ಮುಳಬಾಗಿಲು: ಹೆಲಿಕಾಪ್ಟರ್ ಮೂಲಕ ತಂದೆಯ ಸಮಾಧಿಗೆ ವಾರ್ಷಿಕ ಪೂಜೆ ಸಲ್ಲಿಸಿ, ಪಿತೃ ಪ್ರೇಮ ಮೆರೆದ ಪುತ್ರ
ನಮ್ಮ ತಂದೆ ನಮ್ಮನ್ನು ತುಂಬಾ ಚೆನ್ನಾಗಿ ನೋಡಿಕೊಂಡಿದ್ದಾರೆ. ಯಾವುದಕ್ಕೂ ಕಿಂಚಿತ್ತೂ ಲೋಪವಾಗದಂತೆ ನೋಡಿಕೊಂಡಿದ್ದಾರೆ. ಹಾಗಾಗಿ ಅವರು ಸತ್ತ ಮೇಲೂ ಎಲ್ಲೋ ಒಂದು ಕಡೆ ನಮ್ಮನ್ನೆಲ್ಲ ನೋಡುತ್ತಾ ಇರುತ್ತಾರೆ. ಅದಕ್ಕಾಗಿ ಅವರಿಗೆ ಸಂತೋಷ ಪಡಿಸಲು ಹೀಗೆ ವಿಭಿನ್ನವಾಗಿ ಮಾಡಲಾಗಿದೆ ಎಂದು ಪುತ್ರ ಲೋಕೇಶ್ ಹೇಳಿದ್ದಾರೆ.
ಕೋಲಾರ: ವ್ಯಕ್ತಿಯೊಬ್ಬರು ತಮ್ಮ ತಂದೆಯವರ ಸಮಾಧಿಗೆ ಹೆಲಿಕಾಪ್ಟರ್ ಮೂಲಕ ಪುಷ್ಪನಮನ ಸಲ್ಲಿಸಿ ಪೂಜೆ ಸಲ್ಲಿಸಿ ಅಭಿಮಾನ ಮೆರೆದಿರುವ ಘಟನೆ ಕೋಲಾರದಲ್ಲಿ ನಡೆದಿದೆ. ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನ ಕೊತ್ತೂರು ರಾಮಾಪುರ ಗ್ರಾಮದ ಲೋಕೇಶ್ ಎಂಬುವರು ಹೀಗೆ ವಿಭಿನ್ನವಾಗಿ ಪಿತೃ ಪ್ರೇಮ ಸಂದಾಯ ಮಾಡಿದವರು. ಒಂದು ವರ್ಷದ ಹಿಂದೆಯಷ್ಟೇ ಮೃತಪಟ್ಟಿದ್ದ ತಮ್ಮ ತಂದೆ ಗೋವಿಂದ ರಾಜ್ ಎಂಬುವರ ಸಮಾಧಿಗೆ ಹೆಲಿಕಾಪ್ಟರ್ ಮೂಲಕ ಅವರು ಪುಷ್ಪನಮನ ಸಲ್ಲಿಸಿದ್ದಾರೆ. ಲೋಕೇಶ್ ಅವರು ಮಾಜಿ ಶಾಸಕ ಕೊತ್ತೂರು ಮಂಜುನಾಥ್ ಅವರ ಸಂಬಂಧಿ.
ತಮ್ಮ ತಂದೆ ಮೃತಪಟ್ಟು ಒಂದು ವರ್ಷವಾಗಿದ್ದು ಮೊದಲನೇ ವರ್ಷದ ಪುಣ್ಯ ತಿಥಿಯ ಅಂಗವಾಗಿ ಇಂದು ಹೆಲಿಕಾಪ್ಟರ್ ಮೂಲಕ ಪುಷ್ಪರ್ಚಾನೆ ಹಾಗೂ ನೂರಾರು ಜನರಿಗೆ ಅನ್ನದಾನ ಮಾಡಿಸಿದ್ದಾರೆ. ಲೋಕೇಶ್ ಮೂಲತಃ ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದು ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಆದರೆ ತಮ್ಮ ಹುಟ್ಟೂರಿನಲ್ಲಿ ಸುಮಾರು 25 ಲಕ್ಷ ಖರ್ಚು ಮಾಡಿ ತಂದೆಯ ಬೃಹತ್ ಸಮಾಧಿಯನ್ನು ಕಟ್ಟಿಸಿದ್ದಾರೆ.
ಇಂದು ಒಂದು ವರ್ಷದ ಅಂಗವಾಗಿ ವಿಶೇಷ ಆಚರಣೆ ಮಾಡುವ ಸಲುವಾಗಿ ಹೆಲಿಕಾಪ್ಟರ್ ಮೂಲಕ ಪುಷ್ಪ ನಮನ ಸಲ್ಲಿಸಲಾಯಿತು ಎಂದು ಪುತ್ರ ಲೋಕೇಶ್ ಹೇಳಿದರು. ನಮ್ಮ ತಂದೆ ನಮ್ಮನ್ನು ತುಂಬಾ ಚೆನ್ನಾಗಿ ನೋಡಿಕೊಂಡಿದ್ದಾರೆ. ಯಾವುದಕ್ಕೂ ಕಿಂಚಿತ್ತೂ ಲೋಪವಾಗದಂತೆ ನೋಡಿಕೊಂಡಿದ್ದಾರೆ. ಹಾಗಾಗಿ ಅವರು ಸತ್ತ ಮೇಲೂ ಎಲ್ಲೋ ಒಂದು ಕಡೆ ನಮ್ಮನ್ನೆಲ್ಲ ನೋಡುತ್ತಾ ಇರುತ್ತಾರೆ. ಅದಕ್ಕಾಗಿ ಅವರಿಗೆ ಸಂತೋಷ ಪಡಿಸಲು ಹೀಗೆ ವಿಭಿನ್ನವಾಗಿ ಮಾಡಲಾಗಿದೆ ಎಂದು ಪುತ್ರ ಲೋಕೇಶ್ ಹೇಳಿದ್ದಾರೆ.