ನಿರ್ಮಲಾನಂದ ಶ್ರೀಗೆ ಕೆಂಪೇಗೌಡ ಪುತ್ಥಳಿಗೆ ಮಾಲಾರ್ಪಣೆಗೆ ಅವಕಾಶ ನೀಡದ ಪೊಲೀಸ್​​: ರಸ್ತೆ ತಡೆದು ಪ್ರತಿಭಟನೆ ಮಾಡಿದ ಒಕ್ಕಲಿಗ ಮುಖಂಡರು

| Updated By: ಗಂಗಾಧರ​ ಬ. ಸಾಬೋಜಿ

Updated on: Sep 02, 2023 | 4:09 PM

ಕೆಂಪೇಗೌಡ ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಮಠದ ನಿರ್ಮಲಾನಂದ ಸ್ವಾಮೀಜಿಗೆ ಪುತ್ಥಳಿಗೆ ಮಾಲಾರ್ಪಣೆಗೆ ಅವಕಾಶ ನೀಡದ ಪೊಲೀಸರ ವಿರುದ್ಧ ಒಕ್ಕಲಿಗ ಮುಖಂಡರು ರಸ್ತೆ ತಡೆದು ಪ್ರತಿಭಟನೆ ಮಾಡಿರುವಂತಹ ಘಟನೆ ಕೋಲಾರ ತಾಲ್ಲೂಕಿನ ಶ್ರೀನಿವಾಸಪುರದ ರೋಜರನಹಳ್ಳಿ ಕ್ರಾಸ್​​ನಲ್ಲಿ ನಡೆದಿದೆ. ಮಂಗಳಾನಂದ ಸ್ವಾಮಿಗಳು ಪ್ರತಿಭಟನಾಕಾರನ್ನು ಸಮಾಧಾನ ಪಡಿಸಿ ಪ್ರತಿಭಟನೆ ಹಿಂಪಡೆಯಲಾಗಿದೆ.

ನಿರ್ಮಲಾನಂದ ಶ್ರೀಗೆ ಕೆಂಪೇಗೌಡ ಪುತ್ಥಳಿಗೆ ಮಾಲಾರ್ಪಣೆಗೆ ಅವಕಾಶ ನೀಡದ ಪೊಲೀಸ್​​: ರಸ್ತೆ ತಡೆದು ಪ್ರತಿಭಟನೆ ಮಾಡಿದ ಒಕ್ಕಲಿಗ ಮುಖಂಡರು
ಪೊಲೀಸರ ವಿರುದ್ಧ ಪ್ರತಿಭಟನೆ
Follow us on

ಕೋಲಾರ, ಸೆಪ್ಟೆಂಬರ್​ 2: ಕೋಲಾರ ತಾಲ್ಲೂಕಿನ ಶ್ರೀನಿವಾಸಪುರದ ರೋಜರನಹಳ್ಳಿ ಕ್ರಾಸ್​​ನಲ್ಲಿ ಇಂದು ಕೆಂಪೇಗೌಡ ಜಯಂತಿ ಪ್ರಯುಕ್ತವಾಗಿ ಕೆಂಪೇಗೌಡ ಪುತ್ಥಳಿ (Kempegowda statue) ಅನಾವರಣ ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಮಠದ ನಿರ್ಮಲಾನಂದ ಸ್ವಾಮೀಜಿಗೆ ಪುತ್ಥಳಿಗೆ ಮಾಲಾರ್ಪಣೆಗೆ ಅವಕಾಶ ನೀಡದ ಪೊಲೀಸರ ವಿರುದ್ಧ ಒಕ್ಕಲಿಗ ಮುಖಂಡರು ರಸ್ತೆ ತಡೆದು ಪ್ರತಿಭಟನೆ ಮಾಡಿದ್ದಾರೆ. ಸ್ಥಳಕ್ಕೆ ಪೊಲೀಸರು ಹಾಗೂ ಸ್ವಾಮಿಗಳು ಬರುವಂತೆ ಪ್ರತಿಭಟನಾಕಾರರು ಆಗ್ರಹಿಸಿದ್ದರು.

ರಾತ್ರೋರಾತ್ರಿ ಪುತ್ಥಳಿ ತಂದಿಡಲಾಗಿದೆ. ಜೊತೆಗೆ ನಿರ್ಮಲಾನಂದ ಸ್ವಾಮೀಜಿ ಪ್ರೋಟೋಕಾಲ್​ನಲ್ಲಿ ಇಲ್ಲ ಎಂದು ಕೆಂಪೇಗೌಡ ಪುತ್ಥಳಿ ಮಾಲಾರ್ಪಣೆಯನ್ನು ಪೊಲೀಸರು ತಡೆದಿದ್ದಾರೆ.

