AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Jet Airways Jobs: ಜೆಟ್​ ಏರ್​ವೇಸ್ ಆಕಾಶ ಮಾರ್ಗದಲ್ಲಿ ಉದ್ಯೋಗಾವಕಾಶ ಸುರಿಮಳೆ, ಅಕ್ರಮಗಳಿಗೆ ಅವಕಾಶವಿಲ್ಲ!

Jet Airways Recruitments: ಇಂದು ಮಂಗಳವಾರ ಸಂಜೆ ತನ್ನ ನೂತನ ನೇಮಕಾತಿ ಪ್ರಕ್ರಿಯೆ ಬಗ್ಗೆ ಟ್ವೀಟ್​ ಮಾಡಿ, ಮಾಹಿತಿ ನೀಡಿರುವ ಜೆಟ್​ ಏರ್​ವೇಸ್​ ವಿಮಾನ ಯಾನ ಸಂಸ್ಥೆಯು ಇನ್ನು ಮುಂದೆ ಸಂಸ್ಥೆಯ ವತಿಯಿಂದ ಆಯಕಟ್ಟಿನ ಸ್ಥಾನಗಳಿಗೆ ನೇಮಕಾತಿಗಳು ನಿರಂತರವಾಗಿ ನಡೆಯಲಿದ್ದು, ತನ್ನ ಅಧಿಕೃತ ಟ್ವಿಟ್ಟರ್​ ಖಾತೆಯನ್ನು ನೋಡುವಂತೆ ಕೋರಿದೆ. ಜೊತೆಗೆ ಯಾವುದೇ ಉದ್ಯೋಗ ನೇಮಕಾತಿಗೆ ಆಮಿಷಗಳು ಇಲ್ಲದೆ, ಅರ್ಹ ಅಭ್ಯರ್ಥಿಗಳನ್ನು ಮಾತ್ರವೇ ನೇಮಕ ಮಾಡಿಕೊಳ್ಳುವುದಾಗಿ ಸಂಸ್ಥೆ ತಿಳಿಸಿದೆ.

Jet Airways Jobs: ಜೆಟ್​ ಏರ್​ವೇಸ್ ಆಕಾಶ ಮಾರ್ಗದಲ್ಲಿ ಉದ್ಯೋಗಾವಕಾಶ ಸುರಿಮಳೆ, ಅಕ್ರಮಗಳಿಗೆ ಅವಕಾಶವಿಲ್ಲ!
ಜೆಟ್​ ಏರ್​ವೇಸ್ ಆಕಾಶ ಮಾರ್ಗದಲ್ಲಿ ಉದ್ಯೋಗಾವಕಾಶಗಳ ಸುರಿಮಳೆ, ಅಕ್ರಮಗಳಿಗೆ ಅವಕಾಶವಿಲ್ಲ!
TV9 Web
| Edited By: |

Updated on: Apr 26, 2022 | 9:46 PM

Share

ಜೆಟ್​ ಏರ್​ವೇಸ್​ ವಿಮಾನ ಯಾನ ಸಂಸ್ಥೆಯು ಮತ್ತೆ ಹಾರಾಟಕ್ಕೆ ಸಿದ್ಧತೆ ನಡೆಸಿದೆ. 2019ರಲ್ಲಿ ಕಾರ್ಯಾಚರಣೆ ನಿಲ್ಲಿಸಿದ ಮೇಲೆ ಮತ್ತೆ ಆರಂಭ ಮಾಡಲಾಗುತ್ತಿದೆ. 2019ರಲ್ಲಿ ಕಾರ್ಯಾಚರಣೆ ನಿಲ್ಲಿಸಿದ್ದ ಜೆಟ್​ ಏರ್​ವೇಸ್ (Jet Airways) ವಿಮಾನ ಯಾನ ಸಂಸ್ಥೆ ಮತ್ತೆ ಹಾರಾಟ ನಡೆಸುವತ್ತ ಮುಂದಡಿ ಇಟ್ಟಿದೆ. ಜೆಟ್​ ಏರ್​ವೇಸ್ ಬಾನಂಗಳದಲ್ಲಿ ಉದ್ಯೋಗಾವಕಾಶಗಳ ಸುರಿಮಳೆಗೆರೆಯಲು ಸಜ್ಜಾಗಿದೆ. ಈಗಾಗಲೇ ಮೇಲ್ಮಟ್ಟದ ಕೆಲ ನೇಮಕಾತಿಗಳು ನಡೆದಿವೆ.

