ಬಿಜೆಪಿ ಮುಖಂಡರು ಸತ್ತರೆ 1 ಕೋಟಿ ಪರಿಹಾರ ಕೊಡ್ತೀವಿ; ಕಾಂಗ್ರೆಸ್ ಶಾಸಕ ಅಮರೇಗೌಡ ಬಯ್ಯಾಪುರ ಹೇಳಿಕೆ

ಸಂಸದರ ಮಗ ಕಾರು ಹಾಯಿಸಿ ಸಾಯಿಸಿದ್ದರೂ ಬಿಜೆಪಿಯವರು ಯಾರೂ ಮಾತನಾಡಿಲ್ಲ. ಕೇವಲ 45 ಲಕ್ಷ ಪರಿಹಾರ ಕೊಟ್ಟಿದ್ದಾರೆ. ಬಿಜೆಪಿ ಈ ದೇಶದಿಂದ ತೊಲಗಬೇಕು. ಅಲ್ಲಿವರೆಗೂ ನಮ್ಮ ಹೋರಾಟ ನಡೆಯುತ್ತದೆ.

ಬಿಜೆಪಿ ಮುಖಂಡರು ಸತ್ತರೆ 1 ಕೋಟಿ ಪರಿಹಾರ ಕೊಡ್ತೀವಿ; ಕಾಂಗ್ರೆಸ್ ಶಾಸಕ ಅಮರೇಗೌಡ ಬಯ್ಯಾಪುರ ಹೇಳಿಕೆ
ಕಾಂಗ್ರೆಸ್ ಶಾಸಕ ಅಮರೇಗೌಡ ಬಯ್ಯಾಪುರ

ಕೊಪ್ಪಳ: ಬಿಜೆಪಿ ಮುಖಂಡರು ಯಾರಾದರೂ ಸತ್ತರೆ 1 ಕೋಟಿ ಪರಿಹಾರ ಕೊಡ್ತೀವಿ ಅಂತ ಕಾಂಗ್ರೆಸ್ ಪಕ್ಷದ ಶಾಸಕ ಅಮರೇಗೌಡ ಬಯ್ಯಾಪುರ (Amaregouda Bayyapur) ಕೊಪ್ಪಳ ಜಿಲ್ಲೆಯ ಕುಷ್ಟಗಿಯಲ್ಲಿ ಹೇಳಿಕೆ ನೀಡಿದ್ದಾರೆ. ನಿನ್ನೆ ರಾತ್ರಿ ಉತ್ತರ ಪ್ರದೇಶ (Uttara Pradesh) ರೈತರ ಹತ್ಯೆ ಖಂಡಿಸಿ ಕುಷ್ಟಗಿಯಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಪ್ರತಿಭಟನೆ ವೇಳೆ ಹೇಳಿಕೆ ನೀಡಿದ್ದ ಅಮರೇಗೌಡ ಬಯ್ಯಾಪುರ, ಮೃತ ರೈತರಿಗೆ ಕೇವಲ 45 ಲಕ್ಷ ಪರಿಹಾರ ಕೊಟ್ಟಿದ್ದಾರೆ. ಕಾಂಗ್ರೆಸ್ ಬಿಜೆಪಿಯ ಮುಖಂಡರು ಯಾರಾದರೂ ಸತ್ತರೆ ಒಂದು ಕೋಟಿ ರೂಪಾಯಿ ಪರಿಹಾರ ಕೊಡುತ್ತೀವಿ ಅಂತ ಹೇಳಿದ್ದಾರೆ.

ಸಂಸದರ ಮಗ ಕಾರು ಹಾಯಿಸಿ ಸಾಯಿಸಿದ್ದರೂ ಬಿಜೆಪಿಯವರು ಯಾರೂ ಮಾತನಾಡಿಲ್ಲ. ಕೇವಲ 45 ಲಕ್ಷ ಪರಿಹಾರ ಕೊಟ್ಟಿದ್ದಾರೆ. ಬಿಜೆಪಿ ಈ ದೇಶದಿಂದ ತೊಲಗಬೇಕು. ಅಲ್ಲಿವರೆಗೂ ನಮ್ಮ ಹೋರಾಟ ನಡೆಯುತ್ತದೆ. ಉತ್ತರ ಪ್ರದೇಶದ ಬಿಜೆಪಿ ಚೇಲಾಗಳಾದ ಪೊಲೀಸರು ನಮ್ಮ ರಾಷ್ಟ್ರೀಯ ನಾಯಕಿ ಪ್ರಿಯಾಂಕಾ ಗಾಂಧಿಯನ್ನು ಕೂಡಿ ಹಾಕಿದ್ದಾರೆ. ಪೊಲೀಸರು ಅವರ ಕೈ ಮೈ ಮುಟ್ಟಿ ಬಿಜೆಪಿ ಚೇಲಾಗಳಂತೆ ವರ್ತನೆ ಮಾಡಿದ್ದಾರೆ ಅಂತ ಅಭಿಪ್ರಾಯಪಟ್ಟಿದ್ದಾರೆ.

ಹಾವೇರಿಯಲ್ಲಿ ಪ್ರತಿಭಟನೆ
ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಬಂಧನ ಖಂಡಿಸಿ ಕಾಂಗ್ರೆಸ್ನಿಂದ ಇವತ್ತು ಪ್ರತಿಭಟನೆ ನಡೆಯಲಿದೆ. ಹಾವೇರಿ ನಗರದ ಮೈಲಾರ ಮಹಾದೇವ ವೃತ್ತದಿಂದ ಹೊಸಮನಿ ಸಿದ್ದಪ್ಪ ವೃತ್ತದವರೆಗೆ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನಾ ಮೆರವಣಿಗೆ ನಡೆಸಲಿದ್ದಾರೆ. ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮ್ಮದ ನೇತೃತ್ವದಲ್ಲಿ ಈ ಪ್ರತಿಭಟನೆ ನಡೆಯಲಿದೆ.

ಇದನ್ನೂ ಓದಿ

Viral Video: ಹಳೆಯ ಎಟಿಎಂ ಖರೀದಿಸಿ 1.49 ಲಕ್ಷ ರೂ. ಪಡೆದ ಯುವಕರು! ಖುಷಿಯಲ್ಲಿ ಕಿರುಚಾಡಿದ ವಿಡಿಯೋ ವೈರಲ್​

ಕೃಷ್ಣ ಅಂಗಾರಕ ಚತುರ್ದಶಿ; ಜೀವನದಿ ಸ್ವರ್ಣೆಯಲ್ಲಿ ಪುಣ್ಯಸ್ನಾನ ಮಾಡಲು ಹರಿದು ಬಂತು ಭಕ್ತ ಸಾಗರ

Read Full Article

Click on your DTH Provider to Add TV9 Kannada