ಪ್ರಯಾಣಿಕರಿದ್ದ ಪಾಕ್ ವಿಮಾನವನ್ನು ಸೀಜ್ ಮಾಡಿದ ಮಲೇಷ್ಯಾ ಸರ್ಕಾರ, ಯಾಕೆ?
ಬೋಯಿಂಗ್-777 ಸೇರಿ ಎರಡು ವಿಮಾನವನ್ನು ಪಿಐಎ ಮಲೇಷಿಯಾದಿಂದ ಗುತ್ತಿಗೆ ಪಡೆದಿತ್ತು. ಆದರೆ, ಗುತ್ತಿಗೆ ಹಣ ಪಾವತಿಸದೇ ಪಾಕಿಸ್ತಾನ ಸತಾಯಿಸುತ್ತಲೇ ಬಂದಿತ್ತು. ಈಗ ಸ್ಥಳೀಯ ಕೋರ್ಟ್ ವಿಮಾನ ವಶಕ್ಕೆ ಪಡೆಯುವಂತೆ ಆದೇಶಿಸಿತ್ತು.
ಪಾಕಿಸ್ತಾನದ ಆರ್ಥಿಕ ಪರಿಸ್ಥಿತಿ ದಿನದಿಂದ ದಿನಕ್ಕೆ ಹೀನಾಯ ಸ್ಥಿತಿ ತಲುಪುತ್ತಿದೆ. ಈ ಮೊದಲು ಚೀನಾಗೆ ಕತ್ತೆಗಳನ್ನು ಮಾರಿ ಪಾಕಿಸ್ತಾನ ದುಡ್ಡು ಸಂಪಾದಿಸಿದ ವಿಚಾರ ದೊಡ್ಡ ಮಟ್ಟದಲ್ಲಿ ಸುದ್ದಿ ಆಗಿತ್ತು. ಈಗ ಮತ್ತೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನದ ಮಾನ ಹರಾಜಾಗಿದೆ. ಗುತ್ತಿಗೆ ಹಣ ಪಾವತಿ ಮಾಡದ ಪಾಕಿಸ್ತಾನ ಇಂಟರ್ನ್ಯಾಷನಲ್ ಏರ್ಲೈನ್ಸನ್ (ಪಿಐಎ) ವಿಮಾನ ಒಂದನ್ನು ಮಲೇಷ್ಯಾ ಅಧಿಕಾರಿಗಳು ಸೀಜ್ ಮಾಡಿದ್ದಾರೆ. ವಿಮಾನದಲ್ಲಿ ಪ್ರಯಾಣಿಕರು ಇರುವಾಗಲೇ ಅಧಿಕಾರಿಗಳು ಸೀಜ್ ಮಾಡಿದ್ದಾರೆ.
ಅಂದ ಹಾಗೆ, ಬೋಯಿಂಗ್-777 ಸೇರಿ ಎರಡು ವಿಮಾನಗಳನ್ನು ಪಿಐಎ ಮಲೇಷ್ಯಾದಿಂದ ಗುತ್ತಿಗೆ ಪಡೆದಿತ್ತು. ಆದರೆ, ಗುತ್ತಿಗೆ ಹಣ ಪಾವತಿಸದೇ ಪಾಕಿಸ್ತಾನ ಸತಾಯಿಸುತ್ತಲೇ ಬಂದಿತ್ತು. ಈಗ ಸ್ಥಳೀಯ ಕೋರ್ಟ್ ವಿಮಾನ ವಶಕ್ಕೆ ಪಡೆಯುವಂತೆ ಆದೇಶಿಸಿದ ಹಿನ್ನೆಲೆಯಲ್ಲಿ ಬೋಯಿಂಗ್-777 ವಿಮಾನವನ್ನು ಕೌಲಾಲಂಪುರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಅಧಿಕಾರಿಗಳು ಈ ಕ್ರಮ ಕೈಗೊಂಡಿದ್ದಾರೆ.
ಇನ್ನು, ವಿಮಾನವನ್ನು ವಶಕ್ಕೆ ಪಡೆಯುವಾಗ ಪ್ರಯಾಣಿಕರು ವಿಮಾನದಲ್ಲಿ ಉಪಸ್ಥಿತರಿದ್ದರು. ಏರ್ಲೈನ್ಸ್ನ ಸಿಬ್ಬಂದಿ ಕೂಡ ಇದ್ದರು. ಈಗ ಮಲೇಷ್ಯಾ ಸರ್ಕಾರ ಇವರ ಪ್ರಯಾಣಕ್ಕೆ ಬೇರೆ ವ್ಯವಸ್ಥೆ ಮಾಡಿದೆ ಎನ್ನಲಾಗಿದೆ.
ಇನ್ನು, ಘಟನೆ ಕುರಿತು ಪಾಕಿಸ್ತಾನ್ ಇಂಟರ್ನ್ಯಾಷನಲ್ ಏರ್ಲೈನ್ ಆಕ್ರೋಶ ಹೊರಹಾಕಿದೆ. ಬಾಕಿ ಮೊತ್ತ ಹಿಂದಿರುಗಿಸುವ ಪ್ರಕರಣದ ವಿಚಾರಣೆ ಇಂಗ್ಲೆಂಡ್ ಕೋರ್ಟ್ನಲ್ಲಿ ನಡೆಯುತ್ತಿದೆ. ಹೀಗಿರುವಾಗಲೇ, ಮಲೇಷ್ಯಾ ಸರ್ಕಾರ ಒಮ್ಮುಖವಾಗಿ ನಿರ್ಧಾರ ತೆಗೆದುಕೊಂಡಿದೆ ಎಂದು ಆರೋಪಿಸಿದೆ.
A PIA aircraft has been held back by a local court in Malaysia taking one sided decision pertaining to a legal dispute between PIA and another party pending in a UK court.
The passengers are being looked after and alternate arrangements for their travel have been finalized.
— PIA (@Official_PIA) January 15, 2021
ಸೌದಿ ಅರೇಬಿಯಾದ ಹಳೇ ಸಾಲ ತೀರಿಸಲು ಚೀನಾದಿಂದ ದೊಡ್ಡ ಮೊತ್ತದ ಹೊಸ ಸಾಲ ಪಡೆದ ಪಾಕಿಸ್ತಾನ