ಕೊಪ್ಪಳ: 17 ಲಕ್ಷ ಹಣ, ಬೈಕ್ ಬಿಟ್ಟು ಪರಾರಿಯಾಗಿದ್ದ ಅಪರಿಚಿತರ ಗುರುತು ಪತ್ತೆ, ಅವರ ಹಿಂದಿತ್ತು ನಕಲಿ ಚಿನ್ನದ ಮಾಫಿಯಾ!

ಈ ಕುರಿತು ಟಿವಿ9 ಕನ್ನಡ ಡಿಜಿಟಲ್ ಜತೆ ಮಾತನಾಡಿದ ಕೊಪ್ಪಳ ಎಸ್ಪಿ ಟಿ.ಶ್ರೀಧರ್, ಒಟ್ಟಾರೆ ಹಣ ದರೋಡೆ ಮಾಡಿ ಹೋಗುತ್ತಿದ್ದ ಗ್ಯಾಂಗ್ ಅಚಾನಕ್ ಆಗಿ ಪೊಲೀಸರ ಕೈಗೆ ಸಿಕ್ಕಿಹಾಕೊಂಡಿದ್ದಾರೆ. ಹಣದ ಮೂಲದ ತನಿಖೆ ಮಾಡಿದಾಗ ನಕಲಿ ಬಂಗಾರದ ಮಾಫಿಯಾ ಬೆಳಕಿಗೆ ಬಂದಿದೆ. ಈ ಗ್ಯಾಂಗ್ ಮೇಲೆ ರಾಜ್ಯದ ನಾನಾ ಪೊಲೀಸ್ ಠಾಣೆಗಳಲ್ಲಿ ಪ್ರಕರಣವೂ ದಾಖಲಾಗಿದೆ‌ ಎಂದು ತಿಳಿಸಿದರು.

ಕೊಪ್ಪಳ: 17 ಲಕ್ಷ ಹಣ, ಬೈಕ್ ಬಿಟ್ಟು ಪರಾರಿಯಾಗಿದ್ದ ಅಪರಿಚಿತರ ಗುರುತು ಪತ್ತೆ, ಅವರ ಹಿಂದಿತ್ತು ನಕಲಿ ಚಿನ್ನದ ಮಾಫಿಯಾ!
ಕೊಪ್ಪಳ ಅಪರಾಧ ಸುದ್ದಿ
Follow us
TV9 Web
| Updated By: ganapathi bhat

Updated on:Aug 11, 2021 | 11:21 PM

ಕೊಪ್ಪಳ: ಅಲ್ಲಿ ಪೊಲೀಸರು ಬೈಕ್ ಚೆಕ್ ಮಾಡುವಂತೆ ಚೆಕ್ ಮಾಡುತ್ತಿದ್ದರು. ಪರಿಶೀಲನೆಯಲ್ಲಿ ತೊಡಗಿದ್ದ ಪೊಲೀಸರನ್ನು ಕಂಡು ಬೈಕ್ ಸವಾರರಿಬ್ಬರು ತಮ್ಮ ಬೈಕ್ ಹಾಗೂ ಬ್ಯಾಗ್ ಬಿಟ್ಟು ಬೈಕ್ ಸವಾರರು ಪರಾರಿಯಾಗಿದ್ದರು. ಅರೇ! ಇದೇನಿದು? ಎಂದು ಪೊಲೀಸರು ಆ ಬ್ಯಾಗ್ ತೆಗೆದು ನೋಡಿದರೆ 17 ಲಕ್ಷ ಹಣ ಪತ್ತೆಯಾಗಿತ್ತು. ಇದನ್ನು ನೋಡಿದ ಪೊಲೀಸರಿಗೇ ಒಂದು ಕ್ಷಣ ಶಾಕ್ ಆಗಿತ್ತು. ಯಾಕೆ ಇಷ್ಟು ಹಣ ಬಿಟ್ಟು ಹೋದರು ಅಂತ ಪೊಲೀಸರು ಹುಡುಕಾಡದ ಜಾಗ ಇಲ್ಲ, ಶ್ವಾನದಳ ತಂಡದೊಂದಿಗೆ ಜಮೀನಿನ ತುಂಬೆಲ್ಲ ಪೊಲೀಸರು ಹುಡುಕಾಡಿದ್ದರು. ಇದೀಗ ಬ್ಯಾಗ್ ಬಿಟ್ಟು ಹೋದವರು ಪೊಲೀಸರ ಕೈಗೆ ಲಾಕ್ ಆಗಿದ್ದಾರೆ. ಅವರ ಕೈಗೆ ಅಷ್ಟೊಂದು ಹಣ ಹೇಗೆ ಬಂತು ಅನ್ನೋದು ಇದೀಗ ರೀವಿಲ್ ಆಗಿದೆ. ಅಷ್ಟಕ್ಕೂ ಹಣ ಬಿಟ್ಟು ಹೋದವರು ಯಾರು? ಎಲ್ಲಿಂದ ಹಣ ತೆಗೆದುಕೊಂಡು ಹೋಗ್ತಿದ್ರು? ಇಲ್ಲಿದೆ ನೋಡಿ ಕುತೂಹಲಕರ ವರದಿ.

