ಮತಾಂತರ ನಿಷೇಧ ಕಾಯ್ದೆ ಜಾರಿ ಆರೋಗ್ಯಕರವಲ್ಲ; ಮನುಷ್ಯನ ಸಂವಿಧಾನಬದ್ಧ ಹಕ್ಕು ಕಸಿದುಕೊಂಡಂತೆ: ಕೆಹೆಚ್ ಮುನಿಯಪ್ಪ
ಜನರು ಸ್ವಾತಂತ್ರ್ಯವಾಗಿ ಬಾಳಿ ಬದುಕುವುದಕ್ಕೇ ಬಿಡುತ್ತಿಲ್ಲ. ದೇಶದ ಜನರು ಈಗಲಾದರೂ ಎಚ್ಚೆತ್ತುಕೊಳ್ಳಬೇಕಾಗಿದೆ ಎಂದು ಕೋಲಾರದಲ್ಲಿ ಕಾಂಗ್ರೆಸ್ ನಾಯಕ ಕೆ.ಹೆಚ್. ಮುನಿಯಪ್ಪ ಹೇಳಿದ್ದಾರೆ.
ಕೋಲಾರ: ಮತಾಂತರ ನಿಷೇಧ ಕಾಯ್ದೆ ಜಾರಿ ಆರೋಗ್ಯಕರವಲ್ಲ. ಅದು ಮನುಷ್ಯನ ಸಂವಿಧಾನಬದ್ಧವಾದ ಹಕ್ಕು ಕಸಿದುಕೊಂಡಂತೆ. ಮೂಲಭೂತವಾದ ಹಕ್ಕಿಗೆ ಸ್ವಾತಂತ್ರ್ಯವಿಲ್ಲದಂತೆ ಆಗುತ್ತದೆ ಎಂದು ಕೇಂದ್ರದ ಮಾಜಿ ಸಚಿವ ಕೆ.ಹೆಚ್. ಮುನಿಯಪ್ಪ ಹೇಳಿಕೆ ನೀಡಿದ್ದಾರೆ. ಮನುಷ್ಯ ಹುಟ್ಟುವಾಗ, ಸಾಯುವಾಗ ಜಾತಿ ಧರ್ಮ ಇರಲ್ಲ. ಇದರ ಮಧ್ಯೆ ಜ್ಞಾನವಂತರಾದ ಮೇಲೆ ತೀರ್ಮಾನಿಸುತ್ತಾರೆ. ಮನುಷ್ಯ ಸ್ವಾತಂತ್ರ್ಯನಾದ ಬಳಿಕ ತೆಗೆದುಕೊಳ್ಳುವಂತಹ ಹಕ್ಕು ಅದಾಗಿರುತ್ತದೆ. ಆದರೆ ಅಂತಹ ಹಕ್ಕನ್ನು ವ್ಯವಸ್ಥಿತವಾಗಿ ಕಸಿದುಕೊಳ್ಳಬಾರದು. ರಾಜ್ಯದಲ್ಲಿ ಮತಾಂತರ ನಿಷೇಧ ಕಾಯ್ದೆ ಅವಶ್ಯಕತೆ ಇರಲಿಲ್ಲ ಎಂದು ಮುನಿಯಪ್ಪ ತಿಳಿಸಿದ್ದಾರೆ.
ಬಿಜೆಪಿಯವರು ಯಾವ ಕಾರಣಕ್ಕೆ ಮಾಡುತ್ತಿದ್ದಾರೋ ಗೊತ್ತಿಲ್ಲ. ಸ್ವಇಚ್ಛೆಯಿಂದ ಮನುಷ್ಯ ಮತಾಂತರವಾಗುವುದು ಅವರ ಹಕ್ಕು. ಬಿಜೆಪಿ ಅಂತಹ ಮೂಲಭೂತ ಹಕ್ಕನ್ನೇ ಕಸಿದುಕೊಳ್ಳುತ್ತಿದೆ. ಜನರು ಸ್ವಾತಂತ್ರ್ಯವಾಗಿ ಬಾಳಿ ಬದುಕುವುದಕ್ಕೇ ಬಿಡುತ್ತಿಲ್ಲ. ದೇಶದ ಜನರು ಈಗಲಾದರೂ ಎಚ್ಚೆತ್ತುಕೊಳ್ಳಬೇಕಾಗಿದೆ ಎಂದು ಕೋಲಾರದಲ್ಲಿ ಕಾಂಗ್ರೆಸ್ ನಾಯಕ ಕೆ.ಹೆಚ್. ಮುನಿಯಪ್ಪ ಹೇಳಿದ್ದಾರೆ.
