ಪೂಜೆ ಮಾಡಿ ಹಣ ಕೇಳಿದ್ದ ನಕಲಿ ಸ್ವಾಮೀಜಿಗೆ ಕೊಪ್ಪಳದಲ್ಲಿ ಬಿತ್ತು ಗೂಸಾ

| Updated By: sandhya thejappa

Updated on: Jul 07, 2021 | 12:20 PM

ಕೊಪ್ಪಳ ತಾಲೂಕಿನ ಹಂದ್ರಾಳ ನಿವಾಸಿಯಾದ ಚಂದನ ಗೌಡ ತನ್ನ ಹೆಸರನ್ನು ಡಾ.ಪಂಡಿತ್ ಎಂದು ಬದಲಾವಣೆ ಮಾಡಿಕೊಂಡಿದ್ದ. ಜ್ಯೋತಿಷ್ಯ ಹೇಳುವ ನೆಪದಲ್ಲಿ ಅಮಾಯಕರಿಗೆ ವಂಚನೆ ಮಾಡುತ್ತಿದ್ದ. ಪ್ರತಿ ಗುರುವಾರ, ರವಿವಾರ ಜನರಿಗೆ ವಂಚಿಸುತ್ತಿದ್ದ. ಕಳೆದ ಹತ್ತು ವರ್ಷಗಳಿಂದ ಮಾಟ- ಮಂತ್ರದಲ್ಲಿ ತೊಡಗಿದ್ದ.

ಪೂಜೆ ಮಾಡಿ ಹಣ ಕೇಳಿದ್ದ ನಕಲಿ ಸ್ವಾಮೀಜಿಗೆ ಕೊಪ್ಪಳದಲ್ಲಿ ಬಿತ್ತು ಗೂಸಾ
ಮಹಿಳೆ ಮತ್ತು ನಕಲಿ ಸ್ವಾಮೀಜಿ ನಡುವೆ ಜಗಳ
Follow us on

ಕೊಪ್ಪಳ: ಪೂಜೆ ಮಾಡಿ ಹಣ ಕೇಳಿದ್ದ ನಕಲಿ ಸ್ವಾಮೀಜಿಗೆ ಕೊಪ್ಪಳ ತಾಲೂಕಿನ ಭಾಗ್ಯನಗರದ ಮಠದಲ್ಲಿ ಗೂಸಾ ಬಿದ್ದಿದೆ. ಕೌಟುಂಬಿಕ ಸಮಸ್ಯೆಯನ್ನು ಬಗೆಹರಿಸಲು ಪೂಜೆ ಮಾಡುವುದಾಗಿ ಹೇಳಿ ನಕಲಿ ಸ್ವಾಮೀಜಿ ಚಂದನ ಗೌಡ ಹಣ ವಸೂಲಿ ಮಾಡಿದ್ದ ಎಂಬ ಆರೋಪ ಕೇಳಿಬಂದಿದೆ. ಸುನಿತಾ ಎಂಬ ಮಹಿಳೆಯಿಂದ ನಕಲಿ ಸ್ವಾಮೀಜಿ ಹಣ ಪಡೆದಿದ್ದ ಎಂಬ ಆರೋಪವಿದೆ. ಚಂದನ ಗೌಡ ಪೂಜೆ ಮಾಡಿ ಮಹಿಳೆಗೆ ಪುಡಿ ನೀಡಿದ್ದನಂತೆ. ನಕಲಿ ಸ್ವಾಮಿ ಚಂದನ ಗೌಡ ಪೂಜೆಗಾಗಿ ಸುಮಾರು 2 ಲಕ್ಷ ಹಣ ಕೇಳಿದ್ದನಂತೆ.

