AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರತ್ಯೇಕ ಅಪಘಾತ: ಮೂರು ವಷರ್ದ ಬಾಲಕಿ ಸೇರಿ ಇಬ್ಬರು ಸಾವು, 12 ಮಕ್ಕಳಿಗೆ ಗಾಯ

ಕೋಲಾರ, ಮಂಡ್ಯ ಮತ್ತು ರಾಮನಗರದಲ್ಲಿ ಸಂಭವಿಸಿದ ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ 3 ವರ್ಷದ ಬಾಲಕಿ ಸೇರಿದಂತೆ ಇಬ್ಬರು ದುರ್ಮರಣಕ್ಕೀಡಾಗಿದ್ದಾರೆ. ಕೋಲಾರದಲ್ಲಿ ಅತಿವೇಗದ ಟೆಂಪೋ ಡಿಕ್ಕಿಯಾಗಿ ಬಾಲಕಿ ಸಾವು ಸಂಭವಿಸಿದರೆ, ಮಂಡ್ಯದಲ್ಲಿ ಶಾಲಾ ಬಸ್ ಮತ್ತು ಖಾಸಗಿ ಬಸ್ ನಡುವೆ ಡಿಕ್ಕಿ ಸಂಭವಿಸಿ 12 ಮಕ್ಕಳಿಗೆ ಗಾಯಗಳಾಗಿವೆ.

ಪ್ರತ್ಯೇಕ ಅಪಘಾತ: ಮೂರು ವಷರ್ದ ಬಾಲಕಿ ಸೇರಿ ಇಬ್ಬರು ಸಾವು, 12 ಮಕ್ಕಳಿಗೆ ಗಾಯ
ಮೃತ ಮಗು ಕ್ರುತ್ಯಾರೆಡ್ಡಿImage Credit source: Tv9 Kannada
ರಾಜೇಂದ್ರ ಸಿಂಹ ಬಿ.ಎಲ್. ಕೋಲಾರ
| Edited By: |

Updated on: Mar 27, 2026 | 9:33 PM

Share

ಕೋಲಾರ/ಮಂಡ್ಯ, ಮಾರ್ಚ್​​ 27: ಮಂಡ್ಯ, ಕೋಲಾರ ಮತ್ತು ರಾಮನಗರದಲ್ಲಿ ನಡೆದಿರುವ ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ ಮೂರು ವರ್ಷದ ಬಾಲಕಿ ಸೇರಿ ಇಬ್ಬರು ದಾರುಣವಾಗಿ ಮೃತಪಟ್ಟಿದ್ದಾರೆ. ಒಟ್ಟು 12 ಮಕ್ಕಳಳಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ. ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕಿನ ಅಡ್ಡಗಲ್ ಕೆರೆ ಕಟ್ಟೆ ಬಳಿ ಟೆಂಪೋ ಡಿಕ್ಕಿಯಾಗಿ ಬೈಕ್​​ನಲ್ಲಿದ್ದ ಮೂರು ವರ್ಷದ ಬಾಲಕಿ ಮೃತಪಟ್ಟಿದ್ದಾಳೆ. ಕ್ರುತ್ಯಾರೆಡ್ಡಿ ಸ್ಥಳದಲ್ಲೇ ದುರ್ಮರಣ ಹೊಂದಿದ್ದು, ಬೆಂಗಳೂರಿಗೆ ತರಕಾರಿ ತಲುಪಿಸುವ ತರಾತುರಿಯಲ್ಲಿ ಟೆಂಪೋ ಚಾಲಕನ ಅತಿ ವೇಗದ ಚಾಲನೆಯೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಬೈಕ್​​ನಲ್ಲಿದ್ದ ಯುವಕರಿಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಗಾಯಾಳುಗಳಿಗೆ ಶ್ರೀನಿವಾಸಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ರಾಯಲ್ಪಾಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಶಾಲಾ ಬಸ್ ಮತ್ತು ಖಾಸಗಿ ಬಸ್ ನಡುವೆ ಅಪಘಾತ

Mnd Accident

ಅಪಘಾತವಾದ ವಾಹನಗಳು

ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಸೋಮನಹಳ್ಳಿ ಗ್ರಾಮದ ಬಳಿ ನಡೆದಿರುವ ಶಾಲಾ ಬಸ್ ಮತ್ತು ಖಾಸಗಿ ಬಸ್ ನಡುವಿನ ಅಪಘಾತದಲ್ಲಿ ಶಾಲಾ ಬಸ್​​ನಲ್ಲಿದ್ದ 12 ಮಕ್ಕಳಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಶಾಲಾ ಬಸ್​​ ಮದ್ದೂರು ಪಟ್ಟಣದ ಮರಿಯಪ್ಪ ಶಾಲೆಗೆ ಸೇರಿದ್ದು ಎಂದು ತಿಳಿದುಬಂದಿದೆ. ಮಕ್ಕಳಿಗೆ ಮದ್ದೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು, ಆಸ್ಪತ್ರೆಗೆ ಜಿಲ್ಲಾಧಿಕಾರಿ ಹಾಗೂ ಎಸ್​ಪಿ ಭೇಟಿ ನೀಡಿ ಮಕ್ಕಳ ಆರೋಗ್ಯ ವಿಚಾರಿಸಿದ್ದಾರೆ. ಅಪಘಾತದ ಕುರಿತು ಮಾಹಿತಿ ಪಡೆದ ಅಧಿಕಾರಿಗಳು, ವಿದ್ಯಾರ್ಥಿಗಳಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಸೂಚನೆ ನೀಡಿದ್ದಾರೆ.ಮದ್ದೂರು ಸಂಚಾರಿ ಠಾಣೆಯಲ್ಲಿ ಈ ಬಗ್ಗೆ ಕೇಸ್​​ ದಾಖಲಾಗಿದೆ.

ಇದನ್ನೂ ಓದಿ: ಕೋಲಾರದಲ್ಲಿ ಕಲಬೆರಕೆ ಹಾಲು; ವರದಿಯಲ್ಲಿ ಆಘಾತಕಾರಿ ಅಂಶ

ಕಾರು ಅಪಘಾತ: ಯುವಕ ಸಾವು

ಚನ್ನಪಟ್ಟಣದ ಹರಿಸಂದ್ರ ಕ್ರಾಸ್ ಬಳಿ ನಡೆದ ಕಾರು ಅಪಘಾತದಲ್ಲಿ ಕೊಂಡಾಪುರ ಗ್ರಾಮದ ವಿಕಾಸ್(23) ಜೀವ ಕಳೆದುಕೊಂಡಿದ್ದಾರೆ. ಗಾಯಗೊಂಡ ಇಬ್ಬರಿಗೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು, ಚನ್ನಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Follow Us