ಪಾಳು ಬಿದ್ದ ಜಾಗದಲ್ಲಿ ಹೈಟೆಕ್ ಸ್ಮಶಾನ ನಿರ್ಮಾಣ, ಹಿಂದೂ-ಮುಸ್ಲಿಂ ಭಾವೈಕ್ಯತೆ ಸಾರುತ್ತದೆ ಈ ಸ್ಮಶಾನ
ಅದು ಸರ್ಕಾರಿ ಜಮೀನು. ಅಲ್ಲಿ ತಿಪ್ಪೆ ಗುಂಡಿಗಳಿದ್ವು ಜನ ಅದನ್ನ ಕಸ ಹಾಕೋಕೆ ಉಪಯೋಗ ಮಾಡ್ತಿದ್ರು, ಆ ಎರಡು ಎಕರೇ ಜಮೀನು ಸಂಪೂರ್ಣ ಕಸದಿಂದ ತುಂಬಿ ಹೋಗಿತ್ತು. ಆದ್ರೆ ಅಧಿಕಾರಿಗಳ ಪರಿಶ್ರಮದಿಂದ ಅಲ್ಲೊಂದು ಹೈಟೆಕ್ ಸ್ಮಶಾನ ನಿರ್ಮಾಣವಾಗಿದೆ. ಯಾವ ಪಾರ್ಕ್ಗೂ ಕಡಿಮೆ ಇಲ್ಲದ ಸ್ಮಶಾನ ಭಾವೈಕ್ಯತೆ ಬಿಂಬಿಸುತ್ತಿದೆ.
ಕೊಪ್ಪಳ: ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಕೋಟಯ್ಯ ಕ್ಯಾಂಪ್ ಬಳಿ ಸ್ಮಶಾನವೊಂದು ನಿರ್ಮಾಣವಾಗಿದೆ. ಎರಡು ಎಕರೆ ಜಾಗದಲ್ಲಿ ಸ್ಮಶಾನ ನಿರ್ಮಾಣವಾಗಿದ್ದು, ಇದು ಯಾವ ಉದ್ಯಾನವನಕ್ಕೂ ಕಡಿಮೆ ಇಲ್ಲ. ಇಲ್ಲಿ ಹಿಂದೂ ಮುಸ್ಲಿಂ ಯಾರೂ ಇದ್ರು ಶವ ಸಂಸ್ಕಾರ ಮಾಡಬಹುದು. ಮಾಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಇಂತಹ ಭಾವಕ್ಯತೆ ಸ್ಮಶಾನ ನಿರ್ಮಾಣವಾಗಿದೆ.
ಗ್ರಾಮ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಅಧಿಕಾರಿಗಳು ಮಾಹತ್ಮಾ ಗಾಂಧಿ ಯೋಜನೆಯಲ್ಲಿ ಇಂತಹದ್ದೊಂದು ಯೋಜನೆ ರೂಪಿಸಿ ಯಾವುದೇ ಉದ್ಯಾನವನಕ್ಕೂ ಕಡಿಮೆ ಇರದ ಹೈಟೆಕ್ ಸ್ಮಶಾನ ನಿರ್ಮಿಸಿದ್ದಾರೆ. ಆರು ತಿಂಗಳ ಸಮಯದಲ್ಲಿ ಸುಮಾರು 2 ಲಕ್ಷ ವೆಚ್ಚದಲ್ಲಿ ಹೈಟೆಕ್ ಸ್ಮಶಾನ ರೆಡಿಯಾಗಿದೆ. ಸ್ಮಶಾನ ನಿರ್ಮಣ ವಾಗೋ ಮುನ್ನ ಸರ್ಕಾರದ ಎರಡು ಎಕರೆ ಜಾಗ ಪಾಳು ಬಿದ್ದಿತ್ತು. ಜನ ಕಸ ಹಾಕಲು ಇದನ್ನ ಉಪಯೋಗ ಮಾಡ್ತಿದ್ರು. ಗ್ರಾಮದಲ್ಲಿ ಶವ ಸಂಸ್ಕಾರಕ್ಕೆ ಸಮಸ್ಯೆ ಇತ್ತು. ಇದನ್ನು ಅರಿತ ಅಧಿಕಾರಿಗಳು ಸ್ಮಶಾನ ನಿರ್ಮಾಣಕ್ಕೆ ಮುಂದಾಗಿದ್ರು. ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಆರು ತಿಂಗಳಲ್ಲಿ ಕೆಲಸ ಮಾಡಿ, ಹೈಟೆಕ್ ಸ್ಮಶಾನ ನಿರ್ಮಿಸಿದ್ದಾರೆ.
ಈ ಹೈಟೆಕ್ ಸ್ಮಶಾನದಲ್ಲಿ ಕೋಲ್ಡ್ ಸ್ಟೋರೇಜ್ ರೂಮ್, ಹಿಂದುಗಳ ಶವ ಸಂಸ್ಕಾರಕ್ಕೆ ಪತ್ಯೇಕ ಜಾಗ, ಮುಸ್ಲಿಂ ಸಮುದಾಯಕ್ಕೆ ಪ್ರತ್ಯೇಕ ಜಾಗ ಮೀಸಲಿಡಾಗಿದೆ. ಅಲ್ದೆ ಸುತ್ತಲೂ ಒಂದು ಸಾವಿರ ಸಸಿ ನೆಡಲಾಗಿದೆ. ಯಾವ ಉದ್ಯಾನವನಕ್ಕೂ ಕಡಿಮೆ ಇಲ್ಲ ಎನ್ನುವಂತೆ ಅಧಿಕಾರಿಗಳು ಸ್ಮಶಾನ ನಿರ್ಮಿಸಿದ್ದಾರೆ. ಇದು ಮುಂದೆ ಒಂದು ದಿನ ಪ್ರವಾಸಿ ತಾಣವಾದರೂ ಅಚ್ಚರಿ ಇಲ್ಲ ಅನ್ಮೋದು ಅಧಿಕಾರಿಗಳ ಮಾತು.
ಕೋಟಯ್ಯ ಕ್ಯಾಂಪ್ ನಲ್ಲಿ ಸರ್ಕಾರದ ಎರಡು ಎಕರೆ ಜಮೀನು ಪಾಳು ಬಿದ್ದಿತ್ತು. ಉದ್ಯೋಗ ಖಾತ್ರಿ ಯೋಜನೆಯಲ್ಲಿ ಹೈಟೆಕ್ ಸ್ಮಶಾನ ನಿರ್ಮಾಣ ಮಾಡಿದ್ದೇವೆ. ಸುಮಾರು 2 ಲಕ್ಷ ವೆಚ್ಚದಲ್ಲಿ ಸ್ಮಶಾನ ನಿರ್ಮಾಣವಾಗಿದೆ. ಇದು ಹಿಂದೂ ಮುಸ್ಲಿಂ ಭಾವೈಕ್ಯತೆಯ ಸ್ಮಶಾನ. ಇದು ಮುಂದೆ ಪ್ರವಾಸಿ ತಾಣವಾದರೂ ಅಚ್ಚರಿ ಇಲ್ಲ ಎಂದು ತಾಲೂಕು ಪಂಚಾಯಿತಿ ಅಧಿಕಾರಿ ಮೋಹನ ತಿಳಿಸಿದ್ದಾರೆ.
ಇದನ್ನೂ ಓದಿ: ‘ರಮ್ಯಾ ಕೇವಲ ವಿಶ್ ಮಾಡೋದಲ್ಲ, ನಮ್ಮ ಜತೆ ಸಿನಿಮಾ ಮಾಡಬೇಕು’; ಮನದಾಳದ ಮಾತು ಹೇಳಿಕೊಂಡ ಧನಂಜಯ