ಶೀಘ್ರದಲ್ಲೇ ವಾಯು ಯಾನ ಕಾರ್ಯಾಚರಣೆ ಪರವಾನಗಿ ಪಡೆಯುವ ನಿಟ್ಟಿನಲ್ಲಿ ಪ್ರಯತ್ನ ಆರಂಭಿಸಲಾಗಿದೆ. ಏರ್​ಲೈನ್​ ಸಿಇಒ ಸಂಜೀವ್​ ಕಪೂರ್ ಅವರು ಹೈಬ್ರಿಡ್ ಮಾಡೆಲ್ ಬಗ್ಗೆ ಮಾತನಾಡಿದ್ದು, ವಿಮಾನ ಯಾನ ವಲಯ ನಿಧಾನಗತಿ ಆಗಿತ್ತು. ಸದ್ಯದ ಸನ್ನಿವೇಶದಲ್ಲಿ ಭಾರತೀಯ ವಿಮಾನ ಯಾನ ವಲಯವು ಕಡಿಮೆ ಪ್ರಯಾಣ ವೆಚ್ಚದ ಸಂಸ್ಥೆಗಳು ಪಾರಮ್ಯ ಸಾಧಿಸಿವೆ. 2019ನೇ ಇಸವಿಯಲ್ಲಿ, ಯಾವಾಗ ಜೆಟ್​ ಏರ್​ವೇಸ್ ತನ್ನ ಕಾರ್ಯಾಚರಣೆಯನ್ನು ನಿಲ್ಲಿಸಿತೋ ಆಗ ಶೇ 87ರಷ್ಟು ಸಂಪೂರ್ಣ ದೇಶೀಯ ವಾಯು ಸಂಚಾರವನ್ನು ಕಡಿಮೆ ದರದ ಸಂಸ್ಥೆಗಳು ನೋಡಿಕೊಳ್ಳುತ್ತಿದ್ದವು. ಹೈಬ್ರಿಡ್ ಮಾಡೆಲ್ ಹೆಚ್ಚಾಗಿ ಕಂಡುಬರುತ್ತದೆ. ಇದರಲ್ಲಿ ಪ್ರಯಾಣ ವೆಚ್ಚ ಕಡಿಮೆ. ಆದರೆ ಪ್ರಯಾಣಿಕರು ಆಹಾರ ಮತ್ತಿತರ ವಸ್ತುಗಳನ್ನು ಖರೀದಿ ಮಾಡಬೇಕಾಗುತ್ತದೆ.

#JetAirwaysIsHiring ಇಂದು ಮಂಗಳವಾರ ಸಂಜೆ ತನ್ನ ನೂತನ ನೇಮಕಾತಿ ಪ್ರಕ್ರಿಯೆ ಬಗ್ಗೆ ಟ್ವೀಟ್​ ಮಾಡಿ, ಮಾಹಿತಿ ನೀಡಿರುವ ಜೆಟ್​ ಏರ್​ವೇಸ್​ ವಿಮಾನ ಯಾನ ಸಂಸ್ಥೆಯು ಇನ್ನು ಮುಂದೆ ಸಂಸ್ಥೆಯ ವತಿಯಿಂದ ಆಯಕಟ್ಟಿನ ಸ್ಥಾನಗಳಿಗೆ ನೇಮಕಾತಿಗಳು ನಿರಂತರವಾಗಿ ನಡೆಯಲಿದ್ದು, ತನ್ನ ಅಧಿಕೃತ ಟ್ವಿಟ್ಟರ್​ ಖಾತೆಯನ್ನು ನೋಡುವಂತೆ ಕೋರಿದೆ. ಜೊತೆಗೆ ಯಾವುದೇ ಉದ್ಯೋಗ ನೇಮಕಾತಿಗೆ ಆಮಿಷಗಳು ಇಲ್ಲದೆ, ಅರ್ಹ ಅಭ್ಯರ್ಥಿಗಳನ್ನು ಮಾತ್ರವೇ ನೇಮಕ ಮಾಡಿಕೊಳ್ಳುವುದಾಗಿ ಸಂಸ್ಥೆ ತಿಳಿಸಿದೆ. ಹಾಗಾಗಿ ಯಾವುದೇ ನೇಮಕಾತಿ ಅಕ್ರಮಗಳಿಗೆ ಅಭ್ಯರ್ಥಿಗಳು ತುತ್ತಾಗಬಾರದು ಎಚ್ಚರಿಸಿದೆ. careers@jetairways.com ಈ ವಿಳಾಸಕ್ಕೆ ಮಾತ್ರವೇ ಸೂಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು ಎಂದು ಸಂಸ್ಥೆ ಸೂಚಿಸಿದೆ.

ಜೆಟ್​ ಏರ್​ವೇಸ್​ ವಿಮಾನ ಯಾನ ಸಂಸ್ಥೆಯ ಟ್ವೀಟ್​ ಸಾರಾಂಶ ಹೀಗಿದೆ: Are you looking to join us inroles? If yes, please read below. #JetAirwaysIsHiring Excited by Product Development? Experienced in doing this for airlines? Energized by the thought of being part of Jet Airways re-launch team? If your answer is Yes! for all of the above, please send your CV to careers@jetairways.com. Read below for more info. #JetAirwaysIsHiring

