AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೆರಗೋಡು ಹನುಮ ಧ್ವಜ ತೆರವು ವಿವಾದ: ಮಂಡ್ಯ ಜಿಲ್ಲೆಯಲ್ಲಿ ಶಾಂತಿ-ಸೌಹಾರ್ದತೆಗಾಗಿ ಪ್ರತಿಭಟನಾ ಧರಣಿ

ಮಂಡ್ಯ ಜಿಲ್ಲೆಯ ಕೆರಗೋಡು ಗ್ರಾಮದಲ್ಲಿ ಹೊತ್ತಿದ ಹನುಮಧ್ವಜ ವಿವಾದದ ಕಿಡಿ ಇಡೀ ರಾಜ್ಯಕ್ಕೆ ವ್ಯಾಪಿಸಿತ್ತು. ಹನುಮ ಧ್ವಜವನ್ನ ತೆರವುಗೊಳಿಸಿದ್ದನ್ನ ವಿರೋಧಿಸಿ ಇತ್ತೀಚೆಗೆ ಹಿಂದೂಪರ ಸಂಘಟನೆ ಕಾರ್ಯಕರ್ತರು ಮಂಡ್ಯ ನಗರ ಹಾಗೂ ಕೆರಗೋಡು ಗ್ರಾಮ ಬಂದ್​ ಮಾಡಿದ್ದರು. ಸದ್ಯ ಫೆ.15 ರಂದು ಶಾಂತಿ-ಸೌಹಾರ್ದತೆಗಾಗಿ ಪ್ರತಿಭಟನಾ ಧರಣಿಗೆ ಪ್ರಗತಿಪರ ಸಂಘಟನೆಗಳ ಒಕ್ಕೂಟ ನಿರ್ಧಾರ ಮಾಡಲಾಗಿದೆ.

ಕೆರಗೋಡು ಹನುಮ ಧ್ವಜ ತೆರವು ವಿವಾದ: ಮಂಡ್ಯ ಜಿಲ್ಲೆಯಲ್ಲಿ ಶಾಂತಿ-ಸೌಹಾರ್ದತೆಗಾಗಿ ಪ್ರತಿಭಟನಾ ಧರಣಿ
ಪ್ರಗತಿಪರ ಸಂಘಟನೆಗಳ ಒಕ್ಕೂಟ
ಪ್ರಶಾಂತ್​ ಬಿ.
| Edited By: |

Updated on: Feb 12, 2024 | 4:01 PM

Share

ಮಂಡ್ಯ, ಫೆಬ್ರವರಿ 12: ಕೆರಗೋಡು ಹನುಮ ಧ್ವಜ (Hanuman flag) ತೆರವು ವಿವಾದ ಹಿನ್ನೆಲೆ ಜಿಲ್ಲೆಯಲ್ಲಿ ಫೆ.15 ರಂದು ಶಾಂತಿ-ಸೌಹಾರ್ದತೆಗಾಗಿ ಪ್ರತಿಭಟನಾ ಧರಣಿಗೆ ಪ್ರಗತಿಪರ ಸಂಘಟನೆಗಳ ಒಕ್ಕೂಟ ನಿರ್ಧಾರ ಮಾಡಿದೆ ಎಂದು ದಲಿತ ಸಂಘರ್ಷ ಸಮಿತಿ ಮುಖಂಡ ಗುರುಪ್ರಸಾದ್ ಕೆರಗೋಡು ಹಾಗೂ ಸಿಐಟಿಯು ಸಂಘಟನಾ ಕಾರ್ಯದರ್ಶಿ ಕೃಷ್ಣೇಗೌಡ ಹೇಳಿದ್ದಾರೆ. ನಗರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಸಂಸ್ಕೃತಿಯ ಉಳಿವು, ಶಾಂತಿ, ಸೌಹಾರ್ದತೆ, ಸಹಬಾಳ್ವೆಗಾಗಿ ಡಿಸಿ ಕಚೇರಿ ಬಳಿ ಪ್ರತಿಭಟನಾ ಧರಣಿ ನಡೆಯಲಿದೆ. ಕೆರಗೋಡು ಹನುಮ ಧ್ವಜ ತೆರವು ವಿವಾದ ಇಟ್ಟಿಕೊಂಡು ಶಾಂತಿ ಕದಡುತ್ತಿದ್ದಾರೆ. ಶ್ರೀರಂಗಪಟ್ಟಣದಲ್ಲಿ ಶುರುವಾದ ಕೇಸರಿ ಬಣ್ಣದ ಕಾಡ್ಗಿಚ್ಚು ಕೆರಗೋಡು ಗ್ರಾಮಕ್ಕೆ ವ್ಯಾಪಕವಾಗಿದೆ. ಮಂಡ್ಯ ಪ್ರಗತಿಪರ ಚಿಂತನೆ ಇಟ್ಟುಕೊಂಡಿರುವ ಪ್ರಜ್ಞಾವಂತರ ಜಿಲ್ಲೆ. ಧಾರ್ಮಿಕ ವಿಚಾರ ಇಟ್ಟಿಕೊಂಡು ಜನರನ್ನು ಬಲಿಪಶು ಮಾಡಿ ಓಟ್ ಆಗಿ ಕನ್ವರ್ಟ್ ಮಾಡಿದರೆ ಜಯ ಸಿಗಲ್ಲ ಎಂದು ಹೇಳಿದ್ದಾರೆ.

