AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸ್ವಾತಂತ್ರ್ಯೋತ್ಸವದ ಅಮೃತ ಘಳಿಗೆಯಲ್ಲಿ ಯುವಜನತೆಗೆ ಸಂದೇಶ ಸಾರಲು ವಿಭಿನ್ನ ಪ್ರಯತ್ನಕ್ಕೆ ಕೈ ಹಾಕಿದ ಉಪನ್ಯಾಸಕ: ಗಾಜಿನ ಚೂರುಗಳ ಮೂಲಕ ಭಾರತದ ಭೂಪಟ

ಮಾದಕ ವಸ್ತುಗಳ ಚಟಕ್ಕೆ ಬಿದ್ದು ಹಾಳಾಗುತ್ತಿರುವ ಯುವ ಜನತೆಯನ್ನು ಏನಾದರೂ ಮಾಡಿ ಸರಿದಾರಿಗೆ ತರಬೇಕು ಎನ್ನುವ ನಿಟ್ಟಿನಲ್ಲಿ ವಿಭಿನ್ನವಾಗಿ ಸಂದೇಶವೊಂದನ್ನು ರವಾನೆ ಮಾಡಿದ್ದಾರೆ.

ಸ್ವಾತಂತ್ರ್ಯೋತ್ಸವದ ಅಮೃತ ಘಳಿಗೆಯಲ್ಲಿ ಯುವಜನತೆಗೆ ಸಂದೇಶ ಸಾರಲು ವಿಭಿನ್ನ ಪ್ರಯತ್ನಕ್ಕೆ ಕೈ ಹಾಕಿದ ಉಪನ್ಯಾಸಕ: ಗಾಜಿನ ಚೂರುಗಳ ಮೂಲಕ ಭಾರತದ ಭೂಪಟ
ಪ್ರತಾಪ್ ಕುಮಾರ್
TV9 Web
| Updated By: ಆಯೇಷಾ ಬಾನು|

Updated on:Aug 15, 2022 | 7:56 PM

Share

ಕೋಲಾರ: ದೇಶಕ್ಕೆ ಸ್ವತಂತ್ರ್ಯ ಬಂದು 75 ವರ್ಷಗಳು(Independence Day 2022) ಪೂರೈಸಿರುವ ಹಿನ್ನೆಲೆಯಲ್ಲಿ ಇಡೀ ದೇಶ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಸಂಭ್ರಮದಲ್ಲಿದೆ. ಇಡೀ ದೇಶದಾದ್ಯಂತ ಸಂಭ್ರಮ ಮನೆ ಮಾಡಿದೆ. ಆದರೆ ಇಲ್ಲೊಬ್ಬ ಉಪನ್ಯಾಸಕ ಮಾತ್ರ ಇದೇ ಸಂದರ್ಭವನ್ನು ಬಳಸಿಕೊಂಡು ದೇಶದ ಯುವ ಜನತೆಗೆ ವಿಭಿನ್ನ ಸಂದೇಶ ಕೊಡಲು ವಿಭಿನ್ನ ಪ್ರಯತ್ನ ಮಾಡಿದ್ದಾರೆ.