Follow Us
Live: ತಮಿಳುನಾಡು ಸಿಎಂ ವಿಜಯ್ ವಿಶ್ವಾಸಮತ ಯಾಚನೆ ನೇರಪ್ರಸಾರ
Live: ತಮಿಳುನಾಡು ಸಿಎಂ ವಿಜಯ್ ವಿಶ್ವಾಸಮತ ಯಾಚನೆ ನೇರಪ್ರಸಾರ
ಹಗಲು ರಾತ್ರಿ ಹಣದ ಚಿಂತೆ ಮಾಡುತ್ತಿದ್ದೀರಾ? ಇದರಿಂದ ಯಾವ ದೋಷ ಬರುತ್ತೆ?
ಹಗಲು ರಾತ್ರಿ ಹಣದ ಚಿಂತೆ ಮಾಡುತ್ತಿದ್ದೀರಾ? ಇದರಿಂದ ಯಾವ ದೋಷ ಬರುತ್ತೆ?
ಇಂದು ಈ ರಾಶಿಯವರು ಅತಿಯಾದ ಕೋಪವನ್ನು ಕೈಬಿಡಿ
ಇಂದು ಈ ರಾಶಿಯವರು ಅತಿಯಾದ ಕೋಪವನ್ನು ಕೈಬಿಡಿ
ಬೆಳಗಾವಿಯಲ್ಲಿ ಭಾರಿ ಗಾಳಿ ಮಳೆಗೆ ಧರೆಗುರುಳಿದ ಮರಗಳು: ಸಂಚಾರ ಅಸ್ತವ್ಯಸ್ತ
ಬೆಳಗಾವಿಯಲ್ಲಿ ಭಾರಿ ಗಾಳಿ ಮಳೆಗೆ ಧರೆಗುರುಳಿದ ಮರಗಳು: ಸಂಚಾರ ಅಸ್ತವ್ಯಸ್ತ
ಪ್ರಧಾನಿ ಮೋದಿ ಹಾಸನದ ಮೆಗಾ ಡೇರಿ ಉದ್ಘಾಟನೆ ಮಾಡುತ್ತಾರೆ; ಹೆಚ್​ಡಿ ದೇವೇಗೌಡ
ಪ್ರಧಾನಿ ಮೋದಿ ಹಾಸನದ ಮೆಗಾ ಡೇರಿ ಉದ್ಘಾಟನೆ ಮಾಡುತ್ತಾರೆ; ಹೆಚ್​ಡಿ ದೇವೇಗೌಡ
ಸರ್ಕಾರಿ ನ್ಯಾಯಬೆಲೆ ಅಂಗಡಿ ಸಿನಿಮಾ: ಸಿಎಂ ಸಹಕಾರ ನೆನೆದ ಕುಮಾರ್ ಬಂಗಾರಪ್ಪ
ಸರ್ಕಾರಿ ನ್ಯಾಯಬೆಲೆ ಅಂಗಡಿ ಸಿನಿಮಾ: ಸಿಎಂ ಸಹಕಾರ ನೆನೆದ ಕುಮಾರ್ ಬಂಗಾರಪ್ಪ
ಮಳೆ ಕೊರತೆ ಮಧ್ಯೆ ತೀವ್ರ ಬಿಸಿಲು: ಬರಿದಾಗುತ್ತಿದೆ ಜೀವನಾಡಿ ಕೆಆರ್‌ಎಸ್
ಮಳೆ ಕೊರತೆ ಮಧ್ಯೆ ತೀವ್ರ ಬಿಸಿಲು: ಬರಿದಾಗುತ್ತಿದೆ ಜೀವನಾಡಿ ಕೆಆರ್‌ಎಸ್
ತಾಂಡಾ, ಹಾಡಿ ನಿವಾಸಿಗಳ ದಶಕಗಳ ಕನಸು ನನಸು
ತಾಂಡಾ, ಹಾಡಿ ನಿವಾಸಿಗಳ ದಶಕಗಳ ಕನಸು ನನಸು
ಮತ್ತೆ ಸನಾತನ ನಿರ್ಮೂಲನೆಯ ಹೇಳಿಕೆ ನೀಡಿ ವಿವಾದಕ್ಕೀಡಾದ ಉದಯನಿಧಿ ಸ್ಟಾಲಿನ್
ಮತ್ತೆ ಸನಾತನ ನಿರ್ಮೂಲನೆಯ ಹೇಳಿಕೆ ನೀಡಿ ವಿವಾದಕ್ಕೀಡಾದ ಉದಯನಿಧಿ ಸ್ಟಾಲಿನ್
ಬೆಂಗಳೂರಿನಲ್ಲಿ ಎಲೆಕ್ಟ್ರಿಕ್ ಬೈಕ್ ಬ್ಯಾಟರಿ ಸ್ಫೋಟಗೊಂಡು ವೃದ್ಧ ಸಾವು!
ಬೆಂಗಳೂರಿನಲ್ಲಿ ಎಲೆಕ್ಟ್ರಿಕ್ ಬೈಕ್ ಬ್ಯಾಟರಿ ಸ್ಫೋಟಗೊಂಡು ವೃದ್ಧ ಸಾವು!