Robertson pet: ಕಬ್ಬಿನ ಹಾಲು ಯಂತ್ರಕ್ಕೆ ಬುರ್ಕಾ ಸಿಲುಕಿ ಮಹಿಳೆ ಸಾವು
ಕೌಸರ್ (37) ಕಬ್ಬಿನ ಹಾಲು ತಗೆಯುವ ಯಂತ್ರಕ್ಕೆ ಸಿಲುಕಿ ಮೃತಪಟ್ಟ ಮಹಿಳೆ. ಕಬ್ಬಿನ ಹಾಲು ತೆಗೆಯುವ ವೇಳೆ ಮಹಿಳೆ ಧರಿಸಿದ್ದ ಬೂರ್ಕಾ ಯಂತ್ರಕ್ಕೆ ಸಿಲುಕಿದ ಪರಿಣಾಮ ಕುತ್ತಿಗೆ ಬಿಗಿದು ಸಾವು ಸಂಭವಿಸಿದೆ.
ಕೋಲಾರ: ಕಬ್ಬಿನ ಹಾಲು ತೆಗೆಯುವ ಯಂತ್ರಕ್ಕೆ ತಾವು ಧರಿಸಿದ್ದ ಬಟ್ಟೆ ಸಿಲುಕಿ ಮಹಿಳೆಯೊಬ್ಬರು ಮೃತಪಟ್ಟಿರುವ ಆಕಸ್ಮಿಕ ಘಟನೆ ನಡೆದಿದೆ. ಕೋಲಾರ ಜಿಲ್ಲೆಯ ಕೆಜಿಎಫ್ ನಗರದ ರಾಬರ್ಟ್ ಸನ್ ಪೇಟೆಯ ತಹಶೀಲ್ದಾರ್ ಕಚೇರಿ ಬಳಿ ಈ ಘಟನೆ ನಡೆದಿದೆ.
ಕೌಸರ್ (37) ಕಬ್ಬಿನ ಹಾಲು ತಗೆಯುವ ಯಂತ್ರಕ್ಕೆ ಸಿಲುಕಿ ಮೃತಪಟ್ಟ ಮಹಿಳೆ. ಕಬ್ಬಿನ ಹಾಲು ತೆಗೆಯುವ ವೇಳೆ ಮಹಿಳೆ ಧರಿಸಿದ್ದ ಬುರ್ಕಾ (Burqa) ಯಂತ್ರಕ್ಕೆ ಸಿಲುಕಿದ ಪರಿಣಾಮ ಕುತ್ತಿಗೆ ಬಿಗಿದು ಸಾವು ಸಂಭವಿಸಿದೆ. ರಾಬರ್ಟ್ ಸನ್ ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಜೆಸಿಬಿ ವಾಹನದ ಟೈಯರ್ ಸ್ಫೋಟಗೊಂಡು ಯುವಕನ ಸಾವು
ದಾವಣಗೆರೆ: ಹರಿಹರ ತಾಲೂಕಿನ ಕುರಬರಹಳ್ಳಿಯಲ್ಲಿ ಜೆಸಿಬಿ ವಾಹನದ ಟೈಯರ್ ಸ್ಫೋಟಗೊಂಡು ಯುವಕ ಗಂಭೀರವಾಗಿ ಗಾಯಗೊಂಡಿದ್ದ ಪ್ರಕರಣದಲ್ಲಿ ಎಸ್.ಎಸ್. ಹೈಟೆಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಯುವಕ ಮಾರುತಿ (28) ಕೊನೆಯುಸಿರೆಳೆದಿದ್ದಾರೆ. ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲೂಕಿನ ನಿಟ್ಟೂರು ಗ್ರಾಮದ ನಿವಾಸಿ. ಹರಪನಹಳ್ಳಿ ತಾಲೂಕಿನ ದುಗ್ಗಾವತಿ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತಿದ್ದ ಯುವಕ.
ದಿನಾಂಕ 3 ರಂದು ಜೆಸಿಬಿ ಮತ್ತು ಅಗ್ನಿ ಶಾಮಕ ವಾಹನದ 3 ಟೈಯರ್ ಪಂಕ್ಚರ್ ಹಾಕಿಸಲು ಕುರಬರಹಳ್ಳಿ ಗ್ರಾಮದ ಸಂದೀಪ್ ಮತ್ತು ಪರಮೇಶ್ವರಪ್ಪ ಅವರ ಗ್ಯಾರೇಜ್ ಗೆ ತಂದಿದ್ದ ಮಾರುತಿ. ಜೆಸಿಬಿ ವಾಹನದ ಟೈಯರ್ ಗೆ ಹವಾ ತುಂಬಿಸುವಾಗ ಗಾಳಿ ಹೆಚ್ಚಾಗಿ ಟೈಯರ್ ಸ್ಪೋಟಗೊಂಡಿತ್ತು. ಈ ವೇಳೆ ಟೈಯರ್ ಸ್ಫೋಟಗೊಂಡು, ಮೇಲೆ ಹಾರಿ ಕೆಳಕ್ಕೆ ಬಿದಿದ್ದ ಮಾರುತಿ. ಈ ವೇಳೆ ಕಾಲು, ಪಕ್ಕೆಲಬು, ಎದೆಗೆ ಪೆಟ್ಟಾಗಿ ನೆಲಕ್ಕೆ ಬಿದ್ದಿದ್ದ. ದಾವಣಗೆರೆ S S ಹೈಟೆಕ್ ಆಸ್ಪತ್ರೆಗೆ ಸೇರಿಸಿದಾಗ ಚಿಕಿತ್ಸೆ ಫಲಕಾರಿಯಾಗದೆ ಸಾವಿಗೀಡಾಗಿದ್ದಾನೆ.
