ಫೆಂಗಲ್ ಪರಿಣಾಮದಿಂದ ಮಳೆ: ಕೊಪ್ಪಳದ ಭತ್ತ ಬೆಳೆಗಾರರು ಕಂಗಾಲು, ಮಳೆ ನೀರು ನುಗ್ಗಿ ಹಾಳಾಗುತ್ತಿದೆ ಬೆಳೆ

ಫೆಂಗಲ್ ಚಂಡಮಾರುತದಿಂದ ಅನೇಕ ಕಡೆ ಜನಜೀವನ ಅಸ್ತವ್ಯಸ್ಥವಾಗಿದೆ. ಸೋಮವಾರದಿಂದ ಬಿಸಿಲುನಾಡು ಕೊಪ್ಪಳ ಜಿಲ್ಲೆಯ ಮೇಲೆ ಕೂಡಾ ಚಂಡುಮಾರುತದ ಪರಿಣಾಮ ಆಗಿದ್ದು, ಮಳೆಯಿಂದಾಗಿ ಭತ್ತದ ಬೆಳೆಗಾರರು ಹೈರಾಣಾಗಿದ್ದಾರೆ. ಸೋಮವಾರ ಮಧ್ಯಾಹ್ನದಿಂದ ತುಂತುರು ಮಳೆಯಾಗುತ್ತಿದ್ದು, ಭತ್ತದ ಬೆಳೆ ಹಾಳಾಗುತ್ತಿದೆ.

ಫೆಂಗಲ್ ಪರಿಣಾಮದಿಂದ ಮಳೆ: ಕೊಪ್ಪಳದ ಭತ್ತ ಬೆಳೆಗಾರರು ಕಂಗಾಲು, ಮಳೆ ನೀರು ನುಗ್ಗಿ ಹಾಳಾಗುತ್ತಿದೆ ಬೆಳೆ
ಭತ್ತದ ರಾಶಿಗೆ ಮಳೆ ನೀರು ನುಗ್ಗಿರುವುದು
Follow us
ಸಂಜಯ್ಯಾ ಚಿಕ್ಕಮಠ, ಕೊಪ್ಪಳ
| Updated By: Ganapathi Sharma

Updated on: Dec 03, 2024 | 12:42 PM

ಕೊಪ್ಪಳ, ಡಿಸೆಂಬರ್ 3: ಒಂದಡೆ ರಾಷ್ಟ್ರೀಯ ಹೆದ್ದಾರಿಯಲ್ಲಿ ರೈತರು ದೊಡ್ಡ ದೊಡ್ಡ ಟಾರ್ಪಲ್​ಗಳನ್ನು ಹಾಕಿ ಭತ್ತವನ್ನು ಸುರಕ್ಷಿತವಾಗಿಡಲು ಹರಸಾಹಸ ಪಡುತ್ತಿದ್ದರೆ, ಇನ್ನೊಂದಡೆ ಮಳೆ ನೀರಿನಿಂದಾಗಿ ಭತ್ತ ಹಾಳಾಗಿ ಹೋಗುತ್ತಿದೆ. ಕೆಲವೆಡೆ ಭತ್ತದ ಬೆಳೆ ನೀರಲ್ಲಿ ಕೊಚ್ಚಿಕೊಂಡು ಹೋಗುತ್ತಿದ್ದರೆ, ಇನ್ನು ಕೆಲವಡೆ ನೀರು ನಿಂತಿದ್ದರಿಂದ ಭತ್ತ ಮೊಳಕೆಯೊಡೆಯುವ ಸ್ಥಿತಿಯಲ್ಲಿದೆ. ಕೊಪ್ಪಳ ಜಿಲ್ಲೆಯ ಗಂಗಾವತಿ, ಕಾರಟಗಿ ಮತ್ತು ಕೊಪ್ಪಳ ತಾಲೂಕಿನ ಹಿಟ್ನಾಳ್ ಸೇರಿದಂತೆ ಅನೇಕ ಕಡೆ ಈ ಪರಿಸ್ಥಿತಿ ಉದ್ಭವಿಸಿದೆ.