ಒಂದು ಕಡೆ ಮಚ್ಚು, ನಕಲಿ ಬಂಗಾರ, ಇನ್ನೊಂದು ಕಡೆ ಮುಖ ಮುಚ್ಚಿಕೊಂಡು ಪೊಲೀಸರ ಅತಿಥಿಯಾದ ಗ್ಯಾಂಗ್, ಇವೆಲ್ಲ ದ್ರಶ್ಯ ಕಂಡು ಬಂದಿದ್ದು‌ ಕೊಪ್ಪಳದಲ್ಲಿ. ಕೊಪ್ಪಳ ತಾಲೂಕಿನ ಅಳವಂಡಿ ಬಳಿ ಆಗಸ್ಟ್ 5 ರಂದು ಬೈಕ್ ಹಾಗೂ ಬ್ಯಾಗ್ ಬಿಟ್ಟು ಬೈಕ್ ಸವಾರರು ಪರಾರಿಯಾಗಿದ್ದರು. ಪೊಲೀಸರ ತಪಾಸಣೆ ವೇಳೆ ಬ್ಯಾಗ್ ಬಿಟ್ಟು ಪರಾರಿಯಾಗಿದ್ದವರ ಬ್ಯಾಗ್ನಲ್ಲಿ 17 ಲಕ್ಷ ಪತ್ತೆಯಾಗಿತ್ತು. ಬೈಕ್ ಬಿಟ್ಟು ಜಮೀನಿನಲ್ಲಿ ತಪ್ಪಿಸಿಕೊಂಡ ಆರೋಪಿಗಳಿಗಾಗಿ ಸ್ವತಃ‌ ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಶ್ರೀಧರ್ ಶ್ವಾನದಳದೊಂದಿಗೆ ನಾಲ್ಕು ಗಂಟೆ ಕಾರ್ಯಾಚರಣೆ ಮಾಡಿದ್ದರು. ಆರೋಪಿಗಳು ಸಿಕ್ಕಿರಲಿಲ್ಲ. ಇದೀಗ ಬೈಕ್ ಹಾಗೂ ಬ್ಯಾಗ್ ಬಿಟ್ಟು ಹೋದ ಗ್ಯಾಂಗ್ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಬೈಕ್ ನಂಬರ್ ಮೂಲಕ ಆರೋಪಿಗಳನ್ನು ಪತ್ತೆ ಹಚ್ಚಿದ ಪೊಲೀಸರು ಮೂವರನ್ನು ಅರೆಸ್ಟ್ ಮಾಡಿದ್ದಾರೆ. ಹರಪನಹಳ್ಳಿ ಮೂಲದ ರಾಜು,ಕೆಂಚಪ್ಪ,ಗೊನೇಪ್ಪ ಬಂಧಿತ ಆರೋಪಿಗಳು.ಇವರೆಲ್ಲ ಅರೆಸ್ಟ್ ಆಗೋಕೆ ಕಾರಣ 17 ಲಕ್ಷ ಹಾಗೂ ಬಂಗಾರ್. ಈ ಗ್ಯಾಂಗ್​ಗೆ ನಕಲಿ ಬಂಗಾರ ನೀಡಿ ಹಣ ದರೋಡೆ ಮಾಡೋ ಖಯಾಲಿ ಇತ್ತು. ಅದರಂತೆ ಅಗಸ್ಟ್ ಐದರಂದು ಬಂಗಾರದ ಆಸೆ ತೋರಿಸಿ ಹಣ ದೋಚಿಕೊಂಡು ಹೋಗುತ್ತಿದ್ದ ಆರು ಜನರ ಗ್ಯಾಂಗ್ ನಲ್ಲಿ ಮೂವರು ಪೊಲೀಸರಿಗೆ ಲಾಕ್ ಆಗಿದ್ದು, ಇನ್ನು ಮೂವರಿಗೆ ಪೊಲೀಸರು ಬಲೆ ಬೀಸಿದ್ದಾರೆ. ಹಾಗಾದರೆ ಇವರು ಯಾರಿಗೆ ಬಂಗಾರ ನೀಡಿ ಹಣ ಹೇಗೆ ತೆಗೆದುಕೊಂಡು ಹೋಗುತ್ತಿದ್ದರು ಎಂಬ ಅಂಶ ಬೆಳಕಿಗೆ ಬಂದಿದೆ.

