ಕೈಕೊಟ್ಟ ಅಪ್ರಾಪ್ತ ವಯಸಿನ ಪ್ರಿಯಕರ: ಇತ್ತ ಕಟ್ಕೊಂಡವನೂ ಇಲ್ಲ-ಅತ್ತ ಪ್ರೀತಿಸಿದವನು ಇಲ್ಲದೆ, ನಡುರಸ್ತೆಯಲ್ಲಿ ನಿಂತಿದ್ದಾಳೆ ಈ ಯುವತಿ!
ಕಿರಣ್ ತಂಗಿ ನವ್ಯ ಹೇಳುವ ಪ್ರಕಾರ ಅವಳ ಅಣ್ಣನಿಗೆ ಈಗ 21 ವರ್ಷ. ಮಹಿಳೆಗೆ 23 ವರ್ಷ ವಯಸ್ಸು. ಅಣ್ಣನಿಗೆ ಮೋಸ ಮಾಡಿದ್ದಾಳೆ. ನಮ್ಮಣ್ಣ ಅಪ್ರಾಪ್ತ, ನನ್ನ ತಂದೆ ತಾಯಿ ಇಬ್ಬರಿಗೂ ಆರೋಗ್ಯ ಸರಿ ಇಲ್ಲ. ಅವನು ಎಲ್ಲಿ ಹೋಗಿದ್ದಾನೋ ಗೊತ್ತಿಲ್ಲ - ಕಿರಣ್ ತಂಗಿ ನವ್ಯ
ಐದು ವರ್ಷದಿಂದ ಪ್ರೀತಿ ಪ್ರೇಮ ಅಂತ ಅವರಿಬ್ಬರೂ ಸುತ್ತಾಡಿದ್ದರು. ಆದ್ರೆ ಮನೆಯವರ ಬಲವಂತಕ್ಕೆ ಆಕೆ ಮತ್ತೊಬ್ಬನೊಂದಿಗೆ ವಿವಾಹ ಮಾಡಿಕೊಂಡಿದ್ದಳು. ಅದಾದ ಮೇಲೂ, ಪ್ರಿಯಕರನ ಮಾತು ಕೇಳಿ ಗಂಡನನ್ನ ಬಿಟ್ಟು ಬಂದು, ಪ್ರಿಯತಮೆಗೆ ಕೈಕೊಟ್ಟಿರುವ ಈ ಪ್ರಿಯಕರನಿಂದಾಗಿ ಆ ಯುವತಿ (woman) ಇತ್ತ ಕಟ್ಟುಕೊಂಡವನೂ ಇಲ್ಲ, ಪ್ರೀತಿಸಿದವನೂ ಇಲ್ಲದೆ ನಡುರಸ್ತೆಯಲ್ಲಿ ನಿಂತಿದ್ದಾಳೆ. ಅಷ್ಟಕ್ಕೂ ಏನದು ಸ್ಟೋರಿ ಇಲ್ಲಿದೆ ಡೀಟೇಲ್ಸ್. ಒಬ್ಬಂಟಿಯಾಗಿ ಪ್ರಿಯಕರನ ಮನೆ ಎದುರು ಪ್ರತಿಭಟನೆ ಮಾಡುತ್ತಿರುವ ಯುವತಿ, ಮತ್ತೊಂದೆಡೆ ಅಣ್ಣ ಹಾಗೂ ಕುಟುಂಬದ ಸ್ಥಿತಿಯನ್ನ ನೆನೆದು ಕಣ್ಣೀರು ಹಾಕುತ್ತಿರುವ ಅಮ್ಮ, ತಂಗಿ, ಇದೆಲ್ಲಾ ದೃಶ್ಯಗಳು ಕಂಡು ಬಂದಿದ್ದು ಕೋಲಾರ ಜಿಲ್ಲೆಯ ಮಾಲೂರು (Malur) ತಾಲ್ಲೂಕಿನ ದೊಡ್ಡಮಲ್ಲೆ ಗ್ರಾಮದಲ್ಲಿ. ಇದೇ ಗ್ರಾಮದ ಕಿರಣ್ ಹಾಗೂ ಪೂಜಾ ಐದಾರು ವರ್ಷಗಳಿಂದ ಪ್ರೀತಿಸಿದ್ದಾರೆ. ಆದರೆ ಮನೆಯವರು ಪೂಜಾಳಿಗೆ ಬೇರೊಬ್ಬ ಯುವಕನೊಂದಿಗೆ ಮದುವೆ ಮಾಡಿದ್ದಾರೆ. ಆದರೂ ಪೂಜಾ ತನ್ನ ಹಳೆಯ ಪ್ರಿಯಕರ ಕಿರಣನನ್ನು ಬಿಡದೆ ಆತನ ಬಳಿಗೆ ಬಂದಿದ್ದಾಳೆ. ಆಗ ಪ್ರೀತಿಸುತ್ತಿದ್ದ ಯುವಕ ಕಿರಣ್ ನಿನ್ನ ಗಂಡನಿಗೆ ಡೈವೋರ್ಸ್ (divorce) ಕೊಟ್ಟು ಬಾ, ನಂತರ ಮದುವೆಯಾಗೋಣ ಎಂದಿದ್ದಾನೆ. ಅದರಂತೆ ಪೂಜಾ ತನ್ನ ಗಂಡನಿಂದ (husband) ಡೈವೋರ್ಸ್ ಪಡೆದು ಪ್ರಿಯಕರನ ಬಳಿ ಬಂದಿದ್ದಾಳೆ. ಆದ್ರೆ ಈಗ ನಮ್ಮ ಮನೆಯವರು ಮದುವೆಗೆ ಒಪ್ಪುತ್ತಿಲ್ಲ ಎಂದು ಪ್ರಿಯಕರ ಕಿರಣ್ ಕೈ ಕೊಟ್ಟು ಪರಾರಿಯಾಗಿದ್ದಾನೆ (absconding). ಹಾಗಾಗಿ ನೊಂದ ಯುವತಿ ಪ್ರಿಯಕರ ಕಿರಣ್ ಮನೆ ಎದುರು ಕಳೆದ ಎರಡು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾಳೆ.
