ಕೋಲಾರದ ರೈತನಿಗೆ ಬಂಗಾರದ ಬೆಳೆಯಾದ ಸೀಬೆ; ಲಕ್ಷ ಲಕ್ಷ ಆದಾಯಕ್ಕೆ ಕಾರಣವಾಯ್ತು ಮಿಶ್ರ ಬೆಳೆ

Guava Farming; ಕಳೆದ ನಾಲ್ಕು ತಿಂಗಳಲ್ಲಿ ತಿಂಗಳಿಗೆ ಸರಾಸರಿ ಒಂದು ಲಕ್ಷ ರೂಪಾಯಿಯಷ್ಟು ಆದಾಯ ಬರುತ್ತಿದೆ. ಸದ್ಯ ಖರೀದಿದಾರರು ತಮ್ಮ ತೋಟದಲ್ಲಿ ಕೆಜಿ ಸೀಬೆ ಹಣ್ಣಿಗೆ 60 ರೂಪಾಯಿ ಹಣಕೊಟ್ಟು ಖರೀದಿ ಮಾಡುತ್ತಿದ್ದಾರೆ. ಹಾಗಾಗಿ ಒಳ್ಳಯ ಆದಾಯ ತಂದುಕೊಡುತ್ತಿದೆ ಅನ್ನೋದು ರೈತ ಮರೀಗೌಡರ ಮಾತು.

ಕೋಲಾರದ ರೈತನಿಗೆ ಬಂಗಾರದ ಬೆಳೆಯಾದ ಸೀಬೆ; ಲಕ್ಷ ಲಕ್ಷ ಆದಾಯಕ್ಕೆ ಕಾರಣವಾಯ್ತು ಮಿಶ್ರ ಬೆಳೆ
ಸೀಬೆ
Follow us
ರಾಜೇಂದ್ರ ಸಿಂಹ ಬಿ.ಎಲ್. ಕೋಲಾರ
| Updated By: Ganapathi Sharma

Updated on: Sep 01, 2023 | 6:25 PM

ಕೋಲಾರ, ಸೆಪ್ಟೆಂಬರ್ 01: ಕೋಲಾರ (Kolar) ಜಿಲ್ಲೆಯ ರೈತರೆಲ್ಲಾ (Farmers) ಬಹುತೇಕ ತರಕಾರಿ ಬೆಳೆಗಳನ್ನು ಬೆಳೆದು ಬೆಳೆದು ನಷ್ಟ ಅನುಭವಿಸಿರುವವರು. ಪ್ರತಿ ವರ್ಷ ಕಷ್ಟ ಪಟ್ಟು ವ್ಯವಸಾಯ ಮಾಡಿದರೂ ಬೆಳೆದ ಬೆಳೆಗೆ ಬೆಲೆ ಸಿಗಬೇಕೆಂದರೆ ಅದೃಷ್ಟವಿರಬೇಕು ಎನ್ನುವಂತಹ ಪರಿಸ್ಥಿತಿ ಇದೆ. ಆದರೆ ಅಂತಹ ಪರಿಸ್ಥಿತಿಯಿಂದ ಹೊರಬಂದಿರುವ ಕೆಲವು ರೈತರು ಲಕ್ಷ ಲಕ್ಷ ಸಂಪಾದನೆಯ ದಾರಿ ಕಂಡುಕೊಂಡಿದ್ದಾರೆ. ಅದು ಹೇಗೆಂಬ ಮಾಹಿತಿ ಇಲ್ಲಿದೆ.

