ಬಳ್ಳಾರಿ ಪೊಲೀಸ್ ವಸತಿ ಗೃಹದಲ್ಲಿ ಡಿಎಆರ್ ಪೊಲೀಸ್ ಪೇದೆ ಅನುಮಾನಾಸ್ಪದವಾಗಿ ಸಾವು
ಪೊಲೀಸ್ ವಸತಿ ಗೃಹದಲ್ಲಿ ಡಿಎಆರ್(DAR) ಪೊಲೀಸ್ ಪೇದೆ ಜಾಫರ್ ಸಾಹೀಬ್ ಎಂಬಾತ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಪ್ರಜ್ಞೆ ತಪ್ಪಿಸಿ ರಾಡಿನಿಂದ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಬಳ್ಳಾರಿ: ಪೊಲೀಸ್ ವಸತಿ ಗೃಹದಲ್ಲಿ ಡಿಎಆರ್(DAR) ಪೊಲೀಸ್ ಪೇದೆ(Police Constable) ಜಾಫರ್ ಸಾಹೀಬ್ ಎಂಬಾತ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಹೌದು ನಿನ್ನೆ(ಮಾ.22) ರಾತ್ರಿ ಪೊಲೀಸ್ ವಸತಿ ಗೃಹದಲ್ಲಿ ರಕ್ತಸ್ರಾವದಿಂದ ಗಂಭೀರವಾಗಿ ಗಾಯಗೊಂಡಿದ್ದ ಜಾಫರ್ನನ್ನು ವಿಮ್ಸ್ಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಪೇದೆ ಜಾಫರ್ ಮೃತಪಟ್ಟಿದ್ದಾನೆ. ಇತನನ್ನ ಪ್ರಜ್ಞೆ ತಪ್ಪಿಸಿ ರಾಡಿನಿಂದ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಇನ್ನು 2009ರಲ್ಲಿ ಡಿಎಆರ್ ಪೊಲೀಸ್ ಪೇದೆಯಾಗಿ ನೇಮಕವಾಗಿದ್ದ ಜಾಫರ್. ಎರಡು ಮದುವೆಯಾಗಿದ್ದ ಮೊದಲ ಹೆಂಡತಿ ಮುಸ್ಲಿಂ ಆಗಿದ್ದು, ಎರಡನೇ ಹೆಂಡತಿ ಹಿಂದೂ ಮಹಿಳೆಯಾಗಿದ್ದಾಳಂತೆ. ಮೊದಲನೆ ಹೆಂಡತಿಯನ್ನು ತವರು ಮನೆಯಲ್ಲಿಯೇ ಬಿಟ್ಟಿರುವ ಜಾಫರ್, ಕಳೆದ ಕೆಲ ದಿನಗಳಿಂದ ಎರಡನೇ ಹೆಂಡತಿ ಮಧ್ಯೆ ಜಗಳ ನಡೆದಿದೆಯಂತೆ. ಈ ಹಿನ್ನಲೆಯಲ್ಲಿ ಅನುಮಾನ ವ್ಯಕ್ತವಾಗಿದ್ದು, ಸ್ಥಳಕ್ಕೆ ಗಾಂಧಿನಗರ ಪೊಲೀಸರು ಮತ್ತು ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ:ಪರೀಕ್ಷೆ ಮುಗಿಸಿ ಮನೆಗೆ ತೆರಳಲು ಶಾಲೆ ಎದುರು ನಿಂತಿದ್ದ ವಿದ್ಯಾರ್ಥಿಗಳ ಮೇಲೆ ಹರಿದ ಕಾರು: ಸ್ಥಳದಲ್ಲೇ ಮೂವರು ಸಾವು
ನಿದ್ರೆ ಮಂಪರಿನಲ್ಲಿ ಡಿವೈಡರ್ಗೆ ಡಿಕ್ಕಿ ಹೊಡೆದ ಕಾರು; ಪ್ರಾಣಾಪಾಯದಿಂದ ಪಾರು
ರಾಮನಗರ: ನಿದ್ರೆ ಮಂಪರಿನಲ್ಲಿ ಕಾರು ಡಿವೈಡರ್ಗೆ ಡಿಕ್ಕಿ ಹೊಡೆದ ಘಟನೆ ನಗರದ ವಿವೇಕಾನಂದ ನಗರದ ಬಳಿ ನಡೆದಿದೆ. ಕಾರಿನ ಮುಂಭಾಗ ಸಂಪೂರ್ಣ ನುಜ್ಜುಗುಜ್ಜು ಆಗಿದ್ದು, ಕಾರಿನಲ್ಲಿದ್ದವರು ಸಣ್ಣಪುಟ್ಟ ಗಾಯಗಳಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮಂಡ್ಯದಿಂದ ರಾಮನಗರಕ್ಕೆ ಬರುವಾಗ ಈ ಅವಘಡ ಸಂಭವಿಸಿದೆ. ಇನ್ನು ಈ ಕುರಿತು ರಾಮನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