AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೋಲಾರ ಹಾಪ್​ ಕಾಮ್ಸ್ ಉದ್ಯೋಗಿ ಆತ್ಮಹತ್ಯೆ: ಮೇಲಾಧಿಕಾರಿಗಳ ಕಿರುಕುಳ ಆರೋಪ, ದೂರು

ಇತ್ತೀಚೆಗೆ ತೋಟಗಾರಿಕೆ ಹಾಗೂ ಹಾಪ್ ಕಾಮ್ಸ್ ಅಧಿಕಾರಿಗಳು ತಿಂಗಳಿಗೆ ಒಂದು ಲಕ್ಷ ಟಾರ್ಗೆಟ್ ನಿಗಧಿ ಮಾಡಿದ್ರು, ಇದರಿಂದ ಮನನೊಂದು ಶ್ರೀನಿವಾಸಗೌಡ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆ ಇದೆ ಎಂದು ಕುಟುಂಬ ಸದಸ್ಯರ ಆರೋಪವಾಗಿದೆ. ಸ್ಥಳಕ್ಕೆ ಕೋಲಾರ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದಾರೆ.

ಕೋಲಾರ ಹಾಪ್​ ಕಾಮ್ಸ್ ಉದ್ಯೋಗಿ ಆತ್ಮಹತ್ಯೆ: ಮೇಲಾಧಿಕಾರಿಗಳ ಕಿರುಕುಳ ಆರೋಪ, ದೂರು
ಹಾಪ್​ ಕಾಮ್ಸ್ ಉದ್ಯೋಗಿ ಆತ್ಮಹತ್ಯೆ: ಮೇಲಾಧಿಕಾರಿಗಳ ಕಿರುಕುಳ ಆರೋಪ
Follow us
ರಾಜೇಂದ್ರ ಸಿಂಹ ಬಿ.ಎಲ್. ಕೋಲಾರ
| Updated By: ಸಾಧು ಶ್ರೀನಾಥ್​

Updated on:Mar 16, 2024 | 11:06 AM

ಕೋಲಾರ, ಮಾರ್ಚ್​​ 16: ಹಾಪ್ ಕಾಮ್ಸ್ ಉದ್ಯೋಗಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಿನ್ನೆ ಶುಕ್ರವಾರ ಕೋಲಾರದಲ್ಲಿ ನಡೆದಿದೆ. ಕೋಲಾರ ತಾಲ್ಲೂಕು ಬಸವನತ್ತ ಗ್ರಾಮದ ಬಳಿ ಈ ಘಟನೆ ನಡೆದಿದ್ದು, ಬಸವನತ್ತ ಗ್ರಾಮದ ೫೯ ವರ್ಷದ ಶ್ರೀನಿವಾಸಗೌಡ ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ಬಸವನತ್ತ ಗ್ರಾಮದ ಹೊರವಲಯದ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಶ್ರೀನಿವಾಸಗೌಡ ಕಳೆದ 30 ವರ್ಷಗಳಿಂದ ಕೋಲಾರ ನಗರದ ಟೇಕಲ್ ರಸ್ತೆಯ ಹಾಪ್ ಕಾಮ್ಸ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದು ಹದಿನೈದು ಸಾವಿರ ಸಂಬಳ‌ ನೀಡುತ್ತಿದ್ದರು. ಆ ಸಂಬಳ ಜೀವನ ನಿರ್ವಹಣೆಗೆ ಸಾಕಾಗುತ್ತಿರಲಿಲ್ಲ ಅನ್ನೋ ಬೇಸರ ಇತ್ತು, ಅದರ ಜೊತೆಗೆ ಇತ್ತೀಚೆಗೆ ಮೇಲಾಧಿಕಾರಿಗಳು ಟಾರ್ಗೆಟ್ ಕೊಟ್ಟು ವ್ಯಾಪಾರ ಮಾಡುವಂತೆ ಒತ್ತಾಯ ಮಾಡುತ್ತಿದ್ದು, ಟಾರ್ಗೆಟ್ ಮಾಡದೆ ಹೋದಾಗ ಸಂಬಳದಲ್ಲಿ‌ ಹಣ ಕಟ್ ಮಾಡುತ್ತಿದ್ದರು. ಇದರಿಂದ ಹಣದ ಸಮಸ್ಯೆಯಿಂದ ಮಾನಸಿಕ ಒತ್ತಡಕ್ಕೆ ಒಳಗಾಗಿ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ದೂರು ನೀಡಲಾಗಿದೆ.

