ಗಣೇಶ ಪ್ರತಿಷ್ಠಾಪನೆಯಲ್ಲೂ ಪ್ರತಿಭಟನೆ ಸಂದೇಶ: ಸಂಸ್ಕೃತಿ ಸಂಪ್ರದಾಯ ಬೆಳೆಸುವ ಪ್ರಯತ್ನ!

| Updated By: ಗಂಗಾಧರ​ ಬ. ಸಾಬೋಜಿ

Updated on: Sep 24, 2023 | 7:55 PM

ಕೋಲಾರ ಜಿಲ್ಲೆಗೆ ಶಾಶ್ವತ ಕುಡಿಯುವ ನೀರಿಗಾಗಿ ಅನ್ನೋ ಘೋಷವಾಕ್ಯದೊಂದಿಗೆ ಇಲ್ಲಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ ವಿವಿಧ ದೇಶಭಕ್ತಿಯ, ನಮ್ಮ ಸಂಸ್ಕೃತಿ ಪರಂಪರೆಯನ್ನು ಉಳಿಸಿ ಬೆಳೆಸುವ ಅಭಿಯಾನದ ರೀತಿಯಲ್ಲಿ ಗಣೇಶೋತ್ಸವವನ್ನು ಆಚರಣೆ ಮಾಡಲಾಗುತ್ತಿದೆ. ಆ ಮೂಳಕ ಗಣೇಶನ ಪ್ರತಿಷ್ಠಾಪನೆಯಲ್ಲೂ ಪ್ರತಿಭಟನೆ ಸಂದೇಶ ಮತ್ತು ಸಂಸ್ಕೃತಿ ಸಂಪ್ರದಾಯ ಬೆಳೆಸುವ ಪ್ರಯತ್ನ ಮಾಡಲಾಗುತ್ತಿದೆ.

ಗಣೇಶ ಪ್ರತಿಷ್ಠಾಪನೆಯಲ್ಲೂ ಪ್ರತಿಭಟನೆ ಸಂದೇಶ: ಸಂಸ್ಕೃತಿ ಸಂಪ್ರದಾಯ ಬೆಳೆಸುವ ಪ್ರಯತ್ನ!
ಅಖಂಡಭಾರತ ವಿನಾಕಯ ಮಹಾಸಭಾ
Follow us on

ಕೋಲಾರ, ಸೆಪ್ಟೆಂಬರ್​ 24: ಅಲ್ಲಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಗಿದೆ ಆದರೂ ಅಲ್ಲೊಂದು ಮೌನ ಹೋರಾಟವನ್ನು ಬಿಂಬಿಸಲಾಗುತ್ತಿದೆ. ಅದರ ಜೊತೆಗೆ ದೇಶದ ಸಂಸ್ಕೃತಿ, ಸಂಪ್ರದಾಯವನ್ನು ಬಿಂಬಿಸುವ ಹಾಗೂ ದೇಶಭಕ್ತಿಯನ್ನು ಬಿತ್ತುವ ವಿಭಿನ್ನ ಕೆಲಸವೂ ನಡೆಯುತ್ತಿದೆ. ಅದರ ಜೊತೆ ಜೊತೆಗೆ ಕಲರ್​ಪುಲ್​ ಸ್ವರ್ಧೆಯೂ ಕೂಡಾ ನೂರಾರು ಜನರನ್ನು ಆಕರ್ಶಿಸಿದೆ. ಕೋಲಾರ (Kolar) ನಗರದ ಜಿಲ್ಲಾಸ್ಪತ್ರೆಯ ಮುಂಬಾಗದಲ್ಲಿ ಅಖಂಡಭಾರತ ವಿನಾಕಯ ಮಹಾಸಭಾ ಕಳೆದ ಹತ್ತುವರ್ಷಗಳಿಂದ ಗಣೇಶ ಹಬ್ಬವನ್ನು ವಿಭಿನ್ನವಾಗಿ ಅದೊಂದು ಜಿಲ್ಲೆಯ ಒಳಿತಿಗಾಗಿ ಹಬ್ಬದ ಆಚರಣೆಯನ್ನು ಹೋರಾಟದ ರೀತಿಯಲ್ಲಿ ಆಚರಿಸುತ್ತಾ ಬಂದಿದೆ.

