ಕೊಪ್ಪಳ: ಜಾನಪದ ಶ್ರೀ ಪುರಸ್ಕೃತ ಶತಾಯುಷಿ ಅಜ್ಜಿಯೂ ಸೇರಿ ತೊಗಲುಗೊಂಬೆಯಾಟ ಪ್ರದರ್ಶಿಸುವ ಒಂದೇ ಕುಟುಂಬದ 6 ಸದಸ್ಯರು

ಭೀಮವ್ವ ತಮ್ಮ ಕಲೆಯನ್ನು ರಾಜ್ಯಮಟ್ಟದ ಸಾಂಸ್ಕೃತಿಕ ಉತ್ಸವ, ರಾಷ್ಟ್ರೀಯ ಉತ್ಸವಗಳು, ಅಮೇರಿಕಾ, ಸ್ವಿಜರ್‌ಲ್ಯಾಂಡ್, ಜಪಾನ್, ಜರ್ಮನಿ, ಇಟಲಿ, ಫ್ರಾನ್ಸ್, ಸೌದಿ ಅರೇಬಿಯಾ, ಐರ್ಲೆಂಡ್, ಪ್ಯಾರಿಸ್, ದುಬೈ ಸೇರಿ ಹಲವು ದೇಶಗಳಲ್ಲಿ ಪ್ರದರ್ಶನ ನೀಡಿದ್ದು, ವಿದೇಶಿಯರಿಂದಲೂ ಮೆಚ್ಚುಗೆ ಪಡೆದಿದ್ದಾರೆ.

ಕೊಪ್ಪಳ: ಜಾನಪದ ಶ್ರೀ ಪುರಸ್ಕೃತ ಶತಾಯುಷಿ ಅಜ್ಜಿಯೂ ಸೇರಿ ತೊಗಲುಗೊಂಬೆಯಾಟ ಪ್ರದರ್ಶಿಸುವ ಒಂದೇ ಕುಟುಂಬದ 6 ಸದಸ್ಯರು
ಶತಾಯುಷಿ ಭೀಮವ್ವಗೆ 2019-20ನೇ ಸಾಲಿನ ಜಾನಪದಶ್ರೀ ಪ್ರಶಸ್ತಿ
Follow us
TV9 Web
| Updated By: preethi shettigar

Updated on: Aug 13, 2021 | 7:15 AM

ಕೊಪ್ಪಳ: ಇಂದಿನ‌ ಆಧುನಿಕ ಯುಗದಲ್ಲಿ ಅನೇಕ‌ ಗ್ರಾಮೀಣ ಕ್ರೀಡೆಗಳು‌ ಮಾಯವಾಗುತ್ತಿವೆ. ಆಧುನಿಕ ಗಾಜೆಟ್​ಗಳಲ್ಲಿ ಬ್ಯೂಸಿಯಾಗಿರೋ ಇಂದಿನ‌ ಆಧುನಿಕ ಯುಗದ ಯುವಜನತೆಗೆ ಗ್ರಾಮೀಣ ಕ್ರೀಡೆಗಳ ಮಹತ್ವದ ಅರಿವು ಕಡಿಮೆ. ಆದರೆ ಕೊಪ್ಪಳ ತಾಲೂಕಿನ ಮೋರನಾಳ ಗ್ರಾಮದ ಶಿಳ್ಳಿಕ್ಯಾತರ್ ಎಂಬ ಕುಟುಂಬಕ್ಕೆ ಕುಟುಂಬವೇ ಗ್ರಾಮೀಣ ಕಲೆಯಲ್ಲಿ ತೊಡಗಿಸಿಕೊಂಡಿದೆ. ಗ್ರಾಮೀಣ ಕಲೆ ತೊಗಲು ಗೊಂಬೆಯಾಟದ ಮೂಲಕ ಆ ಕುಟುಂಬ ಜನಮಾನಸದಲ್ಲಿ‌ ಉಳಿದುಕೊಂಡಿದೆ. ಆ ಕುಟುಂಬದ ಶತಾಯುಷಿ ವೃದ್ಧೆಯನ್ನು ಜಾನಪದ ಶ್ರೀ ಪ್ರಶಸ್ತಿಯೂ ಹುಡುಕಿಕೊಂಡು ಬಂದಿದೆ.  ಅಷ್ಟಕ್ಕೂ ಆ ಶತಾಯುಷಿ ಯಾರು? ಏನು ವಿಶೇಷತೆಯನ್ನು ಕಟ್ಟಿಕೊಟ್ಟ  ಟಿವಿ9 ಕನ್ನಡ ಡಿಜಿಟಲ್ ಕೊಪ್ಪಳ ಪ್ರತಿನಿಧಿ ಶಿವಕುಮಾರ್ ಪತ್ತಾರ್  ಅವರ ಬರಹ ನಿಮ್ಮ ಓದಿಗೆ ಇಲ್ಲಿದೆ.

