ಕೊಪ್ಪಳ: ಐಫೋನ್ 11 ( iPhone 11)ಬದಲು ಡಿಟರ್ಜೆಂಟ್ ಸೋಪ್ ಕಳುಹಿಸಿ ವಂಚಿಸಿದ್ದ ಫ್ಲಿಪ್ಕಾರ್ಟ್ಗೆ 74,000 ರೂ. ನೀಡುವಂತೆ ಕರ್ನಾಟಕ ಗ್ರಾಹಕರ ನ್ಯಾಯಾಲಯ ಸೂಚಿಸಿದೆ. ಕೊಪ್ಪಳ(Koppal) ಜಿಲ್ಲೆಯ ಹರ್ಷ ಎನ್ನುವ ವಿದ್ಯಾರ್ಥಿ 2021ರ ಜನವರಿಯಲ್ಲಿ ಫ್ಲಿಪ್‌ಕಾರ್ಟ್‌ನಲ್ಲಿ 48,999 ರೂಪಾಯಿ ಮೌಲ್ಯದ iPhone 11 ಆರ್ಡರ್ ಮಾಡಿದ್ದ. ಆದರೆ, ಬಾಕ್ಸ್ನಲ್ಲಿ ಒಂದು ಸಣ್ಣ ಕೀಪ್ಯಾಡ್ ಫೋನ್ ಮತ್ತು 140 ಗ್ರಾಂನ ಡಿಟರ್ಜೆಂಟ್ ಸೋಪ್ ಬಂದಿತ್ತು. ಬಳಿಕ ಹರ್ಷ ಸತತ ಕಾನೂನು ಹೋರಾಟ ನಡೆಸಿದ್ದ. ಅಂತಿಮವಾಗಿ ಇದೀಗ ಬರೋಬ್ಬರಿ ಮೂರು ವರ್ಷಗಳ ಬಳಿಕ ಹರ್ಷನಿಗೆ 74,000 ರೂ. ನೀಡುವಂತೆ ಗ್ರಾಹಕರ ನ್ಯಾಯಾಲಯವು ಫ್ಲಿಪ್ಕಾರ್ಟ್ಗೆ ಆದೇಶಿಸಿದೆ. ಮಾರ್ಚ್ 17ರಂದು ನ್ಯಾಯಾಲಯವು 48,999 ರೂ (ಮೊಬೈಲ್ ಫೋನ್ ವೆಚ್ಚ) ಮರುಪಾವತಿಗೆ ಆದೇಶ ನೀಡಿದೆ. ಮತ್ತು ವಂಚನೆ ಮಾಡಿದ್ದಕ್ಕಾಗಿ 10,000 ರೂ. ಹಾಗೂ ದೂರು ದಾಖಲಿಸಲು ತಗುಲಿದ ವೆಚ್ಚಕ್ಕಾಗಿ 15,000 ರೂ. ಪರಿಹಾರ ನೀಡುವಂತೆ ಫ್ಲಿಪ್ಕಾರ್ಟ್ಗೆ ಸೂಚಿಸಿದೆ.
ಕೊಪ್ಪಳ ಜಿಲ್ಲೆಯ ಹರ್ಷ ಎನ್ನುವ ವಿದ್ಯಾರ್ಥಿ 2021ರ ಜನವರಿಯಲ್ಲಿ ಫ್ಲಿಪ್‌ಕಾರ್ಟ್‌ನಲ್ಲಿ 48,999 ರೂಪಾಯಿ ಮೌಲ್ಯದ iPhone 11 ಆರ್ಡರ್ ಮಾಡಿದ್ದ. ಆದರೆ, ಬಾಕ್ಸ್ನಲ್ಲಿ ಒಂದು ಸಣ್ಣ ಕೀಪ್ಯಾಡ್ ಫೋನ್ ಮತ್ತು 140 ಗ್ರಾಂನ ಡಿಟರ್ಜೆಂಟ್ ಸೋಪ್ ಬಂದಿತ್ತು. ಇದರಿಂದ ಅಚ್ಚರಿಗೊಂಡ ಯುವಕ ಫ್ಲಿಪ್‌ಕಾರ್ಟ್ ಟೋಲ್ ಫ್ರೀ ಸಂಖ್ಯೆಗೆ ಕರೆ ಮಾಡಿ ಈ ಬಗ್ಗೆ ದೂರು ನೀಡಿದ್ದ. ಅವರು ಸಹ ಸಮಸ್ಯೆಯನ್ನು ಪರಿಹರಿಸುವುದಾಗಿ ಭರವಸೆ ನೀಡಿದ್ದರು. ಆದರೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲದಿದ್ದರಿಂದ ಕಂಪನಿಗೆ ಲೀಗಲ್ ನೋಟಿಸ್ ಕಳುಹಿಸಿದ್ದ. ಕಳೆದ ವರ್ಷ ಜುಲೈನಲ್ಲಿ ಫ್ಲಿಪ್‌ಕಾರ್ಟ್ ಇಂಟರ್ನೆಟ್ ಪ್ರೈವೇಟ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಮೂರನೇ ವ್ಯಕ್ತಿಯ ಮಾರಾಟಗಾರ ರಿಟೇಲ್ಸ್ ಪ್ರೈವೇಟ್ ಲಿಮಿಟೆಡ್‌ನ ಮ್ಯಾನೇಜರ್ ವಿರುದ್ಧ ಗ್ರಾಹಕ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದರು.
ಇದೀಗ ಅಂತಿಮವಾಗಿ ಗ್ರಾಹಕ ನ್ಯಾಯಾಲವು ಫೋನಿನ ಹಣದ ಜೊತೆಗೆ ದೂರು ಸಲ್ಲಿಕೆಗೆ ತಗುಲಿದ ಖರ್ಚು ವೆಚ್ಚಗಳು ಸೇರಿದಂತೆ ಒಟ್ಟು 74,000 ರೂ. ಪಾವತಿಸಲು ಹೇಳಿದೆ. ಇದರಿಂದ ವಿದ್ಯಾರ್ಥಿಗೆ ಸತತ ಮೂರು ವರ್ಷಗಳ ಬಳಿಕ ಕಾನೂನು ಹೋರಾಟದಲ್ಲಿ ಗೆಲುವು ಸಿಕ್ಕಂತಾಗಿದೆ.