10 ವರ್ಷದ ಪ್ರೇಮದ ಫಲ! ಪೊಲೀಸರೂ ಇದ್ದರಪ್ಪಾ, ಗ್ರಾಮಸ್ಥರೂ ಸೇರಿದ್ದರು, ಆದ್ರೆ ಎರಡು ಕುಟುಂಬಗಳು ಬಡಿದಾಡಿಕೊಂಡವು, ಸಮಸ್ಯೆ ಏನು?

ಈ ಹಿಂದೆ ಅರ್ಜುನ್, ನಮ್ಮ ಕುಟುಂಬದ ಯುವತಿ ಓಡಿಸಿಕೊಂಡು ಹೋಗಿ ಮದುವೆಯಾಗಿದ್ದಾನೆ. ಇದೀಗ ಎರಡು ಮಕ್ಕಳು ಇದ್ದರೂ ಇನ್ನೊಂದು ಮದುವೆಯಾಗ್ತೇನೆ, ನಿಮ್ಮ ಕುಟುಂಬದ ಯುವತಿಯನ್ನೇ ಕೊಟ್ಟು ಮದುವೆ ಮಾಡಿ ಅಂತ ನಮಗೆ ತೊಂದರೆ ಕೊಡ್ತಿದ್ದಾನೆ - ಕುಟುಂಬವೊಂದರ ಆರೋಪ

10 ವರ್ಷದ ಪ್ರೇಮದ ಫಲ! ಪೊಲೀಸರೂ ಇದ್ದರಪ್ಪಾ, ಗ್ರಾಮಸ್ಥರೂ ಸೇರಿದ್ದರು, ಆದ್ರೆ ಎರಡು ಕುಟುಂಬಗಳು ಬಡಿದಾಡಿಕೊಂಡವು, ಸಮಸ್ಯೆ ಏನು?
10 ವರ್ಷದ ಪ್ರೇಮದ ಫಲ! ಎರಡು ಕುಟುಂಬಗಳು ದ್ವೇಷದಿಂದ ಬಡಿದಾಡಿಕೊಂಡವು
Follow us
ಸಂಜಯ್ಯಾ ಚಿಕ್ಕಮಠ, ಕೊಪ್ಪಳ
| Updated By: ಸಾಧು ಶ್ರೀನಾಥ್​

Updated on:Jul 31, 2023 | 12:16 PM

ಅಲ್ಲಿ ಪೊಲೀಸರೂ ಇದ್ದರಪ್ಪಾ, ನೂರಾರು ಜನ ಕೂಡ ಸೇರಿದ್ದರು. ಆದ್ರೆ ಇಡೀ ಗ್ರಾಮ ಎರಡು ಕುಟುಂಬದ ನಡುವಿನ ದ್ವೇಷಕ್ಕೆ ರಣಾಂಗಣವಾಗಿತ್ತು. ಯುವಕರು, ಮಹಿಳೆಯರು, ವೃದ್ದರು ಪರಸ್ಪರ ಕಲ್ಲು ತೂರಾಟ, ಬಡಿಗೆಯಿಂದ ಬಡಿದಾಡಿಕೊಂಡಿದ್ದಾರೆ. ಕೆಲವರು ಕೆಳಗೆ ಬಿದ್ದರೂ ಬಿಡ್ತಿಲ್ಲಾ, ತಳ್ಳಾಟ ನೂಕಾಟ ನಡೆದ್ರು ಯಾರು ಜಗ್ಗುತ್ತಿಲ್ಲ. ಇವರ ಅವರು ಮೇಲೆ ಕಲ್ಲೆಸೆದ್ರೆ, ಅವರು ಇವರ ಮೇಲೆ ಎಸೆಯುತ್ತಾರೆ. ಬಡಿಗೆಗಳನ್ನು ಹಿಡಿದು ಬಡದಾಡುತ್ತಿದ್ದಾರೆ. ಸ್ಥಳದಲ್ಲೇ ಪೊಲೀಸರು ಇದ್ದರು ಕೂಡಾ ಪೊಲೀಸರ ಮಾತನ್ನು ಕೂಡಾ ಯಾರು ಕೇಳ್ತಿಲ್ಲಾ! ಇದರಿಂದ ಇಡೀ ಗ್ರಾಮ ರಣಾಂಗಣವಾಗಿತ್ತು. ಇಷ್ಟಕ್ಕೂ ಎರಡು ಕುಟುಂಬದ ನಡುವಿನ ಕಾದಾಟಕ್ಕೆ (Fight) ಕಾರಣವಾಗಿದ್ದು ಹತ್ತು ವರ್ಷದ ಹಿಂದಿನ ಪ್ರೇಮ ವಿವಾಹ. ಆಸ್ಪತ್ರೆಯಲ್ಲಿ ಕೆಲವರ ನರಳಾಟ, ಇನ್ನು ಕೆಲವರು ಸಾವು ಬದುಕಿನ ಹೋರಾಟ, ಹೌದು ಒಬ್ಬರಲ್ಲಾ, ಇಬ್ಬರಲ್ಲಾ ಹತ್ತಕ್ಕೂ ಹೆಚ್ಚು ಜನರು ಆಸ್ಪತ್ರೆಯಲ್ಲಿ ನರಳಾಡುತ್ತಿದ್ದಾರೆ. ಅನೇಕರು ಎದ್ದೇಳಲಿಕ್ಕೆ ಆಗದಷ್ಟು ಗಂಭೀರವಾಗಿ ಗಾಯಗೊಂಡಿದ್ದಾರೆ. ಇವರ ನರಳಾಟಕ್ಕೆ ಕಾರಣ, ಅದೊಂದು ಘಟನೆ. ಇಂತಹದೊಂದು ಕಲ್ಲು ತೂರಾಟ, ಬಡಿದಾಟ ನಡೆದಿದ್ದು ಕಲಬುರಗಿ (Kalburgi) ಜಿಲ್ಲೆಯ ಚಿತ್ತಾಪುರ ತಾಲೂಕಿನ ಇಂಗಳಗಿ ಗ್ರಾಮದಲ್ಲಿ (Ingalagi Village).

