ಕೊಪ್ಪಳ: ಮೊಹರಂ ಹಬ್ಬದ ಮೆರವಣಿಗೆ ವೇಳೆ ಅಮಾನುಷ ಕೃತ್ಯ; ಮಹಿಳೆ ಮೇಲೆ ಹಲ್ಲೆ, ಮಾನಭಂಗಕ್ಕೆ ಯತ್ನ

ಮೊಹರಂ ಹಬ್ಬದ ಆಚರಣೆ ವೇಳೆ ನೆರೆದಿದ್ದ ಸಾವಿರಾರು ಜನರ ಎದುರು ಮಹಿಳೆ ಮೇಲೆ ಹಲ್ಲೆ ನಡೆಸಿ ಮಾನಭಂಗಕ್ಕೆ ಯತ್ನಿಸಿರುವ ಘಟನೆ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಹೂಲಗೇರಿ ಗ್ರಾಮದಲ್ಲಿ ನಡೆದಿದೆ.

ಕೊಪ್ಪಳ: ಮೊಹರಂ ಹಬ್ಬದ ಮೆರವಣಿಗೆ ವೇಳೆ ಅಮಾನುಷ ಕೃತ್ಯ; ಮಹಿಳೆ ಮೇಲೆ ಹಲ್ಲೆ, ಮಾನಭಂಗಕ್ಕೆ ಯತ್ನ
ಮಹಿಳೆ ಮೇಲೆ ಹಲ್ಲೆ
Edited By:

Updated on: Jul 31, 2023 | 10:07 AM

ಕೊಪ್ಪಳ: ಮೊಹರಂ (Muharram) ಹಬ್ಬದ ಆಚರಣೆ ವೇಳೆ ನೆರೆದಿದ್ದ ಸಾವಿರಾರು ಜನರ ಎದುರು ಮಹಿಳೆಯ ಮೇಲೆ (Women) ಹಲ್ಲೆ ನಡೆಸಿ, ಮಾನಭಂಗಕ್ಕೆ ಯತ್ನಿಸಿರುವ ಘಟನೆ ಜಿಲ್ಲೆಯ ಕುಷ್ಟಗಿ (Kushtagi) ತಾಲೂಕಿನ ಹೂಲಗೇರಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಮಂಜುನಾಥ ಹಾಬಲಕಟ್ಟಿ, ಮಲ್ಲಿಕಾರ್ಜುನ ಬೂದಿಹಾಳ ಕೃತ್ಯ ಎಸಗಿದ ಆರೋಪಿಗಳು. ಮೊಹರಂ ಮೆರವಣಿಗೆ ನೋಡಲು ಬಂದಿದ್ದ ಮಹಿಳೆ ಮೇಲೆ‌ ನಡುರಸ್ತೆಯಲ್ಲಿ ಮನಬಂದಂತೆ ಹಲ್ಲೆ ಮಾಡಿ ಮಾನಭಂಗಕ್ಕೆ ಯತ್ನಿಸಿದ್ದಾರೆ. ಸದ್ಯ ಆರೋಪಿಗಳ ವಿರುದ್ಧ ಹನುಮಸಾಗರ ಠಾಣೆಯಲ್ಲಿ ಐಪಿಸಿ ಸೆಕ್ಷನ್​ 323, 324, 353, 504 ಮತ್ತು ಎಸ್ಸಿ, ಎಸ್ಟಿ ಕಾಯ್ದೆ ಅಡಿ‌ ದೂರು ದಾಖಲಾಗಿದೆ.

ಇದನ್ನೂ ಓದಿ: 10 ವರ್ಷದ ಹಿಂದಿನ ಪ್ರೇಮ ವಿವಾಹದ ಸಿಟ್ಟು: ಮೊಹರಂ ಹಬ್ಬದ ವೇಳೆ ಎರಡು ಕುಟುಂಬಗಳ ನಡುವೆ ಗಲಾಟೆ, 8 ಜನರಿಗೆ ಗಾಯ

ಮನೆಗಳತನಕ್ಕೆ ಬಂದು ಸಿಕ್ಕಿಬಿದ್ದ ಕಳ್ಳರು

ಮನೆ ಕಳ್ಳತನ ಮಾಡುವಾಗ ಸಿಕ್ಕಿಬಿದ್ದ ಖದೀಮನನ್ನು ಸಾರ್ವಜನಿಕರು ಹಿಗ್ಗಾ ಮುಗ್ಗ ಥಳಿಸಿ ಪೊಲೀಸರಿಗೆ ಒಪ್ಪಿಸಿರುವ ಘಟನೆ ಜಿಲ್ಲೆಯ ಕುಷ್ಟಗಿ ತಾಲೂಕಿನ ಹೂಲಗೇರಾ ಗ್ರಾಮದಲ್ಲಿ ಘಟನೆ ನಡೆದಿದೆ. ತಡರಾತ್ರಿ ಶರಣಪ್ಪ ನಾಗರಾಳ ಎಂಬುವರ ಮನೆಗೆ ಕನ್ನ ಹಾಕಲು ಬಂದಿದ್ದರು. ಈ ವಿಚಾರ ತಿಳಿದ ಗ್ರಾಮಸ್ಥರು ಕೂಡಲೆ ಆತನನ್ನ ಹಿಡಿದು ಥಳಿಸಿ ಹನುಮಸಾಗರ ಪೊಲೀಸರಿಗೆ ಒಪ್ಪಿಸಿದ್ದಾರೆ. ಹನುಮಸಾಗರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:56 am, Mon, 31 July 23