ಸಮೃದ್ದವಾಗಿ ಬೆಳೆದಿರುವ ತೋಟದಲ್ಲಿ ಕಂಡು ಬರುತ್ತಿರುವ ಸೀಬೆ ಹಣ್ಣು, ಬಾಯಿ ನೀರೂರಿಸುವಂತೆ ಕಂಡು ಬರುವ ಬೃಹತ್​ ಗಾತ್ರದ ಸೀಬೆ ಹಣ್ಣುಗಳು, ತೋಟದಲ್ಲಿ ಗಿಡಗಳನ್ನು ಆರೈಕೆ ಮಾಡುತ್ತಿರುವ ತೋಟದ ಮಾಲೀಕ. ಇದೆಲ್ಲಾ ದೃಷ್ಯಗಳು ಕಂಡುಬಂದಿದ್ದು ಕೋಲಾರ ತಾಲ್ಲೂಕು ಕೊಂಡರಾಜನಹಳ್ಳಿ ಗ್ರಾಮದ ಮರೀಗೌಡ ಅವರ ತೋಟದಲ್ಲಿ. ಹಲವು ದಶಕಗಳಿಂದ ಕೋಲಾರ ಜಿಲ್ಲೆಯ ರೈತರು ಟೊಮ್ಯಾಟೋ ಸೇರಿದಂತೆ ತರಕಾರಿ ಬೆಳೆಗಳನ್ನು ಕಷ್ಟಪಟ್ಟು ಬೆಳೆದು ಸರಿಯಾದ ಬೆಲೆ ಸಿಗದೆ ಅದೃಷ್ಟ ಇದ್ದವರಿಗೆ ಬೆಲೆ ಎನ್ನುವ ಪರಿಸ್ಥಿತಿಗೆ ಸಿಲುಕಿದ ರೈತರು ನಷ್ಟದ ಮೇಲೆ ನಷ್ಟ ಅನುಭವಿಸುತ್ತಿದ್ದರು. ಇದರಿಂದ ಬೇಸತ್ತರುವ ರೈತ ಮರೀಗೌಡ ಅವರು ತೋಟಗಾರಿಕಾ ಇಲಾಖೆ ಅಧಿಕಾರಿಯಾದ್ದ ತಮ್ಮ ಸ್ನೇಹಿತ ಶಿವಕುಮಾರ್ ಸಲಹೆಯಂತೆ ಹೊಸದೊಂದು ಬೆಳೆ ಬೆಳೆದು ಉತ್ತಮ ಲಾಭ ಮಾಡಬೇಕೆಂದು ನಿರ್ಧಾರಿಸಿ, ತಮ್ಮ ಸ್ನೇಹಿತ ಶಿವಕುಮಾರ್ ಅವರ ಸಲಹೆಯಂತೆ ಥೈವಾನ್​ ಲೈಟ್​ ಪಿಂಕ್​ ತಳಿಯ ಗಿಡಗಳನ್ನು ಛತ್ತೀಸ್​ಘಡದಿಂದ ತಂದಿದ್ದಾರೆ. ಮರೀಗೌಡರು ತಮ್ಮ ನಾಲ್ಕು ಎಕರೆ ಪ್ರದೇಶದಲ್ಲಿ ಕಳೆದ ಎರಡು ವರ್ಷಗಳ ಹಿಂದೆ ಸುಮಾರು 2000 ಸೀಬೆ ಸಸಿಗಳನ್ನು ಸಸಿಯೊಂದಕ್ಕೆ ನೂರು ರೂಪಾಯಿ ಕೊಟ್ಟು ತಂದು ನಾಟಿ ಮಾಡಿದ್ದಾರೆ. ಎರಡು ವರ್ಷಗಳ ಕಾಲ ಆರೈಕೆ ಮಾಡಿದ ನಂತರ ಕಳೆದ ನಾಲ್ಕು ತಿಂಗಳಿಂದ ಸೀಬೆ ಫಸಲು ಕೊಡಲು ಆರಂಭಿಸಿದೆ. ಇವರ ನಿರೀಕ್ಷೆಗೂ ಮೀರಿದ ಬೆಳೆ ಬಂದಿದ್ದು, ಉತ್ತಮ ಆದಾಯ ತಂದು ಕೊಡುತ್ತಿದೆ.

ಕಳೆದ ನಾಲ್ಕು ತಿಂಗಳಲ್ಲಿ ತಿಂಗಳಿಗೆ ಸರಾಸರಿ ಒಂದು ಲಕ್ಷ ರೂಪಾಯಿಯಷ್ಟು ಆದಾಯ ಬರುತ್ತಿದೆ. ಸದ್ಯ ಖರೀದಿದಾರರು ತಮ್ಮ ತೋಟದಲ್ಲಿ ಕೆಜಿ ಸೀಬೆ ಹಣ್ಣಿಗೆ 60 ರೂಪಾಯಿ ಹಣಕೊಟ್ಟು ಖರೀದಿ ಮಾಡುತ್ತಿದ್ದಾರೆ. ಹಾಗಾಗಿ ಒಳ್ಳಯ ಆದಾಯ ತಂದುಕೊಡುತ್ತಿದೆ ಅನ್ನೋದು ಮರೀಗೌಡರ ಮಾತು.

ಇದನ್ನೂ ಓದಿ: ಚಂದ್ರಯಾನ 3 ಯಶಸ್ವಿ; ವಿಭಿನ್ನವಾಗಿ ಇಸ್ರೋಗೆ ಅಭಿನಂದನೆ ಸಲ್ಲಿಸಿದ ಉಪನ್ಯಾಸಕ; ಹೇಗೆ ಅಂತೀರಾ? ಇಲ್ಲಿದೆ ವಿಡಿಯೋ