ಬೆಲೆ ಕುಸಿತದಿಂದ ಕಂಗಾಲಾಗಿದ್ದ ರೈತರಿಗೆ ಮತ್ತೊಂದು ಆಘಾತ

ಕರ್ನಾಟಕದ ಭತ್ತದ ಕಣಜ ಎಂದೇ ಕರೆಯಲ್ಪಡುವ ಕೊಪ್ಪಳ ಜಿಲ್ಲೆಯಲ್ಲಿ ಸರಿಸುಮಾರು 69 ಸಾವಿರ ಹೆಕ್ಟೇರ್​​ಗೂ ಹೆಚ್ಚಿನ ಪ್ರದೇಶದಲ್ಲಿ ರೈತರು ಭತ್ತವನ್ನು ಪ್ರಮುಖ ಬೆಳೆಯನ್ನಾಗಿ ಬೆಳೆಯುತ್ತಾರೆ. ಈ ಬಾರಿ ಮಳೆ ಮತ್ತು ತುಂಗಭದ್ರಾ ಜಲಾಶಯದಿಂದ ನೀರು ಬಿಟ್ಟಿದ್ದರಿಂದ ಉತ್ತಮ ಬೆಳೆ ಕೂಡಾ ಬಂದಿದೆ. ಆದರೆ ಈಗಾಗಲೇ ಬೆಲೆ ಇಳಿಕೆಯಿಂದ ಕಂಗಾಲಾಗಿದ್ದ ಭತ್ತದ ಬೆಳೆಗಾರರಿಗೆ ಇದೀಗ ಫೆಂಗಲ್ ಚಂಡಮಾರುತದ ಮಳೆಯ ಕಾಟ ಆರಂಭವಾಗಿದೆ.

ಭತ್ತದ ರಾಶಿಗೆ ನುಗ್ಗುತ್ತಿರುವ ಮಳೆ ನೀರು

Fengal cyclone effect: Paddy growers of Koppal are worried, rain water is entering and spoiling the crop

ಜಿಲ್ಲೆಯಲ್ಲಿ ಈಗಾಗಲೇ ಭತ್ತದ ಕಟಾವು ಆಗಿದ್ದರಿಂದ, ರೈತರು ಭತ್ತವನ್ನು ಒಣಗಿಸುತ್ತಿದ್ದಾರೆ. ಕಟಾವು ಮಾಡಿದ ಭತ್ತವನ್ನು ವ್ಯಾಪರಸ್ಥರು ಹಾಗೆಯೇ ಖರೀದಿಸುವುದಿಲ್ಲ. ಕಟಾವು ಮಾಡಿದ ನಂತರ ನಾಲ್ಕೈದು ದಿನಗಳ ಕಾಲ ಒಣಗಿಸಿ ನಂತರ ಭತ್ತವನ್ನು ರೈತರು ಮಾರಾಟ ಮಾಡುತ್ತಾರೆ. ಹೀಗಾಗಿ ಭತ್ತ ಕಟಾವು ಮಾಡಿದ್ದ ರೈತರು ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ಅನೇಕ ಕಡೆ ತಂದು ಹಾಕಿದ್ದು, ಒಣಗಿಸುತ್ತಿದ್ದರು. ಆದರೆ ಸೋಮವಾರ ಮಧ್ಯಾಹ್ನದಿಂದ ಜಿಲ್ಲೆಯಲ್ಲಿ ಮಳೆಯಾಗುತ್ತಿದೆ. ಕೆಲ ರೈತರು ಟಾರ್ಪಲ್​ಗಳನ್ನು ಹಾಕಿ ಭತ್ತವನ್ನು ಸಂರಕ್ಷಿಸುವ ಕೆಲಸ ಮಾಡಿದರೂ ಕೂಡಾ ಸಾಧ್ಯವಾಗುತ್ತಿಲ್ಲ. ಮಳೆ ನೀರು ಭತ್ತದ ರಾಶಿಗೆ ನುಗ್ಗುತ್ತಿದ್ದು ಭತ್ತ ಹಾಳಾಗಿ ಹೋಗುತ್ತಿದೆ.

