ಕೊಪ್ಪಳದಲ್ಲಿ ಪೈಪ್​ಲೈನ್​ಗಾಗಿ ಅಗೆದಿದ್ದ ಗುಂಡಿಗೆ ಬಿದ್ದ ಮಗು! ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಸಾವು

| Updated By: sandhya thejappa

Updated on: Feb 08, 2022 | 9:38 AM

ಕಳೆದ ಒಂದು ತಿಂಗಳ ಹಿಂದೆ ಗುಂಡಿ ಅಗೆದಿದ್ದರು. ಆಟವಾಡಲು ತೆರಳಿದ್ದ 13 ತಿಂಗಳ ಮಗು ಅನುಪಮಾ ಗುಂಡಿಗೆ ಬಿದ್ದಿದೆ. ಗುಂಡಿ ಅಗೆದು ಮುಚ್ಚದೆ ಇರುವುದೇ ದುರಂತಕ್ಕೆ ಕಾರಣ ಅಂತ ಆಕ್ರೋಶ ಹೊರಹಾಕಿದ್ದಾರೆ.

ಕೊಪ್ಪಳದಲ್ಲಿ ಪೈಪ್​ಲೈನ್​ಗಾಗಿ ಅಗೆದಿದ್ದ ಗುಂಡಿಗೆ ಬಿದ್ದ ಮಗು! ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಸಾವು
13 ತಿಂಗಳ ಮಗು ಅನುಪಮಾ, ಪೈಪ್​ಲೈನ್​ ಅಳವಡಿಕೆಗೆ ಗುಂಡಿ ಅಗೆದಿದ್ದರು
Follow us on

ಕೊಪ್ಪಳ: ಪೈಪ್ಲೈನ್ಗಾಗಿ (Pipeline) ಅಗೆದಿದ್ದ ಗುಂಡಿಗೆ ಹೆಣ್ಣು ಮಗು ಬಿದ್ದು ಸಾವನ್ನಪ್ಪಿರುವ ಘಟನೆ ಕೊಪ್ಪಳ (Koppal) ಜಿಲ್ಲೆಯ ಯಲಬುರ್ಗಾ ತಾಲೂಕಿನ ಮುರುಡಿ ಗ್ರಾಮದಲ್ಲಿ ನಡೆದಿದೆ. ಜಲಜೀವನ್ ಮಿಷನ್ (Jal Jeevan Mission) ಪೈಪ್ಲೈನ್ ಅಳವಡಿಕೆಗೆ ಕಾಮಗಾರಿ ಮಾಡಲಾಗಿತ್ತು. ಕಾಮಗಾರಿ ಆಗುತ್ತಿದ್ದ ಗುಂಡಿಗೆ 13 ತಿಂಗಳ ಅನುಪಮಾ ಎಂಬ ಹೆಣ್ಣು ಮಗು ಬಿದ್ದಿತ್ತು. ಗುಂಡಿಗೆ ಬಿದ್ದ ಮಗು ಉಸಿರಾಡಲು ಆಗದೆ ಅಸ್ವಸ್ಥವಾಗಿತ್ತು. ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಅನುಪಮಾ ಸಾವನ್ನಪ್ಪಿದ್ದು, ಬಾಲಕಿಯ ಸಾವಿಗೆ ಗುತ್ತಿಗೆದಾರನೇ ಕಾರಣವೆಂದು ಪೋಷಕರು ಕಿಡಿಕಾರಿದ್ದಾರೆ.

ಕಳೆದ ಒಂದು ತಿಂಗಳ ಹಿಂದೆ ಗುಂಡಿ ಅಗೆದಿದ್ದರು. ಆಟವಾಡಲು ತೆರಳಿದ್ದ 13 ತಿಂಗಳ ಮಗು ಅನುಪಮಾ ಗುಂಡಿಗೆ ಬಿದ್ದಿದೆ. ಗುಂಡಿ ಅಗೆದು ಮುಚ್ಚದೆ ಇರುವುದೇ ದುರಂತಕ್ಕೆ ಕಾರಣ ಅಂತ ಆಕ್ರೋಶ ಹೊರಹಾಕಿದ್ದಾರೆ. ಅನುಪಮಾ ಮೂಲತಃ ಕೊಪ್ಪಳ ತಾಲೂಕಿನ ಶಿವಪುರ. ಅಜ್ಜಿ ಮನೆಗೆ ಬಂದಿದ್ದಾಗ ಈ ಘಟನೆ ನಡೆದಿದೆ. ಬೇವೂರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಚಿರತೆ ದಾಳಿಗೆ ಮೇಕೆಗಳು ಸಾವು:
ರಾಮನಗರ: ಜಿಲ್ಲೆ ಮಾಗಡಿ ತಾಲೂಕಿನ ಪೂಜಾರಿಪಾಳ್ಯ ಗ್ರಾಮದಲ್ಲಿ ಚಿರತೆ ದಾಳಿಗೆ ಹತ್ತು ಮೇಕೆ, ಒಂದು ಸೀಮೆ ಕರು ಸಾವನ್ನಪ್ಪಿವೆ. ರವೀಂದ್ರ ಎಂಬುವವರಿಗೆ ಸೇರಿದ ಮೇಕೆಗಳು ಮೃತಪಟ್ಟಿವೆ. ತಡರಾತ್ರಿ ಮೇಕೆ ಶೆಟ್​ಗೆ ನುಗ್ಗಿ ಚಿರತೆ ದಾಳಿ ನಡೆಸಿದೆ. ಚಿರತೆ ಹಾವಳಿಗೆ ಗ್ರಾಮಸ್ಥರು ಹೈರಾಣಾಗಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ.

ಇದನ್ನೂ ಓದಿ

ಮೃತ ಸ್ನೇಹಿನ ಹೆಂಡತಿಗೆ ಬಾಳು ಕೊಟ್ಟು ಮಾದರಿಯಾದ ವ್ಯಕ್ತಿ; ವಿಧವೆ ವರಿಸಿದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಜನ

‘ಅಲ್ಲು ಅರ್ಜುನ್​, ರಾಜಮೌಳಿ ಕನ್ನಡಿಗರಾಗಿದ್ದರೆ ಮೋದಿ ಸ್ಯಾಂಡಲ್​ವುಡ್​ನ ಹೊಗಳುತ್ತಿದ್ದರು’; ಆರ್​ಜಿವಿ ಟೀಕೆ

Published On - 9:35 am, Tue, 8 February 22