ಕೋಲಾರ: ಟಿಪ್ಪು ನಿಜ ಕನಸುಗಳು ನಾಟಕ ಪ್ರದರ್ಶನ, ಕಿಡಿಗೇಡಿಗಳ ಸಂದೇಶಕ್ಕೆ ಕಿವಿಗೊಡದಂತೆ ಸಮಾಜಿಕ ಜಾಲತಾಣಗಳಲ್ಲಿ ಪೊಲೀಸರ ಮನವಿ

ಕೋಲಾರ ನಗರದ ಟಿ.ಚೆನ್ನಯ್ಯ ರಂಗಮಂದಿರದಲ್ಲಿ ನಾಟಕ ಪ್ರದರ್ಶನ ಕಾಣಲಿದೆ. ಈ ಹಿನ್ನೆಲೆ ಕೋಲಾರದಲ್ಲಿ ಸಾಮರಸ್ಯ ಕದಡುವ ಕಿಡಿಗೇಡಿಗಳ ಸಂದೇಶಕ್ಕೆ ಕಿವಿಗೊಡದಂತೆ ಪೊಲೀಸರು ಸಮಾಜಿಕ ಜಾಲತಾಣಗಳಲ್ಲಿ ಮನವಿ ಮಾಡಿದ್ದಾರೆ.

ಕೋಲಾರ: ಟಿಪ್ಪು ನಿಜ ಕನಸುಗಳು ನಾಟಕ ಪ್ರದರ್ಶನ, ಕಿಡಿಗೇಡಿಗಳ ಸಂದೇಶಕ್ಕೆ ಕಿವಿಗೊಡದಂತೆ ಸಮಾಜಿಕ ಜಾಲತಾಣಗಳಲ್ಲಿ ಪೊಲೀಸರ ಮನವಿ
ಟಿಪ್ಪು ನಿಜ ಕನಸುಗಳು ನಾಟಕ ಪ್ರದರ್ಶನ
Follow us
ವಿವೇಕ ಬಿರಾದಾರ
|

Updated on:Mar 07, 2023 | 1:27 PM

ಕೋಲಾರ: ಟಿಪ್ಪು ಸುಲ್ತಾನ (Tipu Sultan) ವಿಚಾರವಾಗಿ ರಾಜ್ಯದಲ್ಲಿ ಸಾಕಷ್ಟು ಚರ್ಚೆಗಳು ನಡದಿವೆ, ನಡೆಯುತ್ತಿವೆ. ರಾಜಕೀಯ ಪಕ್ಷಗಳ ಮಧ್ಯೆ ಕೆಸರೆಚಾಟಕ್ಕೂ ಕಾರಣವಾಗಿದೆ. ಈ ಮಧ್ಯೆ ಮೈಸೂರು ರಂಗಾಯಣದ (Mysore Rangayana) ನಿರ್ದೇಶಕ ಅಡ್ಡಂಡ ಸಿ ಕಾರ್ಯಪ್ಪ ಅವರು ರಚಿಸಿದ ಟಿಪ್ಪು ನಿಜ ಕನಸುಗಳು (Tipu Nija Kansugalu) ನಾಟಕ ರಾಜ್ಯದಲ್ಲಿ ಸಾಕಷ್ಟು ಪ್ರದರ್ಶನ ಕಾಣುತಿದ್ದೆ ಹಾಗೆ ವಿವಾದವನ್ನು ಕೂಡ ಸೃಷ್ಟಿ ಮಾಡಿದೆ. ಈ ನಾಟಕ ಇಂದು (ಮಾ.7) ಸಂಜೆ ಕೋಲಾರ (Kolar) ನಗರದ ಟಿ.ಚೆನ್ನಯ್ಯ ರಂಗಮಂದಿರದಲ್ಲಿ ನಾಟಕ ಪ್ರದರ್ಶನ ಕಾಣಲಿದೆ. ಈ ಹಿನ್ನೆಲೆ ಕೋಲಾರದಲ್ಲಿ ಸಾಮರಸ್ಯ ಕದಡುವ ಕಿಡಿಗೇಡಿಗಳ ಸಂದೇಶಕ್ಕೆ ಕಿವಿಗೊಡದಂತೆ ಪೊಲೀಸರು ಸಮಾಜಿಕ ಜಾಲತಾಣಗಳಲ್ಲಿ ಮನವಿ ಮಾಡಿದ್ದಾರೆ.

