ಕೊಪ್ಪಳ: ಹಿಂದುತ್ವ, ಬ್ರಾಹ್ಮಣ್ಯ, ಸಂಸ್ಕೃತಿಯ ವಿಚಾರಗಳಿಗೆ ಸದಾ ಸುದ್ದಿಯಲ್ಲಿರುವ ನಟ, ಹೋರಾಟಗಾರ ಚೇತನ್ ಕೊಪ್ಪಳಕ್ಕೆ ಆಗಮಿಸಿದ್ದಾರೆ. ಕೊಪ್ಪಳದಲ್ಲಿ ಅಲೆಮಾರಿ ಸಮುದಾಯಕ್ಕೆ ಮಾಡಲಾಗಿರುವ ಅನ್ಯಾಯ, ದೇವದಾಸಿ ಪದ್ಧತಿ ವಿರುದ್ಧ ಧ್ವನಿ ಎತ್ತಿದ್ದಾರೆ.
ಕೊಪ್ಪಳ ಜಿಲ್ಲೆಯಲ್ಲಿ ಅಲೆಮಾರಿಗಳಿಗೆ ಮನೆ ಸಿಕ್ಕಿಲ್ಲ. ದೇವದಾಸಿ ಪದ್ಧತಿ ಜೀವಂತ ಇದ್ದು, ದೇವದಾಸಿ ತಾಯಂದಿರಿಗೆ ನ್ಯಾಯ ಸಿಕ್ಕಿಲ್ಲ. ಅಲೆಮಾರಿ ಸಮುದಾಯಗಳು ಸರ್ಕಾರದ ಕಣ್ಣಿಗೆ ಕಾಣುತ್ತಿಲ್ಲ. ಅವರು ಗುಡಿಸಲು ಹಾಕಿಕೊಂಡಿರೋ ಜಾಗದಲ್ಲಿ ಬೀದಿ ದೀಪ ಕೂಡ ಇಲ್ಲ. ಡಿಜಿಟಲ್ ಇಂಡಿಯಾ, ಬುಲೆಟ್ ಟ್ರೆನ್ ಬಗ್ಗೆ ಮಾತನಾಡುವ ಸರ್ಕಾರ ಇವರ ಕಡೆ ನೋಡಬೇಕಿದೆ. ಹಗಲುವೇಷ, ಬುಡ್ಗ ಜಂಗಮರ ಸಾಂಸ್ಕೃತಿಕ ಪ್ರಪಂಚಕ್ಕೆ ನಾವು ಬೆಲೆ ಕೊಡಬೇಕಿದೆ. ಅಲೆಮಾರಿಗಳನ್ನ ಅವೈಜ್ಞಾನಿಕವಾಗಿ ವಿಭಾಗ ಮಾಡಿದ್ದಾರೆ. ಈ ಎಲ್ಲ ಸಮಸ್ಯೆ ಪರಿಹಾರಕ್ಕೆ ಕುಷ್ಟಗಿ ಶಾಸಕರು, ಜಿಲ್ಲಾಡಳಿತಕ್ಕೆ ಮಾತಾಡಿದ್ದೇವೆ. ಇವರ ಪರ ಹೋರಾಟ ಮಾಡುವುದು ನನ್ನ ಕೊಪ್ಪಳ ಭೇಟಿ ಉದ್ದೇಶ ಎಂದು ನಟ, ಹೋರಾಟಗಾರ ಚೇತನ್ ತಿಳಿಸಿದ್ದಾರೆ.
ಇದನ್ನೂ ಓದಿ: ನನ್ನನ್ನು ಸೋಲಿಸಲು ನಿರಾಣಿ ಕಳಿಸುವ ದುಡ್ಡು ತೆಗೆದುಕೊಂಡು ವಿಜಯಪುರದ ಮತದಾರ ನನಗೆ ವೋಟು ಹಾಕುತ್ತಾನೆ: ಬಸನಗೌಡ ಯತ್ನಾಳ್
ಕೊಪ್ಪಳ ಜಿಲ್ಲೆಯ ವಿವಿಧ ಕಡೆ ಅಲೆಮಾರಿ ಸಮುದಾಯ ಬದುಕುತ್ತಿವೆ. ಕೊಪ್ಪಳ ಜಿಲ್ಲೆಯಲ್ಲಿ ದೇವದಾಸಿ ಪದ್ಧತಿ ಜೀವಂತ ಇರುವುದು ಬೇಸರದ ಸಂಗತಿ. ಇತ್ತೀಚೆಗೆ ಇಲ್ಲಿ ದೇವದಾಸಿಗೆ ಬಿಡಲಾಗಿದೆ. ಇದು ಸರಿಯಲ್ಲ. 2018 ದೇವದಾಸಿ ಪುನರ್ ವಸತಿ ಕಾಯ್ದೆ ಜಾರಿ ಆಗಬೇಕಿದೆ. ದೇವದಾಸಿಯ ಮಕ್ಕಳಿಗೆ ಸೌಲಭ್ಯ ಕೊಡಬೇಕಿದೆ. ದೇವದಾಸಿಯರ ಅಭಿವೃದ್ಧಿಗೆ ಪ್ರತ್ಯೇಕ ನಿರ್ದೇಶನಾಲಯ ರಚಿಸಬೇಕು. ಈ ಬಗ್ಗೆ ಕೋಟಾ ಶ್ರೀನಿವಾಸ ಪೂಜಾರ, ಹಾಲಪ್ಪ ಆಚಾರಿಗೆ ಮಾತನಾಡಿದ್ದೇನೆ. ಅಲೆಮಾರಿ, ದೇವದಾಸಿ ಮುಕ್ತ ಕರ್ನಾಟಕಕ್ಕೆ ಹೋರಾಟ ಮಾಡುತ್ತೇವೆ. ಮೀಸಲಾತಿ ವಿಚಾರದಲ್ಲಿ ಕಾಂಗ್ರೆಸ್- ಬಿಜೆಪಿ ಸಮಾನ ತಪ್ಪು ಮಾಡಿದ್ದಾರೆ. ಎರಡೂ ಪಕ್ಷಗಳು ಮೀಸಲಾತಿ ಸಮಾನವಾಗಿ ಹಂಚಿಕೆ ಮಾಡಿಲ್ಲ ಎಂದು ಸರ್ಕಾರಗಳ ವಿರುದ್ಧ ಚೇತನ್ ವಾಗ್ದಾಳಿ ನಡೆಸಿದ್ದಾರೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 2:37 pm, Sat, 7 January 23