ಹೌದು ಇಂಗಳಗಿ ಗ್ರಾಮದಲ್ಲಿ ಮೊನ್ನೆ ಮೊಹರಂ ಹಬ್ಬದ‌ ಸಂಭ್ರಮವಿತ್ತು. ಗ್ರಾಮದ ಜನರೆಲ್ಲಾ ಸೇರಿಕೊಂಡು ಹಬ್ಬ ಆಚರಿಸುತ್ತಿದ್ದರು. ಆದ್ರೆ ಸಂಜೆ ಐದು ಗಂಟೆ ಸಮಯದಲ್ಲಿ ದಿಢೀರನೆ ಎರಡು ಕುಟುಂಬದ ನಡುವೆ ಗಲಾಟೆ ಆರಂಭವಾಗಿತ್ತು. ಹೌದು ಗ್ರಾಮದ ಹೊನಗುಂಟಾ ಮತ್ತು ಗುಳೇದ ಕುಟುಂಬದವರ ಪರಸ್ಪರ ಕಲ್ಲು ತೂರಾಟ ಆರಂಭಿಸಿದ್ದಾರೆ. ಸ್ಥಳದಲ್ಲೇ ಪೊಲೀಸರು ಇದ್ದರು ಕೂಡಾ ಅವರ ಮಾತನ್ನು ಕೂಡಾ ಕೇಳದೆ ಎರಡು ಕುಟುಂಬದ ಸದಸ್ಯರು ಪರಸ್ಪರ ಕಾದಾಡಿದ್ದಾರೆ. ಘಟನೆಯಲ್ಲಿ ಎರಡು ಕುಟುಂಬದ ಹತ್ತಕ್ತೂ ಹೆಚ್ಚು ಜನ ಗಾಯಗೊಂಡಿದ್ದು, ಗಾಯಾಳುಗಳು ಕಲಬುರಗಿ ನಗರದ ಜಿಮ್ಸ್ ಆಸ್ಪತ್ರೆ, ಬಸವೇಶ್ವರ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಬಡಿದಾಡಿಕೊಂಡಿರೋ ಎರಡು ಕುಟುಂಬಗಳು ಕೂಡಾ ಒಂದೇ ಜಾತಿಗೆ ಸೇರಿದವರು. ಮೇಲಾಗಿ ಸಂಬಂಧಿಗಳು ಕೂಡಾ ಹೌದು.

ಇಂಗಳಗಿ ಗ್ರಾಮದಲ್ಲಿ ಹೊನಗುಂಟಾ ಮತ್ತು ಗುಳೇದ ಕುಟುಂಬದ ನಡುವಿನ ಜಗಳಕ್ಕೆ ಕಾರಣ ಪ್ರೇಮ ವಿವಾಹ. ಹೌದು 10 ವರ್ಷದ ಹಿಂದೆ ಹೊನಗುಂಟಾ ಕುಟುಂಬದ ಅರ್ಜುನ್ ಅನ್ನೋ ವ್ಯಕ್ತಿ, ಗುಳೇದ ಕುಟುಂಬದ ಓರ್ವ ಯುವತಿಯನ್ನು ಪ್ರೀತಿಸಿದ್ದ. ಇಬ್ಬರೂ ಮನೆ ಬಿಟ್ಟು ಓಡಿ ಹೋಗಿದ್ದರಂತೆ. ನಂತರ ಎರಡೂ ಕುಟುಂಬಗಳು ಒಂದಾಗಿ ಮದುವೆ ಕೂಡಾ ಮಾಡಿದ್ದರು. ದಂಪತಿ ಚೆನ್ನಾಗಿದ್ದಾರೆ. ಅವರಿಗೆ ಎರಡು ಮಕ್ಕಳು ಕೂಡಾ ಇವೆ.