ಕೊಪ್ಪಳ ತಾಲೂಕಿನ ಹಂದ್ರಾಳ ನಿವಾಸಿಯಾದ ಚಂದನ ಗೌಡ ತನ್ನ ಹೆಸರನ್ನು ಡಾ.ಪಂಡಿತ್ ಎಂದು ಬದಲಾವಣೆ ಮಾಡಿಕೊಂಡಿದ್ದ. ಜ್ಯೋತಿಷ್ಯ ಹೇಳುವ ನೆಪದಲ್ಲಿ ಅಮಾಯಕರಿಗೆ ವಂಚನೆ ಮಾಡುತ್ತಿದ್ದ. ಪ್ರತಿ ಗುರುವಾರ, ರವಿವಾರ ಜನರಿಗೆ ವಂಚಿಸುತ್ತಿದ್ದ. ಕಳೆದ ಹತ್ತು ವರ್ಷಗಳಿಂದ ಮಾಟ- ಮಂತ್ರದಲ್ಲಿ ತೊಡಗಿದ್ದ. ಮಕ್ಕಳು ಆಗದವರಿಗೆ ತಾಯತ ಕಟ್ಟೋದು, ಹೆಣ್ಣು ವಶೀಕರಣ, ಆಸ್ತಿ ಕಲಹ, ಹೆಣ್ಣು- ಗಂಡು ವ್ಯವಹಾರದ ಬಗ್ಗೆ ಮಾಟ- ಮಂತ್ರ ಮಾಡುತ್ತಿದ್ದ ಎಂಬ ಆರೋಪಗಳು ಇದೀಗ ಕೇಳಿಬಂದಿವೆ.

ಕಳೆದ ಮೂರು ವರ್ಷಗಳ ಹಿಂದೆ ನಕಲಿ ಸ್ವಾಮೀಜಿಗೆ ಸುನೀತಾ ಎಂಬ ಮಹಿಳೆ ಪರಿಚಯವಾಗಿದ್ದರಂತೆ. ಆಸ್ತಿ ಕಲಹದ ಹಿನ್ನೆಲೆ ನಕಲಿ ಸ್ವಾಮೀಜಿಗೆ ಮಹಿಳೆ ಪರಿಚಯವಾಗಿದ್ದರು. ಆಸ್ತಿ ನಮ್ಮ ಪರ ಬರುವಂತೆ ಪೂಜೆ ಮಾಡಿಕೊಡಲು ಸುನೀತಾ ಸ್ವಾಮೀಜಿಗೆ ಹೇಳಿದ್ದರು. ಆದರೆ ಪೂಜೆ ನೆಪದಲ್ಲಿ ನಕಲಿ ಸ್ವಾಮೀಜಿ ಲಕ್ಷ ಲಕ್ಷ ಹಣ ವಸೂಲಿ ಮಾಡಿದ್ದನಂತೆ.

ನಿನ್ನೆ (ಜುಲೈ 7) ರಾತ್ರಿ ಅಂಬಾಭವಾನಿ ಮಠದಲ್ಲಿ ಚಂದನ ಗೌಡಗೆ ಗೂಸಾ ನೀಡಿದ್ದಾರೆ. ಸ್ಥಳಕ್ಕೆ ಕೊಪ್ಪಳ ನಗರ ಠಾಣೆ ಪೊಲೀಸರು ಭೇಟಿ ನೀಡಿ, ನಕಲಿ ಸ್ವಾಮೀಜಿಯನ್ನು ವಶಕ್ಕೆ ಪಡೆದಿದ್ದಾರೆ.


ಇದನ್ನೂ ಓದಿ

ಕಪ್ಪತ್ತಗುಡ್ಡ ಸೆರಗಿನಲ್ಲಿ ರೋಮಾಂಚನಕಾರಿ ಅನುಭವ ನೀಡುವ ಜಿಪ್ ಲೈನ್; ಮನಸೋತ ಪ್ರವಾಸಿಗರು

ಎಫ್ಐಆರ್​ನಲ್ಲಿ ಸಚಿವರ ಮಗನ ಹೆಸರೇ ಇಲ್ಲ, ದೂರನ್ನು ಪೊಲೀಸರೇ ಬರೆದುಕೊಂಡಿದ್ದಾರೆ.. -ಮೃತ ಕೂಡಲೆಪ್ಪ ಮಗ ಅಸಮಾಧಾನ

(Koppal people thrashes fake saint who demanded money for making poojas)

Published On - 11:31 am, Wed, 7 July 21