ಕೋಲಾರ ಜಿಲ್ಲೆಗೆ ಶಾಶ್ವತ ಕುಡಿಯುವ ನೀರಿಗಾಗಿ ಅನ್ನೋ ಘೋಷವಾಕ್ಯದೊಂದಿಗೆ ಇಲ್ಲಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ ವಿವಿಧ ದೇಶಭಕ್ತಿಯ, ನಮ್ಮ ಸಂಸ್ಕೃತಿ ಪರಂಪರೆಯನ್ನು ಉಳಿಸಿ ಬೆಳೆಸುವ ಅಭಿಯಾನದ ರೀತಿಯಲ್ಲಿ ಗಣೇಶೋತ್ಸವವನ್ನು ಆಚರಣೆ ಮಾಡಲಾಗುತ್ತಿದೆ. ಈ ನಿಟ್ಟಿನಲ್ಲಿ ಇಂದೂ ಕೂಡಾ ನೂರಾರು ಜನರಿಗೆ ರಂಗೋಲಿ ಸ್ಪರ್ಧೆಯನ್ನು ಆಯೋಜನೆ ಮಾಡಲಾಗಿತ್ತು. ಈ ಸ್ವರ್ಧೆಯಲ್ಲಿ ಪುರುಷರು ಮಹಿಳೆಯರು ಭೇದವಿಲ್ಲದೆ ಪಾಲ್ಗೊಂಡಿದ್ದರು. ಅಲ್ಲದೆ ಕೆಲವು ವಿಶೇಷಚೇತನರು ಕೂಡಾ ರಂಗೋಲಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

ಇಲ್ಲಿ ವಿಶೇಷವಾಗಿ ಅಖಂಡ ಭಾರತದ ರಂಗೋಲಿ, ಕಾಂತಾರದೈವ, ಚಂದ್ರಯಾನ, ಸೂರ್ಯಯಾನದ ರಂಗೋಲಿ, ವಿವಿದ ಗಣೇಶ ಮೂರ್ತಿಯ ಚಿತ್ರ, ಜೊತೆಗೆ ದೇಶಾಭಿಮಾನವನ್ನು ಬಿಂಬಿಸುವ ಹಾಗೂ ನಮ್ಮ ಸಂಸ್ಕೃತಿಯನ್ನು ಬಿಂಬಿಸುವ ಹಲವು ಚಿತ್ರಗಳು ರಂಗೋಲಿ ಸ್ಪರ್ಧೆಯಲ್ಲಿ ಎಲ್ಲರ ಗಮನ ಸೆಳೆಯಿತು. ಈ ಮೂಲಕ‌ ಜನರನ್ನು ಉತ್ತಮ ಕೆಲಸಕ್ಕೆ ಒಗ್ಗೂಡಿಸುವುದು ನಮ್ಮ ಉದ್ದೇಶ ಅನ್ನೋದು ಆಯೋಜಕ ಓಂಶಕ್ತಿ ಚಲಪತಿ ಅವರ ಮಾತು.

ಇದನ್ನೂ ಓದಿ: Cultural Harmony: ಕೋಲಾರದಲ್ಲಿ ಭಜರಂಗದಳ, ವಿಶ್ವಹಿಂದೂ ಪರಿಷತ್​ ಸ್ಥಾಪಿತ ಗಣೇಶನಿಗೆ ಅಕ್ಬರ್​ ಗಾನ -ಸೌಹಾರ್ದತೆ ಮೆರೆದು ಮಾದರಿಯಾದ ಸಂಘಟನೆಗಳು!

