ಆಫ್ರಿಕಾದ ಲಿಬೇರಿಯಾ ದೇಶದಲ್ಲಿ ಕನ್ನಡಿಗನ ಪರದಾಟ; ತಾಯ್ನಾಡಿಗೆ ಹೋಗುತ್ತೇನೆಂದರೂ ಬೆದರಿಕೆಯ ಆರೋಪ!

ಹೆಡ್ರಾಲಿಕ್ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿರುವ ಮೆಹಬೂಬ್ ಸಾಬ್ ಕಳೆದ ನಾಲ್ಕು ತಿಂಗಳಿಂದ ಜೀವ ಗಟ್ಡಿ ಹಿಡಿದುಕೊಂಡು ಕೆಲಸ ಮಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಗುಡ್ಡಗಾಡು ಪ್ರದೇಶಕ್ಕೆ ಕೆಲಸಕ್ಕೆ ಕಳುಹಿಸಿದ ಸಂಸ್ಥೆ, ಊಟ, ನೀರು ನಿಡುತ್ತಿಲ್ಲ.

ಆಫ್ರಿಕಾದ ಲಿಬೇರಿಯಾ ದೇಶದಲ್ಲಿ ಕನ್ನಡಿಗನ ಪರದಾಟ; ತಾಯ್ನಾಡಿಗೆ ಹೋಗುತ್ತೇನೆಂದರೂ ಬೆದರಿಕೆಯ ಆರೋಪ!
ಮೆಹಬೂಬ್ ಸಾಬ್
Edited By:

Updated on: Aug 09, 2021 | 1:12 PM

ಕೊಪ್ಪಳ: ಬೆಂಗಳೂರಿನಲ್ಲಿ ಆಫ್ರಿಕಾ ಪ್ರಜೆಗಳ ರಂಪಾಟ ಮಾಸುವ ಮುನ್ನ, ಆಫ್ರೀಕಾದಲ್ಲಿ ಕನ್ನಡಿಗನ ಪರದಾಟ ಶುರುವಾಗಿದೆ. ಕಳೆದ ನಾಲ್ಕು ತಿಂಗಳಿಂದ ಆಫ್ರಿಕಾ ನೆಲದಲ್ಲಿ ಕನ್ನಡಿಗ ನೋವು ಅನುಭವಿಸುತ್ತಿದ್ದಾನೆ. ಕೆಲಸಕ್ಕೆಂದು ಹೋದ ಕನ್ನಡಿಗ ಆಫ್ರಿಕಾದಿಂದ ವಾಪಸ್ ಬರದೆ ಹಿಂಸೆ ಅನುಭವಿಸುತ್ತಿದ್ದಾನೆ. ಕೆಲಸಕ್ಕೆಂದು ಹೋದ ಕನ್ನಡಿಗ ಮೆಹಬೂಬ್ ಸಾಬ್ ಕಳೆದ ನಾಲ್ಕು ತಿಂಗಳಿಂದ ಚಿತ್ರಹಿಂಸೆ ಅನುಭವಿಸುತ್ತಿದ್ದಾನೆ. ಕಳೆದ ನಾಲ್ಕು ತಿಂಗಳ ಹಿಂದೆ ಮೆಹಬೂಬ್ ಸಾಬ್ ಆಫ್ರಿಕಾದ ಲಿಬೇರಿಯಾ ದೇಶಕ್ಕೆ ಕೆಲಸಕ್ಕೆಂದು ಹೋಗಿದ್ದಾನೆ. ಗುಡ್ಡ ಗಾಡು ಪ್ರದೇಶದಲ್ಲಿ ಕೆಲಸ ಮಾಡುತ್ತಿರುವ ಮೆಹಬೂಬ್ ಸಾಬ್​ಗೆ ಸರಿಯಾದ ಸಮಯಕ್ಕೆ ಊಟ ಸಿಗುತ್ತಿಲ್ಲ. ಅಲ್ಲದೆ ತಾಯ್ನಾಡಿಗೆ ಹೋಗುತ್ತೀನಿ ಅಂದರೆ ಬೆದರಿಕೆ ಹಾಕುತ್ತಿರುವ ಆರೋಪ ಕೇಳಿಬಂದಿದೆ.

