ಕೊಪ್ಪಳ: ಬರದ ನಾಡು, ಬಿಸಿಲ ನಾಡು ಎಂದು ಹೆಸರಾದ ಜಿಲ್ಲೆ ಕೊಪ್ಪಳ. ಇಲ್ಲಿನ ಜನ ಅನೇಕ ನಗರ ಪ್ರದೇಶಗಳಿಗೆ ಗುಳೆ ಹೋಗ್ತಿದ್ರು. ಇಂತಹ ಸಂದರ್ಭದಲ್ಲಿ ಅಲ್ಲಿ ಅನೇಕ ಕಾರ್ಖಾನೆಗಳು ತಲೆ ಎತ್ತಿದ್ವು. ಕಾರ್ಖಾನೆಗಳು ಆರಂಭವಾದಾಗ ಸಹಜವಾಗಿ ಅಲ್ಲಿನ ಜನ ಖುಷಿ ಪಟ್ಟಿದ್ರು. ಇದೀಗ ಆ ಕಾರ್ಖಾನೆಗಳಿಂದ ಅಲ್ಲಿನ ಜನ, ರೈತರು ನಲುಗಿ ಹೋಗಿದ್ದಾರೆ.
ನಿಮಗೆ ಜಮೀನಿನಲ್ಲಿ ಹೋಗೋಕೆ ಗುಂಡಿಗೆ ಬೇಕು. ಒಳಗೆ ಹೋಗಿ ಹೊರ ಬಂದ್ರೆ ನೀವ್ ಯಾರು ಅನ್ನೋದೆ ಗೊತ್ತಾಗಲ್ಲ. ಅಲ್ಲಿನ ರೈತರು ಜಮೀನಿನಲ್ಲಿ ಕೆಲಸ ಮಾಡೋಕೆ ಭಯ ಪಡ್ತೀದಾರೆ. ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಜಮೀನಿನಲ್ಲಿಕೆಲಸಮಾಡೋ ಸ್ಥೀತಿ ನಿರ್ಮಾಣವಾಗಿದೆ. ಇದಕ್ಕೆಲ್ಲ ಕಾರಣ ಅಲ್ಲಿನ ಕಾರ್ಖಾನೆಗಳು. ಕೊಪ್ಪಳ ತಾಲೂಕಿನ ಹಿರಬೇಗನಾಳ, ಹಾಲುವರ್ತಿ ಸಮೀಪ ಸುಮಾರು 20ಕ್ಕೂ ಹೆಚ್ವು ಕಾರ್ಖಾನೆಗಳಿವೆ. ಬಹುತೇಕ ದೊಡ್ಡ ದೊಡ್ಡ ಜನರಿಗೆ ಸೇರಿದ ಕಾರ್ಖಾನೆಗಳು. ಹಿರೇಬಗನಾಳ ಸುತ್ತ ಮುತ್ತವೇ ಸುಮಾರು 20ಕ್ಕೂ ಹೆಚ್ಚು ಕಾರ್ಖಾನೆಗಳಿವೆ. ಆ ಕಾರ್ಖಾನೆಗಳು ಇದೀಗ ರೈತರಿಗೆ ಕಂಟಕವಾಗಿವೆ.
