆ. ಚುನಾವಣೆ ಹೊಸ್ತಿಲಲ್ಲೇ ದಾಖಲೆ ಇಲ್ಲದ ಚಿನ್ನಾಭರಣ, ಹಣ ಜಪ್ತಿ ಮಾಡಿ ಬಿಸಿ ಮುಟ್ಟಿಸಿದ ಜಿಲ್ಲಾಡಳಿತವು, ಆರಂಭದಲ್ಲೇ ಬಿಸಿ ಮುಟ್ಟಿಸಿದ್ದಾರೆ. ಚುನಾವಣೆ ಘೋಷಣೆ ಮುನ್ನವೇ ಕುರುಡು ಕಾಂಚಾಣ ಜೊತೆ ಫಳ ಫಳ ಹೊಳೆಯುವ ಚಿನ್ನದ ಆಟ ಚೆಕ್ ಪೋಸ್ಟ್ ಮೂಲಕ ಲಗಾಮ್ ಹಾಕಲಾಗಿದೆ. ಚೆಕ್ ಪೋಸ್ಟ್ ನಲ್ಲಿ ಸಿಸಿ ಟಿವಿ ಕಣ್ಣು ಮೂಲಕ ಹೈ ಅಲರ್ಟ್ ಆಗಿದ್ದಾರೆ.
ಚುನಾವಣೆ ಆಯೋಗವು ಚುನಾವಣೆ ಘೋಷಣೆ ಮಾಡಿಲ್ಲ. ಈಗಲೇ ಕುರುಡು ಕಾಂಚಾಣ ಹರಿದಾಡುತ್ತಿದೆ. ಅಷ್ಟೇ ಅಲ್ಲ ಚಿನ್ನಾಭರಣವೂ ಭರ್ಜರಿಯಾಗಿ ಹರಿದಾಡುತ್ತಿದೆ. ಇವು ಚುನಾವಣೆಯಲ್ಲಿ ಮತದಾರರಿಗೆ ಹಂಚಲು ತೆಗೆದುಕೊಂಡು ಹೋಗುತ್ತಿದ್ದರೇ ಎಂಬುದು ತಿಳಿದುಬಂದಿಲ್ಲ, ಆದರೆ ದಾಖಲೆ ಇಲ್ಲದ ಕೋಟ್ಯಾಂತರ ಮೌಲ್ಯದ ಚಿನ್ನಾಭರಣ ಹಾಗೂ ಲಕ್ಷಾಂತರ ನಗದು ಗದಗ ಜಿಲ್ಲಾಡಳಿತ ಪತ್ತೆ ಮಾಡಿದೆ. ಗದಗ ಜಿಲ್ಲಾಡಳಿತ ಚುನಾವಣೆಗೆ ಸಕಲ ರೀತಿಯಲ್ಲಿ ಸಜ್ಜಾಗಿದೆ. ಚುನಾವಣೆ ಘೋಷಣೆ ಮುನ್ನವೇ ಅಕ್ರಮ ತಡೆಯಲು ಡಿಸಿ ವೈಶ್ಯಾಲಿ ಮೇಡ್ ಜಿಲ್ಲಾದ್ಯಂತ 18 ಚೆಕ್ ಪೋಸ್ಟ್ಗಳನ್ನು ಸ್ಥಾಪನೆ ಮಾಡಿದ್ದಾರೆ. ಅಕ್ರಮವಾಗಿ ಏನೇ ಸಾಗಟಾ ಆದರೂ ಶೋಧ ಮಾಡುವಂತೆ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ. ಹೀಗಾಗಿ ಪೊಲೀಸ್, ಕಂದಾಯ ಇಲಾಖೆ ಅಧಿಕಾರಿಗಳು ಪ್ರತಿಯೊಂದು ವಾಹನಗಳನ್ನು ಚೆಕ್ ಪೋಸ್ಟ್ಗಳಲ್ಲಿ ತಪಾಸಣೆ ನಡೆಸುತ್ತಿದ್ದಾರೆ. ಮಾರ್ಚ್ 15 ರಂದು ದಾಖಲೆ ಇಲ್ಲದ ಮುಂಬೈನಿಂದ ಗದಗ ನಗರದಕ್ಕೆ ಸಾಗಿಸುತ್ತಿದ್ದ 1ಕೋಟಿ 75 ಲಕ್ಷ ಮೌಲ್ಯದ 4ಕೆಜಿ ಚಿನ್ನಾಭರಣ ಪತ್ತೆಯಾಗಿದ್ದು, ಇದನ್ನು ಪೊಲೀಸರು ಜಪ್ತಿ ಮಾಡಿದ್ದಾರೆ ಅಂತ ಟಿವಿ9ಗೆ ಜಿಲ್ಲಾಧಿಕಾರಿ ವೈಶಾಲಿ ಎಂ ಎಲ್ ತಿಳಿಸಿದ್ದಾರೆ.
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