ಭತ್ತದ ಬೆಳೆ ಮೊಳಕೆಯೊಡೆಯುವ ಆತಂಕ

ರಸ್ತೆಯ ಮೇಲಿನ ನೀರು ಭತ್ತದ ರಾಶಿಗೆ ಹೋಗಿದ್ದರಿಂದ ಸಾಕಷ್ಟ ಭತ್ತ ಕೊಚ್ಚಿಕೊಂಡು ಹೋಗುತ್ತಿದೆ. ಇನ್ನು ಕೆಲ ರೈತರು ಸರಿಯಾದ ಸಮಯಕ್ಕೆ ಭತ್ತವನ್ನು ಮುಚ್ಚಲಿಕ್ಕೆ ಆಗದೇ ಇದ್ದುದರಿಂದ ಹಲವಡೆ ಭತ್ತ ನೀರಿನಿಂದ ತೊಯ್ದಿದ್ದು, ಹಾಳಾಗಿ ಹೋಗುತ್ತಿದೆ. ಇನ್ನು ಎರಡು ದಿನ ಇದೇ ರೀತಿ ಮಳೆಯಾದರೆ ರಸ್ತೆಯಲ್ಲಿಯೇ ಭತ್ತ ಮೊಳಕೆಯೊಡೆಯುತ್ತದೆ ಎಂದು ರೈತರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

Fengal cyclone effect: Paddy growers of Koppal are worried, rain water is entering and spoiling the crop

ಮಳೆ ನೀರಿನಲ್ಲಿ ಕೊಚ್ಚಿಕೊಂಡು ಹೋಗುತ್ತರುವ ಭತ್ತದ ಬೆಳೆ

ಈಗಾಗಲೇ ಸಾವಿರಾರು ರೂಪಾಯಿ ಖರ್ಚು ಮಾಡಿದ್ದೇವೆ. ಇನ್ನೇನು ಮಾರಾಟ ಮಾಡಬೇಕು ಎಂಬ ಸಮಯಕ್ಕೆ ಮಳೆಯಾಗುತ್ತಿರುವುದರಿಂದ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ ಎಂದು ರೈತರು ಅಳಲು ತೋಡಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: ಕರ್ನಾಟಕದಲ್ಲಿ ಫೆಂಗಲ್ ಚಂಡಮಾರುತ ಮಳೆಯ ಅಬ್ಬರ: 10 ಜಿಲ್ಲೆಗಳಲ್ಲಿ ಶಾಲೆ, ಕಾಲೇಜುಗಳಿಗೆ ರಜೆ

ಕೊಪ್ಪಳ ಜಿಲ್ಲೆಯ ಭತ್ತದ ಬೆಳೆಗಾರರಿಗೆ ಮಳೆ ದೊಡ್ಡ ಮಟ್ಟದ ಆಘಾತ ನೀಡಿದೆ. ಮಳೆ ಇದೇ ರೀತಿ ಮುಂದುವರಿದರೆ ರೈತರಿಗೆ ದೊಡ್ಡ ಪ್ರಮಾಣದ ನಷ್ಟವಾಗಲಿದೆ. ಹೀಗಾಗಿ ಸರ್ಕಾರ ರೈತರ ನೆರವಿಗೆ ಧಾವಿಸಬೇಕಿದೆ.