ಅಪ್ಪಟ ಗ್ರಾಮೀಣ ಕಲೆಯಾದ ತೊಗಲುಗೊಂಬೆಯಾಟವನ್ನು ಉಳಿಸಿ ಬೆಳೆಸಿರುವ ಕೊಪ್ಪಳ ತಾಲೂಕಿನ ಮೋರನಾಳ ಗ್ರಾಮದ ಶತಾಯುಷಿ ಭೀಮವ್ವಗೆ 2019-20ನೇ ಸಾಲಿನ ಜಾನಪದಶ್ರೀ ಪ್ರಶಸ್ತಿ ಒಲಿದಿದ್ದು, ಜಿಲ್ಲೆಯ ಕೀರ್ತಿ ಹೆಚ್ಚಿಸಿದೆ. ಆಧುನಿಕ ಸಿನಿಮಾ, ಸಾಮಾಜಿಕ ಜಾಲತಾಣಗಳ ಅಬ್ಬರದ ನಡುವೆ ಗ್ರಾಮಿಣ ಕಲೆಗಳು ಮಂಕಾಗುತ್ತಿವೆ. ಹಲವು ಸವಾಲಿನ ನಡುವೆಯೂ ಕೆಲವರು ಐತಿಹಾಸಿಕ ಕಲೆಗಳನ್ನು ಉಳಿಸಿ ಬೆಳೆಸುತ್ತಿದ್ದಾರೆ. ಅಂಥವರ ಪೈಕಿ ಕೊಪ್ಪಳ ತಾಲೂಕಿನ ಮೋರನಾಳ ಗ್ರಾಮದ ಶಿಳ್ಳಿಕ್ಯಾತರ್ ಕುಟುಂಬವೂ ಒಂದು. ಭೀಮವ್ವ ಶಿಳ್ಳಿಕ್ಯಾತರ್ ಅನಕ್ಷರಸ್ಥೆಯಾದರೂ ವಂಶಪಾರಂಪರ್ಯವಾಗಿ ಬಂದ ತೊಗಲುಗೊಂಬೆಯಾಟ ಕಲೆ ಉಳಿಸಿಕೊಂಡು ಬಂದಿದ್ದಾರೆ. ಇಡೀ ಜಿಲ್ಲೆಯಲ್ಲಿ ಇದೊಂದೇ ಕುಟುಂಬ ನೂರಾರು ವರ್ಷಗಳಿಂದ ತೊಗಲುಗೊಂಬೆಯಾಟವನ್ನು ಪ್ರದರ್ಶಿಸುತ್ತಾ ಬಂದಿದೆ. ಇವರ ಮನೆಯಲ್ಲಿ ಚಿಕ್ಕ ಮಕ್ಕಳಿಂದ ಹಿಡಿದು ಅಜ್ಜಿ ಭೀಮವ್ವ ಸಹ ಗೊಂಬೆಯಾಟ ಪ್ರದರ್ಶನಕ್ಕೆ ಜೀವನ ಮುಡಿಪಾಗಿಟ್ಟಿದ್ದಾರೆ.

