ಕೋಲಾರ ನ.17: ಕೋಲಾರ (Kolar) ಗ್ರಾಮಾಂತರ ಪೊಲೀಸ್ (Police) ಠಾಣೆಯ ಎಎಸ್ಐ ನಾರಾಯಣಸ್ವಾಮಿ ಅವರನ್ನು ಅಮಾನತುಗೊಳಿಸಿ (Suspend) ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ನಾರಾಯಣ ಆದೇಶ ಹೊರಡಿಸಿದ್ದಾರೆ. ಕಳೆದ ಶನಿವಾರ ಬಂಗಾರಪೇಟೆ ವೃತ್ತದಲ್ಲಿರುವ ಬಾರ್ನ ಸಿಬ್ಬಂದಿ ತನಗೆ ನಮಸ್ಕಾರ ಹೇಳಿಲ್ಲವೆಂದು ಕುಡಿದ ಮತ್ತಿನಲ್ಲಿ ಎಎಸ್ಐ ನಾರಾಯಣಸ್ವಾಮಿ ಗಲಾಟೆ ಮಾಡಿದ್ದಾರೆ. ಅಲ್ಲದೆ ಸಿಬ್ಬಂದಿ ಮೇಲೆ ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ. ಎಎಸ್ಐ ಗಲಾಟೆ ಮಾಡಿರುವ ವಿಡಿಯೋ ವೈರಲ್ ಆಗಿದೆ.
ಪ್ರಕರಣ ಸಂಬಂಧ ಎಎಸ್ಐ ನಾರಾಯಣ ಸ್ವಾಮಿ ಬಾರ್ ಸಿಬ್ಬಂದಿ ವಿರುದ್ಧ ಎಸ್ಪಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಸಾಕ್ಷ್ಯ ಸಮೇತ ಎಎಸ್ಐ ನಡೆ ವಿರುದ್ಧ ಬಾರ್ ಅಸೋಷಿಯೇಷನ್ ಎಸ್ಪಿಗೆ ದೂರು ನೀಡಿದೆ. ಹೀಗಾಗಿ ಇಲಾಖೆಗೆ ಅಗೌರವ, ದುರ್ನಡತೆ, ಬೇಜವಾಬ್ದಾರಿ, ಉದಾಸೀನ ತೋರಿದ ನಾರಾಯಣ ಸ್ವಾಮಿಯನ್ನು ಅಮಾನತು ಮಾಡಲಾಗಿದೆ.
ಇದನ್ನೂ ಓದಿ: ಕೋಲಾರ ಬಾಲಕನ ಹತ್ಯೆ ಪ್ರಕರಣ: ಮೂವರು ಪೊಲೀಸ್ ಸಿಬ್ಬಂದಿ ಅಮಾನತು
ಬಳ್ಳಾರಿ: ಆರ್ಟಿಒ ಸಿಬ್ಬಂದಿ ಚಂದ್ರಕಾಂತ್ ಗುಡಿಮನಿ, ಏಜೆಂಟ್ ಮೊಹಮ್ಮದ್ ಕ್ಲಿಯರೆನ್ಸ್ ಸರ್ಟಿಫಿಕೆಟ್ ನೀಡಲು ಹಣಕ್ಕೆ ಬೇಡಿಕೆ ಇಟ್ಟ ಆರೋಪವಿತ್ತು. ಈ ಬಗ್ಗೆ ಖಚಿತ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಲೋಕಾಯುಕ್ತ ಪೊಲೀಸರು ದಾಳಿ ಮಾಡಿ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ. ಲೋಕಾಯುಕ್ತ ಎಸ್ಪಿ ಶಶಿಧರ್ ನೇತೃತ್ವದಲ್ಲಿ ದಾಳಿ ನಡೆದಿದೆ. ಇತ್ತೀಚೆಗೆ ಶಾಸಕ ಭರತರೆಡ್ಡಿ ಆರ್ಟಿಒ ಕಚೇರಿಗೆ ಭೇಟಿ ನೀಡಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