Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊಪ್ಪಳ ಏತ ನೀರಾವರಿ ಮೊದಲ ಹಂತದ ಯೋಜನೆ ಉದ್ಘಾಟಿಸಿದ ಸಿಎಂ ಬೊಮ್ಮಾಯಿ; ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ

ಕೊಪ್ಪಳ‌ ಏತನೀರಾವರಿ ಯೋಜನೆಯ ಮೊದಲ ಹಂತದ ಮುಖ್ಯ ಸ್ಥಾವರವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಗಳವಾರ ಹುನಗುಂದ ಕ್ಷೇತ್ರದ ಇಳಕಲ್​ನಲ್ಲಿ ಉದ್ಘಾಟನೆ ಮಾಡಿದರು.

ಕೊಪ್ಪಳ ಏತ ನೀರಾವರಿ ಮೊದಲ ಹಂತದ ಯೋಜನೆ ಉದ್ಘಾಟಿಸಿದ ಸಿಎಂ ಬೊಮ್ಮಾಯಿ; ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (ಸಂಗ್ರಹ ಚಿತ್ರ)
Follow us
Ganapathi Sharma
|

Updated on: Mar 21, 2023 | 5:15 PM

ಬಾಗಲಕೋಟೆ: ಕೊಪ್ಪಳ‌ ಏತನೀರಾವರಿ ಯೋಜನೆಯ (Koppal Lift Irrigation Scheme) ಮೊದಲ ಹಂತದ ಮುಖ್ಯ ಸ್ಥಾವರವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಮಂಗಳವಾರ ಉದ್ಘಾಟನೆ ಮಾಡಿದರು. ಮೇಘಾ ಇಂಜಿನಿಯರಿಂಗ್​​​ ಆ್ಯಂಡ್ ಇನ್​ಫಾಸ್ಟ್ರಕ್ಚರ್​​​​ ಕಂಪನಿಯಿಂದ (MEIL) ಕೊಪ್ಪಳ‌ ಏತನೀರಾವರಿ ಮೊದಲ ಹಂತದ ಮುಖ್ಯ ಸ್ಥಾವರ ನಿರ್ಮಾಣ ಮಾಡಲಾಗಿದೆ. 21 ಕಿ.ಮೀ. ವ್ಯಾಪ್ತಿಯ 3.1 ಮೀಟರ್ ಡಯಾ ಪೈಪ್ ಜೋಡಿಸಿ ಸ್ಥಾವರ ನಿರ್ಮಾಣ ಮಾಡಲಾಗಿದ್ದು, 9915 ಎಚ್​ಪಿ ಮೋಟರ್ ಸಾಮರ್ಥ್ಯದ ಪೈಪ್​​ಲೈನ್​ ಮೂಲಕ ನೀರು ಪೂರೈಕೆ ಮಾಡಲಾಗುತ್ತದೆ. ಹುನಗುಂದ ಕ್ಷೇತ್ರದ ಇಳಕಲ್​ನಲ್ಲಿ ಸ್ಥಾವರವನ್ನು ಉದ್ಘಾಟನೆ ಮಾಡಿ ಮಾತನಾಡಿದ ಮುಖ್ಯಮಂತ್ರಿ, ಪ್ರತಿಪಕ್ಷ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.

ಜಾತಿ, ಧರ್ಮ ನೋಡಿ ನಾವು ಕಾರ್ಯಕ್ರಮ ಮಾಡುವುದಿಲ್ಲ. ಎಸ್​ಸಿ, ಎಸ್​​ಟಿ ಸಮುದಾಯ ಅಭಿವೃದ್ಧಿಗೆ ಅನುದಾನ ಕೊಟ್ಟಿದ್ದೇವೆ. ಒಂದು ಲಕ್ಷ ಹಾಸ್ಟೆಲ್​​ಗಳ ಮಂಜೂರಿಗಾಗಿ ಹಣ ಮೀಸಲಿಟ್ಟಿದ್ದೇವೆ. ಎಸ್​ಸಿ, ಎಸ್​​ಟಿ ಸಮುದಾಯದ ಮೀಸಲಾತಿ ಪ್ರಮಾಣ ಹೆಚ್ಚಿಸಿದ್ದೇವೆ. ನಮ್ಮದು ಶಾಶ್ವತ, ಜನಪರ ಯೋಜನೆಗಳು ಎಂದ ಬೊಮ್ಮಾಯಿ, ಕಾಂಗ್ರೆಸ್​ನದ್ದು ಗ್ಯಾರಂಟಿ ಕಾರ್ಡ್ ಅಲ್ಲ, ವಿಸಿಟಿಂಗ್ ಕಾರ್ಡ್ ಅಷ್ಟೇ. ಗ್ಯಾರಂಟಿ ಕಾರ್ಡ್​​​ಗಳನ್ನೆಲ್ಲ ಉಪ್ಪಿನಕಾಯಿ ಹಾಕಬೇಕು ಅಷ್ಟೇ ಎಂದು ವ್ಯಂಗ್ಯವಾಡಿದರು.