ನಾಟಕ ಪ್ರದರ್ಶನ ಜೊತೆಗೆ ಮುಸ್ಲಿಮರ ಶಬ್ ಎ ಬರಾತ್ ಹಬ್ಬ, ಹಿಂದೂಗಳ ಹೋಳಿ ಹಬ್ಬ ಆಚರಣೆ ಹಿನ್ನೆಲೆ ನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ನಗರದಲ್ಲಿ ಕೋಲಾರ, ಕೆಜಿಎಫ್, ರಾಮನಗರ, ತುಮಕೂರು ಜಿಲ್ಲೆಯಿಂದಲೂ ಪೊಲೀಸರ ನಿಯೋಜನೆ ಮಾಡಲಾಗಿದೆ. ಸುಮಾರು 450 ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ನಾಟಕ ಪ್ರದರ್ಶನಕ್ಕೆ ನಗರದ ಹಲವು ಸಂಘಟನೆಗಳು ವಿರೋಧಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ ಹಿನ್ನೆಲೆ ಬಿಗಿ ಭದ್ರತೆ ಮಾಡಲಾಗಿದೆ.

ಟಿಪ್ಪುವನ್ನು ವೈಭವೀಕರಿಸಲಾಗಿದೆ

ಇತಿಹಾಸದ ಪುಟಗಳಲ್ಲಿ ಮತ್ತು ಶಾಲೆಯ ಪಠ್ಯದಲ್ಲಿ ಟಿಪ್ಪುವನ್ನು ವೈಭವೀಕರಿಸಿ ಹೇಳಿದ್ದಾರೆ. ಹೀಗಾಗಿ ನಾವು ಅದನ್ನು ಓದಲೇ ಬೇಕಾಯಿತು. ಆದರೆ ಈ ನಾಟಕ ಟಿಪ್ಪು ವಿಚಾರದ ಸತ್ಯ ಅಂಶಗಳ ಅನಾವರಣವಾಗಿದೆ. ವೈಭವೀಕರಣವನ್ನು ದೂರ ಮಾಡಿ ಸತ್ಯವನ್ನು ತಿಳಿಸುವುದೇ ನಾಟಕ ಉದ್ದೇಶವಾಗಿದೆ. ಟಿಪ್ಪು ಪರ ಹಾಗೂ ವಿರೋಧದ ಪುಸ್ತಕಗಳನ್ನು ಅಧ್ಯಯನ ಮಾಡಿ ಹಾಗೂ ಟಿಪ್ಪು ಬರೆದ ಪತ್ರಗಳನ್ನು ಆಧರಿಸಿ ನಾಟಕವನ್ನು ರಚಿಸಿದ್ದೇನೆ. ಮೂರು ಗಂಟೆಗಳ ಕಾಲ ನಾಟಕ ಪ್ರದರ್ಶನ ನಡೆಯಲಿದೆ. ರಂಗಾಯಣದ 40 ಮಂದಿಯ ತಂಡ ಟಿಪ್ಪು ಚರಿತ್ರೆ ಸತ್ಯವನ್ನು ಸಾರುವ ನಾಟಕವನ್ನು ಪ್ರದರ್ಶನ ಮಾಡಲಿದೆ ಎಂದು ಅಡ್ಡಂಡ ಸಿ ಕಾರ್ಯಪ್ಪ ಹೇಳಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:15 am, Tue, 7 March 23