ಅಲ್ಲದೆ ಇತ್ತೀಚೆಗೆ ತೋಟಗಾರಿಕೆ ಹಾಗೂ ಹಾಪ್ ಕಾಮ್ಸ್ ಅಧಿಕಾರಿಗಳು ತಿಂಗಳಿಗೆ ಒಂದು ಲಕ್ಷ ಟಾರ್ಗೆಟ್ ನಿಗಧಿ ಮಾಡಿದ್ರು, ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆ ಇದೆ ಎಂದು ಕುಟುಂಬ ಸದಸ್ಯರ ಆರೋಪವಾಗಿದೆ. ಇನ್ನೂ ಸ್ಥಳಕ್ಕೆ ಕೋಲಾರ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದಾರೆ.

ಬೆಂಗಳೂರಿನಲ್ಲಿ ಮಾನವ ಕಳ್ಳ ಸಾಗಣೆ ಆರೋಪ: ಎನ್​​ಸಿಪಿಸಿಆರ್​​ ಅಧಿಕಾರಿಗಳ ದಾಳಿ ವೇಳೆ 20 ಬಾಲಕಿಯರು ಪತ್ತೆ

ಬೆಂಗಳೂರು, ಮಾರ್ಚ್​ 15: ನಗರದಲ್ಲಿ ಮಾನವ ಕಳ್ಳ ಸಾಗಣೆ ಆರೋಪ ಹಿನ್ನೆಲೆ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ (NCPCR) ಅಧ್ಯಕ್ಷ ಹಾಗೂ ಸಿಬ್ಬಂದಿಗಳಿಂದ ದಾಳಿ ಮಾಡಿರುವಂತಹ ಘಟನೆ ನಡೆದಿದೆ. ಅಧ್ಯಕ್ಷ ಪ್ರಿಯಾಂಕ್ ಕಂಗೂನ್ ನೇತೃತ್ವದಲ್ಲಿ ದಾಳಿ ಮಾಡಿದ್ದು, ದಾಳಿ ವೇಳೆ 20 ಬಾಲಕಿಯರು ಪತ್ತೆ ಆಗಿದ್ದಾರೆ. ಪತ್ತೆಯಾದವರನ್ನು ಗಲ್ಫ್​ ರಾಷ್ಟ್ರಗಳಿಗೆ ಸಾಗಿಸಲಾಗುತ್ತಿದೆ ಎಂದು ಆರೋಪ ಕೇಳಿಬಂದಿದೆ. ದಕ್ಷಿಣ ಭಾರತದಲ್ಲಿ ಇಂತಹ ಪ್ರಕರಣಗಳು ಈಗಾಗಲೇ ವರದಿಯಾಗಿವೆ ಎನ್ನಲಾಗುತ್ತಿದೆ. ಸದ್ಯ ಎಫ್​​ಐಆರ್​ ದಾಖಲಿಸುವಂತೆ ಸಂಪಿಗೇಹಳ್ಳಿ ಠಾಣೆಯಲ್ಲಿ ಎನ್​​ಸಿಪಿಸಿಆರ್ ಅಧ್ಯಕ್ಷ ಹಾಗೂ ಸಿಬ್ಬಂದಿ ಆಗ್ರಹಿಸಿದ್ದಾರೆ.

ಸದ್ಯ ಎನ್​ಸಿಪಿಸಿಆರ್​ನಿಂದ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಮದರಸದಲ್ಲಿ ಸುಮಾರು 10-20 ಮಕ್ಕಳು ಇದ್ದರು. ಮಕ್ಕಳಿಗೆ ಸರಿಯಾಗಿ ಶಿಕ್ಷಣವನ್ನು ನೀಡುತ್ತಿಲ್ಲ. ಜೊತೆಗೆ ಧಾರ್ಮಿಕ‌ ಶಿಕ್ಷಣವನ್ನು ನೀಡುತ್ತಿದ್ದಾರೆ. ಯಾವುದೇ ಲೈಸೆನ್ಸ್ ಇಲ್ಲದೆ ಮದರಸವನ್ನು ನಡೆಸುತ್ತಿದ್ದಾರೆ ಎಂದು ಆರೋಪಿಸಿ ದೂರು ನೀಡಲಾಗಿದೆ. ಸದ್ಯ ಎನ್​ಸಿಪಿಸಿಆರ್​ ದೂರು ಆಧರಿಸಿ ಸಂಪಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು, ಪೊಲೀಸರು ತನಿಖೆಗೆ ಮುಂದಾಗಿದ್ದಾರೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 11:03 am, Sat, 16 March 24