10 ವರ್ಷದ ಹಿಂದಿನ ಪ್ರೇಮ ವಿವಾಹದ ಸಿಟ್ಟು: ಮೊಹರಂ ಹಬ್ಬದ ವೇಳೆ ಎರಡು ಕುಟುಂಬಗಳ ನಡುವೆ ಗಲಾಟೆ, 8 ಜನರಿಗೆ ಗಾಯ

ಮೊಹರಂ ಹಬ್ಬದ ವೇಳೆ ಒಂದೇ ಸಮುದಾಯದ ಎರಡು ಕುಟುಂಬಗಳ ನಡುವೆ ಗಲಾಟೆ ಆಗಿದ್ದು, ಪರಸ್ಪರ ಕಲ್ಲು ತೂರಾಟ ಮಾಡಿಕೊಂಡ ಪರಿಣಾಮ ಎಂಟು ಜನರಿಗೆ ಗಾಯಗಳಾಗಿರುವಂತಹ ಘಟನೆ ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಇಂಗಳಗಿ ಗ್ರಾಮದಲ್ಲಿ ನಡೆದಿದೆ.

10 ವರ್ಷದ ಹಿಂದಿನ ಪ್ರೇಮ ವಿವಾಹದ ಸಿಟ್ಟು: ಮೊಹರಂ ಹಬ್ಬದ ವೇಳೆ ಎರಡು ಕುಟುಂಬಗಳ ನಡುವೆ ಗಲಾಟೆ, 8 ಜನರಿಗೆ ಗಾಯ
ಎರಡು ಕುಟುಂಬಗಳ ನಡುವೆ ಗಲಾಟೆ
Follow us
ಸಂಜಯ್ಯಾ ಚಿಕ್ಕಮಠ, ಕೊಪ್ಪಳ
| Updated By: ಗಂಗಾಧರ​ ಬ. ಸಾಬೋಜಿ

Updated on: Jul 30, 2023 | 6:07 PM

ಕಲಬುರಗಿ, ಜುಲೈ 30: ಅವರೆಲ್ಲಾ ಒಂದೇ ಗ್ರಾಮದ ನಿವಾಸಿಗಳು. ಮೇಲಾಗಿ ಸಂಬಂಧಿಗಳು ಕೂಡ ಹೌದು. ಆದರೆ ನಡುರಸ್ತೆಯಲ್ಲಿಯೇ ಸಂಬಂಧಿಗಳು ಕಲ್ಲು, ದೊಣ್ಣೆಯಿಂದ ಬಡದಾಡಿ (clash) ಕೊಂಡಿದ್ದಾರೆ. ಎರಡು ಕುಟುಂಬದ ನಡುವಿನ ದ್ವೇಷ ಗ್ರಾಮವನ್ನು ರಾಣಾಂಗಣ ಮಾಡಿತ್ತು. ಯುವಕರು, ಮಹಿಳೆಯರು ಪರಸ್ಪರ ಬಡಿದಾಡಿಕೊಂಡು ಇದೀಗ ಆಸ್ಪತ್ರೆಗೆ ಸೇರಿದ್ದಾರೆ. ಎರಡು ಕುಟುಂಬದ ನಡುವಿನ ಕಾದಾಟಕ್ಕೆ ಹತ್ತು ವರ್ಷದ ಹಿಂದಿನ ಪ್ರೇಮ ವಿವಾಹ ಕಾರಣವಾಗಿದೆ.

ಎರಡು ಕುಟುಂಬದ ನಡುವೆ ಹಳೆ ವೈಷಮ್ಯಕ್ಕೆ ಗಲಾಟೆ

ಜಿಲ್ಲೆಯ ಚಿತ್ತಾಪುರ ತಾಲೂಕಿನ ಇಂಗಳಗಿ ಗ್ರಾಮದಲ್ಲಿ ನಿನ್ನೆ ಮೊಹರಂ ಹಬ್ಬದ‌ ಸಂಭ್ರಮವಿತ್ತು. ಗ್ರಾಮದ ಜನರೆಲ್ಲಾ ಸೇರಿಕೊಂಡು ಹಬ್ಬ ಆಚರಿಸುತ್ತಿದ್ದರು. ಆದರೆ ಸಂಜೆ ಐದು ಗಂಟೆ ಸಮಯದಲ್ಲಿ ದಿಢೀರನೆ ಎರಡು ಕುಟುಂಬದ ನಡುವೆ ಗಲಾಟೆ ಆರಂಭವಾಗಿತ್ತು. ಗ್ರಾಮದ ಹೊನಗುಂಟಾ ಮತ್ತು ಗುಳೇದ ಕುಟುಂಬದವರು ಪರಸ್ಪರ ಕಲ್ಲು ತೂರಾಟ ಆರಂಭಿಸಿದ್ದರು.

