AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಾಲೂರಿನಲ್ಲಿ ರಾತ್ರೋರಾತ್ರಿ ಪೆಟ್ಟಿಗೆ ‌ಅಂಗಡಿ ನಾಪತ್ತೆ! ಬೇಲೂರಿನಲ್ಲಿ ಜಾನುವಾರು ಕಟ್ಟುವ ವಿಚಾರ ಬಡಿದಾಡಿಕೊಂಡ ಕುಟುಂಬಗಳು!

ದಿಕ್ಕು ಕಾಣದಂತಾದ ಶಂಕರಪ್ಪ ಕುಟುಂಬದವರು ಮಾಲೂರು ಪೊಲೀಸರಿಗೆ ದೂರು ನೀಡಿದ್ದಾರೆ. ಶಂಕರಪ್ಪ ವಿಕಲಚೇತನನಾಗಿದ್ದು, ತನ್ನ ತಮ್ಮನ ಜೀವನ ನಿರ್ವಹಣೆಗಾಗಿ ಅವರದ್ದೇ ಜಮೀನಿನಲ್ಲಿ ಒಂದು ಸಣ್ಣ ಪೆಟ್ಟಿಗೆ ಅಂಗಡಿಯನ್ನು ಹಾಕಿಕೊಟ್ಟಿದ್ದರು. ಆದರೆ ಯಾರೋ ದುಷ್ಕರ್ಮಿಗಳು ಕಳೆದ ರಾತ್ರಿಯ ಅಲ್ಲಿದ್ದ ಪೆಟ್ಟಿಗೆ ಅಂಗಡಿಯನ್ನು ಹೊತ್ತೊಯ್ದಿದ್ದಾರೆ.

ಮಾಲೂರಿನಲ್ಲಿ ರಾತ್ರೋರಾತ್ರಿ ಪೆಟ್ಟಿಗೆ ‌ಅಂಗಡಿ ನಾಪತ್ತೆ! ಬೇಲೂರಿನಲ್ಲಿ ಜಾನುವಾರು ಕಟ್ಟುವ ವಿಚಾರ ಬಡಿದಾಡಿಕೊಂಡ ಕುಟುಂಬಗಳು!
ಮಾಲೂರು ತಾಲೂಕಿನಲ್ಲಿ ರಾತ್ರೋರಾತ್ರಿ ಪೆಟ್ಟಿಗೆ ‌ಅಂಗಡಿ ನಾಪತ್ತೆ!
TV9 Web
| Edited By: |

Updated on: Sep 16, 2022 | 5:08 PM

Share

ಕೋಲಾರ: ರಾತ್ರೋರಾತ್ರಿ ರಸ್ತೆ ಬದಿಯಲ್ಲಿದ್ದ ಪೆಟ್ಟಿಗೆ ‌ಅಂಗಡಿಯೇ ನಾಪತ್ತೆಯಾಗಿರುವ ಘಟನೆಯೊಂದು ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ (Malur taluk) ಎಡಕೋಡಿ ಗ್ರಾಮದಲ್ಲಿ ನಡೆದಿದೆ. ಎಟ್ಟಕೋಡಿ ಗ್ರಾಮಹದಲ್ಲಿ ರಸ್ತೆ ಪಕ್ಕದಲ್ಲಿ ಸಣ್ಣದೊಂದು ಪೆಟ್ಟಿಗೆ ಅಂಗಡಿಯನ್ನು (Petty shop) ಇಟ್ಟುಕೊಂಡಿದ್ದ ಗ್ರಾಮದ ಶಂಕರಪ್ಪ ಎಂಬುವರು ನಿನ್ನೆ ರಾತ್ರಿ ಎಂದಿನಂತೆ ಪೆಟ್ಟಿಗೆ ಅಂಗಡಿಗಿಗೆ ಬೀಗ ಹಾಕಿಕೊಂಡು ಹೋಗಿದ್ದರು. ಅದರೆ ಇಂದು ಮುಂಜಾನೆ ಬಂದು ನೋಡಿದ್ರೆ ಅಲ್ಲಿದ್ದ ಪೆಟ್ಟಿಗೆ ಅಂಗಡಿಯೇ ನಾಪತ್ತೆಯಾಗಿತ್ತು (missing case). ಗಾಬರಿಗೊಂಡ ಶಂಕರಪ್ಪ ಅವರು ಅಕ್ಕಪಕ್ಕದಲ್ಲಿ ಸುತ್ತ ಮುತ್ತಲ ಗ್ರಾಮಗಳಲೆಲ್ಲಾ ಹುಡುಕಾಡಿದ್ದಾರೆ ಆದರೆ ಅಂಗಡಿಯ ಸುಳಿವು ಮಾತ್ರ ಸಿಕ್ಕಿಲ್ಲ. ಯಾರೋ ಕಿಡಿಗೇಡಿಗಳು ರಾತ್ರೋರಾತ್ರಿ ಅಂಗಡಿಯನ್ನು ಬೇರೆಡೆಗೆ ಹೊತ್ತೊಯ್ದಿದ್ದಾರೆ.