10 ವರ್ಷಗಳಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಸಾಕಷ್ಟು ಧಕ್ಕೆ ಆಗಿದೆ ಈಗ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಮಾನ್ಯತೆ ಇಲ್ಲದಂತಾಗಿದೆ. 10 ವರ್ಷಗಳಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಸಾಕಷ್ಟು ಧಕ್ಕೆ ಆಗಿದೆ. ಇತ್ತೀಚಿಗೆ ಹಲವು ಸಾಹಿತಿಗಳು ಕೂಡ ಪಕ್ಷಾಂತರವಾಗಿದ್ದು, ತಮ್ಮ ದೌರ್ಬಲ್ಯಗಳಿಗೆ ಹೆದರಿ ಬಾಯಿಮುಚ್ಚಿ ಕುಳಿತಿದ್ದಾರೆ ಎಂದು ಬೆಂಗಳೂರಿನಲ್ಲಿ ಸಾಹಿತಿ ಪ್ರೊ.ಎಸ್.ಜಿ. ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ. ನೆಹರು ದೂರದೃಷ್ಟಿ ಪ್ರಜಾಪ್ರಭುತ್ವದ ಪರವಾಗಿ ಇತ್ತು. ಹೀಗಾಗಿ ನೆಹರು ಎಂದೂ ದೇವಾಲಯಕ್ಕೆ ಹೋದವರಲ್ಲ. ಉದ್ಯಮಗಳೇ ದೇವಾಲಯಗಳು ಅಂತಿದ್ದವರು ನೆಹರು. ನೆಹರು ಕಟ್ಟಿಸಿದ ಡ್ಯಾಂಗಳು ಲೆಕ್ಕಕ್ಕೇ ಇಲ್ಲವೆಂಬಂತೆ ಮಾತಾಡಿದರು.
ಪ್ರಧಾನಿಯನ್ನ ಪ್ರಶ್ನಿಸುವ ಧೈರ್ಯವುಳ್ಳ ರಾಜಕಾರಣಿ ಸಿದ್ದರಾಮಯ್ಯ. ಅವರಿಗೆ ಪ್ರಜಾಪ್ರಭುತ್ವಕ್ಕೆ ಬದ್ಧವಾಗಿ ಪ್ರಧಾನಿಯನ್ನು ಪ್ರಶ್ನಿಸುವ ಧೈರ್ಯವಿದೆ ಎಂದು ಬೆಂಗಳೂರಿನಲ್ಲಿ ಸಾಹಿತಿ ಪ್ರೊ.ಎಸ್.ಜಿ. ಸಿದ್ದರಾಮಯ್ಯ ಹೇಳಿದ್ದಾರೆ.
ಇದನ್ನೂ ಓದಿ: ಮತಾಂತರ ನಿಷೇಧ ಮಸೂದೆಗೆ ಹಿನ್ನಡೆಯಾಗಿಲ್ಲ: ಸಿಎಂ ಬಸವರಾಜ ಬೊಮ್ಮಾಯಿ
ಇದನ್ನೂ ಓದಿ: ವಿಧಾನ ಪರಿಷತ್ನಲ್ಲಿ ಮಂಡನೆ ಆಗದ ಮತಾಂತರ ನಿಷೇಧ ವಿಧೇಯಕ: ಮುಂದಿನ ಅಧಿವೇಶನದಲ್ಲಿ ಮಂಡನೆಗೆ ನಿರ್ಧಾರ