ಕೋಲಾರ ಬಾಲಕನ ಹತ್ಯೆ ಪ್ರಕರಣ: ಮೂವರು ಪೊಲೀಸ್ ಸಿಬ್ಬಂದಿ ಅಮಾನತು
ಕಾರ್ತಿಕ್ನ ಮುಖದ ಮೇಲೆ S ಎಂದು ಬರೆದು ಆರೋಪಿಗಳು ವಿಕೃತಿ ಮೆರೆದಿದ್ದಾರೆ. S ಎಂದರೆ ಶೈನ್ ಆಲಿಯಾಸ್ ದಿಲೀಪ್ ಎಂದರ್ಥ. ಶೈನ್ ಇಡೀ ಪ್ರಕರಣದ ಮಾಸ್ಟರ್ ಮೈಂಡ್ ಆಗಿದ್ದು, ಪ್ರಕರಣದ ಆರೋಪಿಗಳೆಲ್ಲರೂ ಅಪ್ರಾಪ್ತರಾಗಿದ್ದಾರೆ. ಪ್ರಮುಖ ಆರೋಪಿ ಡಾನ್ ಆಗಬೇಕು ಎಂದು ಈ ರೀತಿ ಕೃತ್ಯಗಳನ್ನು ಎಸಗುತ್ತಿದ್ದನು. ಆರೋಪಿಗಳು ರೌಡಿಗಳಂತೆ ಚಾಕು ಹಿಡಿದು ಗ್ಯಾಂಗ್ ಕಟ್ಟಿಕೊಂಡು ರೀಲ್ಸ್ ಮಾಡಿ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಹಾಕಿದ್ದಾರೆ.
ಕೋಲಾರ ನ.06: ಜಿಲ್ಲೆಯಲ್ಲಿ ಕಳೆದ 15 ದಿನಗಳಲ್ಲಿ ಮೂರು ಕೊಲೆಗಳಾಗಿವೆ. ಅಕ್ಟೋಬರ್ 23 ಕಾಂಗ್ರೆಸ್ (Congress) ಮುಖಂಡ, ಮಾಜಿ ಸಭಾಪತಿ ರಮೇಶ್ ಕುಮಾರ್ ಅವರ ಆಪ್ತ ಎಂ. ಶ್ರೀನಿವಾಸ್, ಅಕ್ಟೋಬರ್ 21 ಗ್ರಾಮ ಪಂಚಾಯತಿ ಸದಸ್ಯ ಅನಿಲ್ ಕುಮಾರ್ ಮತ್ತು ನವೆಂಬರ್ 03 ರಂದು ಬಾಲಕ ಕಾರ್ತಿಕ್ ಸಿಂಗ್ ಎಂಬುವರನ್ನು ಕೊಲೆ ಮಾಡಲಾಗಿತ್ತು. ಬಾಲಕನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಲಾರ (Kolar) ಠಾಣೆಯ ಮೂವರು ಪೊಲೀಸ್ (Police) ಸಿಬ್ಬಂದಿ ಅಮಾನತು ಮಾಡಲಾಗಿದೆ. ಕರ್ತವ್ಯ ಲೋಪ ಹಾಗೂ ಮಾಹಿತಿ ಕಲೆಹಾಕುವಲ್ಲಿ ವಿಫಲ ಹಿನ್ನೆಲೆಯಲ್ಲಿ ಎಎಸ್ಐ ಮುನಿರಾಜು, ಕಾನ್ಸ್ಟೇಬಲ್ಗಳಾದ ವಿಷ್ಣು, ಶಿವ ಅವರನ್ನು ಅಮಾನತು ಮಾಡಿ ಕೋಲಾರ ಎಸ್ಪಿ ನಾರಾಯಣ್ ಆದೇಶ ಹೊರಡಿಸಿದ್ದಾರೆ.
ಕೋಲಾರ ಬಾಲಕನ ಕೊಲೆ ಪ್ರಕರಣ
ಕೋಲಾರದ ವೀರಾಂಜನೇಯ ನಗರದ ನಿವಾಸಿ ಅರುಣ್ ಸಿಂಗ್ ಅವರ ಪುತ್ರ ಕಾರ್ತಿಕ್ ಸಿಂಗ್ (17) ಯನ್ನು ಶುಕ್ರವಾರ ರಾತ್ರಿ 8 ಗಂಟೆ ಸುಮಾರಿಗೆ ನಗರದ ಟೇಕಲ್ ರಸ್ತೆಯ ಬಾಪೂಜಿ ಶಾಲಾ ಆವರಣದಲ್ಲಿ ದುಷ್ಕರ್ಮಿಗಳು ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿದ್ದರು.