ಕಾರ್ಖಾನೆಗಳಿಂದ ಬರೋ ಹೊಗೆ ಹಾಗೂ ಬೂದಿ ರೈತರ ಜೀವನದ ಜೊತೆ ಚೆಲ್ಲಾಟವಾಡ್ತಿದೆ. ಹಿರೇಬಗನಾಳ ಸಮೀಪ ಇರೋ ವನ್ಯ ಸ್ಟೀಲ್ ಹಾಗೂ ಹರೇ ಕಷ್ಟ ಸ್ಟೀಲ್ ಕಾರ್ಖಾನೆ ಇಂದು ನಿತ್ಯ ಅಪಾರ ಪ್ರಮಾಣದ ಹೊಗೆ ಬಿಡುಗಡೆಯಾಗ್ತಿದೆ. ಇಂದು ನಸುಕಿನ ಜಾವ ಹೊಗೆ ಬಿಡುಗಡೆ ಯಾಗ್ತಿರೋದನ್ನ ಸ್ಥಳೀಯರು ತಮ್ಮ ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ. ಹಿರೇಬಗನಾಳ ಸುತ್ತ ಮುತ್ತ ಕಾರ್ಖಾನೆಗಳಿಂದ ಅಪಾರ ಹೊಗೆ ಹಾಗೂ ಬೂದಿಯಿಂದ ರೈತರಿಗೆ ಸಮಸ್ಯೆ ಆಗಿರೋದು ಗಮನಕ್ಕೆ ಬಂದಿದೆ. ನಾನು ವಿಚಾರಿಸ್ತೀನಿ, ಇನ್ನೆರಡು ದಿನಗಳಲ್ಲಿ ಸ್ಥಳ ಪರಿಶೀಲನೆ ಮಾಡಿ ಕಾರ್ಖಾನೆಗಳ ಮಾಲೀಕರೊಂದಿಗೆ ಚರ್ಚೆ ಮಾಡ್ತೀನಿ ಎಂದು ಪರಿಸರ ಇಲಾಖೆ ಅಧಿಕಾರಿ ಸುರೇಶ್ ತಿಳಿಸಿದ್ದಾರೆ.
ಕೊಪ್ಪಳದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
ಹೊಗೆ, ಬೂದಿ ಇಂದ ರೈತರಿಗೆ ಕಂಟಕ
ಕಾರ್ಖಾನೆಗಳಿಂದ ಬರುವ ಅಪಾರ ಪ್ರಮಾಣದ ಹೊಗೆ ಅಕ್ಕಪಕ್ಕದ ರೈತರಿಗೆ ಕಂಟಕವಾಗಿ ಪರಿಣಮಿಸಿದೆ. ಹೊಗೆ ಬೆಳೆಗಳ ಮೇಲೆ ಬಿದ್ದು ಬೆಳೆಗಳು ಕಪ್ಪು ಬಣ್ಣಕ್ಕೆ ತಿರುಗಿವೆ. ಅಕ್ಕಪಕ್ಕದ ರೈತರು ಬೆಳೆದ ಪಪ್ಪಾಯಿ, ಪೇರು ಬೆಳೆಗಳು ಬೂದಿ ಹಾಗೂ ಹೊಗೆ ಇಂದ ನಾಶವಾಗಿ ಹೋಗಿವೆ. ಎಲೆಗಳ ಮೇಲೆ ಕಪ್ಪು ಬೂದಿ ಬಿದ್ದು ಸರಿಯಾದ ಪ್ರಮಾಣದ ಇಳುವರಿ ಬರ್ತಿಲ್ಲ. ಅಲ್ದೆ ಬೆಳೆಗಳು ಕಪ್ಪು ಇರೋದನ್ನ ಕಂಡು ಖರೀದಿಮಾಡೋಕು ಹಿಂದುಮುಂದು ನೋಡ್ತಿದ್ದಾರೆ. ಹಿರೇಬಗನಾಳ ಸಮೀಪ ಕಾರ್ಖಾನೆಗಳು ಅಪಾರ ಪ್ರಮಾಣದಲ್ಲಿ ತಲೆ ಎತ್ತಿದ್ದು, ಅಕ್ಕ ಪಕ್ಕದ ರೈತರು ಬೆಳೆ ಬೆಳೆಯೋದಕ್ಕಾಗದೆ ಪರದಾಡುತ್ತಿದ್ದಾರೆ. ಇದು ಕೇವಲ ಒಂದಿಬ್ಬರು ರೈತರ ಕಥೆ ಅಲ್ಲ. ಸಾವಿರಾರು ರೈತರು ಕಾರ್ಖಾನೆಯ ಹೊಗೆ ಇಂದ ನರಕಯಾತನೆ ಅನುಭವಿಸುತ್ತಿದ್ದಾರೆ. ಸಾಲಸೋಲ ಮಾಡಿ ಬೆಳೆದ ಬೆಳೆ ಬೂದಿ ಹಾಗೂ ಹೊಗೆ ಇಂದ ಹಾಳಾಗ್ತಿದೆ. ಒಂದ ಕಡೆ ಬೆಳೆಗಳು ಹಾಳಾದ್ರೆ ಇನ್ನೊಂದು ಕಡೆ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರಿದೆ ಅನ್ನೋದು ಸ್ಥಳೀಯರ ಅಳಲು.