ಕೆಲಸದಲ್ಲಿ ನಿರ್ಲಕ್ಷ್ಯ ವಹಿಸಿದ ಗ್ಯಾರೇಜ್ ಸಿಬ್ಬಂದಿ ಸಂದೀಪ್ ಮತ್ತು ಪರಮೇಶ್ವರಪ್ಪ ವಿರುದ್ಧ ಹರಿಹರ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲು ಮಾಡಿಕೊಳ್ಳಲಾಗಿದೆ.
ಕಾಡುಗೋಡಿ: ಕೊಳೆತ ಸ್ಥಿತಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ
ಬೆಂಗಳೂರಿನ ಕಾಡುಗೋಡಿಯಲ್ಲಿ ಕೊಳೆತ ಸ್ಥಿತಿಯಲ್ಲಿ ಅಪರಿಚಿತ ವ್ಯಕ್ತಿಯ ಮೃತ ದೇಹ ಪತ್ತೆಯಾಗಿದೆ. ಕೊಲೆ ಮಾಡಿ ಮೂಟೆಯಲ್ಲಿ ಕಟ್ಟಿ ಎಸೆದಿರುವ ಶಂಕೆ ವ್ಯಕ್ತವಾಗಿದೆ. ಕಾಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯ ಬೆಳ್ತೂರು ಅಪಾರ್ಟ್ಮೆಂಟ್ ಬಳಿ ಮೃತದೇಹವನ್ನ ಪ್ಲಾಸ್ಟಿಕ್ ಚೀಲದಲ್ಲಿ ಮೂಟೆ ಕಟ್ಟಿ ಎಸೆಯಲಾಗಿದೆ. ಘಟನಾ ಸ್ಥಳಕ್ಕೆ ಕಾಡುಗೋಡಿ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಇತ್ತೀಚೆಗೆ ಕೆಂಗೇರಿಯ ರಾಮಸಂದ್ರ ಬಳಿ ಯುವತಿ ಮೃತದೇಹ ಪತ್ತೆಯಾಗಿತ್ತು: ರಾಮಸಂದ್ರ ಬಳಿ ಯುವತಿ ಮೃತದೇಹ ಪತ್ತೆ ಪ್ರಕರಣ ಸಂಬಂಧ ಇನ್ನೂ ಮೃತ ಯುವತಿಯ ಗುರುತು ಪತ್ತೆಹಚ್ಚಲು ಸಾಧ್ಯವಾಗಿಲ್ಲ. ಈಗಾಗಲೇ ಸ್ಥಳದಲ್ಲಿ ಸಿಕ್ಕ ಸಣ್ಣ ಮಾದರಿಯನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ. ಅದಾಗ್ಯೂ ಪೊಲೀಸರು ಯುವತಿಯ ಗುರುತು ಪತ್ತೆ ಹಚ್ಚುವ ನಿಟ್ಟಿನಲ್ಲಿ ಅಪಹರಣ ಮತ್ತು ಕಾಣೆಯಾದವರ ಪ್ರಕರಣವನ್ನು ಪರಿಶೀಲಿಸಲು ಮುಂದಾಗಿದ್ದಾರೆ.
ಯುವತಿಯನ್ನು ಜೀವಂತವಾಗಿ ಸುಟ್ಟುಹಾಕಲಾಗಿಲ್ಲ. ಬದಲಾಗಿ ಬೇರೊಂದು ಸ್ಥಳದಲ್ಲಿ ಕೊಲೆ ಮಾಡಿ ರಾಮಸಂದ್ರ ಬಳಿ ಸುಟ್ಟು ಹಾಕಿರುವುದು ದೃಢವಾಗಿದೆ. ಏಕೆಂದರೆ ಮೃತದೇಹ ಸಿಕ್ಕ ಜಾಗದಲ್ಲಿ ಯಾವುದೇ ಒದ್ದಾಟದ ಕುರುಹು ಪೊಲೀಸರ ಕಣ್ಣಿಗೆ ಪತ್ತೆಯಾಗಿಲ್ಲ. ಸದ್ಯ ಆರೋಪಿಗಳ ಪತ್ತೆ ಪೊಲೀಸರಿಗೆ ಅತಿದೊಡ್ಡ ಸವಾಲು ಆಗಿದ್ದು, ಯಾವಾಗ ಕೃತ್ಯ ನಡೆದಿದೆ ಎಂದು ಇನ್ನೂ ಗೊತ್ತಾಗಿಲ್ಲ. ಹಾಗಾಗಿ ಟವರ್ ಡಂಪ್ ಆಧಾರದ ಮೇಲೆ ಪತ್ತೆಹಚ್ಚುವುದು ಕಷ್ಟವಾಗಿದೆ. ಸರಿಯಾದ ಸಮಯ ಗೊತ್ತಾದರೆ ಟವರ್ ಡಂಪ್ ಮೂಲಕ ಆರೋಪಿಗಳನ್ನು ಪತ್ತೆ ಮಾಡಬಹುದು. ಸದ್ಯ ಯಾವಾಗ ಕೃತ್ಯ ನಡೆದಿದೆ ಅನ್ನೋದನ್ನ ಪತ್ತೆ ಮಾಡಲು ಪೊಲೀಸರು ಮುಂದಾಗಿದ್ದಾರೆ.
Published On - 3:56 pm, Tue, 5 July 22