ಇದನ್ನೂ ಓದಿ: Yadgir News: ಶವ ಸಾಗಿಸುತ್ತಿದ್ದ ಆ್ಯಂಬುಲೆನ್ಸ್​ ಪಲ್ಟಿ: ಚಾಲಕನಿಗೆ ಗಾಯ

ಸ್ಥಳದಲ್ಲೇ ಪೊಲೀಸರು ಇದ್ದರು ಕೂಡ ಅವರ ಮಾತು ಕೇಳದೆ ಎರಡು ಕುಟುಂಬದ ಸದಸ್ಯರು ಪರಸ್ಪರ ಕಾದಾಡಿದ್ದಾರೆ. ಪರಿಣಾಮ ಘಟನೆಯಲ್ಲಿ ಎರಡು ಕುಟುಂಬದ ಹತ್ತಕ್ತೂ ಹೆಚ್ಚು ಜನ ಗಾಯಗೊಂಡಿದ್ದು , ಗಾಯಾಳುಗಳು ಕಲಬುರಗಿ ನಗರದ ಜಿಮ್ಸ್ ಆಸ್ಪತ್ರೆ, ಬಸವೇಶ್ವರ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

ಗಲಾಟೆಗೆ ಕಾರಣವಾಯ್ತಾ ಪ್ರೇಮ ವಿವಾಹ?

ಕುಟುಂಬಗಳ ನಡುವಿನ ಜಗಳಕ್ಕೆ ಕಾರಣ ಪ್ರೇಮ ವಿವಾಹವಂತೆ. ಹೌದು ಹತ್ತು ವರ್ಷದ ಹಿಂದೆ ಹೊನಗುಂಟಾ ಕುಟುಂಬದ ಅರ್ಜುನ್ ಎನ್ನುವ ವ್ಯಕ್ತಿ, ಗುಳೇದ ಕುಟುಂಬದ ಓರ್ವ ಯುವತಿಯನ್ನು ಪ್ರೀತಿಸಿದ್ದ. ಇಬ್ಬರು ಮನೆ ಬಿಟ್ಟು ಓಡಿ ಹೋಗಿದ್ದರಂತೆ. ನಂತರ ಎರಡು ಕುಟುಂಬಗಳು ಒಂದಾಗಿ ಮದುವೆ ಕೂಡ ಮಾಡಿದ್ದರು.

ಸದ್ಯ ದಂಪತಿ ಚೆನ್ನಾಗಿದ್ದು, ಎರಡು ಮಕ್ಕಳು ಕೂಡ ಇವೆಯಂತೆ. ಆದರೆ ತಮ್ಮ ಕುಟುಂಬದ ಯುವತಿಯನ್ನು ಪ್ರೀತಿಸಿ ಮದುವೆಯಾಗಿದ್ದಕ್ಕೆ ನಮ್ಮ ಇಡೀ ಕುಟುಂಬದ ವಿರುದ್ಧ ಗುಳೇದ ಕುಟುಂಬ ದ್ವೇಷ ಸಾಧಿಸುತ್ತಿದೆ. ಮೇಲಿಂದ ಮೇಲೆ ಜಗಳ ಮಾಡಿ ನಮ್ಮ ಮೇಲೆ ದೌರ್ಜನ್ಯ ಮಾಡುತ್ತಿದ್ದಾರೆ ಅಂತ ಹೊನಗುಂಟಾ ಕುಟುಂಬದವರು ಗುಳೇದ ಕುಟುಂಬದ ವಿರುದ್ಧ ಹೊನಗುಂಟಾ ಕುಟುಂಬದವರು ಆರೋಪಿಸುತ್ತಿದ್ದಾರೆ.

ನಾವು ಹಣ ಮತ್ತು ಆಸ್ತಿಯಲ್ಲಿ ಅವರಿಗಿಂತ ಕಮ್ಮಿಯಿದ್ದೇವೆ. ಇದೇ ಕಾರಣಕ್ಕೆ ಗುಳೇದ ಕುಟುಂಬ ನಮ್ಮ ಮೇಲೆ ದೌರ್ಜನ್ಯ ಮಾಡುತ್ತಿದೆ ಅಂತಿದ್ದಾರೆ ಹೊನಗುಂಟಾ ಕುಟುಬಂದ ನಿಂಗಪ್ಪಾ.

