ಹಾಲಿನ ಡೇರಿಯಲ್ಲಿ ಕಾಂಗ್ರೆಸ್ ಹಾಗೂ ವರ್ತೂರ್ ಪ್ರಕಾಶ್ ಬೆಂಬಲಿಗರ ಮಾರಾಮಾರಿ: ನಾಲ್ವರಿಗೆ ಚಾಕು ಇರಿತ
ಹಾಲಿನ ಗುಣಮಟ್ಟ ಪರೀಕ್ಷೆಯಲ್ಲಿ ರಾಜಕೀಯ ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದಕ್ಕೆ ವರ್ತೂರ್ ಪ್ರಕಾಶ್ ಬೆಂಬಲಿಗರು ಮತ್ತು ಕಾಂಗ್ರೆಸ್ ಬೆಂಬಲಿಗರ ನಡುವೆ ಮಾರಾಮಾರಿಯಾಗಿದೆ.
ಕೋಲಾರ: ಕೋಲಾರ ತಾಲೂಕಿನ ಹೂಹಳ್ಳಿಯ ಹಾಲಿನ ಡೇರಿಯಲ್ಲಿ ಕಾಂಗ್ರೆಸ್ ಹಾಗೂ ವರ್ತೂರ್ ಪ್ರಕಾಶ್ ಬೆಂಬಲಿಗರ ಮಧ್ಯೆ ಮಾರಾಮಾರಿಯಾಗಿದೆ. ಘಟನೆಯಲ್ಲಿ ನಾಲ್ವರಿಗೆ ಚಾಕು ಇರಿತವಾಗಿದ್ದು ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಗ್ರಾಮದಲ್ಲಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.
ಹಾಲಿನ ಡೈರಿ ನಿರ್ದೇಶಕ ಮಂಜುನಾಥ್ ಹಾಲಿನ ಗುಣಮಟ್ಟ ಪರೀಕ್ಷೆಯಲ್ಲಿ ರಾಜಕೀಯ ಮಾಡುತ್ತಿದ್ದಾರೆ ಎಂದು ಆರೋಪಿಸಿ ಮಂಜುನಾಥ್ ಅವರನ್ನು ಪ್ರಶ್ನೆ ಮಾಡಿದ್ದಕ್ಕೆ ಗಲಾಟೆ ಶುರುವಾಗಿದೆ. ಈ ವೇಳೆ ವರ್ತೂರ್ ಪ್ರಕಾಶ್ ಬೆಂಬಲಿಗರು ಹಲ್ಲೆ ನಡೆಸಿದ್ದಾರೆ. ವಿಠೋಬ, ಪಾಂಡುರಂಗ, ಸುಬ್ರಮಣಿ ಎಂಬುವವರಿಗೆ ಚಾಕು ಇರಿಯಲಾಗಿದೆ. ಘಟನೆ ಸಂಬಂಧ ಕೋಲಾರ ಗ್ರಾಮಾಂತರ ಪೊಲೀಸರು ಐದು ಜನರನ್ನು ವಶಕ್ಕೆ ಪಡೆದಿದ್ದಾರೆ.
ದಸ್ತು ಬರಹಗಾರರ ಅಂಗಡಿಯೊಂದರಲ್ಲಿ ನಕಲಿ ನೋಟರಿ ಪತ್ತೆ
ಧಾರವಾಡ ತಾಲೂಕು ಕಚೇರಿ ಬಳಿಯ ದಸ್ತು ಬರಹಗಾರರ ಅಂಗಡಿಯೊಂದರಲ್ಲಿ ನಕಲಿ ನೋಟರಿ ಪತ್ತೆಯಾಗಿದೆ. ವಕೀಲರ ಸಂಘ ಖುದ್ದು ದಾಳಿ ಮಾಡಿ ದಾಖಲೆ ಜಪ್ತಿ ಮಾಡಿದೆ. ವಿವಿಧ ಯೋಜನೆಗಳಿಗೆ ನಕಲಿ ನೋಟರಿ ಮೂಲಕ ನಕಲಿ ದೃಢೀಕರಣ ಮಾಡಿರುವ ಅರ್ಜಿ, ಕೆಲ ದಾಖಲೆಗಳು ಸಿಕ್ಕಿವೆ. ಅಲ್ಲದೆ ದಸ್ತು ಬರಹಗಾರರ ಅಂಗಡಿಯಲ್ಲಿ ಅಧಿಕೃತ ವಕೀಲರ ನಕಲಿ ಸೀಲ್ ಹಾಗೂ ಸಹಿ ಬಳಸಿ ವಂಚನೆ ಮಾಡುತ್ತಿರುವುದು ಬಯಲಾಗಿದೆ. ಈ ಸಂಬಂಧ ದೂರು ನೀಡುವಂತೆ ತಹಶೀಲ್ದಾರ್ಗೆ ಮನವಿ ಮಾಡಲಾಗಿದ್ದು ವಕೀಲರ ಸಂಘದಿಂದಲೂ ಕಾನೂನು ಹೋರಾಟಕ್ಕೆ ನಿರ್ಧರಿಸಲಾಗಿದೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 9:01 am, Thu, 15 September 22