ಸದ್ಯ ದಿಕ್ಕು ಕಾಣದಂತಾದ ಶಂಕರಪ್ಪ ಕುಟುಂಬದವರು ಮಾಲೂರು ಪೊಲೀಸರಿಗೆ ದೂರು ನೀಡಿದ್ದಾರೆ. ಶಂಕರಪ್ಪ ವಿಕಲಚೇತನನಾಗಿದ್ದು, ತನ್ನ ತಮ್ಮನ ಜೀವನ ನಿರ್ವಹಣೆಗಾಗಿ ಅವರದ್ದೇ ಜಮೀನಿನಲ್ಲಿ ಒಂದು ಸಣ್ಣ ಪೆಟ್ಟಿಗೆ ಅಂಗಡಿಯನ್ನು ಹಾಕಿಕೊಟ್ಟಿದ್ದರು. ಆದರೆ ಯಾರೋ ದುಷ್ಕರ್ಮಿಗಳು ಕಳೆದ ರಾತ್ರಿಯ ಅಲ್ಲಿದ್ದ ಪೆಟ್ಟಿಗೆ ಅಂಗಡಿಯನ್ನು ಹೊತ್ತೊಯ್ದಿದ್ದಾರೆ. ಸದ್ಯ ಶಂಕರಪ್ಪ ಮಾಲೂರು ಪೊಲೀಸ್​ ಠಾಣೆಗೆ ದೂರು ನೀಡಿದ್ದು ದೂರಿನಲ್ಲಿ ಅಂಗಡಿ ಇಟ್ಟಿರುವ ಸ್ಥಳದ ಜಮೀನಿಗೆ ಸಂಬಂಧಿಸಿದಂತೆ ಕಳೆದ ಹಲವು ವರ್ಷಗಳಿಂದ ಜಮೀನು ವಿವಾದವಿರುವ ಹಿನ್ನೆಲೆಯಲ್ಲಿ ವಿವಾದ ಸೃಷ್ಟಿಮಾಡಿರುವ ಜನರೇ ಅಲ್ಲಿದ್ದ ಪೆಟ್ಟಿಗೆ ಅಂಗಡಿಯನ್ನು ಕಳವು ಮಾಡಿರುವ ಶಂಕೆ ವ್ಯಕ್ತಪಡಿಸಿದ್ದಾರೆ. ಸದ್ಯ ಪ್ರಕರಣ ದಾಖಲು ಮಾಡಿಕೊಂಡಿರುವ ಮಾಲೂರು ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಹಾಸನ : ಜಾನುವಾರು ಕಟ್ಟುವ ವಿಚಾರವಾಗಿ ಎರಡು ಕುಟುಂಬಗಳ ನಡುವೆ ಗಲಾಟೆ

ಹಾಸನ: ಕ್ಣುಲ್ಲಕ‌ ಕಾರಣಕ್ಕೆ ಎರಡು ಕುಟುಂಬಗಳ ನಡುವೆ ಗಲಾಟೆ ನಡೆದಿದೆ. ಜಾನುವಾರು ಕಟ್ಟುವ ವಿಚಾರ ವಿಕೋಪಕ್ಕೆ ತಿರುಗಿ, ಕುಟುಂಬಗಳು ಬಡಿದಾಡಿಕೊಂಡಿವೆ. ಮಚ್ಚು, ದೊಣ್ಣೆ, ಕಲ್ಲಿನಿಂದ ಮನೆ ಮೇಲೆ ದಂಪತಿ ಅಟ್ಯಾಕ್ ಮಾಡಿದ್ದಾರೆ. ಆ ವೇಳೆ ಮತ್ತೊಂದು ಕುಟುಂಬ ಮನೆಯೊಳಗೆ ಹೋಗಿ ಬಾಗಿಲು ಹಾಕಿಕೊಂಡಿದೆ. ಹಾಸನ ‌ಜಿಲ್ಲೆ ಬೇಲೂರು ತಾಲ್ಲೂಕಿನ ಪ್ರಸಾದಿಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ. ಮನೆಯ ಬಾಗಿಲ ಮೇಲೆ ಕಲ್ಲು ಎತ್ತಿಹಾಕಿ ಪತಿ ಹಲ್ಲೆಗೆ ಮುಂದಾಗಿದ್ದಾರೆ. ಗ್ರಾಮದ ಶಿವಣ್ಣ- ದಾಕ್ಷಾಯಿಣಿ ದಂಪತಿಯಿಂದ ಹಲ್ಲೆ ಯತ್ನ ನಡೆದಿದೆ ಎಂಬ ಆರೋಪ ಕೇಳಿಬಂದಿದೆ. ಮಲ್ಲೇಗೌಡ ಹಾಗೂ ಶಿವಣ್ಣ ನಡುವೆ ಜಾನುವಾರು ಕಟ್ಟೋ ವಿಚಾರದಲ್ಲಿ ಜಗಳ ಶುರುವಾಗಿದೆ. ಕುಟುಂಬಗಳೆರಡೂ ಜಮೀನಿನ ಬಳಿ ಪರಸ್ಪರ ಬಡಿದಾಡಿಕೊಂಡಿವೆ. ಬಳಿಕ ಊರಿಗೆ ಬಂದು ಮಲ್ಲೇಗೌಡ ಮನೆ ಮೇಲೆ ಶಿವಣ್ಣ- ದಾಕ್ಣಾಯಿಣಿ ದಾಳಿ ಮಾಡಿದ್ದಾರೆ. ಮನೆ ಬಾಗಿಲಿಗೆ ಮಚ್ಚು, ದೊಣ್ಣೆ,ಕಲ್ಲಿನಿಂದ ಹಲ್ಲೆ ಮಾಡೋ ವೀಡಿಯೋ ಮೊಬೈಲ್ ನಲ್ಲಿ ಸೆರೆಯಾಗಿದೆ. ಬೇಲೂರು ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Follow Us
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ
ಜಮೀರ್ JDS ಸೇರ್ಪಡೆ ಚರ್ಚೆ ಬಗ್ಗೆ ಕುಮಾರಸ್ವಾಮಿ ಸ್ಫೋಟಕ ಹೇಳಿಕೆ!
ಜಮೀರ್ JDS ಸೇರ್ಪಡೆ ಚರ್ಚೆ ಬಗ್ಗೆ ಕುಮಾರಸ್ವಾಮಿ ಸ್ಫೋಟಕ ಹೇಳಿಕೆ!