ಕೋಲಾರದ ಕೆಜಿಎಫ್ನ ಚಿನ್ನದ ಗಣಿ ಕಾಲೇಜಿನಲ್ಲಿ ಅರಕಾಲಿಕ ಉಪನ್ಯಾಸಕರಾಗಿ ಕೆಲಸ ಮಾಡುತ್ತಿರುವ ಪ್ರತಾಪ್ ಕುಮಾರ್ ಸ್ವತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ದೇಶದ ಯುವಜನತಗೆ ಏನಾದರೂ ಒಂದು ಸಂದೇಶ ಕೊಡಬೇಕು. ಮಾದಕ ವಸ್ತುಗಳ ಚಟಕ್ಕೆ ಬಿದ್ದು ಹಾಳಾಗುತ್ತಿರುವ ಯುವ ಜನತೆಯನ್ನು ಏನಾದರೂ ಮಾಡಿ ಸರಿದಾರಿಗೆ ತರಬೇಕು ಎನ್ನುವ ನಿಟ್ಟಿನಲ್ಲಿ ವಿಭಿನ್ನವಾಗಿ ಸಂದೇಶವೊಂದನ್ನು ರವಾನೆ ಮಾಡಿದ್ದಾರೆ. ಅದಕ್ಕಾಗಿ ಪ್ರತಾಪ್ ಕುಮಾರ್ ಮದ್ಯದ ಬಾಟಲಿಗಳನ್ನು ಸಂಗ್ರಹಿಸಿ ಅದರ ಗಾಜಿನ 75 ಚೂರುಗಳನ್ನು ಮಾಡಿಕೊಂಡು, ಎರಡೂ ಕೈಗಳಲ್ಲಿ 7.5 ಕೆಜಿಯ ಡಂಬಲ್ಸ್ ಹಿಡಿದುಕೊಂಡು ಭಾರತದ ಭೂಪಟಕ್ಕೆ ಒಡೆದ ಗಾಜಿನ ಚೂರುಗಳನ್ನು ಬಾಯಿಯಿಂದ ಅಂಟಿಸುವ ಮೂಲಕ ವಿಭಿನ್ನ ಸಾಧನೆಯೊಂದನ್ನು ಮಾಡುವ ಮೂಲಕ ಗಮನಸೆಳೆಯುತ್ತಿದ್ದಾರೆ.