ಇನ್ನು ಮನೆಯವರ ಬಲವಂತಕ್ಕೆ ಮದುವೆಯಾದ ಪೂಜಾ ಇತ್ತ ಗಂಡನಿಗೆ ವಿಚ್ಛೇದನ ನೀಡಿದ್ದಾಳೆ. ಇತ್ತ ಬೆಟ್ಟದಂತೆ ಗಟ್ಟಿಯಾಗಿ ನಂಬಿಕೊಂಡಿದ್ದ ಆಕೆಯ ಪ್ರಿಯಕರ ಮನೆಯವರು ಒಪ್ಪುತ್ತಿಲ್ಲ ಎಂದು ಪರಾರಿಯಾಗಿದ್ದಾನೆ. ಹಾಗಾಗಿ ಕಳೆದ ಎರಡು ದಿನಗಳಿಂದ ಪೂಜಾ ತನ್ನ ಪ್ರಿಯಕರ ಕಿರಣ್ ಮನೆ ಎದುರು ಏಕಾಂಗಿ ಹೋರಾಟ ಮಾಡುತ್ತಿದ್ದಾಳೆ.
ಗಂಡನಿಗೆ ವಿಚ್ಛೇದನ ಕೊಟ್ಟು ಬಂದ ಮೇಲೆ ಕಿರಣ್ ಮದುವೆಯಾಗಲು ನಿರಾಕರಿಸುತ್ತಿದ್ದಾನೆ ಎಂದು ಅರೋಪಿಸುತ್ತಿರುವ ಯುವತಿ ನ್ಯಾಯಕ್ಕಾಗಿ ಪ್ರತಿಭಟನೆಯ ಮೊರೆ ಹೋಗಿದ್ದಾಳೆ. ಆದ್ರೆ ಕಿರಣ್ ತಂಗಿ ನವ್ಯ ಹೇಳುವ ಪ್ರಕಾರ ನನ್ನ ಅಣ್ಣನಿಗೆ ಈಗ 21 ವರ್ಷ, ಆಕೆಗೆ 23 ವರ್ಷ 5 ವರ್ಷದಿಂದ ಪ್ರೀತಿ ಪ್ರೇಮ ಮಾಡಿಲ್ಲ. ಆದ್ರೆ ನನ್ನ ಅಣ್ಣನಿಗೆ ಮೋಸ ಮಾಡಿದ್ದಾಳೆ. ಐದು ವರ್ಷ ಅಂದ್ರೆ ನಮ್ಮಣ್ಣ ಅಪ್ರಾಪ್ತ, ನನ್ನ ತಂದೆ ತಾಯಿ ಇಬ್ಬರಿಗೂ ಆರೋಗ್ಯ ಸರಿ ಇಲ್ಲ. ಆದ್ರೂ ಅವನು ಎಲ್ಲಿ ಹೋಗಿದ್ದಾನೆ ಗೊತ್ತಿಲ್ಲ ಅನ್ನೋದು ಕಿರಣ್ ತಂಗಿ ಮಾತು. ಇನ್ನು ಮಾಸ್ತಿ ಪೊಲೀಸ್ ಠಾಣಾ ವ್ತಾಪ್ತಿಯಲ್ಲಿ ವ್ಯಕ್ತಿ ನಾಪತ್ತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಒಟ್ನಲ್ಲಿ ಇರೋ ಗಂಡನನ್ನ ಒಲ್ಲೆ ಎಂದ ಯುವತಿಗೆ ಇತ್ತ ಗಂಡನೂ ಇಲ್ಲದೆ ಅತ್ತ ಪ್ರೀತಿಸಿದವನೂ ಇಲ್ಲದೆ ಏಕಾಂಗಿ ಹೋರಾಟಕ್ಕೆ ಮುಂದಾಗಿದ್ದಾಳೆ. ಹಿರಿಯರ ಸಮ್ಮುಖದಲ್ಲಿ ಮದುವೆಯಾಗಿ ಬಾಳಿ ಬದುಕಬೇಕಾದವಳು, ಸದ್ಯ ಪ್ರೀತಿ ಪ್ರೇಮ ಅಂತ ನಂಬಿಕೊಂಡು ಬಂದು ನಡು ರಸ್ತೆಯಲ್ಲಿ ನಿಂತಿದ್ದಾಳೆ.
ವರದಿ: ರಾಜೇಂದ್ರ ಸಿಂಹ, ಟಿವಿ9, ಕೋಲಾರ
Published On - 10:28 am, Wed, 22 February 23