ಕರ್ನಾಟಕದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ಹೊಸ ವಾಹನ ಖರೀದಿ ಯಾವ ದಿನ, ಹೇಗೆ ಮಾಡಬೇಕು? ಇಲ್ಲಿದೆ ಜ್ಯೋತಿಷ್ಯ ಸಲಹೆ
ಹೊಸ ವಾಹನ ಖರೀದಿ ಯಾವ ದಿನ, ಹೇಗೆ ಮಾಡಬೇಕು? ಇಲ್ಲಿದೆ ಜ್ಯೋತಿಷ್ಯ ಸಲಹೆ
Daily Horoscope: ಈ ರಾಶಿಯವರಿಗೆ ಇಂದು ವ್ಯಾಪಾರದಲ್ಲಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ವ್ಯಾಪಾರದಲ್ಲಿ ಲಾಭವಾಗಲಿದೆ
ಗೆಳೆಯನನ್ನು ಕಚ್ಚಿ ಹಿಡಿದ ಸಿಂಹಕ್ಕೆ ಮನಬಂದಂತೆ ಥಳಿಸಿದ ವ್ಯಕ್ತಿ
ಗೆಳೆಯನನ್ನು ಕಚ್ಚಿ ಹಿಡಿದ ಸಿಂಹಕ್ಕೆ ಮನಬಂದಂತೆ ಥಳಿಸಿದ ವ್ಯಕ್ತಿ
ಮಹಾರಾಷ್ಟ್ರದಲ್ಲಿ ಪೊಲೀಸರ ಮೇಲೆ ಕಲ್ಲು ತೂರಾಟ
ಮಹಾರಾಷ್ಟ್ರದಲ್ಲಿ ಪೊಲೀಸರ ಮೇಲೆ ಕಲ್ಲು ತೂರಾಟ
ಸೋಮನಹಳ್ಳಿಯ ಚಿತಾಗಾರದಿಂದ ಭಾರವಾದ ಹೆಜ್ಜೆಹಾಕುತ್ತ ವಾಪಸ್ಸಾದರು ಪ್ರೇಮ
ಸೋಮನಹಳ್ಳಿಯ ಚಿತಾಗಾರದಿಂದ ಭಾರವಾದ ಹೆಜ್ಜೆಹಾಕುತ್ತ ವಾಪಸ್ಸಾದರು ಪ್ರೇಮ
ಒಕ್ಕಲಿಗ ಸಂಪ್ರದಾಯದಂತೆ ನಡೆದ ಅಂತಿಮ ಸಂಸ್ಕಾರದಲ್ಲಿ ಅನೇಕ ಗಣ್ಯರು ಭಾಗಿ
ಒಕ್ಕಲಿಗ ಸಂಪ್ರದಾಯದಂತೆ ನಡೆದ ಅಂತಿಮ ಸಂಸ್ಕಾರದಲ್ಲಿ ಅನೇಕ ಗಣ್ಯರು ಭಾಗಿ
ಉಗ್ರಂ ಮಂಜು ನಿಜವಾದ ಮುಖ ಬಯಲು ಮಾಡಿದ ಗೌತಮಿ; ಬದಲಾಯ್ತು ಆಟ
ಉಗ್ರಂ ಮಂಜು ನಿಜವಾದ ಮುಖ ಬಯಲು ಮಾಡಿದ ಗೌತಮಿ; ಬದಲಾಯ್ತು ಆಟ
ಮಗಳು ಮತ್ತು ಮೊಮ್ಮಗನೊಂದಿಗೆ ಆಗಮಿಸಿ ತಿರಂಗ ಸ್ವೀಕರಿಸಿದ ಪ್ರೇಮ ಕೃಷ್ಣ
ಮಗಳು ಮತ್ತು ಮೊಮ್ಮಗನೊಂದಿಗೆ ಆಗಮಿಸಿ ತಿರಂಗ ಸ್ವೀಕರಿಸಿದ ಪ್ರೇಮ ಕೃಷ್ಣ
ವಿಡಿಯೋ: ರಾಜಕೀಯ ಗುರುವಿಗೆ ಹೆಗಲು ಕೊಟ್ಟು ವಿದಾಯ ಹೇಳಿದ ಡಿಕೆ ಬ್ರದರ್ಸ್
ವಿಡಿಯೋ: ರಾಜಕೀಯ ಗುರುವಿಗೆ ಹೆಗಲು ಕೊಟ್ಟು ವಿದಾಯ ಹೇಳಿದ ಡಿಕೆ ಬ್ರದರ್ಸ್
ರಾಜ್ಯ ಮತ್ತು ರಾಷ್ಟ್ರದ ಹಲವಾರು ನಾಯಕರು ಕೃಷ್ಣರ ಅಂತ್ಯಕ್ರಿಯೆಯಲ್ಲಿ ಭಾಗಿ
ರಾಜ್ಯ ಮತ್ತು ರಾಷ್ಟ್ರದ ಹಲವಾರು ನಾಯಕರು ಕೃಷ್ಣರ ಅಂತ್ಯಕ್ರಿಯೆಯಲ್ಲಿ ಭಾಗಿ