ಶಾಸಕ ನಂಜೇಗೌಡ ಮನೆ ಮೇಲೆ ಇಡಿ ದಾಳಿ ಕೇಸ್​: ಪುತ್ರ ಹರೀಶ್, ಪಿಎ ಕರೆದೊಯ್ದ ಅಧಿಕಾರಿಗಳು

ಮಾಲೂರು ಕಾಂಗ್ರೆಸ್ ಶಾಸಕ ಕೆ.ವೈ ನಂಜೇಗೌಡ ನಿವಾಸದ ಮೇಲೆ ಇಂದು ಬೆಳಿಗ್ಗೆ ಇಡಿ ದಾಳಿ ಮಾಡಿತ್ತು. ಸದ್ಯ  ನಂಜೇಗೌಡ ನಿವಾಸದಿಂದ 3 ಇನೋವಾ ಕಾರುಗಳಲ್ಲಿ ED ಅಧಿಕಾರಿಗಳು ತೆರಳಿದ್ದಾರೆ. ಈ ವೇಳೆ ನಂಜೇಗೌಡ ಪುತ್ರ ಹರೀಶ್ ಮತ್ತು ಆಪ್ತಸಹಾಯಕ ಹರೀಶ್​ಗೌಡನನ್ನ ಕರೆದುಕೊಂಡು ಹೋಗಿದ್ದಾರೆ.

ಶಾಸಕ ನಂಜೇಗೌಡ ಮನೆ ಮೇಲೆ ಇಡಿ ದಾಳಿ ಕೇಸ್​: ಪುತ್ರ ಹರೀಶ್, ಪಿಎ ಕರೆದೊಯ್ದ ಅಧಿಕಾರಿಗಳು
ಶಾಸಕ K.Y ನಂಜೇಗೌಡ, ED ತಲಾಶ್
Follow us
ರಾಜೇಂದ್ರ ಸಿಂಹ ಬಿ.ಎಲ್. ಕೋಲಾರ
| Updated By: ಗಂಗಾಧರ​ ಬ. ಸಾಬೋಜಿ

Updated on: Jan 08, 2024 | 5:49 PM

ಕೋಲಾರ, ಜನವರಿ 08: ಜಿಲ್ಲೆಯ ಮಾಲೂರು ತಾಲೂಕಿನ ಕೊಮ್ಮನಹಳ್ಳಿ ಗ್ರಾಮದಲ್ಲಿರುವ ಮಾಲೂರು ಕಾಂಗ್ರೆಸ್ ಶಾಸಕ ಕೆ.ವೈ ನಂಜೇಗೌಡ (MLA Nanjegowda) ನಿವಾಸದ ಮೇಲೆ ಇಂದು ಬೆಳಿಗ್ಗೆ ಇಡಿ ದಾಳಿ ಮಾಡಿತ್ತು. ಸದ್ಯ  ನಂಜೇಗೌಡ ನಿವಾಸದಿಂದ 3 ಇನೋವಾ ಕಾರುಗಳಲ್ಲಿ ED ಅಧಿಕಾರಿಗಳು ತೆರಳಿದ್ದಾರೆ. ಈ ವೇಳೆ ನಂಜೇಗೌಡ ಪುತ್ರ ಹರೀಶ್ ಮತ್ತು ಆಪ್ತಸಹಾಯಕ ಹರೀಶ್​ಗೌಡನನ್ನ ಕರೆದುಕೊಂಡು ಹೋಗಿದ್ದಾರೆ. ನಂಜೇಗೌಡ, ಸಂಬಂಧಿಕರ ನಿವಾಸ, ಕೋಚಿಮುಲ್ ಕಚೇರಿ ಮತ್ತು ಕ್ರಷರ್​ಗಳಲ್ಲಿ ED ತಲಾಶ್ ಮಾಡಿದೆ.