ವಿಶೇವಾಗಿ ರಂಗೋಲಿ ಸ್ಪರ್ಧೆಯಲ್ಲಿ ಹಲವು ಮಹಿಳೆಯರು, ಪುರುಷರು, ಮಕ್ಕಳು ಕೂಡಾ ಭಾಗವಹಿಸಿ ರಂಗೋಲಿ ಬಿಡಿಸಿದರು, ನೂರಕ್ಕೂ ಹೆಚ್ಚು ಜನ ಈ ರಂಗೋಲಿ ಸ್ಪರ್ಧೆಯಲ್ಲಿ ಬಹಳ ಹುರುಪಿನಿಂದ ಭಾಗವಹಿಸಿ ವಿವಿಧ ರಂಗೋಲಿ ಬಿಡಿಸಿದರು. ಅಖಂಡ ಭಾರತ ವಿನಾಯಕ ಮಹಾಸಭಾ ಉದ್ದೇಶ ಜಿಲ್ಲೆಯ ಕುಡಿಯುವ ನೀರಿನ ಸಮಸ್ಯೆಯ ಬಗ್ಗೆ ಜನರಿಗೆ ಅರಿವು ಮೂಡಿಸುವುದು, ದೇಶಾಭಿಮಾನ ಬೆಳೆಸುವುದು ಹಾಗೂ ನಮ್ಮ ಸಂಸ್ಕೃತಿ ಸಂಪ್ರದಾಯ ಬೆಳೆಸುವುದು ಇದರ ಉದ್ದೇಶ ಈ ನಿಟ್ಟಿನಲ್ಲಿ ಅಖಂಡ ಭಾರತ ವಿನಾಯಕ ಮಹಾಸಭಾದ ಯುವಕರ ತಂಡ ಕಳೆದ ಹತ್ತುವರ್ಷಗಳಿಂದ ಈ ರೀತಿ ಕೆಲಸಗಳನ್ನು ಮಾಡಿಕೊಂಡು ಬಂದಿದೆ.

ಇದನ್ನೂ ಓದಿ: ಗಣೇಶ ಚತುರ್ಥಿ 2023 : ಬೊಜ್ಜು ಗಣಪನಿಗೆ ಚಿನ್ನ-ಬೆಳ್ಳಿ ಮೋದಕಗಳು! ಖರೀದಿಗೆ ಕ್ಯೂ ನಿಂತ ಭಕ್ತ ಗಣ! ಬೆಲೆ ಎಷ್ಟು ಗೊತ್ತಾ?

ಜೊತೆಗೆ ಗಣೇಶನನ್ನು ಇಲ್ಲಿ ಪ್ರತಿಷ್ಠಾಪನೆ ಮಾಡಿದಾಗ ದೇಶ ಭಕ್ತರು, ಸೈನಿಕರು, ಪರಿಸರ ಪ್ರೇಮಿಗಳನ್ನು ಕರೆದು ವೇದಿಕೆಯಲ್ಲಿ ಸನ್ಮಾನ ಮಾಡುವ ಮೂಲಕ ಸೇವಕರಿಗೆ ಪ್ರೇರೇಪಣೆ ನೀಡುತ್ತಿದ್ದಾರೆ. ಇನ್ನು ರಂಗೋಲಿ ಸ್ಪರ್ಧೆಯಲ್ಲೂ ಭಾಗವಹಿಸುವವರಿಗೂ ಅತ್ಯಾಕರ್ಷಕ ಬಹುಮಾನಗಳನ್ನು ಇಡುವ ಮೂಲಕ ಕ್ರೀಡಾಸ್ಪೂರ್ತಿಯನ್ನು ಇಲ್ಲಿ ತುಂಬಲಾಗಿತ್ತು. ಈನಿಟ್ಟಿನಲ್ಲಿ ಹಲವಾರು ಜನರು ರಂಗೋಲಿ ಸ್ಪರ್ಧೆಯಲ್ಲಿ ಭಾಗವಹಿಸಿ ಸಂತೋಷಪಟ್ಟರು.

ಗಣೇಶ ಮೂರ್ತಿಯನ್ನು ಪ್ರತಿಷ್ಠಾಪನೆ ಅನ್ನೋದು ಕೇವಲ ಹಬ್ಬವನ್ನಾಗಿ ಮಾತ್ರ ಆಚರಣೆ ಮಾಡದೆ ಇದೊಂದು ಹೋರಾಟದ ಸಂಕೇತವಾಗಿ ಜನರನ್ನು ನಿರ್ದಿಷ್ಟ ಸಮಸ್ಯೆಯೊಂದರ ಬಗ್ಗೆ ಅರಿವು ಮೂಡಿಸುವ ಮೂಲಕ ನಮ್ಮ ಸಂಕಷ್ಟದಲ್ಲಿ ಗಣೇಶನನ್ನೂ ಭಾಗಿ ಮಾಡಿಕೊಂಡು ಹಬ್ಬ ಆಚರಣೆ ಮಾಡುತ್ತಿರುವ ಅಖಂಡಭಾರತ ವಿನಾಯಕ ಮಹಾಸಭಾ ಯುವಕರ ತಂಡದ ಪ್ರಯತ್ನ ನಿಜಕ್ಕೂ ಶ್ಲಾಘನೀಯ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 7:54 pm, Sun, 24 September 23