klr bottle glass

ಇನ್ನು ಇಂಥಾದೊಂದು ವಿಭಿನ್ನ ಸಾಧನೆ ಮಾಡಲು ಉಪನ್ಯಾಸಕ ಪ್ರತಾಪ್ ಕಳೆದ ಒಂದು ವಾರದಿಂದ ತರಬೇತಿ ಮಾಡಿದ್ದಾರೆ. ನಂತರ ಹಲವೆಡೆ ಹೋಗಿ ಮದ್ಯದ ಬಾಟಲಿಗಳನ್ನು ಸಂಗ್ರಹಿಸಿದ್ದಾರೆ. ನಂತರ ಈ ರೀತಿ ಗಾಜಿನ ಚೂರುಗಳನ್ನು ಕೈಯಲ್ಲಿ ಮುಟ್ಟದೆ ಬಾಯಿಯಲ್ಲಿ ಅದನ್ನು ಕಚ್ಚಿಕೊಂಡು ಭಾರತದ ಭೂಪಟದ ಚಿತ್ರಕ್ಕೆ ಅಂಟಿಸುವ ಮೂಲಕ ನೋಡುಗರೆ ಮೈ ಜುಂ ಎನ್ನಿಸುವ ಸಾಧನೆ ಮಾಡಿದ್ದಾರೆ. ಅಷ್ಟಕ್ಕೂ ಈ ಉಪನ್ಯಾಸಕ ಈ ರೀತಿ ಮದ್ಯದ ಬಾಟಲಿಗಳನ್ನು ಸಂಗ್ರಹಿಸಿ ಅದನ್ನು ಒಡೆದು ಗಾಜಿನ ಚೂರುಗಳನ್ನು ಭಾರತದ ಭೂಪಟಕ್ಕೆ ಅಂಟಿಸಿದ್ದಾದ್ರು ಯಾಕೆ ಅನ್ನೋದರೆ ಹಿಂದೆ ಒಂದು ಸಂದೇಶವಿದೆ. ಈಗಿನ ಯುವಕ ಯುವತಿಯರು ಮದ್ಯ, ಡ್ರಗ್ಸ್, ಬೀಡಿ ಸಿಗರೇಟು ಕುಡಿತದ ಚಟಕ್ಕೆ ಬಿದ್ದು ತಮ್ಮ ಜೀವನವನ್ನು ತಮ್ಮ ಕೈಯಾರೆ ತಾವು ಹಾಳು ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ದೇಶದ ಶಕ್ತಿಯಾದ ಯುವಕರು 30-40 ವಯಸ್ಸಿಗೆ ಹಲವು ಕಾಯಿಲೆಗಳಿಂದ ಸಾವನ್ನಪ್ಪುತ್ತಿದ್ದಾರೆ ಹೀಗೆ ಯುವಕರು ಅಡ್ಡದಾರಿ ಹಿಡಿದರೆ ದೇಶದ ಭವಿಷ್ಯ ಹೀಗೆ ಒಡೆದ ಗಾಜಿನ ಚೂರಿನಂತಾಗುತ್ತದೆ. ಅದಕ್ಕಾಗಿ ಯುವಕರು ಈ ರೀತಿ ಚಟಗಳಿಗೆ ಬಲಿಯಾಗದೆ, ಆರೋಗ್ಯದ ಕಡೆ, ವಿವಿದ ಸಾಂಸ್ಕೃತಿಕ ಚಟುವಟಿಕೆ, ಯೋಗ, ಕಸರತ್ತು ಮಾಡಿ ಹೆಲ್ತಿ ಇಂಡಿಯಾ ನಿರ್ಮಾಣ ಮಾಡಬೇಕು ಎಂದು ಸ್ವತ: ಜಿಮ್ ಟ್ರೈನರ್ ಕೂಡಾ ಆಗಿರುವ ಉಪನ್ಯಾಸಕ ಪ್ರತಾಪ್ ಕುಮಾರ್ ಕಠಿಣ ಪ್ರಯತ್ನ ಮಾಡಿ ಸ್ವತಂತ್ರ್ಯೋತ್ಸವಕ್ಕೆ ಈ ರೀತಿ ಸಂದೇಶ ರವಾನಿಸುತ್ತಿದ್ದಾರೆ. ನನ್ನನ್ನು ನೋಡಿದ ಬೆರಳೆಣಿಕೆಯಷ್ಟು ಜನರಾದರೂ ಬದಲಾದರೆ ನನಗೆ ಅದೇ ತೃಪ್ತಿ ಎನ್ನುತ್ತಾರೆ ಪ್ರತಾಪ್. ಈ ಹಿಂದೆಯೂ ಹೀಗೆ ಸಾಮಾಜಿಕ ಕಳಕಳಿ ತೋರಿಸಿ ಹಲವು ಗಿನ್ನಿಸ್ ಹಾಗೂ ವರ್ಡ್ ರೆಕಾರ್ಡ್ ಮಾಡಿರುವ ಪ್ರತಾಪ್ ಈ ಬಾರಿ ಇದೊಂದು ವಿಭಿನ್ನ ಪ್ರಯತ್ನ ಮಾಡಿದ್ದಾರೆ.

ಒಟ್ಟಾರೆ ಸ್ವತಂತ್ರ್ಯೋತ್ಸವದ ಅಮೃತ ಮಹೋತ್ಸವದ ಹಿನ್ನೆಲೆ ಇಡೀ ದೇಶ ಸಂಭ್ರಮಿಸುತ್ತಿದ್ದರೆ ಈ ಶಿಕ್ಷಕ ಈ ಸಂಭ್ರಮದಲ್ಲೂ ಕೂಡಾ ದೇಶಕ್ಕೊಂದು, ದೇಶದ ಯುವ ಜನತೆಗೊಂದು ವಿಭಿನ್ನ ಸಂದೇಶ ಕೊಡಲು ಕಠಿಣ ಕಸರತ್ತು ಮಾಡುತ್ತಿದ್ದಾರೆ. ಇವರ ಉದ್ದೇಶ ನಿಜಕ್ಕೂ ಎಲ್ಲರೂ ಕೂಡಾ ಒಪ್ಪುವಂತದ್ದು, ಇವರಿಗೆ ದೇಶದ ಮೇಲಿರುವ ಕಾಳಜಿಗೆ ನಮ್ಮದೊಂದು ಸಲಾಂ.

ವರದಿ: ರಾಜೇಂದ್ರಸಿಂಹ, ಟಿವಿ9 ಕೋಲಾರ

Published On - 7:56 pm, Mon, 15 August 22

ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!