ಸೋನಿಯಾ ಗಾಂಧಿ ಇಡಿ ವಿಚಾರಣೆ ಖಂಡಿಸಿ ಕೋಲಾರದಲ್ಲಿ ಪ್ರತಿಭಟನೆ: ಕಾಂಗ್ರೆಸ್​ ನಾಯಕರ ಗುಂಪುಗಾರಿಕೆ ಬಹಿರಂಗ

| Updated By: ಗಂಗಾಧರ​ ಬ. ಸಾಬೋಜಿ

Updated on: Jul 22, 2022 | 1:41 PM

ಈನಿಟ್ಟಿನಲ್ಲಿ ಕೆಹೆಚ್​ ಮುನಿಯಪ್ಪ ಹಾಗೂ ರಮೇಶ್​ ಕುಮಾರ್ ಗುಂಪುಗಳ ನಡುವೆ ಪ್ರತಿಭಟನೆಯಲ್ಲೂ ಗುಂಪುಗಾರಿಕೆಗೆ ತೋರಿಸಿದ್ದಾರೆ.

ಸೋನಿಯಾ ಗಾಂಧಿ ಇಡಿ ವಿಚಾರಣೆ ಖಂಡಿಸಿ ಕೋಲಾರದಲ್ಲಿ ಪ್ರತಿಭಟನೆ: ಕಾಂಗ್ರೆಸ್​ ನಾಯಕರ ಗುಂಪುಗಾರಿಕೆ ಬಹಿರಂಗ
ಸೋನಿಯಾ ಗಾಂಧಿ ಇಡಿ ವಿಚಾರಣೆ ಖಂಡಿಸಿ ಪ್ರತಿಭಟನೆ
Follow us on

ಕೋಲಾರ: ಜಿಲ್ಲಾ ಕಾಂಗ್ರೇಸ್​ನಲ್ಲಿನ ಗುಂಪುಗಾರಿಕೆ ಹಾಗೂ ಒಳ ಜಗಳ ಬೀದಿಗೆ ಬಿದ್ದಿದೆ. ಇವತ್ತು ಸೋನಿಯಾ ಗಾಂಧಿ (Sonia Gandhi) ಯವರನ್ನು ಇಡಿ ವಿಚಾರಣೆ ಖಂಡಿಸಿ ಇಂದು ಪ್ರತಿಭಟನೆಗೆ ಕರೆ ನೀಡಲಾಗಿತ್ತು. ಈನಿಟ್ಟಿನಲ್ಲಿ ಕೆಹೆಚ್​ ಮುನಿಯಪ್ಪ ಹಾಗೂ ರಮೇಶ್​ ಕುಮಾರ್ ಗುಂಪುಗಳ ನಡುವೆ ಪ್ರತಿಭಟನೆಯಲ್ಲೂ ಗುಂಪುಗಾರಿಕೆಗೆ ತೋರಿಸಿದ್ದಾರೆ. ಕೋಲಾರ ನಗರದ ಗಾಂಧಿವನದಲ್ಲಿ ಕೆಹೆಚ್​ ಮುನಿಯಪ್ಪ ಗುಂಪು ಪ್ರತಿಭಟನೆ ಮಾಡಿದರೆ, ಮತ್ತೊಂದು ರಮೇಶ್​ ಕುಮಾರ್​ ಅವರ ಗುಂಪು ಗಾಂಧಿವನದ ಹೊರಗೆ ಕುಳಿತು ಪ್ರತಿಭಟನೆ ಮಾಡುವ ಮೂಲಕ ನಾವು ಅವರು ಬೇರೆ ಬೇರೆ ಎಂದು ತೋರ್ಪಡಿಸಿಕೊಂಡಿದ್ದಾರೆ. ಇನ್ನು ಕೆಹೆಚ್​ ಮುನಿಯಪ್ಪ ಗುಂಪಿನಲ್ಲಿ ಟಿ.ಬಿ.ಜಯಚಂದ್ರ ಹಾಗೂ ಕೆಲವು ಸ್ಥಳೀಯ ಕಾಂಗ್ರೇಸ್​ ಮುಖಂಡರು ಭಾಗಿಯಾಗಿದ್ದರೆ, ಇತ್ತ ರಮೇಶ್​ ಕುಮಾರ್​ ಗುಂಪಿನಲ್ಲಿ ಜಿಲ್ಲೆಯ ಕಾಂಗ್ರೇಸ್​ ಶಾಸಕರುಗಳು ಹಾಗೂ ಮಾಜಿ ಶಾಸಕರುಗಳು ಕುಳಿತುಕೊಂಡು ಪ್ರತಿಭಟನೆಯಲ್ಲೂ ತಮ್ಮ ಗುಂಪುಗಾರಿಕೆ ಹಾಗೂ ಜಳಜಗಳವನ್ನು ಅದ್ದೂರಿಯಾಗಿಯೇ ತೋರ್ಪಡಿಸಿಕೊಂಡಿದ್ದಾರೆ.

ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಹ್ಲಿ ನೇತೃತ್ವದಲ್ಲಿ ಪ್ರತಿಭಟನೆ

ತುಮಕೂರು: ಜಿಲ್ಲೆಯ ಕಾಂಗ್ರೇಸ್ ವತಿಯಿಂದ ರಾಷ್ಟೀಯ ನಾಯಕಿ ಸೋನಿಯ ಗಾಂಧಿ ಮೇಲೆ ಇಡಿ ವಿಚಾರಣೆ ಖಂಡಿಸಿ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಹ್ಲಿ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ಮಾಡಲಾಯಿತು. ಕೇಂದ್ರ ಸರ್ಕಾರದ ವಿರುದ್ದ ಘೋಷಣೆ ಕೂಗುತ್ತಾ ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶ ಹೊರಹಾಕಿದರು. ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡರಾದ, ಪಾವಗಡ ಶಾಸಕ ವೆಂಕಟರವಣಪ್ಪ, ಮಾಜಿ ಶಾಸಕ ರಫೀಕ್ ಅಹಮದ್ ಸೇರಿದಂತೆ ಹಲವು ಕಾಂಗ್ರೆಸ್ ಕಾರ್ಯಕರ್ತರು ಭಾಗಿಯಾಗಿದ್ದರು.

ಬಿಜೆಪಿ ಕಾಂಗ್ರೆಸ್ ನಾಯಕರನ್ನೇ ಟಾರ್ಗೆಟ್ ಮಾಡುತ್ತಿದೆ

ವಿಜಯನಗರ: ಜಿಲ್ಲೆಯಲ್ಲಿ ಕೇಂದ್ರ ಸರ್ಕಾರ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ ಮಾಡಿದ್ದು, ಹೊಸಪೇಟೆಯ ಗಾಂಧಿ ಸರ್ಕಲ್​ನಿಂದ ಡಿಸಿ ಆಫೀಸ್​ವರೆಗೆ ಬೃಹತ್ ಪ್ರತಿಭಟನೆ ಮಾಡಲಾಯಿತು. ಕಂಪ್ಲಿ ಶಾಸಕ ಗಣೇಶ್, ಹಗರಿಬೊಮ್ಮನಹಳ್ಳಿ ಶಾಸಕ ಭೀಮಾನಾಯ್ಕ್ ,ರಾಜಶೇಖರ್ ಹಿಟ್ನಾಳ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಇಡಿ, ಐಟಿ ಬಳಸಿಕೊಂಡು ಕೈ ನಾಯಕರ ಮೇಲೆ ದೌರ್ಜನ್ಯ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸೋನಿಯಾ ಗಾಂಧಿಗೆ ಸುಖಾಸುಮ್ಮನೆ ಕಿರುಕುಳ ನೀಡಲಾಗುತ್ತಿದೆ. ರಾಜಕೀಯ ವಿರೋಧಿಗಳ ವಿನಾಶಕ್ಕೆ ಇಡಿ ಬಳಕೆ ಮಾಡಲಾಗುತ್ತಿದೆ. ಬಿಜೆಪಿಯ ಕುತಂತ್ರಕ್ಕೆ ಕಾಂಗ್ರೆಸ್ ಬಗ್ಗುವುದಿಲ್ಲ ಜಗ್ಗುವುದಿಲ್ಲ. ಯಂಗ್ ಇಂಡಿಯಾ ಪ್ರಕರಣದಲ್ಲಿ ಕೇಂದ್ರ ಸರ್ಕಾರ ತೊಂದರೆ ಕೊಡುತ್ತಿದೆ. ಬಿಜೆಪಿ ಕಾಂಗ್ರೆಸ್ ನಾಯಕರನ್ನೇ ಟಾರ್ಗೆಟ್ ಮಾಡುತ್ತಿದೆ. ಸಿದ್ದರಾಮಯ್ಯ ನೇತೃತ್ವದಲ್ಲಿ ಬಿಜೆಪಿ ಮುಕ್ತ ರಾಜ್ಯ ಮಾಡುತ್ತೇವೆ ಎಂದು ಪ್ರತಿಭಟನೆಯಲ್ಲಿ ಕೈ ನಾಯಕರು ಆಕ್ರೋಶ ವ್ಯಕ್ತಪಡಿಸಿದರು.