ಇದನ್ನೂ ಓದಿ: ಕರ್ನಾಟಕ ರಾಜಕೀಯ; ಬಿಜೆಪಿಯಲ್ಲಿ ಬಿಎಸ್ ಯಡಿಯೂರಪ್ಪ VS ಬಿಎಲ್ ಸಂತೋಷ್ ಬಣ ಸಂಘರ್ಷ ಮತ್ತೆ ಮುನ್ನೆಲೆಗೆ

ಪ್ರತಿಭಟನಾಕಾರರ ಆಗ್ರದಂತೆ ಮಂಗಳಾನಂದ ಸ್ವಾಮಿಗಳು ಸ್ಥಳಕ್ಕೆ ಬಂದು ಪ್ರತಿಭಟನಾಕಾರನ್ನು ಸಮಾಧಾನ ಪಡಿಸಿದರು. ಹೊಸದಾಗಿ ಮಾಡಿದ್ದ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಸ್ವಾಮೀಜಿ ಮನವೊಲಿಸಿದ್ದಾರೆ. ಬಳಿಕ ಸ್ವಾಮಿಗಳ ಜೊತೆಗೆ ಶ್ರೀನಿವಾಸಪುರ ಕೆಂಪೇಗೌಡ ಜಯಂತಿ ಕಾರ್ಯಕ್ರಮಕ್ಕೆ  ಮುಖಂಡರು ತೆರಳಿದ್ದಾರೆ.

ಇದನ್ನೂ ಓದಿ: ಚಿಕ್ಕಬಳ್ಳಾಪುರ: ಮಳೆಗಾಗಿ ಪ್ರಾರ್ಥಿಸಿ ಗಂಡು ಮಕ್ಕಳಿಗೆ ಮದುವೆ; ಕೆಲ ಹೊತ್ತಲ್ಲೇ ವರುಣನ ಆಗಮನ

ಮೈಲ್ಡ್ ಸ್ಟ್ರೋಕ್ ಆಗಿ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಾಜಿ ಸಿಎಂ ಹೆಚ್​​ಡಿ ಕುಮಾರಸ್ವಾಮಿ ಅವರನ್ನು ಇತ್ತೀಚೆಗೆ ಆದಿಚುಂಚನಗಿರಿ ಮಠದ ನಿರ್ಮಲಾನಂದ ಶ್ರೀಗಳು ಸಹ ಭೇಟಿ ಮಾಡಿ  ಆರೋಗ್ಯ ವಿಚಾರಿಸಿದ್ದಾರೆ. ಬಳಿಕ ಹೆಚ್​ಡಿ ಕುಮಾರಸ್ವಾಮಿ ಆರೋಗ್ಯವಾಗಿದ್ದಾರೆ ಎಂದು ಹೇಳಿದ್ದರು.

ಜಯನಗರದಲ್ಲಿರೋ ಅಪೋಲೊ ಆಸ್ಪತ್ರೆಯ ತಜ್ಞ ವೈದ್ಯರು ಹೆಚ್​ಡಿ ಕುಮಾರಸ್ವಾಮಿ ಮೇಲೆ ತೀವ್ರ ನಿಗಾ ಇಟ್ಟಿದ್ದಾರೆ. ಹೆಚ್​​.ಡಿ.ಕುಮಾರಸ್ವಾಮಿ ಆರೋಗ್ಯದಲ್ಲಿ ಚೇತರಿಕೆ ಕಂಡಿದ್ದು ಐಸಿಯುನಿಂದ ಜನರಲ್ ವಾರ್ಡ್​ಗೆ ಶಿಫ್ಟ್ ಮಾಡಲಾಗಿದೆ. ನಸುಕಿನ ಜಾವ ಮಾಜಿ ಸಿಎಂ ಕುಮಾರಸ್ವಾಮಿಗೆ ಮೈಲ್ಡ್ ಸ್ಟ್ರೋಕ್ ಆಟ್ಯಾಕ್ ಆಗಿತ್ತು. ಸದ್ಯ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ. ಇನ್ನು 2 ದಿನ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆಯಲಿದೆ ಎಂದು ಅಪೋಲೋ ಆಸ್ಪತ್ರೆಯ ವೈದ್ಯರು ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.