ಕೋಚಿಮುಲ್ ನೇಮಕಾತಿಯಲ್ಲಿ ಅವ್ಯವಹಾರ ಆರೋಪ ಹಿನ್ನೆಲೆ ಬೆಳ್ಳಂಬೆಳಗ್ಗೆ ನಂಜೇಗೌಡ ನಿವಾಸ ಮೇಲೆ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ಮಾಡಿದ್ದಾರೆ. ಹುತ್ತೂರು ಹೋಬಳಿ ಕೋಚಿಮುಲ್ ಕಚೇರಿಯಲ್ಲಿ ದಾಖಲೆ, ಕೊಮ್ಮನಹಳ್ಳಿ ನಂಜುಂಡೇಶ್ವರ ಸ್ಟೋನ್ ಕ್ರಷರ್​ನಲ್ಲೂ ಪರಿಶೀಲನೆ ಮಾಡಲಾಗಿದೆ.

ಇದನ್ನೂ ಓದಿ: ಕೋಚಿಮುಲ್ ಅವ್ಯವಹಾರ: ಶಾಸಕ ಕೆ.ವೈ.ನಂಜೇಗೌಡ ಮನೆ ಮೇಲೆ ಇಡಿ ದಾಳಿ

ಮನೆಯನ್ನು ಸಂಪೂರ್ಣವಾಗಿ ವಶಕ್ಕೆ ಒಡೆದಿದ್ದ ಅಧಿಕಾರಿಗಳು, ಮನೆಯ ಸುತ್ತಲೂ ಬಿಎಸ್​ಎಫ್ ಸಿಬ್ಬಂದಿಯಿಂದ ಬಂದೋಬಸ್ತ್ ಮಾಡಲಾಗಿತ್ತು. ಶಾಸಕ‌ ನಂಜೇಗೌಡರ ಆಡಿಟರ್ ಅವರ ಕೋಲಾರ ನಗರದ ಗೌರಿಪೇಟೆಯಲ್ಲಿರುವ ಕಚೇರಿಯನ್ನು ಅಧಿಕಾರಿಗಳು ವಶಕ್ಕೆ ಪಡೆದು ಪರಿಶೀಲನೆ ಮಾಡಲಾಗಿದೆ. ಕಚೇರಿ ಹೊರಗೆ ರಕ್ಷಣಾ ಸಿಬ್ಬಂದಿ ನಿಯೋಜನೆ ಮಾಡಲಾಗಿತ್ತು.

ಇದನ್ನೂ ಓದಿ: ಶಿವಮೊಗ್ಗ ಏರ್​​ಪೋರ್ಟ್​​​​ ಕಾಮಗಾರಿ ನಿರ್ವಹಿಸಿದ್ದ ನ್ಯಾಷನಲ್ ಸಂಸ್ಥೆ ಮೇಲೆ ಇಡಿ ದಾಳಿ

ಜಾರಿ ನಿರ್ದೇಶನಾಲಯ ಅಧಿಕಾರಿಗಳು ನಂಜೇಗೌಡ ಅವರ ಆಪ್ತ ಸಹಾಯಕ ಹರೀಶ್, ಕೋಚಿಮುಲ್ ಅಡ್ಮಿನ್ ಮ್ಯಾನೇಜರ್ ನಾಗೇಶ್, ಕೋಚಿಮುಲ್​​ ವ್ಯವಸ್ಥಾಪಕ ನಿರ್ದೇಶಕ ಗೋಪಾಲ್​ಮೂರ್ತಿ ನಿವಾಸದ ಮನೆ ಮೇಲೂ ದಾಳಿ ಮಾಡಿದ್ದರು.

ಕೆ.ವೈ.ನಂಜೇಗೌಡ ಅವರ ಬೆಂಗಳೂರು ನಿವಾಸ, ಮಾಲೂರು ಕೋಚಿಮುಲ್ ಕಚೇರಿ ಸೇರಿದಂತೆ ಒಟ್ಟು ಹತ್ತಕ್ಕೂ ಹೆಚ್ಚು ಕಡೆಗಳಲ್ಲಿ ಇಡಿ ಅಧಿಕಾರಿಗಳು ದಾಳಿ ಮಾಡಿ ಪರಿಶೀಲನೆ ಮಾಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.