ಚಿಂತನೆಯಿಂದ ಕೂಡಿದ್ದ ಮುಖಂಡರು ಇದ್ದಂತಹ ಗ್ರಾಮ. ಅನ್ಯೋನ್ಯತೆಯಿಂದ ಬದುಕುತ್ತಿದ್ದ ಊರಿನಲ್ಲಿ ಹನುಮ ಧ್ವಜ ತೆರವು ವಿವಾದ ನೆಮ್ಮದಿ ಹಾಳು ಮಾಡಿದೆ. ಸಾರ್ವಜನಿಕ ರಂಗ ಸ್ಥಳದಲ್ಲಿ ಯಾವುದೇ ಧರ್ಮದ ಬಾವುಟ ಹಾಕುವಾಗಿಲ್ಲ. ಗೌರಿ ಶಂಕರ ಸೇವಾ ಟ್ರಸ್ಟ್​ಗೆ ಅನುಮತಿ ಕೊಟ್ಟಿದ್ದು ಮೊದಲ ತಪ್ಪು. ಎಲ್ಲಾ ಧರ್ಮದ ಜನರು ಗ್ರಾಮದಲ್ಲಿ ಶಾಂತಿ ಕದಡಿದ್ದಾರೆ. ಬೆಂಕಿ ಹಚ್ಚುವ ಸಲುವಾಗಿ ಆರ್​​ಎಸ್​ಎಸ್​, ಬಿಜೆಪಿ ಸಂಘ ಪರಿವಾರದ ಜನ ಬಳಸಿಕೊಂಡಿದ್ದಾರೆ. ಈ ತರಹದ ಘಟನೆ ನಡೆಯದಂತೆ ಶಾಂತಿ ಸೌಹಾರ್ದತೆಗಾಗಿ ಪ್ರತಿಭಟನಾ ಧರಣಿಗೆ ನಿರ್ಧಾರ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಕೆರಗೋಡು ಹನುಮ ಧ್ಜಜ ವಿವಾದ: ಹಿಂದೂ ಪರ ಸಂಘಟನೆಗಳಿಂದ ಮಂಡ್ಯ ಬಂದ್, ಬಿಗಿ ಪೊಲೀಸ್ ಭದ್ರತೆ

ಜನವರಿ 28ರಂದು ಕೆರೆಗೋಡು ಗ್ರಾಮದಲ್ಲಿ ಹನುಮಧ್ವಜವನ್ನ ತೆರವು ಮಾಡಿ ತ್ರಿವರ್ಣ ಧ್ವಜವನ್ನ ಹಾರಿಸಲಾಗಿತ್ತು. ಇದನ್ನ ವಿರೋಧಿಸಿ ಭಜರಂಗದಳ, ವಿಶ್ವಹಿಂದೂ ಪರಿಷತ್ ಹಾಗೂ ಶ್ರೀರಾಮ ಭಜನಾ ಮಂಡಳಿ ಬಂದ್​ಗೆ ಕರೆ ನೀಡಿದ್ದರು. ಬಂದ್ ಹಿನ್ನೆಲೆಯಲ್ಲಿ ಕೆರೆಗೋಡು ಗ್ರಾಮ ಸಂಪೂರ್ಣ ಬಂದ್ ಆಗಿತ್ತು. ಬಂದ್​ಗೆ ಬೆಂಬಲ ವ್ಯಕ್ತಪಡಿಸಿ ಸ್ವಯಂಪ್ರೇರಿತರಾಗಿ ವರ್ತಕರು ಅಂಗಡಿ ಮುಂಗಟ್ಟುಗಳನ್ನ ಬಂದ್ ಮಾಡಿದ್ದರು.