ಆದ್ರೆ ತಮ್ಮ ಕುಟುಂಬದ ಯುವತಿಯನ್ನು ಪ್ರೀತಿಸಿ ಮದುವೆಯಾಗಿದ್ದಕ್ಕೆ ನಮ್ಮ ಇಡೀ ಕುಟುಂಬದ ವಿರುದ್ಧ ಗುಳೇದ ಕುಟುಂಬ ದ್ವೇಷ ಸಾಧಿಸುತ್ತಿದೆ. ಮೇಲಿಂದ ಮೇಲೆ ಜಗಳ ತಗೆದು ನಮ್ಮ ಮೇಲೆ ದೌರ್ಜನ್ಯ ಮಾಡುತ್ತಿದ್ದಾರೆ ಅಂತ ಹೊನಗುಂಟಾ ಕುಟುಂಬದವರು ಗುಳೇದ ಕುಟುಂಬದ ವಿರುದ್ಧ ಆರೋಪಿಸುತ್ತಿದ್ದಾರೆ. ಇನ್ನೊಂದಡೆ ಹೊನಗುಂಟಾ ಕುಟುಂಬವೇ ನಮ್ಮ ಕುಟುಂಬಕ್ಕೆ ತೊಂದರೆ ಕೊಡ್ತಿದೆ. ಈ ಹಿಂದೆ ಅರ್ಜುನ್, ನಮ್ಮ ಕುಟುಂಬದ ಯುವತಿ ಓಡಿಸಿಕೊಂಡು ಹೋಗಿ ಮದುವೆಯಾಗಿದ್ದಾನೆ. ಇದೀಗ ಎರಡು ಮಕ್ಕಳು ಇದ್ದರೂ ಇನ್ನೊಂದು ಮದುವೆಯಾಗ್ತೇನೆ, ನಿಮ್ಮ ಕುಟುಂಬದ ಯುವತಿಯನ್ನೇ ಕೊಟ್ಟು ಮದುವೆ ಮಾಡಿ ಅಂತ ನಮಗೆ ತೊಂದರೆ ಕೊಡ್ತಿದ್ದಾನೆ. ನಿನ್ನೆ ಕೂಡಾ ವಿನಾಕಾರಣ ಜಗಳ ತಗೆದು ನಮ್ಮ ಮೇಲೆ ಹಲ್ಲೆ ಮಾಡಿದ್ದಾರೆ ಅಂತ ಗುಳೇದ ಕುಟುಂಬ ಆರೋಪಿಸುತ್ತಿದೆ.

ಇದನ್ನೂ ಓದಿ: ತನ್ನದೆ ಕಿಡ್ನಿ ಕೊಟ್ಟು ಮಗನಿಗೆ ಮರು ಜನ್ಮ ನೀಡಲು ಮುಂದಾಗಿರುವ ಮಹಾತಾಯಿ, ಆದರೂ ವಿಘ್ನಗಳು ಎದುರಾಗಿವೆ, ನೆರವು ಬೇಕಿದೆ

ಸದ್ಯ ಇಂಗಳಗಿ ಗ್ರಾಮದಲ್ಲಿ ಮೊಹರಂ ಹಬ್ಬದ ವೇಳೆ ನಡೆದ ಗಲಾಟೆಗೆ ಸಂಬಂಧಿಸಿಂದಂತೆ ಎರಡು ಕುಟುಂಬಗಳು ಪರಸ್ಪರ ದೂರು ದಾಖಲಿಸಿವೆ. ಎರಡು ಕುಟುಂಬದವರ ಮೇಲೆ ಹಲ್ಲೆಯಾಗಿದ್ದರಿಂದ, ಎರಡು ಕುಟುಂಬದ ದೂರು ಸ್ವೀಕರಿಸಿರೋ ಪೊಲೀಸರು ಎರಡು ಕುಟುಂಬದ ಎಂಟಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆದಿದ್ದಾರೆ. ಆದ್ರೆ ಹಳೆ ವೈಷಮ್ಯವನ್ನು ಮರೆಯದೇ, ಅದನ್ನು ಮನಸ್ಸಿನಲ್ಲಿಟ್ಟುಕೊಂಡು ದ್ವೇಷ ಸಾಧಿಸುತ್ತಿರುವದರಿಂದ ಎರಡು ಕುಟುಂಬದ ನಡುವೆ ಗಲಾಟೆಗಳು ಮೇಲಿಂದ ಮೇಲೆ ನಡೆಯುತ್ತಿರುವುದು ದುರ್ದೈವದ ಸಂಗತಿಯಾಗಿದೆ. ದ್ವೇಷ ಬಿಟ್ಟು ಪ್ರೀತಿಯಿಂದ ಬಾಳುವುದನ್ನು ಎರಡೂ ಕಡೆಯವರು ಕಲಿಯಬೇಕಿದೆ.

ಕಲಬುರಗಿ ಜಿಲ್ಲಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:11 pm, Mon, 31 July 23

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