AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ಬಾರಿ ವಿಧಾನಸಭೆ ಚುನಾವಣೆಗೆ 500-1000 ರೂ.ಗೆ ವೋಟ್ ಹಾಕಬೇಡಿ, 5 ಲಕ್ಷ ರೂ. ಕೇಳಿ: ಮಾಜಿ ಸಚಿವ ಬಸವರಾಜ

ಮನೆಯಲ್ಲಿ 10 ವೋಟ್ ಇದ್ದರೆ 50 ಲಕ್ಷ ಕೇಳಿ. 500 ಅಥವಾ 1000 ರೂಪಾಯಿ ತೆಗೆದುಕೊಂಡರೆ ಕೊಪ್ಪಳಕ್ಕೆ ಹೋಗಿ ಚಹಾ ಕುಡಿಯುವುದಕ್ಕೂ ಆಗುವುದಿಲ್ಲ. ಅವರಿಂದ ಹಣ ತಗೊಂಡು ನನಗೆ ಒಂದು ವೋಟ್​ಗೆ 300 ರೂಪಾಯಿ ಕೊಡಬೇಕು. ಆಗ ನೀವು ಕರ್ನಾಟಕದಲ್ಲಿ ಜನಪ್ರಿಯರಾಗುತ್ತೀರಾ ಎಂದು ಮತದಾರರಿಗೆ ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಹೇಳಿದ್ದಾರೆ.

ಈ ಬಾರಿ ವಿಧಾನಸಭೆ ಚುನಾವಣೆಗೆ 500-1000 ರೂ.ಗೆ ವೋಟ್ ಹಾಕಬೇಡಿ, 5 ಲಕ್ಷ ರೂ. ಕೇಳಿ: ಮಾಜಿ ಸಚಿವ ಬಸವರಾಜ
ಮಾಜಿ ಸಚಿವ ಬಸವರಾಜ ರಾಯರೆಡ್ಡಿ
TV9 Web
| Edited By: |

Updated on: Dec 22, 2021 | 9:44 AM

Share

ಕೊಪ್ಪಳ:  2023ರಲ್ಲಿ ನಡೆಯುವ ವಿಧಾನಸಭೆ ಚುನಾವಣೆಗೆ ಈಗಾಗಲೇ ಎಲ್ಲೆಡೆ ಸಕಲ ಸಿದ್ಧತೆ ನಡೆಯುತ್ತಿದೆ. ಹೀಗಿರುವಾಗಲೇ ಕೊಪ್ಪಳ ಜಿಲ್ಲೆಯಲ್ಲಿ ಮಾಜಿ ಸಚಿವ ಬಸವರಾಜ ರಾಯರೆಡ್ಡಿ (Basavaraj Rayareddy), ಈ ಬಾರಿ 500 ಅಥವಾ 1000 ರೂಪಾಯಿಗೆ ಮತ ಹಾಕಬೇಡಿ. ಒಂದು ವೋಟ್​ಗೆ ಕನಿಷ್ಠ 5 ಲಕ್ಷ ರೂಪಾಯಿ ಕೇಳಿ ಎಂದು ಸ್ವ ಕ್ಷೇತ್ರ ಯಲಬುರ್ಗಾ ಮತದಾರರಿಗೆ ಸಲಹೆ ನೀಡಿದ್ದಾರೆ.

ಮನೆಯಲ್ಲಿ 10 ವೋಟ್ ಇದ್ದರೆ 50 ಲಕ್ಷ ಕೇಳಿ. 500 ಅಥವಾ 1000 ರೂಪಾಯಿ ತೆಗೆದುಕೊಂಡರೆ ಕೊಪ್ಪಳಕ್ಕೆ ಹೋಗಿ ಚಹಾ ಕುಡಿಯುವುದಕ್ಕೂ ಆಗುವುದಿಲ್ಲ. ಅವರಿಂದ ಹಣ ತಗೊಂಡು ನನಗೆ ಒಂದು ವೋಟ್​ಗೆ 300 ರೂಪಾಯಿ ಕೊಡಬೇಕು. ಆಗ ನೀವು ಕರ್ನಾಟಕದಲ್ಲಿ ಜನಪ್ರಿಯರಾಗುತ್ತೀರಾ ಎಂದು ಮತದಾರರಿಗೆ ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಹೇಳಿದ್ದಾರೆ.

ಕೊಪ್ಪಳ ಜಿಲ್ಲೆ ಕುಕನೂರು ಪಟ್ಟಣ ಪಂಚಾಯತ್ ಚುನಾವಣೆಯ ಪ್ರಚಾರದ ವೇಳೆ ಈ ಹೇಳಿಕೆ ನೀಡಿರುವ ಅವರು, ಈಗೆಲ್ಲ ಗಣಿಗಾರಿಕೆ ಮಂದಿ ರಾಜಕಾರಣಕ್ಕೆ ಬಂದಿದ್ದಾರೆ. ಅವರಿಂದ ಅಭಿವೃದ್ಧಿ ಸಾಧ್ಯವಿಲ್ಲ. ಗ್ರ್ಯಾನೆಟ್ ದಂಧೆ ಮಾಡುವವರು ಹೆಚ್ಚು ದುಡ್ಡು ಕೊಡುತ್ತಾರೆ ಎಂದು ಪರೋಕ್ಷವಾಗಿ ಗಣಿ ಸಚಿವ ಹಾಲಪ್ಪ ಆಚಾರಗೆ ಟಾಂಗ್ ನೀಡಿದ್ದಾರೆ.

ಇದನ್ನೂ ಓದಿ: ಬೆಳಗಾವಿಯಲ್ಲಿ ವಿಧಾನಸಭೆ ಅಧಿವೇಶನ ನಡೆಯುವಾಗ ಎಂದಿನಂತೆ ಪುಂಡಾಟ ಮೆರೆದ ಎಮ್ ಈ ಎಸ್ ಗೂಂಡಾಗಳು

ವಿಧಾನಸಭೆ ಚುನಾವಣೆಗೆ ಜೆಡಿಎಸ್ ತಯಾರಿ; 4 ದಿನ ಕಾರ್ಯಾಗಾರ; ಹೆಚ್​ಡಿ ಕುಮಾರಸ್ವಾಮಿ

Follow Us
Web contact
Web contact

TV9 Kannada

Read More