ಹರಪನಹಳ್ಳಿ ಮೂಲದ ಆರು‌ ಜನರ ಗ್ಯಾಂಗ್​ನಲ್ಲಿ ರಾಜು, ಕೆಂಚಪ್ಪ ಹಾಗೂ ಗೋನೆಪ್ಪ ಇದೀಗ ಪೊಲೀಸರ ಅತಿಥಿಯಾಗಿದ್ದಾರೆ. ಸೆರೆ ಸಿಕ್ಕವರ ಬಳಿ,ಮಚ್ಚು ಹಾಗೂ ಹಣ ಮತ್ತು ನಕಲಿ ಬಂಗಾರ ವಶಪಡಿಸಿಕೊಳ್ಳಲಾಗಿದೆ. ಇದೇ ಅಗಸ್ಟ್ ಐದರಂದು ಬೀದರ್ ಮೂಲದ ಗುತ್ತಿಗೆದಾರ ವಿವೇಕ್ ಎನ್ನುವರಿಗೆ ಈ ಗ್ಯಾಂಗ್ ಬಂಗಾರ ನೀಡುತ್ತೇವೆ ಎಂದು‌ ನಂಬಿಸಿ ಹಣ ದರೋಡೆ ಮಾಡಿತ್ತು. ಕೊಪ್ಪಳ ತಾಲೂಕಿನ ಕೂಕನಪಳ್ಳಿ ಬಳ್ಳಿ ವಿವೇಕ್ ಬಂದಿದ್ದ.ಮೊದಲು ವಿವೇಕ್ಗೆ ಇವರು ಅಸಲಿ ಬಂಗಾರ ಕೊಟ್ಡು ಮರಳು‌ ಮಾಡಿದ್ದರು. ಅದರಂತೆ ಮನೆ ಪಾಯ ತೆಗೆಯೋವಾಗ ನಮಗೆ ಶುದ್ಧ ಬಂಗಾರ ಸಿಕ್ಕಿದೆ ಎರಡು ಕೆ.ಜಿ.ಗೆ 17 ಲಕ್ಷ ಎಂದು ವಿವೇಕ್ ಅವರರನ್ನು ಕರೆಸಿಕೊಂಡಿದ್ದರು. ಹಣ ನೋಡಿದ ಖದೀಮರು‌ ಬಂಗಾರ ನೀಡದೆ ವಿವೇಕ್ ಅವರಿಗೆ ಮಚ್ಚು ತೋರಿಸಿ ಹೊಡೆದು ಹಣ ದೋಚಿದ್ದರು. ಮುಂದೆ ಬೈಕ್ ಡಾಕ್ಯುಮೆಂಟ್ ಪರಿಶೀಲನೆ ವೇಳೆ ಅಳವಂಡಿ ಪೊಲೀಸರ ಕೈಗೆ ಸಿಕ್ಕಿಬಿದ್ದು ಹಣ ಬಿಟ್ಟು ಪರಾರಿಯಾಗಿದ್ದರು. ಮೊಬೈಲ್ ಲೊಕೇಶನ್ ಮೂಲಕ ಪೊಲೀಸರು ವಿವೇಕ್ನ ಪತ್ತೆ ಮಾಡಿದ್ದಾರೆ. ಆತ ಕೂಡಾ ಬಂಗಾರ ಖರೀದಿಗೆ ಬಂದಿರೋದಾಗಿ ಪೊಲೀಸರ ಮುಂದೆ ಒಪ್ಪಿಕೊಂಡಿದ್ದ. ಅಷ್ಟೊಂದು ಹಣ ತಂದಿರೋದಕ್ಕೆ ವಿವೇಕ್ ದಾಖಲಾತಿ ನೀಡಿದ್ದಾರೆ.