ಗಲಾಟೆಗೆ ಬೇರೆ ಕಾರಣ ಹೇಳುತ್ತಿರುವ ಮತ್ತೊಂದು ಕುಟುಂಬ

ಹೊನಗುಂಟಾ ಕುಟುಂಬದವರು ಗಲಾಟೆಗೆ ಪ್ರೇಮ ವಿವಾಹದ ಕಾರಣ ಹೇಳುತ್ತಿದ್ದರೆ, ಇನ್ನೊಂದಡೆ ಹೊನಗುಂಟಾ ಕುಟುಂಬವೇ ನಮ್ಮ ಕುಟುಂಬಕ್ಕೆ ತೊಂದರೆ ಕೊಡುತ್ತಿದೆ ಅಂತ ಗುಳೇದ ಕುಟುಂಬದವರು ಆರೋಪಿಸಿದ್ದಾರೆ.

ಇದನ್ನೂ ಓದಿ: ಮಂಗಳೂರಿನಲ್ಲಿ ಸಾರ್ವಜನಿಕರೊಂದಿಗೆ ಮಂಗಳಮುಖಿಯರ ಕಿರಿಕಿರಿ: ವಶಕ್ಕೆ ಪಡೆದ ಪೊಲೀಸರು

ಈ ಹಿಂದೆ ಅರ್ಜುನ್ ನಮ್ಮ ಕುಟುಂಬದ ಯುವತಿ ಓಡಿಸಿಕೊಂಡು ಹೋಗಿ ಮದುವೆಯಾಗಿದ್ದಾನೆ. ಇದೀಗ ಎರಡು ಮಕ್ಕಳು ಇದ್ದಾರೆ. ಆದರು ಕೂಡ ನಾವು ಸುಮ್ಮನೇ ಇದ್ದೇವೆ. ಆದರೆ ಈಗಾಗಲೇ ನಮ್ಮ ಹುಡುಗಿ ಮದುವೆಯಾಗಿರುವ ಅರ್ಜುನ್, ಇನ್ನೊಂದು ಮದುವೆಯಾಗುತ್ತಾನೆ, ನಿಮ್ಮ ಕುಟುಂಬದ ಯುವತಿಯನ್ನೇ ಕೊಟ್ಟು ಮದುವೆ ಮಾಡಿ ಅಂತ ನಮಗೆ ತೊಂದರೆ ಕೊಡುತ್ತಿದ್ದಾನೆ. ನಿನ್ನೆ ಕೂಡ ವಿನಾಕಾರಣ ಜಗಳ ತೆಗೆದು ನಮ್ಮ ಮೇಲೆ ಹಲ್ಲೆ ಮಾಡಿದ್ದಾರೆ ಅಂತ ಗುಳೇದ ಕುಟುಂಬದ ಭಾಗೀರಥಿ ಆರೋಪಿಸಿದ್ದಾರೆ.

ಎರಡು ಕುಟುಂಬದಿಂದ ದೂರು ಪ್ರತಿದೂರು ದಾಖಲು

ಸದ್ಯ ಇಂಗಳಗಿ ಗ್ರಾಮದಲ್ಲಿ ಮೊಹರಂ ಹಬ್ಬದ ವೇಳೆ ನಡೆದ ಗಲಾಟೆಗೆ ಸಂಬಂಧಿಸಿಂದಂತೆ ಎರಡು ಕುಟುಂಬಗಳು ಪರಸ್ಪರ ದೂರು ದಾಖಲಿಸಿವೆ. ಎರಡು ಕುಟುಂಬದವರ ಮೇಲೆ ಹಲ್ಲೆಯಾಗಿದ್ದರಿಂದ, ಎರಡು ಕುಟುಂಬದ ದೂರು ಸ್ವೀಕರಿಸಿರುವ ಪೊಲೀಸರು ಎರಡು ಕುಟುಂಬದ ಎಂಟಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆದಿದ್ದಾರೆ.

ಆದರೆ ಹಳೆ ವೈಷಮ್ಯವನ್ನು ಮರೆಯದೇ, ಅದನ್ನು ಮನಸ್ಸಿನಲ್ಲಿಟ್ಟುಕೊಂಡು ದ್ವೇಷ ಸಾದಿಸುತ್ತಿರುವದರಿಂದ ಎರಡು ಕುಟುಂಬದ ನಡುವೆ ಗಲಾಟೆಗಳು ಮೇಲಿಂದ ಮೇಲೆ ನಡೆಯುತ್ತಿರುವದು ದುರ್ದೈವದ ಸಂಗತಿಯಾಗಿದೆ. ದ್ವೇಷ ಬಿಟ್ಟು ಪ್ರೀತಿಯಿಂದ ಬಾಳುವದನ್ನು ಎರಡು ಕಡೆಯವರು ಕಲಿಯಬೇಕಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