ಇವರು ಹೆಚ್ಚು ಪೌರಾಣಿಕ ಕಥೆ ಆಧಾರಿತ ರಾಮಾಯಣ, ಕುರುಕ್ಷೇತ್ರ, ವಿರಾಟ ಪರ್ವ, ಲವಕುಶ ಕಾಳಗ, ಕರ್ಣಪರ್ವ, ದ್ರೌಪದಿ ವಸ್ತ್ರಾಪಹರಣ, ಆದಿಪರ್ವ, ಸರ್ಪಪರ್ವ ಸೇರಿ ಮಹಾಭಾರತದ 18 ಪರ್ವಗಳನ್ನು ಪ್ರದರ್ಶಿಸುತ್ತಾರೆ. ಜಿಲ್ಲೆ ಸೇರಿ ದೇಶದ ಇತರ ಭಾಗಗಳಲ್ಲಿ ಅನೇಕ ಪ್ರದರ್ಶನ ನೀಡಿದ್ದಾರೆ. ತೊಗಲುಗೊಂಬೆಯಾಟ ತರಬೇತಿ ಶಿಬಿರ ಹಾಗೂ ತಮ್ಮ ಕುಟುಂಬದವರಿಗೆ ಇಂದಿಗೂ ಗೊಂಬೆಯಾಟ ತರಬೇತಿ ನೀಡುತ್ತಿದ್ದಾರೆ. ಇವರ ಸೇವೆ ಗುರುತಿಸಿ ಅನೇಕ ಸಂಘ, ಸಂಸ್ಥೆಗಳು ಅನೇಕ ಗೌರವ ಪ್ರಶಸ್ತಿ ನೀಡಿವೆ. ಭೀಮವ್ವನವರ ಮಗ ಕೇಶಪ್ಪ ಶಿಳ್ಳಿಕ್ಯಾತರ ಹಾಗೂ ಇವರ ಮಕ್ಕಳು ಸೇರಿ ಒಟ್ಟು 6 ಜನರು ಗೊಂಬೆಯಾಟದಲ್ಲಿ ತೊಡಗಿಸಿಕೊಂಡಿದ್ದಾರೆ.

ವಿದೇಶಗಳಲ್ಲೂ ಪ್ರದರ್ಶನ ಭೀಮವ್ವ ತಮ್ಮ ಕಲೆಯನ್ನು ರಾಜ್ಯಮಟ್ಟದ ಸಾಂಸ್ಕೃತಿಕ ಉತ್ಸವ, ರಾಷ್ಟ್ರೀಯ ಉತ್ಸವಗಳು, ಅಮೇರಿಕಾ, ಸ್ವಿಜರ್‌ಲ್ಯಾಂಡ್, ಜಪಾನ್, ಜರ್ಮನಿ, ಇಟಲಿ, ಫ್ರಾನ್ಸ್, ಸೌದಿ ಅರೇಬಿಯಾ, ಐರ್ಲೆಂಡ್, ಪ್ಯಾರಿಸ್, ದುಬೈ ಸೇರಿ ಹಲವು ದೇಶಗಳಲ್ಲಿ ಪ್ರದರ್ಶನ ನೀಡಿದ್ದು, ವಿದೇಶಿಯರಿಂದಲೂ ಮೆಚ್ಚುಗೆ ಪಡೆದಿದ್ದಾರೆ.