ಹತ್ಯೆ ಮಾಡಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ದಿಲೀಪ್ ಅಲಿಯಾಸ್ ಶೈನ್ ಸೇರಿದಂತೆ 8 ಜನರನ್ನು ಪೊಲೀಸರು ಬಂಧಿಸಿದ್ದರು. ಡಾನ್ ಆಗಬೇಕೆಂದು ಆರೋಪಿ ಹತ್ಯೆ ಮಾಡಿದ್ದನು ಎಂದು ಪೊಲೀಸರು ಹೇಳಿದ್ದರು. ಹತ್ಯೆಗೂ ಮುನ್ನ ಬಾಲಕನಿಗೆ ಚಿತ್ರಹಿಂಸೆ ಕೊಟ್ಟಿದ್ದಾರೆ. ಬಟ್ಟೆ ಬಿಚ್ಚಿಸಿ ಮೈಕೈಗೆ ಗಾಜು, ಚಾಕು, ಬ್ಲೇಡ್ನಿಂದ ಕುಯ್ದಿದ್ದಾರೆ.
ಇದನ್ನೂ ಓದಿ: ಕೋಲಾರದಲ್ಲಿ ಇಬ್ಬರು ಕಾಂಗ್ರೆಸ್ ಮುಖಂಡರ ಹತ್ಯೆ: ಎರಡು ಠಾಣೆಯ ಒಟ್ಟು 6 ಪೊಲೀಸ್ ಸಿಬ್ಬಂದಿ ಸಸ್ಪೆಂಡ್
ಕಾರ್ತಿಕ್ನ ಮುಖದ ಮೇಲೆ S ಎಂದು ಬರೆದು ಆರೋಪಿಗಳು ವಿಕೃತಿ ಮೆರೆದಿದ್ದಾರೆ. S ಎಂದರೆ ಶೈನ್ ಆಲಿಯಾಸ್ ದಿಲೀಪ್ ಎಂದರ್ಥ. ಶೈನ್ ಇಡೀ ಪ್ರಕರಣದ ಮಾಸ್ಟರ್ ಮೈಂಡ್ ಆಗಿದ್ದು, ಪ್ರಕರಣದ ಆರೋಪಿಗಳೆಲ್ಲರೂ ಅಪ್ರಾಪ್ತರಾಗಿದ್ದಾರೆ. ಪ್ರಮುಖ ಆರೋಪಿ ಡಾನ್ ಆಗಬೇಕು ಎಂದು ಈ ರೀತಿ ಕೃತ್ಯಗಳನ್ನು ಎಸಗುತ್ತಿದ್ದನು. ಆರೋಪಿಗಳು ರೌಡಿಗಳಂತೆ ಚಾಕು ಹಿಡಿದು ಗ್ಯಾಂಗ್ ಕಟ್ಟಿಕೊಂಡು ರೀಲ್ಸ್ ಮಾಡಿ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಹಾಕಿದ್ದಾರೆ.
ಕೋಲಾರದಲ್ಲಿ ಅಪ್ರಾಪ್ತ ಬಾಲಕನ ಕೊಲೆ ಖಂಡಿಸಿ ಅಭಿಯಾನ
ಅಪ್ರಾಪ್ತ ಬಾಲಕನ ಕೊಲೆ ಖಂಡಿಸಿ ಜೆಡಿಎಸ್ ಶಾಸಕ ಸಮೃದ್ಧಿ ಮಂಜುನಾಥ್ ಅಭಿಯಾನ ಮಾಡುತ್ತಿದ್ದಾರೆ. ಅಪ್ರಾಪ್ತ ಬಾಲಕ ಕಾರ್ತಿಕ್ ಸಾವಿಗೆ ನ್ಯಾಯ ಕೊಡಿಸಿ ಮತ್ತು ಕೋಲಾರ ರಕ್ಷಿಸಿ, ಯುವಕರನ್ನು ರಕ್ಷಿಸುವಂತೆ ಆಗ್ರಹಿಸಿ ಅಭಿಯಾನ ಮಾಡುತ್ತಿದ್ದಾರೆ.
ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