ಕೋಲಾರ, ಫೆಬ್ರವರಿ 12: ಸಾರ್ವಜನಿಕರಿಂದ ತಾಲೂಕು ಕಚೇರಿ ವಿರುದ್ಧ ಸರಣಿ ದೂರು ಬಂದ ಹಿನ್ನಲೆ ಸೋಮವಾರ ಲೋಕಾಯುಕ್ತ (Lokayukta) ಅಧಿಕಾರಿಗಳು ದಿಢೀರ್ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲನೆ ಮಾಡಿದ್ದಾರೆ. ಲೋಕಾಯುಕ್ತ ಮತ್ತು ಕೋಲಾರ ಎಸ್ಪಿ ಉಮೇಶ್ ನೇತೃತ್ವದಲ್ಲಿ ದಾಳಿ ಮಾಡಿದ್ದು, ಲಂಚ ಕೊಡದೇ ಯಾವುದೇ ಕೆಲಸ ಆಗುವುದಿಲ್ಲ ಎಂದು ದೂರು ನೀಡಲಾಗಿದೆ. ಲೋಕಾಯುಕ್ತ ಅಧಿಕಾರಿಗಳಿಂದ ತಹಶೀಲ್ದಾರ್ ಹರ್ಷವರ್ಧನ್ ಮತ್ತು ತಾಲೂಕು ಕಚೇರಿ ಎಲ್ಲಾ ಕೊಠಡಿಯಲ್ಲಿ ದಾಖಲೆಗಳ ಪರಿಶೀಲನೆ ಮಾಡಲಾಗಿದೆ.
ದಾವಣಗೆರೆ: ವಿಕಲಚೇತನರಿಂದ ಲಂಚ ಸ್ವೀಕರಿಸುವಾಗ ಗ್ರಾಮ ಆಡಳಿತಾಧಿಕಾರಿ ಲೋಕಾಯುಕ್ತರ ಬಲೆಗೆ ಬಿದ್ದಿರುವಂತಹ ಘಟನೆ ಜಿಲ್ಲೆಯ ನ್ಯಾಮತಿ ತಾಲೂಕಿನ ಬಸವನಹಳ್ಳಿ ಗ್ರಾಮದ ನರಸಿಂಹ ಸ್ವಾಮೀ ದೇವಸ್ಥಾನದ ಲಂಚ ಸ್ವೀಕರಿಸುವಾಗ ಲೋಕಾಯುಕ್ತರ ಬಲೆಗೆ ಬಿದಿದ್ದಾರೆ. ನ್ಯಾಮತಿಯ ಗ್ರಾಮ ಆಡಳಿತಾಧಿಕಾರಿ ಗಣೇಶ್ ಕೆಜಿ ಲೋಕಾಯುಕ್ತರ ಬಲೆಗೆ ಬಿದ್ದ ಅಧಿಕಾರಿ.
ಇದನ್ನೂ ಓದಿ: Lokayukta Raids: ಬೆಂಗಳೂರು ಸೇರಿ ರಾಜ್ಯದ 63 ಕಡೆ ಲೋಕಾಯುಕ್ತ ದಾಳಿ
ಕುಂಕುವಾ ಗ್ರಾಮದ ವೀರೇಶ್ ಅವರ ಸಹೋದರ ಹರ್ಷ ಎಂಬುವರಿಗೆ ಅಂಗವಿಕ ಪ್ರಮಾಣ ಪತ್ರ ನೀಡಲು ಆರು ಸಾವಿರಕ್ಕೆ ಬೇಡಿಕೆ ಇಟ್ಟಿದ್ದ ಅಧಿಕಾರಿ ಗಣೇಶ್. ಐದು ಸಾವಿರ ರೂಪಾಯಿ ಲಂಚ ಸ್ವೀಕರಿಸುವಾಗ ಲೋಕಾಯಕ್ತರ ಬಲೆಗೆ ಬಿದಿದ್ದಾರೆ. ದಾವಣಗೆರೆ ಲೋಕಾಯುಕ್ತ ಎಸ್ಪಿ ಎಂಎಸ್ ಕೌಲಾಪೂರೆ ನೇತ್ರತ್ವದಲ್ಲಿ ಡಿಎಸ್ಪಿ ಕೆ. ಕಲಾವತಿ, ಇನ್ಸ್ ಪೇಕ್ಟರ್ ಗಳಾದ ಎಚ್ ಎಸ್ ರಾಷ್ಟ್ರಪತಿ, ಮುಧುಮೂದನ್ ದಾಳಿ ಮಾಡಲಾಗಿತ್ತು.
ಉಡುಪಿ: ಕಾರ್ಕಳ ತಾಲೂಕಿನ ನಿಟ್ಟೆ ಮಹಾಗಣಪತಿ ಸ್ಟೋನ್ ಕ್ರಷರ್ ಮಾಲೀಕನ ಮನೆ ಹಾಗೂ ಕಚೇರಿಗೆ ಬೆಳ್ಳಂಬೆಳಗ್ಗೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದರು. ಎರಡು ಇನೋವಾ ಕಾರಿನಲ್ಲಿ ಬಂದಿದ್ದ 12 ಜನ ಇಡಿ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸಿದ್ದರು. ತೀರ್ಥಹಳ್ಳಿಯ ನ್ಯಾಷನಲ್ ಕನ್ ಸ್ಟ್ರಕ್ಷನ್ನಲ್ಲಿ ಅಕ್ರಮದ ಅರೋಪದ ಹಿನ್ನಲೆಯಲ್ಲಿ ಇಡಿ ದಾಳಿ ನಡೆದಿತ್ತು.
ಇದನ್ನೂ ಓದಿ: Lokayukta Raid: ಕರ್ನಾಟಕದ ಹಲವೆಡೆ ಬೆಳ್ಳಂಬೆಳಗ್ಗೆ ಲೋಕಾಯುಕ್ತ ದಾಳಿ, ಅಧಿಕಾರಿಗಳು ಶಾಕ್
ನ್ಯಾಷನಲ್ ಕನ್ ಸ್ಟ್ರಕ್ಷನ್ಗೆ ಗುಂಡ್ಯಡ್ಕದ ದಿನೇಶ್ ಶೆಟ್ಟಿ ಮಾಲೀಕತ್ವದ ಮಹಾಗಣಪತಿ ಕನ್ ಸ್ಟ್ರಕ್ಷನ್ ಮೆಟೀರಿಯಲ್ಸ್ ಪೂರೈಸುತ್ತಿತ್ತು. ಈ ಕಾರಣಕ್ಕಾಗಿ ದಾಳಿ ನಡೆಸಿದ ಅಧಿಕಾರಿಗಳು ಮಾಲೀಕ ಮತ್ತು ಸಿಬ್ಬಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು.
ಕ್ರಷರ್ ಮೇಲೆ ದಾಳಿ ನಡೆಸಿದ ಅಧಿಕಾರಿಗಳ ತಂಡ, ಕ್ರಷರ್ ಮಾಲೀಕನ ಕಾರ್ಕಳ ಸಮೀಪದ ಸುಧೀಂದ್ರ ರೆಸಿಡೆನ್ಸಿಯಲ್ಲಿರುವ ಪ್ಲಾಟ್ ಮೇಲೂ ದಾಳಿ ನಡೆಸಿರುವ ಮಾಹಿತಿ ಲಭ್ಯವಾಗಿತ್ತು. ಸತತ ನಾಲ್ಕು ಗಂಟೆಗಳಿಂದ ದಾಖಲೆಗಳ ಪರಿಶೀಲನೆ ಮಾಡಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.