ಇದನ್ನೂ ಓದಿ: ಕೆರಗೋಡು ಹನುಮ ಧ್ವಜ ತೆರವು ಖಂಡಿಸಿ ನಾಳೆ ಮಂಡ್ಯ ಬಂದ್; ಇಂದು ಬಿಜೆಪಿ ನಿಲುವು ಪ್ರಕಟ, ಅಂತರ ಕಾಯ್ದುಕೊಂಡ ಜೆಡಿಎಸ್

ಬಂದ್ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಬಿಗಿಪೊಲೀಸ್​ ಬಂದೋಬಸ್ತ್ ಮಾಡಲಾಗಿತ್ತು. ನಂತರ ಆಂಜನೇಯ ಸ್ವಾಮಿ ದೇವರಿಗೆ ವಿಶೇಷವಾದ ಪೂಜೆ ಸಲ್ಲಿಸಿ ಕೆರಗೋಡು ಗ್ರಾಮದಿಂದ ಮಂಡ್ಯದವರೆಗೂ ಬೃಹತ್ ಬೈಕ್ ರ್ಯಾಲಿ ನಡೆಸಲಾಯಿತು, ಇನ್ನು ಮಂಡ್ಯ ನಗರ ಬಂದ್ ಅಷ್ಟಾಗಿ ಯಶ್ವಸ್ಸು ಕಾಣಲಿಲ್ಲ. ಕೆಲವು ಕಡೆ ಸ್ವಯಂಪ್ರೇರಿತವಾಗಿ ಬಂದ್ ಮಾಡಿದರೆ ಬಹುತೇಕ ಕಡೆ ವ್ಯಾಪರ ವಹಿವಾಹಿಟು ಎಂದಿನಂತೆ ಇತ್ತು.