ಈ ಕುರಿತು ಟಿವಿ9 ಕನ್ನಡ ಡಿಜಿಟಲ್ ಜತೆ ಮಾತನಾಡಿದ ಕೊಪ್ಪಳ ಎಸ್ಪಿ ಟಿ.ಶ್ರೀಧರ್, ಒಟ್ಟಾರೆ ಹಣ ದರೋಡೆ ಮಾಡಿ ಹೋಗುತ್ತಿದ್ದ ಗ್ಯಾಂಗ್ ಅಚಾನಕ್ ಆಗಿ ಪೊಲೀಸರ ಕೈಗೆ ಸಿಕ್ಕಿಹಾಕೊಂಡಿದ್ದಾರೆ. ಹಣದ ಮೂಲದ ತನಿಖೆ ಮಾಡಿದಾಗ ನಕಲಿ ಬಂಗಾರದ ಮಾಫಿಯಾ ಬೆಳಕಿಗೆ ಬಂದಿದೆ. ಈ ಗ್ಯಾಂಗ್ ಮೇಲೆ ರಾಜ್ಯದ ನಾನಾ ಪೊಲೀಸ್ ಠಾಣೆಗಳಲ್ಲಿ ಪ್ರಕರಣವೂ ದಾಖಲಾಗಿದೆ‌ ಎಂದು ತಿಳಿಸಿದರು.

ಇದನ್ನೂ ಓದಿ: 

ಯಾರು ನೀವು? ಎಲ್ಲಿಂದ ಬಂದವರು? ಕೊಪ್ಪಳ ಪೊಲೀಸರ ಪ್ರಶ್ನೆಗೆ ಉತ್ತರಿಸದೇ ಬ್ಯಾಗ್​ನಲ್ಲಿದ್ದ 17 ಲಕ್ಷ 50 ಸಾವಿರ ಬಿಟ್ಟು ನಾಪತ್ತೆಯಾದ ಅಪರಿಚಿತರು!

Neeraj Chopra Gold: ನೀರಜ್ ಚೋಪ್ರಾಗೆ ಚಿನ್ನ; ಕೊಪ್ಪಳದಲ್ಲಿ ಹಿಂದೂಪರ ಮತ್ತು ಕಾಂಗ್ರೆಸ್ ಕಾರ್ಯಕರ್ತರಿಂದ ಸಂಭ್ರಮಾಚರಣೆ

Published On - 11:20 pm, Wed, 11 August 21

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