Kolar RTO: ಆರ್​ಟಿಒ ಅಧಿಕಾರಿಗಳ ಕಾರ್ಯಾಚರಣೆ, 7 ಖಾಸಗಿ ಬಸ್​ಗಳು ವಶಕ್ಕೆ

| Updated By: ಸಾಧು ಶ್ರೀನಾಥ್​

Updated on: Oct 07, 2021 | 12:28 PM

ಕೋಲಾರದಲ್ಲಿ ಆರ್​.ಟಿ.ಓ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಪರವಾನಿಗೆಯನ್ನ ಉಲ್ಲಂಘಿಸಿ ಸಂಚರಿಸ್ತಿದ್ದ 7 ಖಾಸಗೀ ಬಸ್ ಗಳನ್ನು ವಶಕ್ಕೆ ಪಡೆದಿದ್ದಾರೆ. ಈ ಎಲ್ಲಾ ಬಸ್ ಗಳು ಸಂತೋಷ್ ಟ್ರಾವೆಲ್ಸ್ ಗೆ ಸೇರಿರುವ ಬಸ್ ಗಳಾಗಿದ್ದು ಸಾರ್ವಜನಿಕರಿಂದ ಬಂದ ದೂರಿನನ್ವಯ ಎಚ್ಚೆತ್ತ ಆರ್.ಟಿ.ಓ ಆಧಿಕಾರಿಗಳು ಇಂದು ಬೆಳಿಗ್ಗೆ ಕಾರ್ಯಾಚರಣೆ ನಡೆಸಿದ್ದಾರೆ.

Kolar RTO: ಆರ್​ಟಿಒ ಅಧಿಕಾರಿಗಳ ಕಾರ್ಯಾಚರಣೆ, 7 ಖಾಸಗಿ ಬಸ್​ಗಳು ವಶಕ್ಕೆ
ಆರ್​ಟಿಒ ಅಧಿಕಾರಿಗಳ ಕಾರ್ಯಾಚರಣೆ, 7 ಖಾಸಗಿ ಬಸ್​ಗಳು ವಶಕ್ಕೆ
Follow us on

ಕೋಲಾರ: ಕೋಲಾರದಲ್ಲಿ ಆರ್​.ಟಿ.ಓ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಪರವಾನಿಗೆಯನ್ನ ಉಲ್ಲಂಘಿಸಿ ಸಂಚರಿಸ್ತಿದ್ದ 7 ಖಾಸಗೀ ಬಸ್ ಗಳನ್ನು ವಶಕ್ಕೆ ಪಡೆದಿದ್ದಾರೆ. ಶಾಲಾ ಮಕ್ಕಳನ್ನು ಕರೆದೊಯ್ಯಲು ಪರವಾನಿಗೆಯನ್ನು ಪಡೆದುಕೊಂಡು ಖಾಸಗೀ ಕಂಪನಿಯ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಏಳು ಬಸ್ ಗಳು ಪರವಾನಿಗೆ ಉಲ್ಲಂಘನೆ ಹಾಗೂ ಟ್ಯಾಕ್ಸ್ ಲಾಪ್ಸ್ ಆಗಿದ್ದರೂ ಸಹ ಅದನ್ನು ರಿನಿವಲ್​ ಮಾಡಿಕೊಳ್ಳದ ಬಸ್​ಗಳು ಮುಳಬಾಗಿಲು, ಬಂಗಾಪೇಟೆ, ಮಾಲೂರು ಕಡೆಯಿಂದ ಖಾಸಗಿ ಕಂಪನಿಯ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ವೇಳೆ ಬಸ್​ಗಳನ್ನು ತಡೆದು ಪರಿಶೀಲನೆ ನಡೆಸಿದಾಗ ಪರವಾನಿಗೆ ಉಲ್ಲಂಘನೆಯಾಗಿರುವುದು ತಿಳಿದು ಬಂದಿದೆ.

ಈ ಸಂಬಂಧ ಏಳು ಬಸ್ ಗಳನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಿದ್ದಾರೆ. ಇನ್ನು ಈ ಎಲ್ಲಾ ಬಸ್ ಗಳು ಸಂತೋಷ್ ಟ್ರಾವೆಲ್ಸ್ ಗೆ ಸೇರಿರುವ ಬಸ್ ಗಳಾಗಿದ್ದು ಸಾರ್ವಜನಿಕರಿಂದ ಬಂದ ದೂರಿನನ್ವಯ ಎಚ್ಚೆತ್ತ ಆರ್.ಟಿ.ಓ ಆಧಿಕಾರಿಗಳು ಇಂದು ಬೆಳಿಗ್ಗೆ ಕಾರ್ಯಾಚರಣೆ ನಡೆಸಿದ್ದಾರೆ.

ಆರ್.ಟಿ.ಓ ಇನ್ಸ್ಪೆಕ್ಟರ್ ಸುರೇಶ್ ಗೌಡ, ಸುಧೀಂದ್ರ ನೇತೃತ್ವದಲ್ಲಿ ಕಾರ್ಯಚರಣೆ ನಡೆಸಿದ್ದಾರೆ. ಇನ್ನು ಕೆಲವು ಖಾಸಗಿ ಬಸ್ ಗಳು ಪರವಾನಿಗೆ ಪಡೆದಿರುವ ಮಾರ್ಗವನ್ನು ಬಿಟ್ಟು ಬೇರೆ ಮಾರ್ಗಗಳಲ್ಲಿ ಸಂಚರಿಸುತ್ತಿರುವ ಬಗ್ಗೆಯೂ ಈಗಾಗಲೇ ಮಾಹಿತಿ ಬಂದಿದ್ದು ಮುಂದಿನ ದಿನಗಳಲ್ಲಿ ಅವುಗಳಿಗೂ ಕಡಿವಾಣ ಹಾಕಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Also Read:
RTO ಅಧಿಕಾರಿಗಳಲ್ಲ, ಜೀಪ್ ಚಾಲಕನಿಂದಲೇ ತಪಾಸಣೆ: ಲಂಚಕ್ಕೆ ಬೇಡಿಕೆ ಇಟ್ಟ ಚಾಲಕ ಸೇರಿ ಮೂವರ ವಿರುದ್ಧ ದೂರು

Also Read:
RTO ಕಣ್ಣಿಗೆ ಮಣ್ಣೆರಚುತ್ತಿವೆ Same​ to Same Number Plate ವಾಹನಗಳು.. ಇದು ಹೇಗೆ ಸಾಧ್ಯ?​