Vemagal Police: ಕೋಲಾರದಲ್ಲಿ ಇದೇನಿದು ಲವ್ ಗಲಾಟೆ, ಮುಂದೇನಾಗುತ್ತದೆ ಆ ಯುವಕ-ಯುವತಿಯ ಬಾಳಲ್ಲಿ?

vemagal police: ಹಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ಯುವಕ ಮುನಿರಾಜು ಹಾಗೂ ಯುವತಿ ಸಿಂಧು ಒಂದೇ ಜಾತಿಯವರಾಗಿದ್ದು, ಪೋಷಕರನ್ನ ಒಪ್ಪಿಸಿ ಮದುವೆಯಾಗುವಲ್ಲಿ ವಿಫಲರಾಗಿದ್ದಾರೆ. ಇನ್ನು ವೇಮಗಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಯುವತಿ ಸಿಂಧು ದೂರು ನೀಡಿದ್ದಾಳೆ.

Vemagal Police: ಕೋಲಾರದಲ್ಲಿ ಇದೇನಿದು ಲವ್ ಗಲಾಟೆ, ಮುಂದೇನಾಗುತ್ತದೆ ಆ ಯುವಕ-ಯುವತಿಯ ಬಾಳಲ್ಲಿ?
ಕೋಲಾರದಲ್ಲಿ ಇದೇನಿದು ಲವ್ ಗಲಾಟೆ, ಮುಂದೇನಾಗುತ್ತದೆ ಆ ಯುವಕ-ಯುವತಿಯ ಬಾಳಲ್ಲಿ?
Follow us
TV9 Web
| Updated By: ಸಾಧು ಶ್ರೀನಾಥ್​

Updated on: Apr 26, 2022 | 10:12 PM

ಕೋಲಾರ: ಹಲವಾರು ವರ್ಷಗಳಿಂದ ಪ್ರೀತಿಸುತ್ತಿದ್ದ ಯುವ ಪ್ರೇಮಿಗಳು, ಕೊನೆಗೂ ಪ್ರೀತಿಸಿ ಮದುವೆಯಾಗಿದ್ದಾರೆ (love marriage). ಆದರೆ ಅದೇ ಮಹಾಪರಾಧವಾಗಿ ಪರಿಣಮಿಸಿದೆ. ಇವರ ಪ್ರೀತಿಯನ್ನು ಒಪ್ಪದ ಯುವತಿಯ ಮನೆಯವರು ಯುವಕನ ಮನೆಯ ಮೇಲೆ‌ ದಾಳಿ ಮಾಡಿರುವ ಘಟನೆ ಕೋಲಾರ ಜಿಲ್ಲೆಯಲ್ಲಿ ನಡೆದಿದೆ. ಕೋಲಾರ ತಾಲ್ಲೂಕಿನ ವೇಮಗಲ್‌ನಲ್ಲಿ ಈ ಘಟನೆ ನಡೆದಿದ್ದು, ವೇಮಗಲ್ ಗ್ರಾಮದ ಮುನಿರಾಜು ಹಾಗೂ ಸಿಂಧು ಪರಸ್ಪರ ಪ್ರೀತಿಸಿ ಮದುವೆಯಾದ ದಂಪತಿ.

ಆದರೆ, ಪ್ರೀತಿಯಿಂದ ಸಾಕಿ ಸಲುಹಿದ ಮಗಳನ್ನ ಪ್ರೀತಿಸಿದ ಯುವಕ ಬೇರೆಡೆ ಕರೆದುಕೊಂಡು ಹೋಗಿ ಮದುವೆಯಾಗಿದ್ದಾನೆ ಎಂದು ವಿಚಾರ ತಿಳಿದ ಯುವತಿಯ ಪೋಷಕರು ವೇಮಗಲ್‌ನಲ್ಲಿನ ಮುನಿರಾಜು ಮನೆಯ ಮೇಲೆ‌ ದಾಳಿ ಮಾಡಿ‌ ಮನೆಯ ಆವರಣದಲ್ಲಿದ್ದ ವಸ್ತುಗಳಿಗೆ ಬೆಂಕಿ ಹಚ್ಚಿದ್ದಾರೆ. ಮನೆಯಲ್ಲಿದ್ದ ಸಾವಿರಾರು ರೂಪಾಯಿ ಮೌಲ್ಯದ ವಸ್ತುಗಳು ಬೆಂಕಿಗಾಹುತಿಯಾಗಿವೆ. ಮನೆಯ ಮೇಲೆ‌ ದಾಳಿ ಮಾಡಿ ಬೆಂಕಿ ಹಚ್ಚಿ ಯುವಕನ ತಂದೆ ಹಾಗೂ ಅತ್ತಿಗೆಯ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.

ಇನ್ನು, ಹಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ಯುವಕ ಮುನಿರಾಜು ಹಾಗೂ ಯುವತಿ ಸಿಂಧು ಒಂದೇ ಜಾತಿಯವರಾಗಿದ್ದು, ಪೋಷಕರನ್ನ ಒಪ್ಪಿಸಿ ಮದುವೆಯಾಗುವಲ್ಲಿ ವಿಫಲರಾಗಿದ್ದಾರೆ. ಇನ್ನು ವೇಮಗಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ (vemagal police) ಘಟನೆ ನಡೆದಿದ್ದು, ಯುವತಿ ಸಿಂಧು ದೂರು ನೀಡಿದ್ದಾಳೆ. ತಮ್ಮ ಪೋಷಕರ ವಿರುದ್ದವೇ ದೂರು ಸಲ್ಲಿಸಿದ ಯುವತಿ ಸಿಂಧು ತಮಗೆ ರಕ್ಷಣೆ ನೀಡುವಂತೆ ವ್ಯಾಟ್ಸಾಪ್ ಮೂಲಕ ಪತ್ರ ರವಾನೆ ಮಾಡಿದ್ದಾಳೆ.

Also Read: Jet Airways Jobs: ಜೆಟ್​ ಏರ್​ವೇಸ್ ಆಕಾಶ ಮಾರ್ಗದಲ್ಲಿ ಉದ್ಯೋಗಾವಕಾಶ ಸುರಿಮಳೆ, ಅಕ್ರಮಗಳಿಗೆ ಅವಕಾಶವಿಲ್ಲ!

Also Read: PSI Recruitment Scam: ದೇಶದ್ರೋಹಿ ದಾವೂದ್ ಇಬ್ರಾಹಿಂಗೆ ಜಾರಿ ಮಾಡಿದಂತೆ ದಿವ್ಯಾ ಹಾಗರಗಿಗೂ ಅರೆಸ್ಟ್​ ವಾರಂಟ್ ಜಾರಿ!

ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
ಸೂಪರ್‌ಮ್ಯಾನ್‌ನಂತೆ ಗಾಳಿಯಲ್ಲಿ ಹಾರಿ ಅದ್ಭುತ ಕ್ಯಾಚ್ ಹಿಡಿದ ಕಿವೀಸ್ ವೇಗಿ
ಸೂಪರ್‌ಮ್ಯಾನ್‌ನಂತೆ ಗಾಳಿಯಲ್ಲಿ ಹಾರಿ ಅದ್ಭುತ ಕ್ಯಾಚ್ ಹಿಡಿದ ಕಿವೀಸ್ ವೇಗಿ