ಹಿರೇಬಗನಾಳ ಸುತ್ತ ಮುತ್ತ ಇರೋ ರೈತರು ಹಲವಾರು ಬಾರಿ ಹೋರಾಟ ಮಾಡಿದ್ದಾರೆ. ಕಾರ್ಖಾನೆಗಳ ಬಿಡೋ ಹೊಗೆ ಇಂದ ಕಷ್ಟ ಅನುಭವಿಸಿ ಸಾಕಾಗಿ ಹೋರಾಟದ ಹಾದಿ ತುಳಿದ್ರು ಹೊಗೆ ಮಾತ್ರ ಬಂದ್ ಆಗ್ತಿಲ್ಲ. ಬಹುತೇಕ ಕಾರ್ಖಾನೆಗಳು ದೊಡ್ಡ ದೊಡ್ಡ ಜನರಿಗೆ ಸೇರಿದ ಕಾರಣ ಜಿಲ್ಲಾಡಳಿತವೂ ಮೌನವಾಗಿದೆ.ಅಲ್ದೆ ಪರಿಸರ ಇಲಾಖೆ ನಮಗೂ ಅದಕ್ಕೂ ಸಂಭಂದ ಇಲ್ಲ ಎನ್ನುತ್ತಿವೆ. ನಿತ್ಯ ಅಪಾರ ಪ್ರಮಾಣದ ಹೊಗೆ ಹೋಗ್ತಿದ್ರು ಜಿಲ್ಲೆಯಲ್ಲಿರೋ ಪರಿಸರ ಇಲಾಖೆ ಕಾರ್ಖಾನೆಗಳ ಪರ ಲಾಭಿ ಮಾಡ್ತಿದ್ದಾರೆ ಅನ್ನೋ ಆರೋಪವೂ ಇದೆ. ಸ್ಥಳೀಯ ಅಧಿಕಾರಿಗಳು ರೈತರ ನೆರವಿಗೆ ಬರ್ತಿಲ್ಲ.
ಕಾರ್ಖಾನೆಗಳ ಹೊಗೆ ಇಂದ ನಮಗೆ ಸಾಕಾಗಿ ಹೋಗಿದೆ. ಜೀವನವೇ ಸಾಕು ಎನಿಸಿದೆ. ನಾವು ಜಮೀನಿಗೆ ಹೋಗಬೇಕಂದ್ರು ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಹೋಗಬೇಕು. ಬೆಳೆದ ಬೆಳೆ ಕಪ್ಪು ಬಣ್ಣಕ್ಕೆ ತಿರುಗಿದೆ. ಇಳುವರಿ ಬಂದ್ರು ಮಾರಾಟ ವಾಗ್ತಿಲ್ಲ. ನಿತ್ಯ ನರಕದಲ್ಲಿ ಜೀವನಮಾಡ್ತೀವಿ ಅನ್ನೋ ತರಹ ಆಗ್ತಿದೆ. ಆದಷ್ಟು ಬೇಗ ಕಾರ್ಖಾನೆಗಳ ವಿರುದ್ದ ಕ್ರಮ ಕೈಗೊಳ್ಳಬೇಕು, ಇಲ್ಲದಿದ್ದರೆ ನಾವ ಬದುಕೋದೆ ಕಷ್ಟ ಅಂತ ರೈತ ಮಾರ್ಕಂಡಯ್ಯ ಕಣ್ಣೀರು ಹಾಕಿದ್ದಾರೆ.
ವರದಿ: ಶಿವಕುಮಾರ್, ಟಿವಿ9 ಕೊಪ್ಪಳ
Published On - 2:05 pm, Thu, 5 May 22