ಕೊಪ್ಪಳ: ಜನರಿಗೆ ವಂಚಿಸುತ್ತಿದ್ದ ಕಪಟ ಸ್ವಾಮೀಜಿ ಶಿವಾನಂದ ಕಡಿ ಎಂಬಾತನನ್ನು ಕೊಪ್ಪಳ ಮಹಿಳಾ ಠಾಣೆ ಪೊಲೀಸರು ಬಂಧಿಸಿದ್ದಾರೆ. ಅಪ್ರಾಪ್ತೆಗೆ ವಂಚಿಸಿದ್ದ ಆರೋಪದಲ್ಲಿ ಕಪಟ ಸ್ವಾಮಿಯನ್ನು ಬಂಧಿಸಲಾಗಿದೆ. ಅಪ್ರಾಪ್ತೆಯ ತಂದೆ ನೀಡಿದ ದೂರು ಆಧರಿಸಿ ವಿಜಯಪುರ ಜಿಲ್ಲೆಯ ಸಿಂಧಗಿಯಲ್ಲಿ ಕಳ್ಳ ಸ್ವಾಮಿ ಅರೆಸ್ಟ್ ಮಾಡಲಾಗಿದೆ. ನಾನಾ ವೇಶ ತೊಟ್ಟು ಜನರಿಗೆ ಟೋಪಿ ಹಾಕಿದ್ದ ಸ್ವಾಮೀಜಿ ಬಗ್ಗೆ ಅಪ್ರಾಪ್ತೆ ಒಬ್ಬರ ತಂದೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಹಿನ್ನೆಲೆ ಸ್ವಾಮೀಜಿಯನ್ನು ಬಂಧಿಸಲಾಗಿದೆ.
ಮೂಲತಃ ಕಲಬುರಗಿ ಜಿಲ್ಲೆಯ ಜೇವರ್ಗಿ ನಿವಾಸಿಯಾಗಿರೋ ಸಿದ್ದರಾಮ ಎಂಬ ವ್ಯಕ್ತಿ ನಾನು ಸ್ವಾಮೀಜಿ ಎಂದು ನೂರಾರು ಜನರಿಗೆ ವಂಚನೆ ಮಾಡಿದ್ದ ಎಂದು ತಿಳಿದುಬಂದಿದೆ. ಅಪ್ರಾಪ್ತ ಬಾಲಕಿಗೆ ವಂಚನೆ ಮಾಡಿದ್ದ ಸಿದ್ದರಾಮ, ನಾನು ಟಿಕೆಟ್ ಕಲೆಕ್ಟರ್ ಎಂದು ಅಪ್ರಾಪ್ತ ಬಾಲಕಿಗೆ ವಂಚಿಸಿದ್ದ. ಮದುವೆ ಆಗೋದಾಗಿ ನಂಬಿಸಿ ವಂಚನೆ ಮಾಡಿದ್ದ ಎಂದು ಮಾಹಿತಿ ಲಭಿಸಿದೆ. ಬಾಲಕಿ ತಂದೆ ಮಹಿಳಾ ಠಾಣೆಯಲ್ಲಿ ದೂರು ನೀಡಿದ ಹಿನ್ನಲೆ ಸ್ವಾಮೀಜಿ ಬಂಧನವಾಗಿದೆ.
ಅಷ್ಟೇ ಅಲ್ಲದೆ, ಪೊಲೀಸ್ ವಾಕಿ ಟಾಕಿಗೆ ಪೂಜೆ ಹೆಸರಲ್ಲಿ ನಯವಂಚಕ ಸಿದ್ದರಾಮ 45 ಸಾವಿರ ಹಣ ವಸೂಲಿ ಮಾಡಿದ್ದ ಎಂದು ತಿಳಿದುಬಂದಿದೆ. ನಿಧಿ ತಗೆದುಕೊಡೋದಾಗಿ ಹೇಳಿ ಕೂಡ ವಂಚನೆ ಮಾಡಿದ್ದ. ರಾಯಚೂರು ಜಿಲ್ಲೆಯ ಸಿಂಧನೂರ ತಾಲೂಕಿನ ಪೋತಲಕಟ್ಟಿಯಲ್ಲಿ ಮಠ ಮಾಡಿಕೊಂಡು ವಂಚನೆ ಮಾಡುತ್ತಿದ್ದ. ಮಂತ್ರದಿಂದ ಹಣ ಉದುರುತ್ತೆ ಎಂದು ಜನರಿಗೆ ಟೋಪಿ ಹಾಕಿ ಲಕ್ಷಾಂತರ ಹಣ ವಂಚನೆ ಮಾಡಿದ್ದ. ರಾಜ್ಯದ ನಾನಾ ಭಾಗದಲ್ಲಿ ವಂಚನೆ ಮಾಡಿದ ಸ್ವಾಮೀಜಿ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ಅಪ್ರಾಪ್ತ ಬಾಲಕಿ ತಂದೆ ದೂರಿನ ಆಧಾರದ ಮೇಲೆ ಸ್ವಾಮೀಜಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ವಿಜಯಪುರ ಜಿಲ್ಲೆಯ ಸಿಂಧಗಿಯಲ್ಲಿ ಕಳ್ಳ ಸ್ವಾಮಿ ಅರೆಸ್ಟ್ ಆಗಿದ್ದಾನೆ. ಕಳ್ಳ ಸ್ವಾಮೀ ವಿರುದ್ದ ಕೊಪ್ಪಳ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ.
ಇದನ್ನೂ ಓದಿ: Crime Updates: ಚಾಕಲೇಟ್ ಬಾಕ್ಸ್ ಕದ್ದೊಯ್ದ ಕಳ್ಳ, ಕೌಟುಂಬಿಕ ಕಲಹಕ್ಕೆ ಬೇಸತ್ತು ತಾಯಿ ಮಕ್ಕಳು ಆತ್ಮಹತ್ಯೆ
ಇದನ್ನೂ ಓದಿ: Crime News: ಕಾರಿನ ಗಾಜು ಒಡೆದು ಹಣ, ದುಬಾರಿ ವಾಚ್ ಕಳವು; 6 ತಿಂಗಳ ಬಳಿಕ ಚಂದ್ರಾ ಲೇಔಟ್ ಪೊಲೀಸರಿಂದ ಆರೋಪಿ ಅರೆಸ್ಟ್
Published On - 8:54 am, Tue, 1 March 22