ಇನ್ನು ಕೊಂಡರಾಜನಹಳ್ಳಿ ಗ್ರಾಮದ ಮರೀಗೌಡ ಅವರು ತಮ್ಮ ನಾಲ್ಕು ಎಕರೆ ಪ್ರದೇಶದಲ್ಲಿ ಥೈವಾನ್​ ಲೈಟ್​ ಪಿಂಕ್​ ತಳಿಯ ಸೀಬೆಯನ್ನು ಬೆಳೆದಿದ್ದಾರೆ. ಸದ್ಯ ಎರಡು ವರ್ಷಗಳ ಕಾಲ ಸೀಬೆ ಗಿಡಗಳನ್ನು ನಿರ್ವಹಣ ಮಾಡಿದ ನಂತರ ಈಗ ಫಸಲು ಬರಲಾರಂಭಿಸಿದೆ. ಸಾಲಿನಿಂದ ಸಾಲಿಗೆ ಹತ್ತು ಅಡಿ ಹಾಗೂ ಗಿಡದಿಂದ ಗಿಡಕ್ಕೆ ಆರು ಅಡಿ ಅಂತರದಲ್ಲಿ ಸಸಿಯನ್ನು ನೆಡಲಾಗಿದೆ. ನಂತರ ನಾಲ್ಕು ಎಕರೆ ಸರಾಸರಿ 2000 ಸಸಿಗಳನ್ನು ತಂದು ನೆಡಲಾಗಿದೆ. ಸೀಬೆ ಸಸಿ ಬೆಳೆಯುತ್ತಿದ್ದಂತೆ, ಸೀಬೆ ಸಸಿಗಳ ಸಾಲಿನ ಮಧ್ಯದಲ್ಲಿ, ಟೊಮ್ಯಾಟೋ, ಎಲೆಕೋಸು, ಆಲೂಗಡ್ಡೆ, ಸೇರಿದಂತೆ ವಿವಿದ ಬೆಳೆಗಳನ್ನು ಬೆಳೆಯಲಾಗುತ್ತಿದೆ. ಈ ಮೂಲಕ ಉತ್ತಮ ಮಿಶ್ರ ಬೇಸಾಯವನ್ನು ಕೂಡಾ ಮರೀಗೌಡರು ಮಾಡುತ್ತಿದ್ದಾರೆ. ಈಮೂಲಕ ಸೀಬೆಯಿಂದ ನಿರಂತ ಬೆಳೆ ಬರುತ್ತಿದ್ದು ನಿತ್ಯದ ಆದಾಯ ಬರುತ್ತಿದ್ದರೆ. ಅದರ ಜೊತೆಗೆ ಮೂರು ತಿಂಗಳ ಅವದಿಯಲ್ಲಿ ಒಳ್ಳೆಯ ಆದಾಯ ತರುವ ವಿವಿದ ಬೆಳೆಗಳನ್ನು ಬೆಳೆಯುವ ಮೂಲಕ ಉತ್ತಮ ಆದಾಯ ಬರುತ್ತಿದೆ. ಈ ಮೂಲಕ ರೈತರು ಒಂದೇ ರೀತಿಯ ಬೆಳೆಗಳನ್ನು ಬೆಳೆದು ನಷ್ಟ ಅನುಭವಿಸುವ ಬದಲು ಈರೀತಿಯ ಉತ್ತಮ ಆದಾಯ ತರುವ ಬೆಳೆಗಳನ್ನು ಬೆಳೆಯಬೇಕು ಅನ್ನೋದು ಮರೀಗೌಡ ಕುಟುಂಬಸ್ಥರ ಮಾತು. ನಿರ್ವಹಣೆ ಆರಂಭದಲ್ಲಿ ಕಷ್ಟು ಎನಿಸಿದರು ನಂತರದಲ್ಲಿ ಇದು ನಿರ್ವಹಣೆಕೂಡಾ ಸುಲಭವಾಗುತ್ತದೆ ಅನ್ನೋದು ಇವರ ಅನುಭವ.

ಸೀಬೆಹಣ್ಣು, ಅದು ಬಡವರ ಸೇಬು ಅನ್ನೋ ಮಾತಿದೆ. ಆದರೆ ಉತ್ತಮ ಕೊಬ್ಬಿನಾಂಶ, ಹಲವು ವಿಟಮಿನ್ಸ್​ಗಳನ್ನು ಹೊಂದಿರುವ ಸೀಬೆ ನಿಜಕ್ಕೂ ಆರೋಗ್ಯದ ದೃಷ್ಟಿಯಿಂದಲೂ ಕೂಡಾ ಉಪಯುಕ್ತ. ಅಷ್ಟೇ ಯಾಕೆ ಅದನ್ನು ಬೆಳೆಯುವ ರೈತರಿಗೂ ಕೂಡಾ ಒಳ್ಳೆಯ ಆದಾಯದ ಮೂಲ ಅನ್ನೋದರಲ್ಲಿ ಎರಡು ಮಾತಿಲ್ಲ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಸರ್ಕಾರೀ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ಸಿಎಸ್​ಗೆ ಸಿಎಂ ಸೂಚನೆ
ಸರ್ಕಾರೀ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ಸಿಎಸ್​ಗೆ ಸಿಎಂ ಸೂಚನೆ
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಬಿಗ್​ ಬಾಸ್ ಮನೆಗೆ ಬಂದ ಗೌತಮಿ ಜಾದವ್ ಪತಿ​; ಹೇಗಿತ್ತು ಮಂಜು ರಿಯಾಕ್ಷನ್?
ಬಿಗ್​ ಬಾಸ್ ಮನೆಗೆ ಬಂದ ಗೌತಮಿ ಜಾದವ್ ಪತಿ​; ಹೇಗಿತ್ತು ಮಂಜು ರಿಯಾಕ್ಷನ್?
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು