ಚೈತ್ರಾ ಕುಂದಾಪುರ ಕೊಪ್ಪಳ ನಂಟು, ಏನಿದು ಚೈತ್ರಾ ವರ್ಸಸ್ ಅನ್ಸಾರಿ ಚುನಾವಣೆ?

| Updated By: Rakesh Nayak Manchi

Updated on: Sep 14, 2023 | 12:23 PM

ಹಿಂದುತ್ವದ ಹೆಸರಿನಲ್ಲಿ ಭಾಷಣ ಮಾಡುತ್ತಿದ್ದ ಚೈತ್ರಾ ಕುಂದಾಪುರ ಬಹುಕೋಟಿ ವಂಚನೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ಇಂದಿನಿಂದ 14 ದಿನ ಸಿಸಿಬಿ ಪೊಲೀಸರ ವಿಚಾರಣೆಯನ್ನು ಎದುರಿಸುತ್ತಿದ್ದಾರೆ. 2018 ವಿಧಾನಸಭೆ ಚುನಾವಣೆ ಸಮಯದಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ಮುನ್ನೆಲೆಗೆ ಬಂದಿದ್ದ ಚೈತ್ರಾ, ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ ಹವಾ ಕೂಡ ಸೃಷ್ಟಿಸಿದ್ದರು.

ಚೈತ್ರಾ ಕುಂದಾಪುರ ಕೊಪ್ಪಳ ನಂಟು, ಏನಿದು ಚೈತ್ರಾ ವರ್ಸಸ್ ಅನ್ಸಾರಿ ಚುನಾವಣೆ?
ಚೈತ್ರಿ ಕುಂದಾಪುರ, ಪರಣ್ಣ ಮುನವಳ್ಳಿ ಮತ್ತು ಇಕ್ಬಾಲ್ ಅನ್ಸಾರಿ
Follow us on

ಕೊಪ್ಪಳ, ಸೆ.14: ಹಿಂದುತ್ವದ ಹೆಸರಿನಲ್ಲಿ ಭಾಷಣ ಮಾಡುತ್ತಿದ್ದ ಚೈತ್ರಾ ಕುಂದಾಪುರ (Chaitra Kundapur) ಬಹುಕೋಟಿ ವಂಚನೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ಇಂದಿನಿಂದ 14 ದಿನ ಸಿಸಿಬಿ ಪೊಲೀಸರ ವಿಚಾರಣೆಯನ್ನು ಎದುರಿಸುತ್ತಿದ್ದಾರೆ. 2018 ವಿಧಾನಸಭೆ ಚುನಾವಣೆ ಸಮಯದಲ್ಲಿ ಕೊಪ್ಪಳ (Koppal) ಜಿಲ್ಲೆಯಲ್ಲಿ ಮುನ್ನೆಲೆಗೆ ಬಂದಿದ್ದ ಚೈತ್ರಾ, ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ ಹವಾ ಕೂಡ ಸೃಷ್ಟಿಸಿದ್ದರು.

ಹೌದು, ಕೊಪ್ಪಳ ಜಿಲ್ಲೆಯ ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ ಮುಸ್ಲಿಂ ವಿರೋಧಿ ಭಾಷಣ ಹಾಗೂ ಪ್ರಕರ ಹಿಂದುತ್ವದ ಬಗ್ಗೆ ಭಾಷಣ ಮಾಡಿ ಹೆಚ್ಚು ಜನಪ್ರಿಯತೆ ಪಡೆದಿದ್ದರು. ಅಲ್ಲದೆ, ಬಿಜೆಪಿ ಅಭ್ಯರ್ಥಿ ಪರಣ್ಣ ಮುನವಳ್ಳಿ ಪರ ಪ್ರಚಾರ ಮಾಡಿದ್ದ ಚೈತ್ರಾ, ಕಾಂಗ್ರೆಸ್ ಅಭ್ಯರ್ಥಿ ಇಕ್ಬಾಲ್ ಅನ್ಸಾರಿ ವಿರುದ್ದ, ಮುಸ್ಲಿಂ ಸಮುದಾಯದ ವಿರುದ್ದ ಕೋಮು ದ್ವೇಷದ ಭಾಷಣ ಮಾಡಿದ್ದರು.

ಇದನ್ನೂ ಓದಿ: ಸ್ವಾಮೀಜಿ ಬಂಧನವಾಗಲಿ ದೊಡ್ಡ ದೊಡ್ಡವರ ಹೆಸರು ಕೂಡ ಬಹಿರಂಗವಾಗುತ್ತೆ: ಬಾಂಬ್​ ಸಿಡಿಸಿದ ಚೈತ್ರಾ ಕುಂದಾಪುರ

ಅಂಜನಾದ್ರಿ ಪರ, ಅನ್ಸಾರಿ ವಿರುದ್ಧ ಕೋಮು ಕಿಡಿ ಹೊತ್ತಿಸಿದ್ದ ಚೈತ್ರಾ, ಪರಣ್ಣ ಮುನವಳ್ಳಿ ಗೆಲುವಿನಲ್ಲಿ ಮಹತ್ತರ ಪಾತ್ರ ವಹಿಸಿದ್ದರು. ಅಷ್ಟೇ ಅಲ್ಲದೆ, ಕೋಮುದ್ವೇಷದ ಭಾಷಣ ಮಾಡಿದ ಹಿನ್ನಲೆ ಗಂಗಾವತಿಯಲ್ಲಿ ಪ್ರಕರಣವೂ ದಾಖಲಾಗಿತ್ತು. ಚುನಾವಣೆಯಲ್ಲಿ ಗೆದ್ದ ನಂತರ ತನಗೆ ಬೇಲ್ ಕೊಡಿಸಿಲ್ಲ ಎಂದು ಪರಣ್ಣ ವಿರುದ್ಧವೇ ಚೈತ್ರಾ ತಿರುಗಿಬಿದ್ದಿದ್ದರು.

ಅಷ್ಟು ಮಾತ್ರವಲ್ಲದೆ, ಜಿಲ್ಲೆಗೆ ಚೈತ್ರಾ ಅವರನ್ನು ಕರೆತಂದು ಪ್ರಚಾರ ನಡೆಸಿದ್ದ ಬಗ್ಗೆ ಟೀಕಿಸಿದ್ದ ಇಕ್ಬಾಲ್ ಅನ್ಸಾರಿ, ಪರಣ್ಣ ಹಣ ಕೊಟ್ಟು ಗಂಗಾವತಿಗೆ ಕರೆತಂದ ಗಿರಾಕಿ ಎಂದು ಜರಿದಿದ್ದರು. ಆ ವರ್ಷದ ವಿಧಾನಸಭೆ ಚುನಾವಣೆ ಅನ್ಸಾರಿ ಮತ್ತು ಪರಣ್ಣ ಅನ್ನೋದಕ್ಕಿಂತ, ಚೈತ್ರಾ ವರ್ಸಸ್ ಅನ್ಸಾರಿ ಎಂದು ನಡೆದಿತ್ತು. ಅಷ್ಟರ ಮಟ್ಟಿಗೆ ಗಂಗಾವತಿಯಲ್ಲಿ ಚೈತ್ರಾ ಹವಾ ಸೃಷ್ಟಿಸಿದ್ದರು.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:47 am, Thu, 14 September 23