Koppal Togalugombeyata

2019-20ನೇ ಸಾಲಿನ ಜಾನಪದಶ್ರೀ ಪ್ರಶಸ್ತಿ

ಅರಸಿ ಬಂದ ಪ್ರಶಸ್ತಿಗಳು 1992ರಲ್ಲಿ ಟೆಹ್ರಾನ್ ಇಂಟರ್‌ನ್ಯಾಷನಲ್ ಪ್ರಶಸ್ತಿ, 63ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಪ್ರಶಸ್ತಿ, ಉಡುಪಿ ಪ್ರಾದೇಶಿಕ ರಂಗ ಕಲೆಗಳ ಅಧ್ಯಯನ ಕೇಂದ್ರ ಪ್ರಶಸ್ತಿ, ಕರ್ನಾಟಕ ಜಾನಪದ-ಯಕ್ಷಗಾನ ಅಕಾಡೆಮಿ ಗೌರವ ಪ್ರಶಸ್ತಿ, ಚಿತ್ರದುರ್ಗದ ಶರಣ ಸಂಸ್ಕೃತಿ ಉತ್ಸವದಲ್ಲಿ ಪುರಸ್ಕಾರ, ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ಗೊಂಬೆ ಪರಂಪರೆ ಪ್ರಶಸ್ತಿ ಜತೆಗೆ ರಾಜ್ಯೋತ್ಸವ ಪ್ರಶಸ್ತಿಗಳು ಭೀಮವ್ವಗೆ ಸಂದಿವೆ. ಇದರೊಂದಿಗೆ ವಿವಿಧ ಸಂಘ-ಸಂಸ್ಥೆಗಳು ಅನೇಕ ಪ್ರಶಸ್ತಿ ನೀಡಿ ಗೌರವಿಸಿವೆ. ಇವರ ಪುತ್ರ ಕೇಶಪ್ಪ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಲಭಿಸಿತ್ತು. ಆದರೆ ವಯಸ್ಸಿನ ಆಧಾರದ ಗೊಂದಲದ ನಡುವೆ ಪ್ರಶಸ್ತಿ ವಾಪಸ್ ಪಡೆದುಕೊಳ್ಳಲಾಯ್ತು. ಮುಂದಿನ ಬಾರಿ ಸರ್ಕಾರ ಕೇಶಪ್ಪ ಅವರಿಗೆ ರಾಜ್ಯೋತ್ಸವ ಪ್ರಶಸ್ತಿಯ ಭರವಸೆ ನೀಡಿದೆ. ಅಲ್ಲದೇ, ಕುಟುಂಬದ ಶತಾಯಿಷಿ ಅಜ್ಜಿಗೆ ಪದ್ಮಶ್ರೀ ಪ್ರಶಸ್ತಿಗೆ ಈಬಾರಿ ನಾಮಿನೇಟ್ ಮಾಡಿದ್ದೇವೆ. ಪ್ರಶಸ್ತಿ ದೊರೆಯುವ ಭರವಸೆ ಇದೆ ಎಂದು ಕುಟುಂಬಸ್ಥರು ಟಿವಿ9 ಕನ್ನಡ ಡಿಜಿಟಲ್ ಜತೆ ಹಂಚಿಕೊಂಡರು.

ಟಿವಿ 9 ಕನ್ನಡ ಡಿಜಿಟಲ್ ಜತೆ ಮಾತನಾಡಿದ ಭೀಮಮ್ಮ ಶಿಳ್ಳಿಕ್ಯಾತರ, ‘ ಜಾನ‌ಪದ ಪ್ರಶಸ್ತಿ ಸಿಕ್ಕಿರೋದು ನಮಗೆ ತುಂಬಾ ಖುಷಿಯಾಗಿದೆ. ಕಳೆದ ವರ್ಷ ಸರ್ಕಾರ ಜಾನಪದ ಪ್ರಶಸ್ತಿಗೆ ನನ್ನ ಹೆಸರು ಘೋಷಣೆ ಮಾಡಿತ್ತು. ಆದರೆ ಕೊರೊನಾ ಹಿನ್ನಲೆ ಪ್ರಶಸ್ತಿ ಕೊಟ್ಟಿರಲಿಲ್ಲ. ಈ ಬಾರಿ ಸಚಿವರಾಗಿ ಸುನೀಲ್ ಕುಮಾರ್ ಅಧಿಕಾರ ವಹಿಸಿಕೊಂಡ ಬಳಿಕ ಪ್ರಶಸ್ತಿ ನೀಡಿದ್ದಾರೆ. ಅವರಿಗೆ ಧನ್ಯವಾದ’ ಎಂದು ತಿಳಿಸಿದರು.

ವಿಶೇಷ ವರದಿ: ಶಿವಕುಮಾರ್ ಪತ್ತಾರ್, ಕೊಪ್ಪಳ

ಇದನ್ನೂ ಓದಿ: 

ಕೊಪ್ಪಳ: 17 ಲಕ್ಷ ಹಣ, ಬೈಕ್ ಬಿಟ್ಟು ಪರಾರಿಯಾಗಿದ್ದ ಅಪರಿಚಿತರ ಗುರುತು ಪತ್ತೆ, ಅವರ ಹಿಂದಿತ್ತು ನಕಲಿ ಚಿನ್ನದ ಮಾಫಿಯಾ!

Nothing Is Impossible: ಯಾವುದೂ ಅಸಾಧ್ಯವಲ್ಲ; ಕೊಪ್ಪಳದ ಈ ಹುಡುಗ ಲಾಕ್​ಡೌನ್​ನಲ್ಲಿ ಕಾಲು, ಬಾಯಿಂದಲೂ ಚಿತ್ರ ಬಿಡಿಸುವುದು ಕಲಿತ!

(6 members of the same family who exhibit folklore togalu gombeyaata senior person Bheemavva has been honored with Janapada Shree Award)

ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್