ಹೆಡ್ರಾಲಿಕ್ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿರುವ ಮೆಹಬೂಬ್ ಸಾಬ್ ಕಳೆದ ನಾಲ್ಕು ತಿಂಗಳಿಂದ ಜೀವ ಗಟ್ಡಿ ಹಿಡಿದುಕೊಂಡು ಕೆಲಸ ಮಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಗುಡ್ಡಗಾಡು ಪ್ರದೇಶಕ್ಕೆ ಕೆಲಸಕ್ಕೆ ಕಳುಹಿಸಿದ ಸಂಸ್ಥೆ, ಊಟ, ನೀರು ನಿಡುತ್ತಿಲ್ಲ. ಜೊತೆಗೆ ಕಳೆದ ನಾಲ್ಕು ತಿಂಗಳಿಂದ ವೇತನವನ್ನೂ ನೀಡಿಲ್ಲವಂತೆ.

ಕನ್ನಡಿಗ ಮೆಹಬೂನ್ ಸಾಬ್
ಮೆಹಬೂಬ್ ಸಾಬ್ ಕೊಪ್ಪಳ ಜಿಲ್ಲೆಯ ಗಂಗಾವತಿ ನಿವಾಸಿ. ಕಳೆದ ನಾಲ್ಕು ತಿಂಗಳ ಹಿಂದೆ ಗಂಗಾವತಿಯಿಂದ ಆಫ್ರಿಕಾದ ಲಿಬೇರಿಯಾ ದೇಶಕ್ಕೆ ಪ್ರಯಾಣ ಬೆಳೆಸಿದ್ದ. ಹೇಗಾದರೂಮಾಡಿ ಒಂದಿಷ್ಟು ಹಣ ಸಂಪಾದನೆ ಮಾಡಬೇಕು ಅನ್ನೋ ಉದ್ದೇಶಕ್ಕೆ ವಿದೇಶಕ್ಕೆ ತೆರಳಿ ದುಡಿಯುವ ಕಸನು ಕಂಡಿದ್ದ. ಹೆಡ್ರಾಲಿಕ್ ಮೆಕ್ಯಾನಿಕ್ ಆದ ಮೆಹಬೂಬ್ ಸಾಬ್ ಲಿಬೇರಿಯಾಗೆ ಹೋದ ಬಳಿಕ ಮೊದ ಮೊದಲು ಒಳ್ಳೆ ಅನುಭವ ಸಿಕ್ಕಿದೆ. ಆದರೆ ಬಳಿಕ ಕೆಲಸ ನೀಡಿದ ಸಂಸ್ಥೆ ಕಿರುಕುಳ ನೀಡುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಗುಡ್ಡ ಗಾಡು ಪ್ರದೇಶದಲ್ಲಿ ಕೆಲಸಕ್ಕೆಂದು ಮೆಹಬೂಬ್ ಸಾಬ್ರನ್ನು ಕಳುಹಿಸಿದ ಸಂಸ್ಥೆ ತೀರಾ ಕೆಟ್ಟದಾಗಿ ಮೆಹಬೂಬ್ ಸಾಬ್​ನನ್ನು ನಡೆಸಿಕೊಂಡಿದೆ.

ಖುಷಿಯಿಂದ ವಿದೇಶಕ್ಕೆ ಹಾರಿದ ಮೆಹಬೂಬ್ ಸಾಬ್ ನರಕ ಯಾತನೆ ಅನುಭಿಸುತ್ತಿದ್ದಾನೆ. ಇತ್ತ ಮನೆಯವರಿಗೆ ವಿಷಯ ತಿಳಸಿದರೆ ಭಯ ಭೀತರಾಗುತ್ತಾರೆ ಅನ್ನೋ ಕಾರಣಕ್ಕೆ ಮೆಹಬೂಬ್ ಸಾಬ್ ಒಳಗೊಳಗೆ ಸಂಕಟ ಅನುಭುವಿಸುತ್ತಿದ್ದಾನೆ. ಹೀಗಾಗಿ ಕುಟುಂಬದವರಿಗೆ ಮೆಹಬೂಬ್ ಸಾಬ್ ಯಾವ ವಿಷಯವನ್ನೂ ಹೇಳಿಲ್ಲ.

