ಆನೆಗುಂದಿಯ ನವಬೃಂದಾವನದಲ್ಲಿ ಅಷ್ಟೋತ್ತರ ಪೂಜಾ ಕಾರ್ಯಕ್ಕೆ ಹೈಕೋರ್ಟ್ ಅಸ್ತು: ಭಕ್ತರಲ್ಲಿ ಸಂಭ್ರಮ
ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಆನೆಗುಂದಿಯ ನವಬೃಂದಾವನದ ಜಯತೀರ್ಥರ ಬೃಂದಾವನದಲ್ಲಿ ಅಷ್ಟೋತ್ತರ ಪೂಜಾ ಕಾರ್ಯಕ್ಕೆ ಧಾರವಾಡ ಹೈಕೋರ್ಟ್ ಅಸ್ತು ಎಂದಿದೆ. ಇದರಿಂದ ಮಠದ ಭಕ್ತರಲ್ಲಿ ಸಂಭ್ರಮ ಮನೆ ಮಾಡಿದೆ.
ಕೊಪ್ಪಳ, (ಸೆಪ್ಟೆಂಬರ್ 25): ನವಬೃಂದಾವನದ ಜಯತೀರ್ಥರ ಬೃಂದಾವನ (anegundi nava brindavana Mutt) ವಿವಾದಕ್ಕೆ ಸಂಬಂಧಿಸಿದಂತೆ ಅಷ್ಟೋತ್ತರ ಪೂಜಾ ಕಾರ್ಯಕ್ಕೆ ಹೈಕೋರ್ಟ್ ಗ್ರೀನ್ ಸಿಗ್ನಲ್ ನೀಡಿದೆ. ರಾಘವೇಂದ್ರಸ್ವಾಮಿ ಮಠದವರಿಗೆ ಅಷ್ಟೋತ್ತರ ಪೂಜೆ ಮಾಡದಂತೆ ಸೆ. 11 ರಂದು ಧಾರವಾಡ ಹೈಕೋರ್ಟ್ (dharwad high court) ಏಕಸದಸ್ಯ ಪೀಠ ಆದೇಶ ಹೊರಡಿಸಿತ್ತು. ಇದರಿಂದ ಮಂತ್ರಾಲಯದ ರಾಘವೇಂದ್ರ ಸ್ವಾಮಿ ಮಠ ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿತ್ತು. ಈ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ದ್ವಿಸದಸ್ಯ ಪೀಠ, ಪೂಜಾ ಕಾರ್ಯಕ್ಕೆ ನಿರ್ಬಂಧ ವಿಧಿಸಿದ್ದ ಆದೇಶ ತೆರುವುಗೊಳಿಸಿ ಆದೇಶ ಹೊರಡಿಸಿದೆ. ಇದರಿಂದ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಆನೆಗುಂದಿಯ ನವಬೃಂದಾವನದಲ್ಲಿ ಭಕ್ತರಲ್ಲಿ ಸಂಭ್ರಮ ಮನೆ ಮಾಡಿದೆ.
ಆನೆಗುಂದಿಯ ನವಬೃಂದಾವನದಲ್ಲಿ ಶ್ರೀ ರಾಘವೇಂದ್ರಸ್ವಾಮಿ ಮಠದವರಿಗೆ ಅಷ್ಟೋತ್ತರ ಪೂಜಾ ಕಾರ್ಯಕ್ಕೆ ನಿರ್ಬಂಧ ವಿಧಿಸುವಂತೆ ಉತ್ತಾರಾಧಿಮಠ ಧಾರವಾಡ ಹೈಕೋರ್ಟ್ ಮೆಟ್ಟಿಲೇರಿತ್ತು. ಉತ್ತಾರಾಧಿಮಠ ಅರ್ಜಿ ವಿಚಾರಣೆ ನಡೆಸಿದ್ದ ಧಾರವಾಡ ಹೈಕೋರ್ಟ್ ಏಕಸದಸ್ಯ ಪೀಠ, ಉತ್ತಾರಾಧಿಮಠ ಅರ್ಜಿಯನ್ನು ಪುರಸ್ಕರಿಸಿ ಅಷ್ಟೋತ್ತರ ಪೂಜಾ ಕಾರ್ಯಕ್ಕೆ ನಿರ್ಬಂಧ ವಿಧಿಸಿ ಆದೇಶ ಹೊರಡಿಸಿತ್ತು.
ಬಳಿಕ ಶ್ರೀ ರಾಘವೇಂದ್ರಸ್ವಾಮಿ ಮಠವು ಧಾರವಾಡ ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ಮೇಲ್ಮನವಿ ಅರ್ಜಿ ಸಲ್ಲಿಸಿತ್ತು. ಈ ಅರ್ಜಿ ಆಲಿಸಿದ ದ್ವಿಸದಸ್ಯ ಪೀಠ, ಏಕಸದಸ್ಯದ ಅಷ್ಟೋತ್ತರ ಪೂಜಾ ಕಾರ್ಯಕ್ಕೆ ನಿರ್ಬಂಧ ಆದೇಶವನ್ನು ತೆರವುಗೊಳಿಸಿ, ಜಯತೀರ್ಥದ ಬೃಂದಾವನದಲ್ಲಿ ರಾಘವೇಂದ್ರಸ್ವಾಮಿ ಮಠದವರಿಗೆ ಅಷ್ಟೋತ್ತರ ಪೂಜಾ ಕಾರ್ಯಕ್ಕೆ ಅನುಮತಿಸಿ ಆದೇಶ ನೀಡಿದೆ. ಇದರಿಂದ ನವಬೃಂದಾವನದಲ್ಲಿ ಭಕ್ತರು ಅಷ್ಟೋತ್ತರ ಪೂಜಾ ಕಾರ್ಯ ನಡೆಸಿ ಸಂಭ್ರಮಿಸಿದರು. ಕೋರ್ಟ್ ಆದೇಶ ಬರುತ್ತಲ್ಲೇ ಭಕ್ತರು ಜಯತೀರ್ಥದ ಬೃಂದಾವನದ ಪೋಸ್ಟರ್ ಹಿಡಿದು ಸಂಭ್ರಮ ಆಚರಿಸಿದರು.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:35 am, Mon, 25 September 23