ಕೋಲಾರ; ಗಂಗಮ್ಮ ದೇಗುಲದಲ್ಲಿ ನಿಧಿ ಶೋಧಿಸುತ್ತಿದ್ದವರನ್ನು ಪ್ರಶ್ನಿಸಿದ್ದಕ್ಕೆ ಮಾರಣಾಂತಿಕ ಹಲ್ಲೆ
ಕೋಲಾರ ತಾಲೂಕಿನ ತ್ಯಾವನಹಳ್ಳಿಯ ಗಂಗಮ್ಮ ದೇಗುಲದಲ್ಲಿ ಆನಂದ್ & ಗ್ಯಾಂಗ್ ನಿಧಿ ಶೋಧ ಮಾಡುತ್ತಿದ್ದರು. ಈ ಬಗ್ಗೆ ಪ್ರಶ್ನಿಸಿದಕ್ಕೆ ಮಂಜುನಾಥ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಮಂಜುನಾಥನ ತಲೆಗೆ ಕಲ್ಲಿನಿಂದ ಹಲ್ಲೆ ನಡೆಸಿದ್ದು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ಸಂಬಂಧ ಕ್ರಮಕ್ಕೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಕೋಲಾರ, ಮಾರ್ಚ್.05: ನಿಧಿ ಶೋಧಿಸುತ್ತಿದ್ದವರನ್ನು (Treasure Hunt) ಪ್ರಶ್ನಿಸಿದ್ದಕ್ಕೆ ಗ್ರಾಮಸ್ಥನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿರುವ ಘಟನೆ ಕೋಲಾರ (Kolar) ತಾಲೂಕಿನ ತ್ಯಾವನಹಳ್ಳಿಯ ಗಂಗಮ್ಮ ದೇಗುಲದಲ್ಲಿ ನಡೆದಿದೆ. ತ್ಯಾವನಹಳ್ಳಿಯ ಆನಂದ್ & ಗ್ಯಾಂಗ್ ಮಂಜುನಾಥ್ ಎಂಬುವವರ ಮೇಲೆ ಹಲ್ಲೆ ನಡೆಸಿದ್ದಾರೆ. ಮಂಜುನಾಥನ ತಲೆಗೆ ಕಲ್ಲಿನಿಂದ ಹೊಡೆದಿದ್ದಾರೆ. ಈ ವೇಳೆ ಸ್ಥಳಕ್ಕೆ ಗ್ರಾಮಸ್ಥರು ಬರುತ್ತಿದ್ದಂತೆ ಆನಂದ್ & ಗ್ಯಾಂಗ್ ಕಾಲ್ಕಿತ್ತಿದ್ದಾರೆ. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಮಂಜುನಾಥ್ನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಕೋಲಾರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ತ್ಯಾವನಹಳ್ಳಿ ಗ್ರಾಮದ ಆನಂದ್ ಹಾಗೂ ಗ್ಯಾಂಗ್ ಗಂಗಮ್ಮ ದೇಗುಲದಲ್ಲಿ ನಿಧಿ ಅಗೆಯುತ್ತಿದ್ದರು. ಇದನ್ನು ಗಮನಿಸಿದ ಮಂಜುನಾಥ್ ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಸಿಟ್ಟಿಗೆದ್ದ ಆನಂದ್ ಹಾಗೂ ಸ್ನೇಹಿತರು ಮಂಜುನಾಥ್ ಮೇಲೆ ಹಲ್ಲೆ ನಡೆಸಿದ್ದಾರೆ. ಇದೇ ವೇಳೆ ಗ್ರಾಮಸ್ಥರು ಸ್ಥಳಕ್ಕೆ ಆಗಮಿಸಿದ್ದು ಆನಂದ್ ಆ್ಯಂಡ್ ಗ್ಯಾಂಗ್ ಸ್ಥಳದಿಂದ ಎಸ್ಕೇಪ್ ಆಗಿದ್ದಾರೆ. ಸದ್ಯ ಹಲ್ಲೆಗೊಳಗಾದ ಮಂಜುನಾಥ್ ಕೋಲಾರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದನ್ನೂ ಓದಿ: ಕೋಲಾರದಲ್ಲಿ ಮಹಿಳೆಯ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ, ಅತ್ಯಾಚಾರ ಶಂಕೆ; ಆರೋಪಿ ಪತ್ತೆಗೆ ತಂಡ ರಚನೆ
ಪ್ರಧಾನಿಗೆ ನಿಂದಿಸಿ ವಿಡಿಯೋ, ವ್ಯಕ್ತಿ ಅರೆಸ್ಟ್
ಪ್ರಧಾನಿ ನರೇಂದ್ರ ಮೋದಿ ಹಾಗೂ ಯುಪಿ ಸಿಎಂ ಯೋಗಿ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ ಆರೋಪಿ ಅರೆಸ್ಟ್ ಆಗಿದ್ದಾನೆ. ಯಾದಗಿರಿ ಜಿಲ್ಲೆ ಸುರಪುರದ ರಂಗಂಪೇಟೆಯ ಮಹಮದ್ ರಸೂಲ್ ಕಡ್ದಾರೆ ಬಂಧನವಾಗಿದೆ. ಕೈಯಲ್ಲಿ ತಲವಾರ ಹಿಡಿದು ನಿಂದಿಸಿ ವಿಡಿಯೋ ಹರಿಬಿಟ್ಟಿದ್ದ ರಸೂಲ್ ವಿರುದ್ಧ ಸುರಪುರ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು.
₹50 ಸಾವಿರ ಲಂಚಪಡೆಯುವಾಗ ಇಬ್ಬರು ಲಾಕ್
ಎಪಿಎಂಸಿ ಮಳಿಗೆ ಮಂಜೂರು ಮಾಡಲು 50 ಸಾವಿರ ರೂಪಾಯಿ ಲಂಚ ಸ್ವೀಕರಿಸುತ್ತಿದ್ದ ಇಬ್ಬರು ಅಧಿಕಾರಿಗಳು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಶಿವಮೊಗ್ಗದಲ್ಲಿ APMC ಕಾರ್ಯದರ್ಶಿ, ಮೇಲ್ವಿಚಾರಕ ಯೋಗಿಶ್ ಲೋಕಾಬಲೆಗೆ ಬಿದ್ದ ಆರೋಪಿಗಳು. ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕು ನೇರಲಿಗೆಯ ರವೀಂದ್ರ ಎಂಬುವರು ದೂರು ನೀಡಿದ್ರು. ಲೋಕಾಯುಕ್ತ ಶಿವಮೊಗ್ಗ ಡಿವೈಎಸ್ಪಿ ಉಮೇಶ್ ಈಶ್ವರ್ ನಾಯ್ಕ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