ಮೆಹಬೂಬ್ ಸಾಬ್ ನೆರವಿಗೆ ಏಮ್ ಇಂಡಿಯಾ ಸಂಸ್ಥೆ
ವಿದೇಶದಲ್ಲಿ ತನಗಾದ ನೋವು ಆಡಿಯೋ ಮೂಲಕ ಹಂಚಿಕೊಂಡ ಮೆಹಬೂಸ್ ಸಾವ್ ನೆರವಿಗೆ ವಿದೇಶದಲ್ಲಿ ಕನ್ನಡಿಗರು ಸ್ಥಾಪನೆ ಮಾಡಿಕೊಂಡ ಏಮ್ ಇಂಡಿಯಾ ಸಂಸ್ಥೆ ನಿಂತಿದೆ. ಏಮ್ ಇಂಡಿಯಾ ಸಂಸ್ಥೆ ಆಡಿಯೋ ಗಮನಿಸಿ ತಕ್ಷಣ ಲಿಬೇರಿಯಾ ಪ್ರದೇಶದ ಭಾರತೀಯ ರಾಯಭಾರಿ ಕಚೇರಿಗೆ ಪತ್ರ ಬರೆದಿದೆ. ಮೆಹಬೂಬ್ ಸಾಬ್​ನನ್ನು ಪಾರುಮಾಡಿ ಎಂದು ಕೇಳಿಕೊಂಡಿದ್ದಾರೆ. ಆತನಿಗೆ ಅಲ್ಲಿ ಕಷ್ಟ ಆಗುತ್ತಿದೆ. ಅಲ್ಲದೇ ಬೆದರಿಕೆ ಹಾಕುತ್ತಿದ್ದಾರೆಂದು ಏಮ್ ಇಂಡಿಯಾ ಸಂಸ್ಥೆ ಪತ್ರ ಬರೆದಿದೆ.

ನನ್ನ ದೇಶಕ್ಕೆ ವಾಪಸ್ ಆಗಬೇಕಾದರೆ ಕಳ್ಳತನದ ಕೇಸ್ ಹಾಕುತ್ತೀವಿ ಅಂತ ಬೆದರಿಕೆ ಹಾಕುತ್ತಿದ್ದಾರೆ ಅಂತ ಏಮ್ ಇಂಡಿಯಾ ಸಂಸ್ಥೆಯೊಂದಿಗೆ ಮೆಹಬೂಬ್ ಸಾಬ್ ಅಳಲು ತೋಡಿಕೊಂಡಿದ್ದಾನೆ. ಇದೀಗ ಏಮ್ ಇಂಡಿಯಾ ಸಂಸ್ಥೆಯ ಮೂಲಕ ಮೆಹಬೂಬ್ ಸಾಬ್ ತಾಯ್ನಾಡಿಗೆ ಬರುವ ಪ್ರಯತ್ನ ಮಾಡುತ್ತಿದ್ದಾನೆ.

ಕಳೆದ ನಾಲ್ಕು ತಿಂಗಳ ಹಿಂದೆ ನಮ್ಮಣ್ಣ ಆಫ್ರೀಕಾಗೆ ಹೋಗಿದ್ದಾನೆ. ಅಲ್ಲಿ ಏನಾಗಿದೆ ಅನ್ನೋದನ್ನ ನಮ್ಮ ಜೊತೆ ಹಂಚಿಕೊಂಡಿಲ್ಲ. ಆದರೆ ವಾಪಸ್ ಬರೋದಾಗಿ ಮಾತ್ರ ಹೇಳಿದ್ದಾನೆ. ಎಷ್ಟೇ ಪ್ರಯತ್ನ ಮಾಡಿದ್ರೂ ಟಿಕೆಟ್ ಸಿಗುತ್ತಿಲ್ಲ ಅಂತ ಮೆಹಬೂಬ್ ಸಾಬ್ ಹೇಳಿದ್ದನೆಂದು ಆತನ ಸಹೋದರ ಆಯೂಬ್ ಶೇಖ್ ತಿಳಿಸಿದರು.

ಇದನ್ನೂ ಓದಿ

ಶಿಲ್ಪಾ ಶೆಟ್ಟಿ, ತಾಯಿ ಸುನಂದಾ ಶೆಟ್ಟಿ ವಿರುದ್ಧ ಚೀಟಿಂಗ್​ ಕೇಸ್​; ಬಂಧನ ಭೀತಿ

ಸಂಸದ ಮುನಿಸ್ವಾಮಿ ಹಾಗೂ ಶಾಸಕ ಎಸ್.ಎನ್.ನಾರಾಯಣಸ್ವಾಮಿ ನಡುವೆ ಮಾತಿನ ಸಮರ; ಭ್ರಷ್ಟಾಚಾರದ ಆರೋಪ- ಪ್ರತ್ಯಾರೋಪ

(A Karnataka man is struggling in Liberia Africa and There have been allegations of not letting him come to Karnataka)