ಕೋಲಾರದಲ್ಲಿ ಬಾಲಕನ ಕೊಲೆ ಪ್ರಕರಣ: ಆರೋಪಿಗಳ ಕಾಲಿಗೆ ಗುಂಡೇಟು ಕೊಟ್ಟು ಬಂಧಿಸಿದ ಪೊಲೀಸರು!

Kolar News: ಅಪ್ರಾಪ್ತ ಬಾಲಕ ಕಾರ್ತಿಕ್‌ ಸಿಂಗ್‌ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳ ಮೇಲೆ‌ ಪೊಲೀಸರು ಫೈರಿಂಗ್‌​ ಮಾಡಿರುವಂತಹ ಘಟನೆ ಮುಳಬಾಗಿಲು ತಾಲೂಕಿನ ದೇವರಾಯಸಮುದ್ರ ಗ್ರಾಮದ ಬಳಿ ನಡೆದಿದೆ. ಸದ್ಯ ಗಾಯಾಳುಗಳನ್ನು ಕೋಲಾರ ಜಿಲ್ಲಾಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ.

ಕೋಲಾರದಲ್ಲಿ ಬಾಲಕನ ಕೊಲೆ ಪ್ರಕರಣ: ಆರೋಪಿಗಳ ಕಾಲಿಗೆ ಗುಂಡೇಟು ಕೊಟ್ಟು ಬಂಧಿಸಿದ ಪೊಲೀಸರು!
ಪ್ರಾತಿನಿಧಿಕ ಚಿತ್ರ
Updated By: ಗಂಗಾಧರ​ ಬ. ಸಾಬೋಜಿ

Updated on: Nov 09, 2023 | 12:50 PM

ಕೋಲಾರ, ನವೆಂಬರ್​​​ 9: ಅಪ್ರಾಪ್ತ ಬಾಲಕ ಕಾರ್ತಿಕ್‌ ಸಿಂಗ್‌ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳ ಮೇಲೆ‌ ಪೊಲೀಸರು ಫೈರಿಂಗ್‌ (firing)​ ಮಾಡಿರುವಂತಹ ಘಟನೆ ಮುಳಬಾಗಿಲು ತಾಲೂಕಿನ ದೇವರಾಯಸಮುದ್ರ ಗ್ರಾಮದ ಬಳಿ ನಡೆದಿದೆ. ಆರೋಪಿಗಳನ್ನು ಬಂಧಿಸುವ ವೇಳೆ ಪೊಲೀಸರ ಮೇಲೆ ಹಲ್ಲೆಗೆ ಮುಂದಾದಾಗ ಮುಳಬಾಗಿಲು ಸಬ್ಇನ್ಪೆಕ್ಟರ್ ವಿಠಲ್ ತಳವಾರ್ ಅವರಿಂದ ಆರೋಪಿಗಳ ಎರಡೂ ಕಾಲುಗಳಿಗೆ ಫೈರಿಂಗ್‌ ಮಾಡಿದ್ದಾರೆ. ಹಲ್ಲೆ ನಡೆಸಿದ್ದರಿಂದ ಪಿಎಸ್ಐ, ಇಬ್ಬರು ಸಿಬ್ಬಂದಿಗೆ ಗಾಯಗಳಾಗಿದ್ದು, ಕೋಲಾರ ಜಿಲ್ಲಾಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ.

ಕೋಲಾರ ನಗರದ ಪಿಸಿ ಬಡಾವಣೆಯಲ್ಲಿ ನ-04 ರಂದು ನಡೆದ 17 ವರ್ಷದ ಬಾಲಕ ಕಾರ್ತಿಕ್​ ಸಿಂಗ್​ ಎಂಬಾತನ ಹತ್ಯೆ ಪ್ರಕರಣ ಜಿಲ್ಲೆಯಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ. ಎಲ್ಲಾ ಅಪ್ರಾಪ್ತ ಬಾಲಕರೇ ಸೇರಿ ಇನ್ನೊಬ್ಬ ಅಪ್ರಾಪ್ತ ಬಾಲಕನನ್ನು ಧಾರುಣವಾಗಿ ಕೊಂದು ಹಾಕಿದ್ದಾರೆ. ಅಷ್ಟೇ ಅಲ್ಲದೆ ಕೊಂದು ಹಾಕಿರುವ ದೃಶ್ಯವನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲ ತಾಣಗಳಲ್ಲಿ ಹರಿಬಿಟ್ಟಿದ್ದರು.