ಮಂಡ್ಯದಲ್ಲಿ ಕಾರ್ಯಕರ್ತರು ಆಂಜನೇಯನಿಗೆ ವಿಶೇಷ ಪೂಜೆ ಸಲ್ಲಿಸಿ ಸೀಲ್ವರ್ ಬ್ಯುಬಲಿ ಪಾರ್ಕ್ ಮಂಡ್ಯದ ಡಿಸಿ ಕಚೇರಿವರೆಗೂ ಪಾದಯಾತ್ರೆ ನಡೆಸಿ ಸರ್ಕಾರ ಜಿಲ್ಲಾಡಳಿತ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಕಾರು ಅಪಘಾತಕ್ಕೆ 1 ವರ್ಷ: ಅಂದಿನ ಕಹಿ ಘಟನೆಯನ್ನು ಮೆಲುಕು ಹಾಕಿದ ಸಚಿವೆ
ಕಾರು ಅಪಘಾತಕ್ಕೆ 1 ವರ್ಷ: ಅಂದಿನ ಕಹಿ ಘಟನೆಯನ್ನು ಮೆಲುಕು ಹಾಕಿದ ಸಚಿವೆ
ಕೇರಳದಲ್ಲಿ ಕರ್ನಾಟಕ ಅಯ್ಯಪ್ಪ ಮಾಲಾಧಾರಿಗಳ ವಾಹನಗಳಿಗೆ ನಿರ್ಬಂಧ
ಕೇರಳದಲ್ಲಿ ಕರ್ನಾಟಕ ಅಯ್ಯಪ್ಪ ಮಾಲಾಧಾರಿಗಳ ವಾಹನಗಳಿಗೆ ನಿರ್ಬಂಧ
ರಾಹುಲ್ ಗಾಂಧಿ ಭೇಟಿ ಬಳಿಕ ಸಿದ್ರಾಮಯ್ಯ ಕೊಟ್ಟ ಸುಳಿವು ಏನು?
ರಾಹುಲ್ ಗಾಂಧಿ ಭೇಟಿ ಬಳಿಕ ಸಿದ್ರಾಮಯ್ಯ ಕೊಟ್ಟ ಸುಳಿವು ಏನು?
24 ತಲೆಗಳ 6 ತಲೆಗೆ ಇಳಿಸಿದ್ದೀನಿ, ನಾನು ಒನ್ ಮ್ಯಾನ್ ಆರ್ಮಿ: ಧ್ರುವಂತ್
24 ತಲೆಗಳ 6 ತಲೆಗೆ ಇಳಿಸಿದ್ದೀನಿ, ನಾನು ಒನ್ ಮ್ಯಾನ್ ಆರ್ಮಿ: ಧ್ರುವಂತ್
ಡಾನ್​​ ರೀತಿ ಗನ್​​ ಹಿಡಿದು ಆವಾಜ್​​ ಹಾಕಿದ್ದಾತ ತಂದಿದ್ದು ನಕಲಿ ಬಂದೂಕು!
ಡಾನ್​​ ರೀತಿ ಗನ್​​ ಹಿಡಿದು ಆವಾಜ್​​ ಹಾಕಿದ್ದಾತ ತಂದಿದ್ದು ನಕಲಿ ಬಂದೂಕು!
ಗಿಲ್ಲಿ ನಟ ಬಡವನಾ ಅಥವಾ ಶ್ರೀಮಂತನಾ? ಅಸಲಿ ವಿಷಯ ತೆರೆದಿಟ್ಟ ಸಂಬಂಧಿಕರು
ಗಿಲ್ಲಿ ನಟ ಬಡವನಾ ಅಥವಾ ಶ್ರೀಮಂತನಾ? ಅಸಲಿ ವಿಷಯ ತೆರೆದಿಟ್ಟ ಸಂಬಂಧಿಕರು
ಸಿಕ್ಕ ನಿಧಿಯನ್ನು ಸರ್ಕಾರಕ್ಕೆ ನೀಡಿದ ಕುಟುಂಬಕ್ಕೆ ಬಂಪರ್ ಗಿಫ್ಟ್
ಸಿಕ್ಕ ನಿಧಿಯನ್ನು ಸರ್ಕಾರಕ್ಕೆ ನೀಡಿದ ಕುಟುಂಬಕ್ಕೆ ಬಂಪರ್ ಗಿಫ್ಟ್
ಜೈಲಿಗೆ ಹೋಗಿ ಬಂದ್ರೂ ಬಾರದ ಬುದ್ಧಿ: ಮತ್ತೆ ದರೋಡೆ ಮಾಡಿದ್ದ ಟೀಂ​​ ಅಂದರ್​​
ಜೈಲಿಗೆ ಹೋಗಿ ಬಂದ್ರೂ ಬಾರದ ಬುದ್ಧಿ: ಮತ್ತೆ ದರೋಡೆ ಮಾಡಿದ್ದ ಟೀಂ​​ ಅಂದರ್​​
ಮಾದಪ್ಪನ ಬೆಟ್ಟದ ತಪ್ಪಲಿನ ರಸ್ತೆಗೆ ಬಂದ ಭಾರಿ ಗಾತ್ರದ ಒಂಟಿ ಸಲಗ
ಮಾದಪ್ಪನ ಬೆಟ್ಟದ ತಪ್ಪಲಿನ ರಸ್ತೆಗೆ ಬಂದ ಭಾರಿ ಗಾತ್ರದ ಒಂಟಿ ಸಲಗ
ಮತ್ತೋರ್ವಳಿಗಾಗಿ ಕಟ್ಕೊಂಡವಳನ್ನೇ ಕೊಂದನಾ ಪಾಪಿ ಪತಿ?
ಮತ್ತೋರ್ವಳಿಗಾಗಿ ಕಟ್ಕೊಂಡವಳನ್ನೇ ಕೊಂದನಾ ಪಾಪಿ ಪತಿ?