25 ಲಕ್ಷ ಮನೆಗಳಿಗೆ ಕುಡಿಯುವ ನೀರನ್ನು ಪೂರೈಕೆ ಮಾಡಿದ್ದೇವೆ. ಇದು ಅಭಿವೃದ್ಧಿ, ಇದು ಸರ್ಕಾರದ ಸಾಧನೆ. ಪಿಯುಸಿ, ಪದವಿ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡಲು ನಿರ್ಧರಿಸಿದ್ದೇವೆ. ನಾವು 3 ವರ್ಷದಲ್ಲಿ 40 ಲಕ್ಷ ಮನೆಗಳಿಗೆ ನೀರು ಒದಗಿಸಿದ್ದೇವೆ. 4 ಲಕ್ಷ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡುತ್ತೇವೆ. ದುಡಿಯುವ ಜನರಿಂದ ರಾಜ್ಯ ಕಟ್ಟುತ್ತಿದ್ದೇವೆ, ಶ್ರೀಮಂತರಿಂದಲ್ಲ ಎಂದು ಬೊಮ್ಮಾಯಿ ಹೇಳಿದರು.

ಬ್ರಷ್ಟಾಚಾರದ ಬಗ್ಗೆ ಮಾತಾಡೋಕೆ ನಿಮಗೆ ಏನು ನೈತಿಕತೆ ಇದೆ; ಸಿದ್ದರಾಮಯ್ಯಗೆ ಬೊಮ್ಮಾಯಿ ಪ್ರಶ್ನೆ

ಬಾದಾಮಿಯಿಂದ ಆಯ್ಕೆಯಾಗಿ ಜನರ ಸಮಸ್ಯೆ ಬಗೆಹರಿಸಲು ಆಗಿಲ್ಲ. ಬ್ರಷ್ಟಾಚಾರದ ಬಗ್ಗೆ ಮಾತಾಡೋಕೆ ನಿಮಗೆ ಏನು ನೈತಿಕತೆ ಇದೆ ಎಂದು ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು. ಅನುದಾನದ ವಿಚಾರದಲ್ಲಿ ನಾವು ತಾರತಮ್ಯ ಮಾಡುವುದಿಲ್ಲ ಎಂದೂ ಅವರು ಹೇಳಿದರು.

ಇದನ್ನೂ ಓದಿ: ಸಿದ್ದರಾಮಯ್ಯ ಭ್ರಷ್ಟಾಚಾರ ಬಗ್ಗೆ ಮಾತನಾಡಿದ್ರೆ ಇದ್ದಿಲು ಮಸಿಗೆ ಬುದ್ಧಿ ಹೇಳಿದಂತೆ: ಸಿಎಂ ಬೊಮ್ಮಾಯಿ

ಪಿಯುಸಿಯಲ್ಲಿ ಅನುತ್ತೀರ್ಣರಾದವರಿಗೆ ಐಟಿಐ ತರಬೇತಿ ಕೊಡುತ್ತೇವೆ. ತರಬೇತಿ ಹಂತದಲ್ಲಿ ಮಾಸಿಕ 1,500 ಮಾಶಾಸನ ನೀಡುತ್ತೇವೆ ಎಂದು ಅವರು ಹೇಳಿದರು.

ಹುನಗುಂದ ಕ್ಷೇತ್ರದ ಜನತೆ ಬಹಳ ಒಳ್ಳೆಯವರು. ಅಭಿವೃದ್ಧಿ ಕೆಲಸಕ್ಕೆ ಇಲ್ಲಿನ ಜನರೆಲ್ಲಾ ಬೆಂಬಲ ನೀಡುತ್ತಾರೆ. ಕ್ಷೇತ್ರದ ಶಾಸಕ ದೊಡ್ಡನಗೌಡ ಪಾಟೀಲ್ ಮಾಡಿದ ಅಭಿವೃದ್ಧಿ ಕೆಲಸಗಳು ಅಷ್ಟಿಷ್ಟಲ್ಲ. ಕ್ಷೇತ್ರದ ಅಭಿವೃದ್ಧಿಗೆ ವಿವಿಧ ಇಲಾಖೆಗಳಿಂದ 7-8 ನೂರು ಕೋಟಿ ಅನುದಾನ ತಂದಿದ್ದಾರೆ ಎಂದು ಬೊಮ್ಮಾಯಿ ಶ್ಲಾಘಿಸಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