ಇದನ್ನೂ ಓದಿ: ಕೋಲಾರದಲ್ಲಿ ಇಬ್ಬರು ಕಾಂಗ್ರೆಸ್ ಮುಖಂಡರ ಹತ್ಯೆ: ಎರಡು ಠಾಣೆಯ ಒಟ್ಟು 6 ಪೊಲೀಸ್ ಸಿಬ್ಬಂದಿ ಸಸ್ಪೆಂಡ್

ಕಳೆದ ಎಂಟು ತಿಂಗಳ ಹಿಂದೆ ನಡೆದ ಬಾಲಕನೊಬ್ಬನ ಹುಟ್ಟುಹಬ್ಬ ಕಾರ್ಯಕ್ರಮಕ್ಕೆ ಹೋಗಿಲ್ಲ ಅನ್ನೋ ಕಾರಣಕ್ಕೆ ಶುರುವಾಗಿದ್ದ ಗಲಾಟೆ ಕೊನೆಗೆ ಅದು ಕೊಲೆಯವರೆಗೂ ಬಂದು ನಿಂತಿದೆ. ಅದರಲ್ಲೂ ಪ್ರಮುಖ ಆರೋಪಿ ತಾನು ಡಾನ್​ ಆಗಬೇಕು, ಜಿಲ್ಲೆಯಲ್ಲಿ ದೊಡ್ಡ ರೌಡಿಯಾಗಬೇಕು ಅನ್ನೋ ಕಾರಣದಿಂದ ಈ ರೀತಿ ಕೊಲೆ ಮಾಡಿರುವುದಾಗಿ ಹೇಳಿಕೊಂಡಿದ್ದಾನೆ.

ಇದನ್ನೂ ಓದಿ: ಕೋಲಾರದಲ್ಲಿ ಸ್ನೇಹಿತರಿಂದಲೇ ಅಪ್ರಾಪ್ತ ಬಾಲಕನ ಹತ್ಯೆ; ಕಾಲೇಜು ಮಕ್ಕಳಿಗೆ ಕಾನೂನು ಜಾಗೃತಿ ಮೂಡಿಸಲು ಮುಂದಾದ ಪೊಲೀಸರು

ಚಾಕು, ಆಕ್ಸಲ್​ ಬ್ಲೇಡ್​ನಿಂದ ಚಿತ್ರಹಿಂಸೆ ಕೊಟ್ಟು ಬಾಲಕನನ್ನು ಕೊಂದಿದ್ದಾನೆ. ಅಷ್ಟೇ ಅಲ್ಲದೆ ಆತನ ಮುಖ ಹಾಗೂ ದೇಹದ ಮೇಲೆ ತನ್ನ ಹೆಸರಿನ ಮೊದಲ ಅಕ್ಷರ ಎಸ್​ ಬರೆದು ವಿಕೃತಿ ಮೆರೆದಿರುವುದು ಜಿಲ್ಲೆಯ ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ. ಅಪ್ರಾಪ್ತ ವಯಸ್ಸಿನಲ್ಲೇ ಇಷ್ಟೊಂದು ಕ್ರೂರವಾಗಿ ನಡೆದುಕೊಂಡಿರುವವರನ್ನು ಗುಂಡಿಕ್ಕಿ ಕೊಲ್ಲಬೇಕು ಎಂದು ಮೃತ ಬಾಲಕನ ಪೊಷಕರು ಆಗ್ರಹಿಸಿದ್ದರು.

ಮೂರು ಜನ ಪೊಲೀಸ್ ಸಿಬ್ಬಂದಿ ಅಮಾನತು

ಘಟನೆ ಸಂಬಂಧ ಕೋಲಾರ ಎಸ್ಪಿ ನಾರಾಯಣ್​ ಮೂರು ಜನ ಪೊಲೀಸ್ ಸಿಬ್ಬಂದಿಯನ್ನು ಕರ್ತವ್ಯ ಲೋಪದಡಿ ಅಮಾನತು ಮಾಡಿದ್ದರು. ಒಟ್ಟಾರೆ ಕೋಲಾರ ಜಿಲ್ಲೆಯಲ್ಲಿ ಮೇಲಿಂದ ಮೇಲೆ ನಡೆಯುತ್ತಿರುವ ಕೊಲೆ ಪ್ರಕರಣಗಳು ಜಿಲ್ಲೆಯ ಜನರನ್ನು ಬೆಚ್ಚಿ ಬೀಳಿಸಿದ್ದು, ಕೂಡಲೇ ಪೊಲೀಸರು ಆರೋಪಿಗಳ ಹೆಡೆಮುರಿ ಕಟ್ಟಿ ಜನರು ನಿರಾತಂಕವಾಗಿ ಜೀವಿಸುವಂತೆ ಮಾಡಬೇಕಿದೆ ಎಂದ್ದಿರುವ. ಆ ಮೂಲಕ ಇಂದು ಇಬ್ಬರು ಆರೋಪಿಗಳ ಮೇಲೆ ಪೊಲೀಸರಿಂದ ಫೈರಿಂಗ್‌ ಮಾಡಲಾಗಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 12:28 pm, Thu, 9 November 23